ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರುತ್ತೇಜನವನ್ನು ನಿಭಾಯಿಸುವ ವಿಧ

ನಿರುತ್ತೇಜನವನ್ನು ನಿಭಾಯಿಸುವ ವಿಧ

ನಿರುತ್ತೇಜನವನ್ನು ನಿಭಾಯಿಸುವ ವಿಧ

ನೀವು ನಿರುತ್ತೇಜನಗೊಂಡಿದ್ದೀರೋ? ಅನಿಶ್ಚಿತತೆ ಹಾಗೂ ಕಲಹದಿಂದ ತುಂಬಿರುವ ಈ ಯುಗದಲ್ಲಿ ಅನೇಕರು ನಿರುತ್ತೇಜನಗೊಳ್ಳುತ್ತಾರೆ. ಕೆಲವರು ನಿರುದ್ಯೋಗಿಗಳಾಗಿರುವುದರಿಂದ ನಿರುತ್ತೇಜಿತರಾಗಿದ್ದಾರೆ. ಇನ್ನಿತರರು ಒಂದು ಅಪಘಾತದ ಪರಿಣಾಮವನ್ನು ನಿಭಾಯಿಸುತ್ತಿದ್ದಾರೆ. ಇನ್ನೂ ಅನೇಕರು ಕುಟುಂಬದ ಸಮಸ್ಯೆಗಳು, ಗುರುತರವಾದ ರೋಗ, ಅಥವಾ ಒಂಟಿತನದ ಭಾವನೆಗಳೊಂದಿಗೆ ಹೆಣಗಾಡುತ್ತಿದ್ದಾರೆ.

ನೀವು ನಿರುತ್ತೇಜನಗೊಂಡಿರುವಲ್ಲಿ ಎಲ್ಲಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಸಾಧ್ಯವಿದೆ? ಲೋಕದಾದ್ಯಂತವಿರುವ ಲಕ್ಷಾಂತರ ಜನರು ದೇವರ ವಾಕ್ಯವಾದ ಬೈಬಲನ್ನು ಓದುವ ಮೂಲಕ ಸಾಂತ್ವನವನ್ನು ಪಡೆದುಕೊಂಡಿದ್ದಾರೆ. ಅಪೊಸ್ತಲ ಪೌಲನ ಮಾತುಗಳು ಅವರಿಗೆ ಪುನರಾಶ್ವಾಸನೆಯನ್ನು ನೀಡಿವೆ. ಅವನಂದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.” (2 ಕೊರಿಂಥ 1:3, 4) ನಿಮ್ಮ ಸ್ವಂತ ಬೈಬಲಿನಲ್ಲಿ ಇದನ್ನು ಹಾಗೂ ಬೈಬಲಿನ ಇನ್ನಿತರ ವಚನಭಾಗಗಳನ್ನು ಏಕೆ ಓದಿ ನೋಡಬಾರದು? ಹೀಗೆ ಮಾಡುವುದು ‘ನಿಮ್ಮ ಹೃದಯಗಳನ್ನು ಸಂತೈಸುವುದು ಮತ್ತು ನಿಮ್ಮನ್ನು ದೃಢಪಡಿಸುವುದು.’​—⁠2 ಥೆಸಲೋನಿಕ 2:​16, 17.

ಯಾರು ಯೆಹೋವನ ಸೇವೆಮಾಡುತ್ತಾರೋ ಅಂಥವರ ಸಹವಾಸದ ಮೂಲಕವೂ ನಿರುತ್ತೇಜನವನ್ನು ನಿಭಾಯಿಸಲು ಸಹಾಯವನ್ನು ಕಂಡುಕೊಳ್ಳಸಾಧ್ಯವಿದೆ. ಜ್ಞಾನೋಕ್ತಿ 12:25 ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ [“ಒಳ್ಳೆಯ,” NW] ಮಾತು ಅದನ್ನು ಹಿಗ್ಗಿಸುವದು.” ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ಆ “ಒಳ್ಳೆಯ ಮಾತು”ಗಳನ್ನು ಕೇಳಿಸಿಕೊಳ್ಳುತ್ತೇವೆ, ಇದು “ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ”ವಾಗಿದೆ. (ಜ್ಞಾನೋಕ್ತಿ 16:24) ಯೆಹೋವನ ಸಾಕ್ಷಿಗಳ ಕೂಟವು ನಿಮ್ಮ ಮೇಲೆ ಎಷ್ಟು ಬಲದಾಯಕ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ಸ್ವತಃ ಅನುಭವಿಸಿ ನೋಡಲಿಕ್ಕಾಗಿ ನೀವು ಅವರ ರಾಜ್ಯ ಸಭಾಗೃಹದಲ್ಲಿನ ಒಂದು ಕೂಟಕ್ಕೆ ಹಾಜರಾಗಬಾರದೇಕೆ?

ಪ್ರಾರ್ಥನೆಯ ಶಕ್ತಿಯಿಂದಲೂ ನೀವು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ಜೀವನದ ಚಿಂತೆಗಳಲ್ಲಿ ನೀವು ಮುಳುಗಿಹೋಗುತ್ತಿದ್ದೀರೆಂದು ನಿಮಗನಿಸುವುದಾದರೆ, ‘ಪ್ರಾರ್ಥನೆಯನ್ನು ಕೇಳುವಾತನ’ ಬಳಿ ನಿಮ್ಮ ಹೃದಯದಾಳದ ಅನಿಸಿಕೆಗಳನ್ನು ಹೇಳಿಕೊಳ್ಳಿರಿ. (ಕೀರ್ತನೆ 65:⁠2) ನಮ್ಮ ಸೃಷ್ಟಿಕರ್ತನಾಗಿರುವ ಯೆಹೋವ ದೇವರು, ಸ್ವತಃ ನಮ್ಮ ಬಗ್ಗೆ ನಾವು ಅರ್ಥಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ. ನಾವಾತನ ಸಹಾಯದ ಮೇಲೆ ಅವಲಂಬಿಸಸಾಧ್ಯವಿದೆ. ಆತನ ವಾಕ್ಯವು ನಮಗೆ ಹೀಗೆ ಮಾತುಕೊಡುತ್ತದೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಹೌದು, ‘ಯೆಹೋವನನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು.’​—⁠ಯೆಶಾಯ 40:⁠31.

ಯೆಹೋವ ದೇವರು, ನಿರುತ್ತೇಜನವನ್ನು ಯಶಸ್ವಿಕರವಾಗಿ ನಿಭಾಯಿಸಲು ನಮಗೆ ಸಹಾಯಮಾಡಬಲ್ಲ ಎಲ್ಲಾ ಒದಗಿಸುವಿಕೆಗಳನ್ನು ನೀಡಿದ್ದಾನೆ. ನೀವು ಅವುಗಳನ್ನು ಉಪಯೋಗಿಸುವಿರೊ?