ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು”

“ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು”

“ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು”

“ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು.”​—⁠ಆದಿಕಾಂಡ 13:⁠17.

ವಾರಾಂತ್ಯದಲ್ಲಿ ಬಹುಶಃ ಒಂದು ಕಾರ್‌ನಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಭೇಟಿಕೊಡುವುದು ನಿಮಗೆ ಇಷ್ಟಕರವೋ? ವ್ಯಾಯಾಮಕ್ಕಾಗಿ ಮತ್ತು ನಿಧಾನವಾಗಿ ನಿಸರ್ಗವನ್ನು ನೋಡಿ ಸವಿಯಲಿಕ್ಕಾಗಿ ಇತರರು ಬೈಸಿಕಲ್‌ನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಇನ್ನೂ ಅನೇಕರು, ಒಂದು ಪ್ರದೇಶವನ್ನು ಸರಿಯಾಗಿ ನೋಡಿ ಪ್ರಕೃತಿಯನ್ನು ಆಸ್ವಾದಿಸಲಿಕ್ಕಾಗಿ ಕಾಲ್ನಡಿಗೆಯಲ್ಲೇ ಹೋಗುವ ಆಯ್ಕೆಮಾಡುತ್ತಾರೆ. ಇಂಥ ಪ್ರವಾಸಗಳು ಸಾಮಾನ್ಯವಾಗಿ ಸೀಮಿತ ಕಾಲಾವಧಿಯದ್ದಾಗಿರುತ್ತವೆ. ಆದರೆ ದೇವರು ಅಬ್ರಹಾಮನಿಗೆ, “ನೀನೆದ್ದು ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು” ಎಂದು ಹೇಳಿದ ಬಳಿಕ ಅವನಿಗೆ ಹೇಗನಿಸಿದ್ದಿರಬೇಕೆಂಬುದನ್ನು ತುಸು ಊಹಿಸಿಕೊಳ್ಳಿರಿ!​—⁠ಆದಿಕಾಂಡ 13:⁠17.

2 ಈ ಮಾತುಗಳ ಹಿನ್ನೆಲೆಯನ್ನು ಪರಿಗಣಿಸಿರಿ. ಅಬ್ರಹಾಮನು ತನ್ನ ಹೆಂಡತಿಯೊಂದಿಗೆ ಹಾಗೂ ಇನ್ನಿತರರೊಂದಿಗೆ ಐಗುಪ್ತದಲ್ಲಿ ತಾತ್ಕಾಲಿಕವಾಗಿ ಬಿಡಾರಹೂಡಿದ್ದನು. ಅವರು ಐಗುಪ್ತದಿಂದ ಹೊರಟು, ತಮ್ಮ ಮಂದೆಗಳನ್ನು “ದಕ್ಷಿಣಸೀಮೆಗೆ” ಸ್ಥಳಾಂತರಿಸಿದರು ಎಂದು ಆದಿಕಾಂಡ 13ನೆಯ ಅಧ್ಯಾಯವು ನಮಗೆ ತಿಳಿಸುತ್ತದೆ. ತದನಂತರ ಅಬ್ರಹಾಮನು “ದಕ್ಷಿಣದೇಶವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡುತ್ತಾ ಬೇತೇಲಿನ ವರೆಗೆ” ಬಂದು ಮುಟ್ಟಿದನು. ಅಬ್ರಹಾಮನ ದನಕಾಯುವವರು ಮತ್ತು ಅವನ ಸೋದರಳಿಯನಾದ ಲೋಟನ ದನಕಾಯುವವರ ನಡುವೆ ಸಮಸ್ಯೆಯು ಎದ್ದು, ಇವರಿಬ್ಬರೂ ಬೇರೆ ಬೇರೆ ಹುಲ್ಲುಗಾವಲುಗಳನ್ನು ಕಂಡುಕೊಳ್ಳಬೇಕೆಂಬುದು ಸುಸ್ಪಷ್ಟವಾದಾಗ, ಅಬ್ರಹಾಮನು ಉದಾರಭಾವದಿಂದ ಲೋಟನಿಗೆ ಮೊದಲ ಆಯ್ಕೆಯನ್ನು ಮಾಡಲು ಅನುಮತಿಸಿದನು. ಲೋಟನು “ಯೆಹೋವನ ವನ”ದಂತೆ ತುಂಬ ಹುಲುಸಾದ ಕಣಿವೆಯಾಗಿದ್ದ “ಯೊರ್ದನ್‌ ಹೊಳೆಯ ಸುತ್ತಲಿನ ಪ್ರದೇಶ”ವನ್ನು ಆಯ್ಕೆಮಾಡಿದನು, ಮತ್ತು ಸಕಾಲದಲ್ಲಿ ಸೊದೋಮ್‌ ಪಟ್ಟಣದಲ್ಲಿ ನೆಲೆಸತೊಡಗಿದನು. ದೇವರು ಅಬ್ರಹಾಮನಿಗೆ ಹೇಳಿದ್ದು: “ನೀನಿರುವ ಸ್ಥಳದಿಂದ ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು.” ಬಹುಶಃ ಬೇತೇಲಿನ ಎತ್ತರವಾದ ಸ್ಥಳದಿಂದ ಅಬ್ರಹಾಮನು ಆ ದೇಶದ ಇತರ ಭಾಗಗಳನ್ನು ಸಹ ನೋಡಸಾಧ್ಯವಿತ್ತು. ಆದರೂ, ಅವನು ಆ ದೇಶವನ್ನು ಸುಮ್ಮನೆ ನೋಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಲಿಕ್ಕಿತ್ತು. ದೇವರು ಅವನಿಗೆ ಆ “ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು”ವಂತೆ ಮತ್ತು ಅದರ ರೂಪರೇಖೆಗಳು ಹಾಗೂ ಪ್ರಾಂತಗಳನ್ನು ಚೆನ್ನಾಗಿ ಅರಿತುಕೊಳ್ಳುವಂತೆ ಕರೆಕೊಟ್ಟನು.

3 ಹೆಬ್ರೋನನ್ನು ತಲಪುವುದಕ್ಕೆ ಮುಂಚೆ ಅಬ್ರಹಾಮನು ಆ ದೇಶವನ್ನು ಎಷ್ಟೇ ವ್ಯಾಪಕವಾಗಿ ತಿರುಗಾಡಿ ನೋಡಿರಲಿ, ವಾಗ್ದತ್ತ ದೇಶದೊಂದಿಗೆ ಅವನು ನಮ್ಮಲ್ಲಿ ಹೆಚ್ಚಿನವರಿಗಿಂತಲೂ ಎಷ್ಟೋ ಹೆಚ್ಚು ಚಿರಪರಿಚಿತನಾಗಿದ್ದನು ಎಂಬುದಂತೂ ನಿಸ್ಸಂಶಯ. ಈ ವೃತ್ತಾಂತದಲ್ಲಿ ತಿಳಿಸಲ್ಪಟ್ಟಿರುವ ದಕ್ಷಿಣದೇಶ, ಬೇತೇಲ್‌, ಯೊರ್ದನ್‌ ಹೊಳೆಯ ಸುತ್ತಲಿನ ಪ್ರದೇಶ, ಸೊದೋಮ್‌, ಮತ್ತು ಹೆಬ್ರೋನ್‌ ಎಂಬ ಸ್ಥಳಗಳ ಕುರಿತು ತುಸು ಆಲೋಚಿಸಿರಿ. ಇಂಥ ಪ್ರದೇಶಗಳು ಎಲ್ಲಿದ್ದವೆಂಬುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು ನಿಮಗೆ ತುಂಬ ಕಷ್ಟಕರವಾಗಿದೆಯೋ? ಅನೇಕರಿಗೆ ಇದೊಂದು ಸಮಸ್ಯೆಯಾಗಿದೆ, ಏಕೆಂದರೆ ಇಂದು ಯೆಹೋವನ ಜನರಲ್ಲಿ ಕೆಲವರು ಮಾತ್ರವೇ ಬೈಬಲಿನಲ್ಲಿ ತಾವು ಯಾವ ಸ್ಥಳಗಳ ಕುರಿತು ಓದಿದ್ದಾರೋ ಆ ಸ್ಥಳಗಳನ್ನು ಸಂದರ್ಶಿಸಿ, ಆ ಪ್ರದೇಶದ ಎಲ್ಲಾ ಕಡೆಗಳಲ್ಲೂ ತಿರುಗಾಡಿದ್ದಾರೆ. ಆದರೂ, ಬೈಬಲ್‌ ಸ್ಥಳಗಳ ಕುರಿತು ತಿಳಿದುಕೊಳ್ಳುವುದರಲ್ಲಿ ಅತ್ಯಾಸಕ್ತರಾಗಿರಲು ನಮಗೆ ಸಕಾರಣವಿದೆ. ಏಕೆ?

4 ದೇವರ ವಾಕ್ಯ ಹೀಗೆ ಹೇಳುತ್ತದೆ: “ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುವದು; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುವದು.” (ಜ್ಞಾನೋಕ್ತಿ 18:15) ಒಬ್ಬನು ಜ್ಞಾನವನ್ನು ಸಂಪಾದಿಸಬಹುದಾದ ಅನೇಕ ವಿಷಯವಸ್ತುಗಳಿವೆ, ಆದರೆ ಯೆಹೋವ ದೇವರಿಗೆ ಮತ್ತು ಆತನ ವ್ಯವಹಾರಗಳಿಗೆ ಸಂಬಂಧಿಸಿದ ನಿಷ್ಕೃಷ್ಟ ಜ್ಞಾನವು ಅತಿ ಪ್ರಾಮುಖ್ಯವಾದದ್ದಾಗಿದೆ. ಬೈಬಲಿನಲ್ಲಿ ನಾವು ಓದುವಂಥ ವಿಷಯಗಳು ಆ ನಿಷ್ಕೃಷ್ಟ ಜ್ಞಾನಕ್ಕೆ ಅತ್ಯಗತ್ಯವಾಗಿವೆ ಎಂಬುದಂತೂ ನಿಶ್ಚಯ. (2 ತಿಮೊಥೆಯ 3:16) ಆದರೂ, ಇದರಲ್ಲಿ ತಿಳಿವಳಿಕೆಯು ಒಳಗೂಡಿದೆ ಎಂಬುದನ್ನು ಗಮನಿಸಿರಿ. ತಿಳಿವಳಿಕೆಯು, ಒಂದು ವಿಷಯದ ಒಳನೋಟವನ್ನು ಪಡೆದುಕೊಳ್ಳುವ, ಆ ವಿಷಯದ ಭಾಗಗಳು ಹಾಗೂ ಇಡೀ ಸಂಗತಿಯ ನಡುವಣ ಸಂಬಂಧಗಳನ್ನು ವಿವೇಚಿಸುವ ಅಥವಾ ಗ್ರಹಿಸುವ ಸಾಮರ್ಥ್ಯವಾಗಿದೆ. ಇದು ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಸ್ಥಳಗಳ ಕುರಿತಾದ ವಾಸ್ತವಾಂಶಗಳಿಗೂ ಅನ್ವಯವಾಗುತ್ತದೆ. ಉದಾಹರಣೆಗೆ, ಐಗುಪ್ತವು ಎಲ್ಲಿದೆ ಎಂಬುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯಾದರೂ, ಅಬ್ರಹಾಮನು ಐಗುಪ್ತದಿಂದ ಹೊರಟು “ದಕ್ಷಿಣಸೀಮೆಗೆ” ತದನಂತರ ಬೇತೇಲಿಗೆ, ಆಮೇಲೆ ಹೆಬ್ರೋನಿಗೆ ಹೋದನು ಎಂಬ ಹೇಳಿಕೆಯು ನಮಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತದೆ? ಈ ಸ್ಥಳಗಳು ಪರಸ್ಪರ ಹೇಗೆ ಸಂಬಂಧಿಸಿವೆ ಎಂಬುದು ನಿಮಗೆ ಅರ್ಥವಾಗಿದೆಯೋ?

5 ಅಥವಾ ನಿಮ್ಮ ಕ್ರಮವಾದ ಬೈಬಲ್‌ ವಾಚನದಲ್ಲಿ ನೀವು ಚೆಫನ್ಯ 2ನೆಯ ಅಧ್ಯಾಯವನ್ನು ಓದಿರಬಹುದು. ಅಲ್ಲಿ ನೀವು ನಗರಗಳು, ಜನರು, ಹಾಗೂ ಪ್ರದೇಶಗಳ ಹೆಸರುಗಳನ್ನು ಓದುತ್ತೀರಿ. ಆ ಒಂದು ಅಧ್ಯಾಯದಲ್ಲೇ ಗಾಜ, ಅಷ್ಕೆಲೋನ್‌, ಅಷ್ಡೋದ್‌, ಎಕ್ರೋನ್‌, ಸೊದೋಮ್‌ ಮತ್ತು ನಿನೆವೆ ಹಾಗೂ ಕಾನಾನ್‌, ಮೋವಾಬ್‌, ಅಮ್ಮೋನ್‌ ಮತ್ತು ಅಶ್ಶೂರ್‌ ಎಂಬ ಸ್ಥಳಗಳ ಕುರಿತು ತಿಳಿಸಲಾಗಿದೆ. ನಿಜವಾದ ಜನರು ವಾಸಿಸುತ್ತಿದ್ದ, ದೈವಿಕ ಪ್ರವಾದನೆಯ ನೆರವೇರಿಕೆಯಲ್ಲಿ ಒಳಗೂಡಿದ್ದ ಜನರು ನೆಲೆಸಿದ್ದ ಸ್ಥಳಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದರಲ್ಲಿ ನೀವು ಎಷ್ಟರ ಮಟ್ಟಿಗೆ ಸಫಲರಾದಿರಿ?

6 ದೇವರ ವಾಕ್ಯದ ಅನೇಕ ವಿದ್ಯಾರ್ಥಿಗಳು, ಬೈಬಲ್‌ ದೇಶಗಳ ಭೂಪಟಗಳನ್ನು ಸಂಪರ್ಕಿಸುವ ಮೂಲಕ ಮಹತ್ತರವಾದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಭೂಪಟಗಳ ಕಡೆಗಿನ ಆಕರ್ಷಣೆಯಿಂದ ಅವರು ಹೀಗೆ ಮಾಡುವುದಿಲ್ಲ, ಬದಲಾಗಿ ಭೂಪಟಗಳನ್ನು ಉಪಯೋಗಿಸುವ ಮೂಲಕ ತಾವು ದೇವರ ವಾಕ್ಯದ ಕುರಿತಾದ ತಮ್ಮ ಜ್ಞಾನಕ್ಕೆ ಇನ್ನೂ ಹೆಚ್ಚನ್ನು ಕೂಡಿಸಸಾಧ್ಯವಿದೆ ಎಂಬುದನ್ನು ಅವರು ಮನಗಾಣುತ್ತಾರೆ. ತಮಗೆ ಈಗಾಗಲೇ ತಿಳಿದಿರುವ ವಾಸ್ತವಾಂಶಗಳು ಬೇರೆ ಮಾಹಿತಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ತಮ್ಮ ತಿಳಿವಳಿಕೆಯನ್ನು ಇನ್ನಷ್ಟು ಹೆಚ್ಚಿಸಲು ಸಹ ಭೂಪಟಗಳು ಅವರಿಗೆ ಸಹಾಯಮಾಡಬಲ್ಲವು. ನಾವು ಕೆಲವು ಉದಾಹರಣೆಗಳನ್ನು ಪರಿಗಣಿಸುವಾಗ, ಯೆಹೋವನಿಗಾಗಿರುವ ನಿಮ್ಮ ಗಣ್ಯತೆಯು ಇನ್ನಷ್ಟು ಆಳಗೊಳ್ಳಲೂಬಹುದು ಮತ್ತು ಆತನ ವಾಕ್ಯದಲ್ಲಿರುವ ವೃತ್ತಾಂತಗಳ ಬಗ್ಗೆ ನೀವು ಇನ್ನೂ ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳುವಿರಿ.​—⁠14ನೇ ಪುಟದಲ್ಲಿರುವ ಚೌಕವನ್ನು ನೋಡಿ.

ಒಳಗೂಡಿರುವ ಅಂತರವನ್ನು ಅರ್ಥಮಾಡಿಕೊಳ್ಳುವುದು ತಿಳಿವಳಿಕೆಯನ್ನು ಹೆಚ್ಚಿಸುತ್ತದೆ

7ನ್ಯಾಯಸ್ಥಾಪಕರು 16:2ರಲ್ಲಿ, ಸಂಸೋನನು ಗಾಜ ಎಂಬ ಪಟ್ಟಣದಲ್ಲಿ ಇದ್ದುದರ ಕುರಿತು ನಾವು ಓದಸಾಧ್ಯವಿದೆ. ಗಾಜ ಎಂಬ ಹೆಸರು ಆಧುನಿಕ ವಾರ್ತಾವರದಿಗಳಲ್ಲಿ ಅನೇಕಬಾರಿ ಕೇಳಿಬರುತ್ತದೆ. ಆದುದರಿಂದ ಸಂಸೋನನು ಮೆಡಿಟರೇನಿಯನ್‌ ಕರಾವಳಿಯ ಸಮೀಪದ ಫಿಲಿಷ್ಟಿಯ ಕ್ಷೇತ್ರದಲ್ಲಿ ಎಲ್ಲಿದ್ದನೆಂಬುದರ ಬಗ್ಗೆ ನಿಮಗೆ ಸ್ವಲ್ಪಮಟ್ಟಿಗೆ ಅಂದಾಜಿರಬಹುದು. [11] ಈಗ ನ್ಯಾಯಸ್ಥಾಪಕರು 16:3ನ್ನು ಗಮನಿಸಿರಿ: “ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರು [ಗಾಜದ]ಬಾಗಲಿನ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತದ ಶಿಖರದ ಮೇಲೆ ಇಟ್ಟನು.”

8 ಗಾಜದಂಥ ಭದ್ರವಾದ ಕೋಟೆಗೆ ಇದ್ದ ಮರದ ಬಾಗಿಲುಗಳು ಹಾಗೂ ನಿಲುವು ಪಟ್ಟಿಗಳು ತುಂಬ ದೊಡ್ಡವೂ ಭಾರವಾದವುಗಳೂ ಆಗಿದ್ದವು ಎಂಬುದರಲ್ಲಿ ಸಂಶಯವೇ ಇಲ್ಲ. ಅವುಗಳನ್ನು ಹೊತ್ತುಕೊಂಡು ಹೋಗಲು ಪ್ರಯತ್ನಿಸುವುದನ್ನು ಸ್ವಲ್ಪ ಊಹಿಸಿನೋಡಿ! ಸಂಸೋನನು ಅವುಗಳನ್ನು ಹೊತ್ತುಕೊಂಡು ಎಲ್ಲಿಗೆ ಹೋದನು, ಮತ್ತು ಅವನು ಹಿಡಿದ ಹಾದಿಯು ಯಾವ ರೀತಿಯದ್ದಾಗಿತ್ತು? ಗಾಜ ಪಟ್ಟಣವು ಸುಮಾರು ಸಮುದ್ರ ಮಟ್ಟದಲ್ಲೇ ಕರಾವಳಿ ತೀರದಲ್ಲಿದೆ. [15] ಆದರೆ, ಹೆಬ್ರೋನ್‌ ನೇರವಾಗಿ ಪೂರ್ವ ದಿಕ್ಕಿನಲ್ಲಿ 3,000 ಅಡಿ ಎತ್ತರದಲ್ಲಿದೆ. ಇದು ನಿಜವಾಗಿಯೂ ಕಷ್ಟಪಟ್ಟು ಏರಬೇಕಾಗುವಂಥ ಸ್ಥಳವೇ ಸರಿ! “ಹೆಬ್ರೋನಿನ ಎದುರಿಗಿರುವ ಪರ್ವತ”ವು ನಿಖರವಾಗಿ ಎಲ್ಲಿತ್ತೆಂಬುದನ್ನು ನಾವು ನಿರ್ಧರಿಸಲಾರೆವಾದರೂ, ಆ ಪಟ್ಟಣವು ಗಾಜದಿಂದ ಸುಮಾರು 60 ಕಿಲೊಮೀಟರ್‌ಗಳಷ್ಟು ದೂರದಲ್ಲಿತ್ತು, ಮತ್ತು ಅದು ಕೂಡ ಒಂದು ಗುಡ್ಡದ ಮೇಲಿತ್ತು! ಇದರಲ್ಲಿ ಒಳಗೂಡಿರುವ ಅಂತರವನ್ನು ಅರ್ಥಮಾಡಿಕೊಳ್ಳುವುದು, ಸಂಸೋನನ ಸಾಹಸಕಾರ್ಯವನ್ನು ಹೊಸ ದೃಷ್ಟಿಕೋನದಿಂದ ಪರಿಗಣಿಸುವಂತೆ ಮಾಡುತ್ತದಲ್ಲವೇ? ಮತ್ತು ಸಂಸೋನನು ಇಂಥ ಘನಕಾರ್ಯಗಳನ್ನು ಏಕೆ ಮಾಡಶಕ್ತನಾದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ​—⁠‘ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದಲೇ.’ (ನ್ಯಾಯಸ್ಥಾಪಕರು 14:6, 19; 15:14) ಇಂದು ಕ್ರೈಸ್ತರೋಪಾದಿ ಅಸಾಮಾನ್ಯವಾದ ಶಾರೀರಿಕ ಬಲವನ್ನು ದೇವರಾತ್ಮವು ನಮಗೆ ದಯಪಾಲಿಸುವಂತೆ ನಾವು ನಿರೀಕ್ಷಿಸುವುದಿಲ್ಲ. ಆದರೂ, ಪ್ರಬಲವಾದ ಅದೇ ಶಕ್ತಿಯು, ಗಹನವಾದ ಆಧ್ಯಾತ್ಮಿಕ ವಿಚಾರಗಳ ಕುರಿತಾದ ನಮ್ಮ ಗ್ರಹಿಕೆಯನ್ನು ಹೆಚ್ಚಿಸಬಲ್ಲದು ಮತ್ತು ನಾವು ಆಂತರ್ಯದಲ್ಲಿ ಏನಾಗಿದ್ದೇವೋ ಅದಕ್ಕನುಸಾರ ನಮ್ಮನ್ನು ಪ್ರಬಲರನ್ನಾಗಿ ಮಾಡಬಲ್ಲದು. (1 ಕೊರಿಂಥ 2:10-16; 13:8; ಎಫೆಸ 3:16; ಕೊಲೊಸ್ಸೆ 1:9, 10) ಹೌದು, ಸಂಸೋನನ ವೃತ್ತಾಂತವನ್ನು ಅರ್ಥಮಾಡಿಕೊಳ್ಳುವುದು, ದೇವರಾತ್ಮವು ನಮಗೆ ಸಹಾಯಮಾಡಬಲ್ಲದು ಎಂಬ ವಾಸ್ತವಾಂಶವನ್ನು ಮನಗಾಣಿಸುತ್ತದೆ.

9 ಮಿದ್ಯಾನ್ಯರ ವಿರುದ್ಧ ಗಿದ್ಯೋನನು ಸಾಧಿಸಿದ ಜಯವು, ಬೈಬಲ್‌ ಸ್ಥಳಗಳಲ್ಲಿ ಒಳಗೂಡಿರುವ ಅಂತರವನ್ನು ಅರ್ಥಮಾಡಿಕೊಳ್ಳುವುದರ ಮೌಲ್ಯವನ್ನು ಎತ್ತಿತೋರಿಸುವಂಥ ಇನ್ನೊಂದು ವೃತ್ತಾಂತವಾಗಿದೆ. ನ್ಯಾಯಸ್ಥಾಪಕನಾದ ಗಿದ್ಯೋನನೂ ಅವನ 300 ಮಂದಿ ಸೈನಿಕರೂ ಸೇರಿಕೊಂಡು 1,35,000 ಮಂದಿ ದಾಳಿಗಾರರ ಒಕ್ಕೂಟವನ್ನು ಸೋಲಿಸಿದರು ಎಂಬುದು ಅಧಿಕಾಂಶ ಬೈಬಲ್‌ ವಾಚಕರಿಗೆ ಗೊತ್ತಿದೆ; ಅವರಲ್ಲಿ ಮೋರೆ ಗುಡ್ಡದ ಬಳಿಯಿರುವ ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿದ್ದ ಮಿದ್ಯಾನ್ಯರು, ಅಮಾಲೇಕ್ಯರು, ಮತ್ತು ಇತರರು ಸೇರಿದ್ದರು. [18] ಗಿದ್ಯೋನನ ಜನರು ಕೊಂಬುಗಳನ್ನು ಊದಿ, ಪಂಜುಗಳನ್ನು ತೋರಿಸಲಿಕ್ಕಾಗಿ ಕೊಡಗಳನ್ನು ಒಡೆದುಬಿಟ್ಟು, ಗಟ್ಟಿಯಾದ ಸ್ವರದಿಂದ “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗಿದರು! ಇದರಿಂದ ವೈರಿಗಳು ಗೊಂದಲಗೊಂಡರು ಮತ್ತು ಭಯಭ್ರಾಂತರಾದರು ಹಾಗೂ ಒಬ್ಬರನ್ನೊಬ್ಬರು ಹತಿಸಿಕೊಳ್ಳಲಾರಂಭಿಸಿದರು. (ನ್ಯಾಯಸ್ಥಾಪಕರು 6:33; 7:1-22) ಈ ಇಡೀ ಘಟನೆಯು ಒಂದೇ ರಾತ್ರಿಯಲ್ಲಿ ನಡೆದ ತ್ವರಿತಗತಿಯ ಒಂದು ಕೃತ್ಯವಾಗಿತ್ತೋ? ನ್ಯಾಯಸ್ಥಾಪಕರು ಪುಸ್ತಕದ 7 ಮತ್ತು 8ನೇ ಅಧ್ಯಾಯಗಳನ್ನು ಓದುವುದನ್ನು ಮುಂದುವರಿಸಿ. ಅಲ್ಲಿ ಗಿದ್ಯೋನನು ಆಕ್ರಮಣವನ್ನು ಮುಂದುವರಿಸಿದನು ಎಂಬುದನ್ನು ನೀವೇ ನೋಡುವಿರಿ. ಅಲ್ಲಿ ತಿಳಿಸಲ್ಪಟ್ಟಿರುವ ಅನೇಕ ಸ್ಥಳಗಳಲ್ಲಿ ಕೆಲವನ್ನು ಇಂದು ಜ್ಞಾತವಾಗಿರುವ ಸ್ಥಳಗಳೊಂದಿಗೆ ಗುರುತಿಸಲು ಸಾಧ್ಯವಿಲ್ಲ. ಆದುದರಿಂದ ಅವು ಬೈಬಲ್‌ ಭೂಪಟಗಳಲ್ಲಿ ಕಂಡುಬರದಿರಬಹುದು. ಆದರೂ, ನಾವು ಗಿದ್ಯೋನನ ಕಾರ್ಯಗಳನ್ನು ಅನುಸರಿಸಲು ಶಕ್ತರಾಗುವಷ್ಟು ಸ್ಥಳಗಳು ಗುರುತಿಸಲ್ಪಟ್ಟಿವೆ.

10 ಗಿದ್ಯೋನನು ಶತ್ರುಪಕ್ಷದಲ್ಲಿ ಉಳಿದವರನ್ನು ಬೆತ್‌ಷಿಟ್ಟದ ವರೆಗೂ, ನಂತರ ದಕ್ಷಿಣದಲ್ಲಿ ಯೊರ್ದನ್‌ನ ಬಳಿಯಲ್ಲಿರುವ ಆಬೇಲ್ಮೆಹೋಲಾದ ತನಕವೂ ಬೆನ್ನಟ್ಟಿದನು. (ನ್ಯಾಯಸ್ಥಾಪಕರು 7:​22-25) ವೃತ್ತಾಂತವು ಹೇಳುವುದು: “ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದವರಾಗಿದ್ದರೂ ಹಿಂದಟ್ಟುತ್ತಾ ಯೊರ್ದನನ್ನು ದಾಟಿ [ಸುಖೋತಿಗೆ] ಬಂದರು.” (ಓರೆ ಅಕ್ಷರಗಳು ನಮ್ಮವು.) ಯೊರ್ದನನ್ನು ದಾಟಿದ ಬಳಿಕ, ಇಸ್ರಾಯೇಲ್ಯರು ಶತ್ರುಗಳನ್ನು ದಕ್ಷಿಣಾಭಿಮುಖವಾಗಿ ಯಬ್ಬೋಕ್‌ನ ಬಳಿಯಿದ್ದ ಸುಖೋತ್‌ ಮತ್ತು ಪೆನೂವೇಲ್‌ನ ತನಕ, ತದನಂತರ ಗುಡ್ಡದ ಮೇಲೆ ಯೊಗ್ಬೆಹಾದ (ಆಧುನಿಕ ದಿನದ ಅಮಾನ್‌, ಜೊರ್ಡನ್‌) ತನಕ ಬೆನ್ನಟ್ಟಿದರು. ಇದು ಸುಮಾರು 80 ಕಿಲೊಮೀಟರುಗಳಷ್ಟು ದೂರದ ಬೆನ್ನಟ್ಟುವಿಕೆ ಹಾಗೂ ಕಾದಾಟವನ್ನು ಒಳಗೂಡಿತ್ತು. ಗಿದ್ಯೋನನು ಇಬ್ಬರು ಮಿದ್ಯಾನ್ಯ ಅರಸರನ್ನು ಸೆರೆಹಿಡಿದು ಅವರನ್ನು ವಧಿಸಿದನು; ತದನಂತರ ಕಾದಾಟವು ಎಲ್ಲಿ ಆರಂಭವಾಯಿತೋ ಆ ಸ್ಥಳದ ಬಳಿಯಿರುವ ಒಫ್ರಾ ಎಂಬ ತನ್ನ ಪಟ್ಟಣಕ್ಕೆ ಹಿಂದಿರುಗಿದನು. (ನ್ಯಾಯಸ್ಥಾಪಕರು 8:4-12, 21-27) ಕೆಲವೇ ನಿಮಿಷಗಳ ವರೆಗೆ ಕೊಂಬುಗಳನ್ನು ಊದುವುದು, ಪಂಜುಗಳನ್ನು ಆಡಿಸುವುದು, ಮತ್ತು ಗಟ್ಟಿಯಾಗಿ ಕೂಗುವುದಕ್ಕಿಂತಲೂ ಹೆಚ್ಚಿನದ್ದು ಆ ಸಾಹಸಕಾರ್ಯದಲ್ಲಿ ಸೇರಿತ್ತು ಎಂಬುದು ಸುಸ್ಪಷ್ಟ. ಮತ್ತು ನಂಬಿಗಸ್ತ ಪುರುಷರ ಕುರಿತಾದ ಹೇಳಿಕೆಗೆ ಇದು ಹೇಗೆ ಹೆಚ್ಚಿನ ಒತ್ತನ್ನು ನೀಡುತ್ತದೆ ಎಂಬುದನ್ನು ತುಸು ಆಲೋಚಿಸಿರಿ: ‘ಗಿಡಿಯೋನ್‌ [ಹಾಗೂ ಇನ್ನಿತರರ] ವೃತ್ತಾಂತವನ್ನು ವಿವರವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. ಅವರು ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು.’ (ಇಬ್ರಿಯ 11:​32-34) ಕ್ರೈಸ್ತರು ಸಹ ಶಾರೀರಿಕವಾಗಿ ದಣಿಯಬಹುದು, ಆದರೆ ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವುದು ಅತ್ಯಾವಶ್ಯಕವಾಗಿಲ್ಲವೋ?​—⁠2 ಕೊರಿಂಥ 4:1, 16; ಗಲಾತ್ಯ 6:⁠9.

ಜನರು ಹೇಗೆ ಆಲೋಚಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ?

11 ಕೆಲವು ಸ್ಥಳಗಳನ್ನು ಗುರುತಿಸಲಿಕ್ಕಾಗಿ ಕೆಲವರು ಬೈಬಲ್‌ ಭೂಪಟಗಳನ್ನು ಉಪಯೋಗಿಸಬಹುದು, ಆದರೆ ಭೂಪಟಗಳು ಜನರ ಆಲೋಚನೆಯ ಕುರಿತಾದ ಒಳನೋಟವನ್ನು ನೀಡಸಾಧ್ಯವಿದೆ ಎಂದು ನೀವು ನೆನಸುತ್ತೀರೋ? ಸೀನಾಯಿ ಬೆಟ್ಟದಿಂದ ವಾಗ್ದತ್ತ ದೇಶದ ಕಡೆಗೆ ಹೊರಟಂಥ ಇಸ್ರಾಯೇಲ್ಯರ ಉದಾಹರಣೆಯನ್ನು ತೆಗೆದುಕೊಳ್ಳಿ. ಮಾರ್ಗದಲ್ಲಿ ಕೆಲವೊಂದು ಕಡೆ ತಂಗುತ್ತಾ, ಕಟ್ಟಕಡೆಗೆ ಅವರು ಕಾದೇಶ್‌ (ಅಥವಾ, ಕಾದೇಶ್‌-ಬರ್ನೇಯ)ಗೆ ಬಂದು ಮುಟ್ಟಿದರು. [9] ಧರ್ಮೋಪದೇಶಕಾಂಡ 1:2ನೆಯ ವಚನವು, ಇದು 11 ದಿನಗಳ ಪ್ರಯಾಣ ಅಂದರೆ ಸುಮಾರು 270 ಕಿಲೊಮೀಟರುಗಳ ಅಂತರವಾಗಿತ್ತು ಎಂದು ತೋರಿಸುತ್ತದೆ. ಅಲ್ಲಿಂದ ಮೋಶೆಯು ವಾಗ್ದತ್ತ ದೇಶವನ್ನು ಸುತ್ತಿನೋಡಲಿಕ್ಕಾಗಿ 12 ಮಂದಿ ಗೂಢಚಾರರನ್ನು ಕಳುಹಿಸಿದನು. (ಅರಣ್ಯಕಾಂಡ 10:12, 33; 11:34, 35; 12:16; 13:1-3, 25, 26) ಗೂಢಚಾರರು ಉತ್ತರದಲ್ಲಿ ದಕ್ಷಿಣಪ್ರಾಂತ್ಯವನ್ನು ದಾಟಿ ಬೇರ್ಷೆಬವನ್ನು ಹಾದುಹೋಗಿ, ತದನಂತರ ಹೆಬ್ರೋನಿನ ಮೂಲಕ ವಾಗ್ದತ್ತ ದೇಶದ ಉತ್ತರ ಗಡಿಗಳನ್ನು ತಲಪಿದ್ದಿರಬಹುದು. (ಅರಣ್ಯಕಾಂಡ 13:​21-24) ಇಸ್ರಾಯೇಲ್ಯರು ಆ ಹತ್ತು ಮಂದಿ ಗೂಢಚಾರರ ನಕಾರಾತ್ಮಕ ವರದಿಯನ್ನು ಅಂಗೀಕರಿಸಿದ್ದರಿಂದ, ಅರಣ್ಯದಲ್ಲಿ 40 ವರ್ಷಗಳ ಕಾಲ ಅಲೆದಾಡಬೇಕಾಗಿತ್ತು. (ಅರಣ್ಯಕಾಂಡ 14:​1-34) ಇದು ಅವರ ನಂಬಿಕೆ ಹಾಗೂ ಯೆಹೋವನಲ್ಲಿ ಭರವಸೆಯಿಡಲು ಅವರಿಗಿರುವ ಸಿದ್ಧಮನಸ್ಸಿನ ಕುರಿತು ಏನನ್ನು ತಿಳಿಯಪಡಿಸುತ್ತದೆ?​—⁠ಧರ್ಮೋಪದೇಶಕಾಂಡ 1:19-33; ಕೀರ್ತನೆ 78:22, 32-43; ಯೂದ 5.

12 ಈ ರೀತಿಯ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರದ ಕುರಿತು ಧ್ಯಾನಿಸಿರಿ. ಒಂದುವೇಳೆ ಇಸ್ರಾಯೇಲ್ಯರು ನಂಬಿಕೆಯನ್ನು ತೋರಿಸಿ ಯೆಹೋಶುವ ಮತ್ತು ಕಾಲೇಬರನ್ನು ಹಿಂಬಾಲಿಸುತ್ತಿದ್ದಲ್ಲಿ, ವಾಗ್ದತ್ತ ದೇಶವನ್ನು ತಲಪಲು ಅವರು ಅಷ್ಟು ದೂರ ಪ್ರಯಾಣಿಸಬೇಕಾಗಿರುತ್ತಿತ್ತೋ? ಇಸಾಕ ಮತ್ತು ರೆಬೆಕ್ಕರು ವಾಸಿಸುತ್ತಿದ್ದ ಲಹೈರೋಯಿಯಿಂದ ಕಾದೇಶ್‌ ಸುಮಾರು 16 ಕಿಲೊಮೀಟರ್‌ ದೂರದಲ್ಲಿತ್ತು. [7] ವಾಗ್ದತ್ತ ದೇಶದ ದಕ್ಷಿಣ ತುದಿಯಾಗಿ ಉಲ್ಲೇಖಿಸಲ್ಪಟ್ಟಿರುವ ಬೇರ್ಷೆಬಕ್ಕೆ 95ಕ್ಕಿಂತಲೂ ಕಡಿಮೆ ಕಿಲೊಮೀಟರ್‌ ಅಂತರವಿತ್ತು. (ಆದಿಕಾಂಡ 24:62; 25:11; 2 ಸಮುವೇಲ 3:9) ಐಗುಪ್ತದಿಂದ ಸೀನಾಯಿ ಬೆಟ್ಟಕ್ಕೆ ಮತ್ತು ತದನಂತರ ಕಾದೇಶ್‌ಗೆ 270 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಿಸಿದ ಬಳಿಕ, ಅವರು ವಾಗ್ದತ್ತ ದೇಶದ ಹೊಸ್ತಿಲಿನಲ್ಲಿದ್ದಾರೋ ಎಂಬಂತಿತ್ತು. ನಮ್ಮ ವಿಷಯದಲ್ಲಿ ಹೇಳುವುದಾದರೆ, ನಾವು ವಾಗ್ದತ್ತ ಭೂಪರದೈಸಿನ ಹೊಸ್ತಿಲಲ್ಲಿ ನಿಂತಿದ್ದೇವೆ. ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? ಅಪೊಸ್ತಲ ಪೌಲನು ಇಸ್ರಾಯೇಲ್ಯರ ಸನ್ನಿವೇಶವನ್ನು ಈ ಸಲಹೆಯೊಂದಿಗೆ ಸಂಬಂಧಿಸಿದನು: “ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ; ನಮ್ಮಲ್ಲಿ ಒಬ್ಬರಾದರೂ ಅವರ ಅವಿಧೇಯತ್ವವನ್ನು ಅನುಸರಿಸುವವರಾಗಬಾರದು.”​—⁠ಇಬ್ರಿಯ 3:16-4:11.

13 ಗಿಬ್ಯೋನ್ಯರನ್ನು ಒಳಗೂಡಿರುವ ಬೈಬಲ್‌ ಘಟನೆಯಿಂದ ತೀರ ಭಿನ್ನವಾದ ಮನೋಭಾವವು ಸುವ್ಯಕ್ತವಾಗುತ್ತದೆ. ಅದು ದೇವರ ಚಿತ್ತವನ್ನು ಮಾಡಲಿಕ್ಕಾಗಿ ಆತನ ಮೇಲೆ ಭರವಸೆಯಿಡಬೇಕೆಂಬುದೇ. ಯೆಹೋಶುವನು ಇಸ್ರಾಯೇಲ್ಯರನ್ನು ಯೊರ್ದನ್‌ ನದಿಯನ್ನು ದಾಟಿಸಿ, ಅಬ್ರಹಾಮನ ಕುಟುಂಬಕ್ಕೆ ದೇವರು ವಾಗ್ದಾನಿಸಿದ್ದ ದೇಶದೊಳಕ್ಕೆ ಮುನ್ನಡಿಸಿದಾಗ, ಕಾನಾನ್ಯರನ್ನು ಅಲ್ಲಿಂದ ಹೊರಡಿಸುವ ಕಾಲ ಬಂದಿತ್ತು. (ಧರ್ಮೋಪದೇಶಕಾಂಡ 7:​1-3) ಈ ಘಟನೆಯು ಗಿಬ್ಯೋನ್ಯರನ್ನೂ ಒಳಗೂಡಿತ್ತು. ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಪಟ್ಟಣಗಳನ್ನು ಜಯಿಸಿ, ಗಿಲ್ಗಾಲಿನ ಬಳಿ ಪಾಳೆಯಹೂಡಿದ್ದರು. ಶಾಪಗ್ರಸ್ತ ಕಾನಾನ್ಯರಂತೆ ಗಿಬ್ಯೋನಿನ ನಿವಾಸಿಗಳು ಸಾಯಲು ಇಷ್ಟಪಡಲಿಲ್ಲ; ಆದುದರಿಂದ ಅವರು ಗಿಲ್ಗಾನಿಲ್ಲಿ ಇಳಿದುಕೊಂಡಿದ್ದ ಯೆಹೋಶುವನ ಬಳಿಗೆ ಪ್ರತಿನಿಧಿಗಳನ್ನು ಕಳುಹಿಸಿದರು. ಅವರು ಇಬ್ರಿಯರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳಲಿಕ್ಕಾಗಿ, ಕಾನಾನಿಗಿಂತಲೂ ಆಚೆಯ ಕ್ಷೇತ್ರದಿಂದ ಬಂದವರೋಪಾದಿ ಸೋಗುಹಾಕಿದರು.

14 ಆ ಪ್ರತಿನಿಧಿಗಳು ಹೇಳಿದ್ದು: “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತಿನ ನಿಮಿತ್ತ ಬಹುದೂರದೇಶದಿಂದ ಬಂದಿದ್ದೇವೆ.” (ಓರೆ ಅಕ್ಷರಗಳು ನಮ್ಮವು.) (ಯೆಹೋಶುವ 9:3-9) ಅವರ ಬಟ್ಟೆಗಳು ಮತ್ತು ಒಣರೊಟ್ಟಿ ಚೂರುಗಳು, ಅವರು ಬಹುದೂರದೇಶದಿಂದ ಬಂದಿದ್ದಾರೆಂಬುದನ್ನು ದೃಢಪಡಿಸುವಂತೆ ತೋರಿತು, ಆದರೆ ವಾಸ್ತವದಲ್ಲಿ ಗಿಲ್ಗಾಲಿನಿಂದ ಗಿಬ್ಯೋನ್‌ 30 ಕಿಲೊಮೀಟರುಗಳಷ್ಟು ದೂರದಲ್ಲಿತ್ತಷ್ಟೆ. [19] ಇದಕ್ಕೆ ಒಡಂಬಟ್ಟ ಯೆಹೋಶುವನು ಹಾಗೂ ಅವನ ಸಮೂಹಪ್ರಧಾನರು ಗಿಬ್ಯೋನ್‌ ಹಾಗೂ ಗಿಬ್ಯೋನಿಗೆ ಸಂಬಂಧಿಸಿದ ಊರುಗಳವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಂಡರು. ಗಿಬ್ಯೋನ್ಯರ ಯುಕ್ತಿಯು ಕೇವಲ ಸಂಹಾರವನ್ನು ತಪ್ಪಿಸಿಕೊಳ್ಳುವುದಾಗಿತ್ತೋ? ಇದಕ್ಕೆ ವ್ಯತಿರಿಕ್ತವಾಗಿ, ಇಸ್ರಾಯೇಲ್ಯರ ದೇವರ ಅನುಗ್ರಹವನ್ನು ಪಡೆಯುವ ಬಯಕೆಯನ್ನು ಇದು ಪ್ರತಿಬಿಂಬಿಸಿತು. ಯೆಹೋವನು ಗಿಬ್ಯೋನ್ಯರನ್ನು ಸ್ವೀಕರಿಸಿದನು ಮತ್ತು ಅವರು ‘ಯೆಹೋವನ ಯಜ್ಞವೇದಿಗೋಸ್ಕರ ಕಟ್ಟಿಗೆ ಒಡೆಯುವವರಾಗಿಯೂ ನೀರು ತರುವವರಾಗಿಯೂ’ ನೇಮಿಸಲ್ಪಟ್ಟರು; ಅವರು ಯಜ್ಞವೇದಿಗೆ ಬೇಕಾಗಿರುವ ಕಟ್ಟಿಗೆಯನ್ನು ಒದಗಿಸುವವರೋಪಾದಿ ಕೆಲಸಮಾಡುತ್ತಿದ್ದರು. (ಯೆಹೋಶುವ 9:​11-27) ಗಿಬ್ಯೋನ್ಯರು ಯೆಹೋವನ ಸೇವೆಯಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಮನಃಪೂರ್ವಕತೆಯನ್ನು ತೋರಿಸುತ್ತಾ ಮುಂದುವರಿದರು. ಅವರಲ್ಲಿ ಕೆಲವರು, ಬಾಬೆಲಿನಿಂದ ಹಿಂದಿರುಗಿ ಪುನರ್ನಿರ್ಮಿಸಲ್ಪಟ್ಟ ದೇವಾಲಯದಲ್ಲಿ ಸೇವೆಮಾಡುತ್ತಿದ್ದ ದೇವಸ್ಥಾನದಾಸರಲ್ಲಿ (ನಿಥಿನಿಮ್‌) ಇದ್ದಿರಲೂಬಹುದು. (ಎಜ್ರ 2:1, 2, 43-54; 8:20) ದೇವರೊಂದಿಗೆ ಸಮಾಧಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ಮತ್ತು ಆತನ ಸೇವೆಯಲ್ಲಿ ತೀರ ಚಿಕ್ಕಪುಟ್ಟ ನೇಮಕಗಳನ್ನು ನಿರ್ವಹಿಸಲು ಮನಃಪೂರ್ವಕವಾಗಿ ಸಿದ್ಧರಿರುವ ಮೂಲಕ ನಾವು ಅವರ ಮನೋಭಾವವನ್ನು ಅನುಕರಿಸಬಲ್ಲೆವು.

ಸ್ವತ್ಯಾಗಿಗಳಾಗಿರುವುದು

15 ಬೈಬಲ್‌ ಪ್ರದೇಶಗಳ ಕುರಿತಾದ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಅಂಶವು, ಯೇಸುವಿನ ಮತ್ತು ಅಪೊಸ್ತಲ ಪೌಲನ ಪ್ರಯಾಣಗಳು ಹಾಗೂ ಶುಶ್ರೂಷೆಯಂಥ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿನ ವೃತ್ತಾಂತಗಳಲ್ಲಿ ಕಂಡುಬರುತ್ತದೆ. (ಮಾರ್ಕ 1:38; 7:24, 31; 10:1; ಲೂಕ 8:1; 13:22; 2 ಕೊರಿಂಥ 11:25, 26) ಮುಂದಿನ ವೃತ್ತಾಂತಗಳಲ್ಲಿ ಒಳಗೂಡಿರುವ ಪ್ರಯಾಣಗಳನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿರಿ.

16 ತನ್ನ ಎರಡನೆಯ ಮಿಷನೆರಿ ಪ್ರಯಾಣದಲ್ಲಿ (ಭೂಪಟದಲ್ಲಿ ಕೆನ್ನೀಲಿ ಬಣ್ಣದ ಗೆರೆ) ಪೌಲನು, ಈಗ ಗ್ರೀಸ್‌ನ ಭಾಗವಾಗಿರುವ ಫಿಲಿಪ್ಪಿಗೆ ಆಗಮಿಸಿದನು. [33] ಅವನು ಅಲ್ಲಿ ಸುವಾರ್ತೆಯನ್ನು ಸಾರಿದನು, ಸೆರೆಯಲ್ಲಿ ಹಾಕಲ್ಪಟ್ಟನು ಮತ್ತು ನಂತರ ಬಿಡುಗಡೆಮಾಡಲ್ಪಟ್ಟು ಥೆಸಲೋನಿಕಕ್ಕೆ ಹೋದನು. (ಅ. ಕೃತ್ಯಗಳು 16:​6–17:⁠1) ಥೆಸಲೋನಿಕದಲ್ಲಿನ ಯೆಹೂದ್ಯರು ಒಂದು ಗುಂಪು ಗಲಭೆಯನ್ನು ಚಿತಾಯಿಸಿದಾಗ, ಸುಮಾರು 65 ಕಿಲೊಮೀಟರ್‌ ದೂರದಲ್ಲಿದ್ದ ಬೆರೋಯಕ್ಕೆ ಹೋಗುವಂತೆ ಅಲ್ಲಿನ ಸಹೋದರರು ಪೌಲನನ್ನು ಉತ್ತೇಜಿಸಿದರು. ಪೌಲನು ಬೆರೋಯದಲ್ಲಿ ಯಶಸ್ವಿಕರವಾಗಿ ಶುಶ್ರೂಷೆಯನ್ನು ಮಾಡಿದನು, ಆದರೆ ಯೆಹೂದ್ಯರು ಬಂದು ಜನರನ್ನು ಕೆರಳಿಸಿದರು. ಆದುದರಿಂದ, “ಕೂಡಲೇ ಸಹೋದರರು ಪೌಲನನ್ನು ಸಮುದ್ರದ ತನಕ ಹೋಗುವದಕ್ಕೆ ಕಳುಹಿಸಿಕೊಟ್ಟರು” ಮತ್ತು “ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯ ವರೆಗೂ ಕರೆದುಕೊಂಡು” ಹೋದರು. (ಅ. ಕೃತ್ಯಗಳು 17:5-15) ಹೊಸದಾಗಿ ಮತಾಂತರಹೊಂದಿದ್ದ ಕೆಲವರು ಈಜಿಯನ್‌ ಸಮುದ್ರದ ವರೆಗೆ 40 ಕಿಲೊಮೀಟರ್‌ಗಳಷ್ಟು ದೂರ ನಡೆಯಲು, ಹಡಗಿನ ಪ್ರಯಾಣಕ್ಕಾಗಿ ಹಣವನ್ನು ತೆರಲು, ಮತ್ತು ಸುಮಾರು 500 ಕಿಲೊಮೀಟರ್‌ ದೂರ ಸಮುದ್ರಯಾನ ಮಾಡಿ ಅಥೇನೆಯನ್ನು ತಲಪಲು ಮನಃಪೂರ್ವಕವಾಗಿ ಸಿದ್ಧರಿದ್ದರು ಎಂಬುದು ಸುವ್ಯಕ್ತ. ಇಂಥ ಪ್ರಯಾಣವು ಅಪಾಯಕರವಾಗಿರಸಾಧ್ಯವಿತ್ತಾದರೂ, ಸಹೋದರರು ಈ ಅಪಾಯಗಳನ್ನು ಸ್ವೀಕರಿಸಿದರು ಮತ್ತು ದೇವರ ಈ ಸಂಚಾರಿ ಪ್ರತಿನಿಧಿಯೊಂದಿಗೆ ಹೆಚ್ಚು ಸಮಯವನ್ನು ಕಳೆದರು.

17 ತನ್ನ ಮೂರನೆಯ ಪ್ರಯಾಣದಲ್ಲಿ (ಭೂಪಟದಲ್ಲಿರುವ ಹಸಿರು ಗೆರೆ) ಪೌಲನು ಮಿಲೇತ ಬಂದರಿಗೆ ಆಗಮಿಸಿದನು. ಸುಮಾರು 50 ಕಿಲೊಮೀಟರ್‌ ದೂರದಲ್ಲಿದ್ದ ಎಫೆಸ ಸಭೆಯ ಹಿರೀ ಪುರುಷರನ್ನು ಅವನು ಕರೇಕಳುಹಿಸಿದನು. ಆ ಹಿರಿಯರು ಪೌಲನನ್ನು ಭೇಟಿಯಾಗಲಿಕ್ಕಾಗಿ ಇತರ ಚಟುವಟಿಕೆಗಳನ್ನು ನಿಲ್ಲಿಸಿ ಬರುವುದನ್ನು ತುಸು ಊಹಿಸಿಕೊಳ್ಳಿರಿ. ಅವರು ದಾರಿಯಲ್ಲಿ ನಡೆಯುತ್ತಿರುವಾಗ ಮುಂದಿನ ಭೇಟಿಯ ಕುರಿತು ತುಂಬ ಪುಳಕಿತರಾಗಿ ಮಾತಾಡುತ್ತಿದ್ದಿರಬಹುದು. ಪೌಲನನ್ನು ಭೇಟಿಯಾಗಿ, ಅವನ ಪ್ರಾರ್ಥನೆಯನ್ನು ಕೇಳಿಸಿಕೊಂಡ ಬಳಿಕ, “ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” ಆ ಮೇಲೆ “ಅವರು ಅವನನ್ನು ಹಡಗಿಗೆ ಸಾಗಕಳುಹಿಸಿದರು.” (ಅ. ಕೃತ್ಯಗಳು 20:14-37) ಎಫೆಸಕ್ಕೆ ಹಿಂದಿರುಗುತ್ತಿದ್ದಾಗ ಅವರು ಅನೇಕ ವಿಷಯಗಳ ಕುರಿತು ಆಲೋಚಿಸಿದ್ದಿರಬಹುದು ಮತ್ತು ಮಾತಾಡಿದ್ದಿರಬಹುದು. ತಮ್ಮೊಂದಿಗೆ ವಿಚಾರವಿನಿಮಯ ಮಾಡಿ ತಮ್ಮನ್ನು ಉತ್ತೇಜಿಸಸಾಧ್ಯವಿದ್ದ ಸಂಚರಣ ಶುಶ್ರೂಷಕನೊಂದಿಗಿರಲಿಕ್ಕಾಗಿ ಅಷ್ಟು ದೂರ ಪ್ರಯಾಣಿಸುವ ಮೂಲಕ ಅವರು ತೋರಿಸಿದ ಗಣ್ಯತೆಯಿಂದ ನೀವು ಪ್ರಭಾವಿತರಾಗಿಲ್ಲವೋ? ನಿಮ್ಮ ಜೀವನದಲ್ಲಿ ಮತ್ತು ಆಲೋಚನೆಯಲ್ಲಿ ನೀವು ಅನ್ವಯಿಸಿಕೊಳ್ಳಸಾಧ್ಯವಿರುವ ಅಂಶವನ್ನು ಈ ವೃತ್ತಾಂತದಲ್ಲಿ ನೋಡುತ್ತೀರೋ?

ಆ ದೇಶದ ಕುರಿತಾಗಿ ಮತ್ತು ಮುಂದಿರುವ ಪ್ರತೀಕ್ಷೆಯ ಕುರಿತಾಗಿ ಕಲಿಯಿರಿ

18 ಮೇಲ್ಕಂಡ ಉದಾಹರಣೆಗಳು, ದೇವರು ಇಸ್ರಾಯೇಲ್ಯರಿಗೆ ಕೊಟ್ಟ ದೇಶದೊಂದಿಗೆ ಚಿರಪರಿಚಿತರಾಗುವುದರ ಮೌಲ್ಯವನ್ನು ಎತ್ತಿತೋರಿಸುತ್ತವೆ ಮತ್ತು ಆ ದೇಶವು ಅನೇಕ ಬೈಬಲ್‌ ವೃತ್ತಾಂತಗಳಿಗೆ ತುಂಬ ಅರ್ಥಗರ್ಭಿತವಾದದ್ದಾಗಿದೆ. (ಮತ್ತು ನಾವು ನಮ್ಮ ದೃಷ್ಟಿಪಥವನ್ನು, ಬೈಬಲ್‌ ವೃತ್ತಾಂತಗಳಲ್ಲಿ ಕಂಡುಬರುವ ಸುತ್ತುಮುತ್ತಲ ಪ್ರದೇಶಗಳ ಕುರಿತು ಕಲಿಯಲು ಸಹ ವಿಸ್ತರಿಸಸಾಧ್ಯವಿದೆ.) ವಿಶೇಷವಾಗಿ ವಾಗ್ದತ್ತ ದೇಶದ ಕುರಿತಾದ ನಮ್ಮ ಜ್ಞಾನ ಮತ್ತು ತಿಳಿವಳಿಕೆಗೆ ನಾವು ಹೆಚ್ಚನ್ನು ಕೂಡಿಸುವಾಗ, ಇಸ್ರಾಯೇಲ್ಯರು “ಹಾಲೂ ಜೇನೂ ಹರಿಯುವ” ದೇಶವನ್ನು ಪ್ರವೇಶಿಸಿ ಆನಂದಿಸಬೇಕಾಗಿದ್ದರೆ ಅವರು ಪೂರೈಸಬೇಕಾಗಿದ್ದ ಒಂದು ಮೂಲಭೂತ ಆವಶ್ಯಕತೆಯನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ. ಅದು, ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವುದೇ ಆಗಿತ್ತು.​—⁠ಧರ್ಮೋಪದೇಶಕಾಂಡ 6:1, 2; 27:⁠2, 3.

19 ತದ್ರೀತಿಯಲ್ಲಿ ಇಂದು, ನಾವು ಯೆಹೋವನಿಗೆ ಭಯಪಟ್ಟು ಆತನ ಮಾರ್ಗಗಳಿಗೆ ಅಂಟಿಕೊಳ್ಳುವ ಅಗತ್ಯವಿದೆ. ಹೀಗೆ ಮಾಡುವ ಮೂಲಕ, ನಾವು ಈಗ ಲೋಕವ್ಯಾಪಕವಾಗಿ ಕ್ರೈಸ್ತ ಸಭೆಯಲ್ಲಿ ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಪರದೈಸನ್ನು ವರ್ಧಿಸಲು ಮತ್ತು ಇನ್ನಷ್ಟು ಸುಂದರಗೊಳಿಸಲು ನೆರವು ನೀಡುವೆವು. ನಾವು ಆ ಪರದೈಸಿನ ವೈಶಿಷ್ಟ್ಯಗಳು ಮತ್ತು ಆಶೀರ್ವಾದಗಳ ಕುರಿತಾದ ನಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸುವೆವು. ಇದಲ್ಲದೆ, ಇನ್ನೂ ಹೆಚ್ಚಿನ ಆಶೀರ್ವಾದಗಳು ಲಭ್ಯವಾಗಲಿವೆ ಎಂಬುದು ನಮಗೆ ಗೊತ್ತು. ಯೆಹೋಶುವನು ಯೊರ್ದನನ್ನು ದಾಟಿ ಇಸ್ರಾಯೇಲ್ಯರನ್ನು ಒಂದು ಫಲಪ್ರದವಾದ, ಸಂತೃಪ್ತಿದಾಯಕವಾದ “ಒಳ್ಳೆಯ ದೇಶ”ದೊಳಕ್ಕೆ ನಡೆಸಿದನು. ಈಗ ಭೌತಿಕ ಪರದೈಸಿಗಾಗಿ, ನಮ್ಮ ಮುಂದಿರುವ ಒಳ್ಳೆಯ ದೇಶಕ್ಕಾಗಿ ದೃಢಭರವಸೆಯಿಂದ ಮುನ್ನೋಡಲು ನಮಗೆ ಸಕಾರಣವಿದೆ.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ನಾವು ಬೈಬಲ್‌ ದೇಶಗಳ ಕುರಿತಾದ ನಮ್ಮ ಜ್ಞಾನವನ್ನು ಮತ್ತು ತಿಳಿವಳಿಕೆಯನ್ನು ಹೆಚ್ಚಿಸಲು ಏಕೆ ಬಯಸಬೇಕು?

• ಈ ಲೇಖನದಲ್ಲಿ ಪರಿಗಣಿಸಲ್ಪಟ್ಟಿರುವ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಯಾವ ವಿವರವು ನಿಮಗೆ ವಿಶೇಷವಾಗಿ ಸಹಾಯಕರವಾಗಿದೆ?

• ಯಾವುದಾದರೊಂದು ಘಟನೆಯಲ್ಲಿ ಒಳಗೂಡಿರುವ ಭೂಗೋಳಶಾಸ್ತ್ರೀಯ ಅಂಶಗಳ ಕುರಿತು ನೀವು ಹೆಚ್ಚನ್ನು ಕಲಿತಂತೆ, ಯಾವ ಪಾಠವು ನಿಮಗೆ ಹೆಚ್ಚು ಸ್ಪಷ್ಟವಾಯಿತು?

[ಅಧ್ಯಯನ ಪ್ರಶ್ನೆಗಳು]

1. ಅಬ್ರಹಾಮನಿಗೆ ದೇವರು ಯಾವ ಆಸಕ್ತಿಕರ ಸೂಚನೆಯನ್ನು ನೀಡಿದನು?

2. ಐಗುಪ್ತದಿಂದ ಹೊರಟ ಬಳಿಕ ಅಬ್ರಹಾಮನು ಎಲ್ಲಿಗೆ ಹೋದನು?

3. ಅಬ್ರಹಾಮನ ಪ್ರಯಾಣಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು ಕಷ್ಟಕರವಾಗಿರಬಹುದೇಕೆ?

4, 5. (ಎ) ಜ್ಞಾನೋಕ್ತಿ 18:15ನೆಯ ವಚನವು, ಬೈಬಲ್‌ ದೇಶಗಳ ಜ್ಞಾನ ಮತ್ತು ತಿಳಿವಳಿಕೆಗೆ ಹೇಗೆ ಸಂಬಂಧಿಸಿದೆ? (ಬಿ) ಚೆಫನ್ಯ 2ನೇ ಅಧ್ಯಾಯವು ಏನನ್ನು ದೃಷ್ಟಾಂತಿಸುತ್ತದೆ?

6. ಕೆಲವು ಕ್ರೈಸ್ತರು ಭೂಪಟಗಳ ಪ್ರಮುಖತೆಯನ್ನು ಹೇಗೆ ಗಣ್ಯಮಾಡಲಾರಂಭಿಸಿದ್ದಾರೆ? (ಚೌಕವನ್ನು ನೋಡಿ.)

7, 8. (ಎ) ಸಂಸೋನನು ಗಾಜದಲ್ಲಿ ಯಾವ ಆಶ್ಚರ್ಯಕರ ಕೆಲಸವನ್ನು ಮಾಡಿದನು? (ಬಿ) ಯಾವ ಮಾಹಿತಿಯು ಸಂಸೋನನ ಸಾಹಸಕಾರ್ಯಕ್ಕೆ ಇನ್ನಷ್ಟು ಮಹತ್ವವನ್ನು ನೀಡಬಲ್ಲದು? (ಸಿ) ಸಂಸೋನನನ್ನು ಒಳಗೂಡಿರುವ ಈ ವೃತ್ತಾಂತದ ಕುರಿತಾದ ಜ್ಞಾನ ಹಾಗೂ ತಿಳಿವಳಿಕೆಯು ನಮಗೆ ಹೇಗೆ ಸಹಾಯಮಾಡಬಲ್ಲದು?

9, 10. (ಎ) ಮಿದ್ಯಾನ್ಯರ ವಿರುದ್ಧ ಗಿದ್ಯೋನನು ಸಾಧಿಸಿದ ಜಯದಲ್ಲಿ ಏನು ಒಳಗೂಡಿತ್ತು? (ಬಿ) ಒಳಗೂಡಿರುವಂಥ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳ ಕುರಿತಾದ ನಮ್ಮ ಜ್ಞಾನವು, ಈ ವೃತ್ತಾಂತವನ್ನು ಹೆಚ್ಚು ಅರ್ಥಭರಿತವಾದದ್ದಾಗಿ ಮಾಡಲು ನಮಗೆ ಹೇಗೆ ಸಹಾಯಮಾಡಬಲ್ಲದು?

11. ಇಸ್ರಾಯೇಲ್ಯರು ಕಾದೇಶನ್ನು ತಲಪುವುದಕ್ಕೆ ಮೊದಲು ಮತ್ತು ತದನಂತರ ಯಾವ ಪ್ರಯಾಣವು ಒಳಗೂಡಿತ್ತು?

12. ಇಸ್ರಾಯೇಲ್ಯರ ನಂಬಿಕೆಯ ವಿಷಯದಲ್ಲಿ ನಾವು ಯಾವ ನಿರ್ಧಾರಕ್ಕೆ ಬರಸಾಧ್ಯವಿದೆ, ಮತ್ತು ನಾವು ಅದರ ಕುರಿತು ಧ್ಯಾನಿಸುವ ಅಗತ್ಯವಿದೆಯೇಕೆ?

13, 14. (ಎ) ಯಾವ ಸನ್ನಿವೇಶದಲ್ಲಿ ಗಿಬ್ಯೋನ್ಯರು ಒಂದು ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡರು? (ಬಿ) ಗಿಬ್ಯೋನ್ಯರ ಮನೋಭಾವವನ್ನು ಯಾವುದು ಬಯಲುಪಡಿಸುತ್ತದೆ, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯತಕ್ಕದ್ದು?

15. ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಕುರಿತಾದ ಭೂಗೋಳಶಾಸ್ತ್ರೀಯ ಅಂಶವು ಏಕೆ ಆಸಕ್ತಿಕರವಾದದ್ದಾಗಿದೆ?

16. ಬೆರೋಯದಲ್ಲಿದ್ದ ಕ್ರೈಸ್ತರು ಪೌಲನಿಗೆ ಯಾವ ರೀತಿಯಲ್ಲಿ ಗಣ್ಯತೆಯನ್ನು ತೋರಿಸಿದರು?

17. ಮಿಲೇತ ಹಾಗೂ ಎಫೆಸದ ನಡುವೆ ಇದ್ದ ಅಂತರವನ್ನು ಅರ್ಥಮಾಡಿಕೊಂಡ ನಂತರ ನಾವು ಏನನ್ನು ಹೆಚ್ಚು ಉತ್ತಮವಾಗಿ ಗ್ರಹಿಸಸಾಧ್ಯವಿದೆ?

18. ಬೈಬಲ್‌ ಪ್ರದೇಶಗಳ ವಿಷಯದಲ್ಲಿ ನಾವು ಏನು ಮಾಡುವ ನಿರ್ಧಾರವನ್ನು ಮಾಡಸಾಧ್ಯವಿದೆ?

19. ಯಾವ ಎರಡು ಪರದೈಸ್‌ಗಳು ನಮ್ಮ ಸತತ ಗಮನಕ್ಕೆ ಅರ್ಹವಾಗಿವೆ?

[ಪುಟ 14ರಲ್ಲಿರುವ ಚೌಕ/ಚಿತ್ರ]

‘ಒಳ್ಳೆಯ ದೇಶವನ್ನು ನೋಡಿ’

ಇಸವಿ 2003 ಮತ್ತು 2004ರ ಅಧಿವೇಶನಗಳಲ್ಲಿ ಯೆಹೋವನ ಸಾಕ್ಷಿಗಳು ‘ಒಳ್ಳೆಯ ದೇಶವನ್ನು ನೋಡಿ’ ಎಂಬ ಬ್ರೋಷರನ್ನು ತುಂಬ ಸಂತೋಷದಿಂದ ಸ್ವೀಕರಿಸಿದರು. ಸುಮಾರು 80 ಭಾಷೆಗಳಲ್ಲಿ ಲಭ್ಯವಿರುವ ಈ ಹೊಸ ಪ್ರಕಾಶನವು, ಬೈಬಲಿನಲ್ಲಿ ಚರ್ಚಿಸಲ್ಪಟ್ಟಿರುವ ಲೋಕದ ಬೇರೆ ಬೇರೆ ಕ್ಷೇತ್ರಗಳನ್ನು​—⁠ವಿಶೇಷವಾಗಿ ವಿಭಿನ್ನ ಕಾಲಾವಧಿಗಳಲ್ಲಿ ವಾಗ್ದತ್ತ ದೇಶವನ್ನು​—⁠ಚಿತ್ರಿಸುವ ವರ್ಣರಂಜಿತ ಭೂಪಟಗಳಿಂದ ಮತ್ತು ನಕ್ಷೆಗಳಿಂದ ತುಂಬಿದೆ.

ಇದರ ಜೊತೆಯಲ್ಲಿರುವ ಲೇಖನವು, ಪುಟದ ಸಂಖ್ಯೆಗಳನ್ನು [15]ರಂಥ ದಪ್ಪಕ್ಷರಗಳಲ್ಲಿ ನಿರ್ದಿಷ್ಟ ಭೂಪಟಗಳಿಗೆ ಸೂಚಿತವಾಗಿದೆ. ಈ ಹೊಸ ಬ್ರೋಷರ್‌ ನಿಮ್ಮ ಬಳಿಯಿರುವಲ್ಲಿ, ದೇವರ ವಾಕ್ಯದ ಕುರಿತಾದ ನಿಮ್ಮ ಜ್ಞಾನವನ್ನು ಹಾಗೂ ತಿಳಿವಳಿಕೆಯನ್ನು ಹೆಚ್ಚಿಸಲು ನಿಮಗೆ ಸಹಾಯಮಾಡಸಾಧ್ಯವಿರುವ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಚಿರಪರಿಚಿತರಾಗಲಿಕ್ಕಾಗಿ ಸ್ವಲ್ಪ ಸಮಯವನ್ನು ವ್ಯಯಿಸಿರಿ.

(1) ಅನೇಕ ಭೂಪಟಗಳು, ಭೂಪಟದಲ್ಲಿರುವ ನಿರ್ದಿಷ್ಟ ಸಂಕೇತಗಳು ಅಥವಾ ಗುರುತುಗಳನ್ನು ವಿವರಿಸುವ ವಿವರಣೆ ಪಟ್ಟಿಯನ್ನು ಅಥವಾ ಚೌಕವನ್ನು ಒಳಗೂಡಿವೆ [18]. (2) ಹೆಚ್ಚಿನ ಭೂಪಟಗಳು ಮೈಲುಗಳು ಮತ್ತು ಕಿಲೊಮೀಟರುಗಳ ಅಳತೆಗೆರೆಗಳನ್ನು ಒಳಗೂಡಿವೆ; ಇವು ಒಳಗೂಡಿರುವ ಗಾತ್ರ ಅಥವಾ ಅಂತರವನ್ನು ಗ್ರಹಿಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತವೆ [26]. (3) ಸಾಮಾನ್ಯವಾಗಿ ಉತ್ತರಾಭಿಮುಖವಾಗಿರುವಂಥ ಒಂದು ಬಾಣದ ಗುರುತು, ದಿಕ್ಕನ್ನು ಗ್ರಹಿಸುವಂತೆ ನಿಮಗೆ ಸಹಾಯಮಾಡುವುದು [19]. (4) ಅನೇಕವೇಳೆ ಸಾಮಾನ್ಯವಾಗಿ ಎತ್ತರವಾಗಿರುವ ಸ್ಥಳಗಳನ್ನು ಸೂಚಿಸಲಿಕ್ಕಾಗಿ ಭೂಪಟಗಳಿಗೆ ಬಣ್ಣತುಂಬಿಸಲಾಗಿದೆ [12]. (5) ಒಂದು ಭೂಪಟದ ಮೂಲೆಗಳಲ್ಲಿ ನೀವು ಒಂದು ರೇಖಾಜಾಲರಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಸಾಧ್ಯವಾಗುವಂತೆ ಅಕ್ಷರಗಳು/ಸಂಖ್ಯೆಗಳು ಕೊಡಲ್ಪಟ್ಟಿರಬಹುದು. ಇವುಗಳನ್ನು ನೀವು ಪಟ್ಟಣಗಳು ಅಥವಾ ಹೆಸರುಗಳನ್ನು ಕಂಡುಹಿಡಿಯಲಿಕ್ಕಾಗಿ ಉಪಯೋಗಿಸಸಾಧ್ಯವಿದೆ [23]. (6) ಸ್ಥಳಗಳ ಹೆಸರುಗಳಿರುವ [34-5] ಎರಡು ಪುಟಗಳ ವಿಷಯಸೂಚಿಯಲ್ಲಿ, ನೀವು ಪುಟದ ಸಂಖ್ಯೆಯನ್ನು ದಪ್ಪಕ್ಷರದಲ್ಲಿ ನೋಡಸಾಧ್ಯವಿದೆ, ತದನಂತರ ಅನೇಕವೇಳೆ ರೇಖಾಜಾಲರಿಯ ಸ್ಥಳವು E2 ಎಂಬಂಥ ಗುರುತಿನಿಂದ ಸೂಚಿಸಲ್ಪಟ್ಟಿರುತ್ತದೆ. ನೀವು ಕೆಲವು ಬಾರಿ ಈ ವೈಶಿಷ್ಟ್ಯಗಳನ್ನು ಉಪಯೋಗಿಸಿದ ಬಳಿಕ, ಬೈಬಲಿನ ಕುರಿತಾದ ನಿಮ್ಮ ಜ್ಞಾನವನ್ನು ವಿಸ್ತರಿಸುವುದರಲ್ಲಿ ಮತ್ತು ನಿಮ್ಮ ತಿಳಿವಳಿಕೆಯನ್ನು ಇನ್ನಷ್ಟು ಗಹನಗೊಳಿಸುವುದರಲ್ಲಿ ಇವು ನಿಜವಾಗಿಯೂ ಸಹಾಯಕರ ಅಂಶಗಳಾಗಿವೆ ಎಂಬುದನ್ನು ಮನಗಂಡು ನೀವು ವಿಸ್ಮಯಪಡುವಿರಿ.

[ಪುಟ 16, 17ರಲ್ಲಿರುವ ಚಾರ್ಟು/ಭೂಪಟ]

ಪ್ರಾಕೃತಿಕ ಪ್ರದೇಶಗಳ ನಕ್ಷೆ

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

A. ಮಹಾ ಸಮುದ್ರದ ಕರಾವಳಿ

B.ಯೊರ್ದನಿನ ಪಶ್ಚಿಮಕ್ಕಿರುವ ಬೈಲು

1. ಆಶೇರ್‌ ಬೈಲು

2. ದೋರ್‌ ಕರಾವಳಿಯ ಉದ್ದಕಿರಿದಾದ ಕ್ಷೇತ್ರ

3. ಶಾರೋನಿನ ಹುಲ್ಲುಗಾವಲುಗಳು

4. ಫಿಲಿಷ್ಟಿಯದ ಬೈಲು

5. ಮದ್ಯ ಪೂರ್ವ-ಪಶ್ಚಿಮ ಕಣಿವೆ

a.ಮೆಗಿದ್ದೋ ಬೈಲು

b.ಇಜ್ರೇಲಿನ ತಗ್ಗು

C. ಯೊರ್ದನಿನ ಪಶ್ಚಿಮಕ್ಕಿರುವ ಪರ್ವತಗಳು

1. ಗಲಿಲಾಯದ ಗುಡ್ಡಗಳು

2. ಕರ್ಮೆಲಿನ ಗುಡ್ಡಗಳು

3. ಸಮಾರ್ಯದ ಗುಡ್ಡಗಳು

4. ಇಳಕಲಿನ ಪ್ರದೇಶ (ತಗ್ಗಾದ ಗುಡ್ಡಗಳು)

5. ಯೆಹೂದದ ಗುಡ್ಡಗಾಡು ಪ್ರದೇಶ

6. ಯೆಹೂದದ ಅರಣ್ಯ

7. ದಕ್ಷಿಣಪ್ರಾಂತ

8. ಪಾರಾನ್‌ ಅರಣ್ಯ

D. ತಗ್ಗಾದ ಪ್ರದೇಶ (ರಿಫ್ಟ್‌ ವ್ಯಾಲಿ)

1. ಹುಲಾ ಜಲದ್ವಾರ

2. ಗಲಿಲಾಯ ಸಮುದ್ರದ ಕ್ಷೇತ್ರ

3. ಯೊರ್ದನ್‌ ಕಣಿವೆ

4. ಲವಣ ಸಮುದ್ರ (ಮೃತ ಸಮುದ್ರ)

5. ತಗ್ಗಾದ ಪ್ರದೇಶ (ಲವಣ ಸಮುದ್ರದ ದಕ್ಷಿಣದಲ್ಲಿ)

E. ಯೊರ್ದನಿನ ಪೂರ್ವಕ್ಕಿರುವ ಪರ್ವತಗಳು/ಪ್ರಸ್ಥ ಭೂಮಿಗಳು

1. ಬಾಷಾನ್‌

2. ಗಿಲ್ಯಾದ್‌

3. ಅಮ್ಮೋನ್‌ ಮತ್ತು ಮೋವಾಬ್‌

4. ಎದೋಮಿನ ಪರ್ವತ ಪ್ರಸ್ಥಭೂಮಿ

F. ಲೆಬನೋನಿನ ಪರ್ವತಗಳು

[ಭೂಪಟ]

ಹೆರ್ಮೋನ್‌ ಬೆಟ್ಟ

ಮೋರೆ

ಅಬೇಲ್‌ಮೆಹೋಲ

ಸುಕ್ಕೋತ್‌

ಯೊಗ್ಬೆಹಾ

ಬೇತೇಲ್‌

ಗಿಲ್ಗಾಲ್‌

ಗಿಬ್ಯೋನ್‌

ಯೆರೂಸಲೇಮ್‌

ಹೆಬ್ರೋನ್‌

ಗಾಜ

ಬೇರ್ಷೆಬ

ಸೊದೋಮ್‌?

ಕಾದೇಶ್‌

[ಪುಟ 15ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕಾನಾನ್‌

ಮೆಗಿದ್ದೋ

ಗಿಲ್ಯಾದ್‌

ದೋತಾನ್‌

ಶೆಕೆಮ್‌

ಬೇತೆಲ್‌ (ಲೂಜ್‌)

ಆಯಿ

ಯೆರೂಸಲೇಮ್‌ (ಸಾಲೇಮ್‌)

ಬೇತ್ಲೆಹೇಮ್‌ (ಎಫ್ರಾತ)

ಮಮ್ರೆ

ಹೆಬ್ರೋನ್‌ (ಮಕ್ಪೇಲ)

ಗೆರಾರ್‌

ಬೇರ್ಷೆಬ

ಸೊದೋಮ್‌?

ದಕ್ಷಿಣಪ್ರಾಂತ

ರೆಹೋಬೋತ್‌?

[ಪರ್ವತಗಳು]

ಮೊರೀಯ

[ಜಲಾಶಯಗಳು]

ಲವಣ ಸಮುದ್ರ

[ನದಿಗಳು]

ಯೊರ್ದನ್‌

[ಚಿತ್ರ]

ಅಬ್ರಹಾಮನು ಆ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡಿದನು

[ಪುಟ 18ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ತ್ರೋವ

ಸಮೊಥ್ರಾಕೆ

ನೆಯಾಪೊಲಿ

ಫಿಲಿಪ್ಪಿ

ಅಂಫಿಪೊಲಿ

ಥೆಸಲೊನೀಕ

ಬೆರೋಯ

ಅಥೆನ್ಸ್‌

ಕೊರಿಂಥ

ಎಫೆಸ

ಮಿಲೇತ

ರೋದ