“ನೀವು ಮಾಡಸಾಧ್ಯವಿರುವ ಅತ್ಯುತ್ತಮ ಕೆಲಸವು ಇದೇ ಆಗಿದೆ”
“ನೀವು ಮಾಡಸಾಧ್ಯವಿರುವ ಅತ್ಯುತ್ತಮ ಕೆಲಸವು ಇದೇ ಆಗಿದೆ”
ಆಲೆಕ್ಸೀಸ್ ಐದು ವರ್ಷ ಪ್ರಾಯದ ಬಾಲಕನಾಗಿದ್ದು, ಮೆಕ್ಸಿಕೋದ ಮೊರೇಲಿಯ ಪಟ್ಟಣದಲ್ಲಿ ವಾಸಿಸುತ್ತಾನೆ. ಇವನ ಹೆತ್ತವರು ಬೈಬಲ್ ಅಧ್ಯಯನ ಮಾಡುತ್ತಿದ್ದು, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಆಲೆಕ್ಸೀಸ್ ತನ್ನ ಕುಟುಂಬದೊಂದಿಗೆ ಒಂದು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾದಾಗ, ಮನೆಯಿಂದ ಮನೆಗೆ ಸಾರುವುದರ ಕುರಿತಾದ ಒಂದು ಪ್ರತ್ಯಕ್ಷಾಭಿನಯವನ್ನು ಗಮನಿಸಿದನು. ತಟ್ಟನೆ ಅವನು ತನ್ನ ತಂದೆಯ ಕಡೆಗೆ ತಿರುಗಿ ಕೇಳಿದ್ದು: “ಅಪ್ಪಾ, ಅಪ್ಪಾ, ನೀವು ಯಾಕೆ ಹೊರಗೆ ಹೋಗಿ ಸಾರುವುದಿಲ್ಲ?” ಇದಕ್ಕೆ ತಂದೆ ಉತ್ತರಿಸಿದ್ದು: “ಈ ಕೆಲಸವನ್ನು ಮಾಡಲು ಶಕ್ತನಾಗಲಿಕ್ಕೋಸ್ಕರವೇ ನಾನು ಅಧ್ಯಯನವನ್ನು ಮಾಡುತ್ತಿದ್ದೇನೆ.” ಆಗ ಆಲೆಕ್ಸೀಸನು ಹುರುಪಿನಿಂದ ಉತ್ತರಿಸಿದ್ದು: “ಅಪ್ಪಾ, ನೀವು ಮಾಡಸಾಧ್ಯವಿರುವ ಅತ್ಯುತ್ತಮ ಕೆಲಸವು ಇದೇ ಆಗಿದೆ.”
ಈ ಚಿಕ್ಕ ಬಾಲಕನು, ಯೆಹೋವನ ಬಗ್ಗೆ ತನಗಿರುವ ಜ್ಞಾನಕ್ಕೆ ಅನುಸಾರವಾಗಿ ಜೀವಿಸುವುದರ ಆವಶ್ಯಕತೆಯನ್ನು ಮನಗಂಡನು. ಇವನ ಚಿಕ್ಕಮ್ಮನ ಇಬ್ಬರು ಮಕ್ಕಳು ಇವರ ಮನೆಯಲ್ಲೇ ವಾಸಿಸುತ್ತಿರುವುದರಿಂದ, ಅವನು ಪ್ರಥಮವಾಗಿ ಯೆಹೋವನಿಗೆ ಪ್ರಾರ್ಥಿಸಿ, ತದನಂತರ ತನ್ನ ಹೆತ್ತವರ ಸಹಾಯದಿಂದ ಬೈಬಲ್ ಕಥೆಗಳ ನನ್ನ ಪುಸ್ತಕದ ಮೂಲಕ ತಾನು ಕಲಿತಿದ್ದ ವಿಷಯಗಳ ಕುರಿತು ಆ ಮಕ್ಕಳೊಂದಿಗೆ ಮಾತಾಡಿದನು. ಆಲೆಕ್ಸೀಸನಿಗೆ ಆಗಿನ್ನೂ ಓದಲು ಬರುತ್ತಿರಲಿಲ್ಲವಾದರೂ, ಕಥೆಗಳನ್ನು ದೃಷ್ಟಾಂತಿಸುವ ಚಿತ್ರಗಳಿಂದ ಅವನಿಗೆ ಆ ಪುಸ್ತಕದಲ್ಲಿರುವ ವಿಷಯವು ಚಿರಪರಿಚಿತವಾಗಿತ್ತು. ದೇವರ ಉದ್ದೇಶಗಳ ಕುರಿತು ಅವನು ಏನನ್ನು ಕಲಿಯುತ್ತಿದ್ದನೋ ಅದನ್ನು ಹಂಚಿಕೊಳ್ಳಲಿಕ್ಕಾಗಿ ಜನರನ್ನು ಅವರ ಮನೆಗಳಲ್ಲಿ ಭೇಟಿಯಾಗಲು ಬಯಸುತ್ತೇನೆ ಎಂದು ಸಹ ಅವನು ಹೇಳಿದನು.
ನಿಜವಾಗಿಯೂ ಆಬಾಲವೃದ್ಧರೆಲ್ಲರೂ, ತಮ್ಮ ಜೀವಿತಗಳನ್ನು “ಪರಿಶುದ್ಧನಾದ” ಯೆಹೋವನು ಅವರಿಂದ ಏನನ್ನು ನಿರೀಕ್ಷಿಸುತ್ತಾನೋ ಅದಕ್ಕೆ ಹೊಂದಿಕೆಯಲ್ಲಿ ತರಸಾಧ್ಯವಿದೆ ಮತ್ತು ಹೀಗೆ ಜನಾಂಗಗಳ ನಡುವೆ ಆತನ ಕುರಿತು ಸಾಕ್ಷಿಯನ್ನು ನೀಡುವ ಅತ್ಯುತ್ತಮ ಸುಯೋಗವನ್ನು ಹೊಂದಸಾಧ್ಯವಿದೆ. (ಯೆಶಾಯ 43:3, ಪರಿಶುದ್ಧ ಬೈಬಲ್ *; ಮತ್ತಾಯ 21:16) ಒಬ್ಬನು ಮಾಡಸಾಧ್ಯವಿರುವ ಅತ್ಯುತ್ತಮ ಕೆಲಸಗಳಲ್ಲಿ ಇದು ಒಂದಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
[ಪಾದಟಿಪ್ಪಣಿ]
^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.