ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೋಗ್ಯರು ಯಾರೆಂದು ವಿಚಾರಣೆಮಾಡಿ’

‘ಯೋಗ್ಯರು ಯಾರೆಂದು ವಿಚಾರಣೆಮಾಡಿ’

‘ಯೋಗ್ಯರು ಯಾರೆಂದು ವಿಚಾರಣೆಮಾಡಿ’

ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ದಮಸ್ಕವು ಚಟುವಟಿಕೆಯಿಂದ ಗಿಜಿಗುಟ್ಟುತ್ತಿದ್ದ ಒಂದು ನಗರವಾಗಿತ್ತು. ಹಣ್ಣಿನ ತೋಟಗಳಿಂದ ಸುತ್ತುವರಿಯಲ್ಪಟ್ಟಿದ್ದ ಈ ನಗರವು, ಪೂರ್ವ ದೇಶಗಳಿಂದ ಬರುತ್ತಿದ್ದ ಯಾತ್ರಿಕ ತಂಡಗಳಿಗೆ ಮರುಭೂಮಿಯಲ್ಲಿನ ಒಯಸ್ಸಿಸ್‌ನಂತಿತ್ತು. ಯೇಸು ಕ್ರಿಸ್ತನ ಮರಣಾನಂತರ ಸ್ವಲ್ಪ ಸಮಯದಲ್ಲಿಯೇ, ದಮಸ್ಕದಲ್ಲಿ ಒಂದು ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಿತು. ಅದರ ಸದಸ್ಯರಲ್ಲಿ, ಸಾ.ಶ. 33ರ ಪಂಚಾಶತ್ತಮದ ಹಬ್ಬದಂದು ಯೆರೂಸಲೇಮಿನಲ್ಲಿ ಯೇಸುವಿನ ಹಿಂಬಾಲಕರಾಗಿದ್ದಿರಬಹುದಾದ ಯೆಹೂದಿಗಳು ಇದ್ದರು. (ಅ. ಕೃತ್ಯಗಳು 2:​5, 41) ಸ್ತೆಫನನು ಕಲ್ಲೆಸೆದುಕೊಲ್ಲಲ್ಪಟ್ಟ ನಂತರ ಆರಂಭವಾದ ಹಿಂಸೆಯ ಸಮಯದಲ್ಲಿ ಯೂದಾಯದಿಂದ ಕೆಲವು ಶಿಷ್ಯರು ದಮಸ್ಕಕ್ಕೆ ಸ್ಥಳಾಂತರಿಸಿರಬಹುದು.​—⁠ಅ. ಕೃತ್ಯಗಳು 8:⁠1.

ಪ್ರಾಯಶಃ ಸಾ.ಶ. 34ರಂದು, ದಮಸ್ಕದಲ್ಲಿನ ಒಬ್ಬ ಕ್ರೈಸ್ತನಾದ ಅನನೀಯನು ಒಂದು ಅಸಾಮಾನ್ಯವಾದ ನೇಮಕವನ್ನು ಪಡೆದುಕೊಂಡನು. ಕರ್ತನು ಅವನಿಗೆ ಹೇಳಿದ್ದು: “ನೀನೆದ್ದು ನೆಟ್ಟನೇಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ವಿಚಾರಿಸು; ಅವನು ಪ್ರಾರ್ಥನೆಮಾಡುತ್ತಾನೆ.”​—⁠ಅ. ಕೃತ್ಯಗಳು 9:⁠11.

ನೆಟ್ಟನೇಬೀದಿ ಎಂಬ ಬೀದಿಯು 1.5 ಕಿಲೊಮೀಟರ್‌ ಉದ್ದದ್ದಾಗಿದ್ದು, ಅದು ದಮಸ್ಕ ನಗರದ ಮಧ್ಯದಲ್ಲಿ ದಾಟಿಹೋಗುತ್ತಿತ್ತು. ಈ ಪುಟದಲ್ಲಿ ಕಂಡುಬರುವ 19ನೇ ಶತಮಾನದ ಕೆತ್ತನೆಯಿಂದ, ಪುರಾತನ ಕಾಲದಲ್ಲಿ ಈ ಬೀದಿಯು ಹೇಗಿತ್ತು ಎಂಬುದು ನಮಗೆ ತಿಳಿದುಬರುತ್ತದೆ. ಈ ಬೀದಿಯು ಯಾವ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿತ್ತೋ ಅದನ್ನು ಗಮನದಲ್ಲಿಡುವಾಗ, ಅನನೀಯನು ಯೂದನ ಮನೆಯನ್ನು ಕಂಡುಹಿಡಿಯಲು ಸ್ವಲ್ಪ ಸಮಯದ ವರೆಗೆ ಹುಡುಕಾಡಬೇಕಾಗಿದ್ದಿರಬಹುದು. ಹಾಗಿದ್ದರೂ, ಅನನೀಯನು ಅವನ ಮನೆಯನ್ನು ಕಂಡುಕೊಂಡನು ಮತ್ತು ಅವನ ಭೇಟಿಯು, ಸೌಲನು ಮುಂದಕ್ಕೆ ಅಪೊಸ್ತಲ ಪೌಲನಾಗಿ, ಸುವಾರ್ತೆಯ ಹುರುಪಿನ ಘೋಷಕನಾಗಿ ಪರಿವರ್ತಿಸುವಂತೆ ನಡೆಸಿತು.​—⁠ಅ. ಕೃತ್ಯಗಳು 9:​12-19.

ಯೇಸು ತನ್ನ ಶಿಷ್ಯರಿಗೆ, ಸುವಾರ್ತೆಗೆ ‘ಯೋಗ್ಯರು ಯಾರೆಂದು ವಿಚಾರಣೆಮಾಡಿ’ ಎಂದು ಹೇಳಿ ಕಳುಹಿಸಿದನು. (ಮತ್ತಾಯ 10:11) ಅನನೀಯನು ಅಕ್ಷರಾರ್ಥಕವಾಗಿ ಸೌಲನ ಬಗ್ಗೆ ವಿಚಾರಿಸಿ ಹುಡುಕಿದನೆಂದು ವ್ಯಕ್ತವಾಗುತ್ತದೆ. ಅನನೀಯನಂತೆ, ಯೆಹೋವನ ಸಾಕ್ಷಿಗಳು ಯೋಗ್ಯರಾದವರನ್ನು ಸಂತೋಷದಿಂದ ಹುಡುಕುತ್ತಾರೆ ಮತ್ತು ರಾಜ್ಯದ ಸುವಾರ್ತೆಯನ್ನು ಜನರು ಸ್ವೀಕರಿಸುವಾಗ ಅವರು ಹರ್ಷಿಸುತ್ತಾರೆ. ಯೋಗ್ಯರಾದವರನ್ನು ಕಂಡುಕೊಂಡಾಗ ನಮ್ಮೆಲ್ಲಾ ಪ್ರಯತ್ನವು ಸಾರ್ಥಕವಾಗುತ್ತದೆ.​—⁠1 ಕೊರಿಂಥ 15:58.

[ಪುಟ 32ರಲ್ಲಿರುವ ಚಿತ್ರ]

ಆಧುನಿಕ ದಿನದ “ನೆಟ್ಟನೇಬೀದಿ”

[ಪುಟ 32ರಲ್ಲಿರುವ ಚಿತ್ರ ಕೃಪೆ]

From the book La Tierra Santa, Volume II, 1830