ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಓದುವುದನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೋ?

ನೀವು ಓದುವುದನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೋ?

ನೀವು ಓದುವುದನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೋ?

ಘಟನೆಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬೇಕಾದರೆ, ನೀವು ಓದುವ ಸ್ಥಳಗಳ ಕುರಿತಾಗಿ ತಿಳಿದಿರುವುದು ಸಹಾಯಕಾರಿ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಉದಾಹರಣೆಗೆ, ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ವಿವರಿಸಿರುವ ಅಪೊಸ್ತಲ ಪೌಲನ ಮಿಷನೆರಿ ಪ್ರಯಾಣಗಳ ಕುರಿತಾಗಿ ಪರಿಗಣಿಸಿರಿ. ಅವನು ತನ್ನ ಮೊದಲ ಮಿಷನೆರಿ ಪ್ರಯಾಣವನ್ನು, ಯೇಸುವಿನ ಹಿಂಬಾಲಕರು ಎಲ್ಲಿ ಪ್ರಥಮವಾಗಿ ಕ್ರೈಸ್ತರು ಎಂಬುದಾಗಿ ಕರೆಯಲ್ಪಟ್ಟರೋ ಆ ಅಂತಿಯೋಕ್ಯದಿಂದ ಪ್ರಾರಂಭಿಸಿದನು. ಅಲ್ಲಿಂದ ಅವನು ಸಲಮೀಸ್‌, ಪಿಸಿದ್ಯದ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ, ಮತ್ತು ದೆರ್ಬೆ ಮುಂತಾದ ಸ್ಥಳಗಳಿಗೆ ಪ್ರಯಾಣಿಸಿದನು. ಈ ಎಲ್ಲಾ ಸ್ಥಳಗಳು ಎಲ್ಲಿವೆ ಎಂದು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೋ?

ನಿಮ್ಮ ಬಳಿ ಭೂಪಟವಿಲ್ಲದಿದ್ದರೆ ಸಾಧ್ಯವಿರಲಿಕ್ಕಿಲ್ಲ. ‘ಒಳ್ಳೆಯ ದೇಶವನ್ನು ನೋಡಿ’ ಎಂಬ 36 ಪುಟಗಳ ಹೊಸ ಬ್ರೋಷರಿನಲ್ಲಿ ಅಂಥ ಒಂದು ಭೂಪಟವು ಅಡಕವಾಗಿದೆ. ಅಮೆರಿಕದ ಮೊಂಟ್ಯಾನದಲ್ಲಿನ ಒಬ್ಬಾಕೆ ಓದುಗಳು ಈ ರೀತಿಯಾಗಿ ಗಣ್ಯತಾಭರಿತ ಹೇಳಿಕೆಗಳನ್ನು ಮಾಡಿದಳು: “ಪೌಲನ ಪ್ರಯಾಣಗಳನ್ನು ನಾನು ನೋಡಬಲ್ಲೆ ಮತ್ತು ಅವನು ಉಪಯೋಗಿಸಿರಬಹುದಾದ ಸಂಚಾರ ಮಾಧ್ಯಮವನ್ನು ಹಾಗೂ ಸುವಾರ್ತೆಯನ್ನು ಹಂಚಲು ಅವನು ಮತ್ತು ಇತರ ಆರಂಭದ ಕ್ರೈಸ್ತರು ಮಾಡಿದ ಕೆಲಸವನ್ನು ಊಹಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂಥ ಒಂದು ಸುಂದರವಾದ ದೃಶ್ಯ ಸಾಧನಕ್ಕಾಗಿ ನಿಮಗೆ ಉಪಕಾರ.”

ಬೈಬಲಿನಲ್ಲಿ ಏನು ತಿಳಿಸಲ್ಪಟ್ಟಿದೆಯೋ ಅದನ್ನು ಓದುಗರು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಈ ಬ್ರೋಷರ್‌ ಸಹಾಯಮಾಡುವ ಅನೇಕ ವಿಷಯಗಳಲ್ಲಿ ಪೌಲನ ಪ್ರಯಾಣಗಳು ಒಂದಾಗಿದೆ. ಇದರ ಜೊತೆಯಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 2ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರಿನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀವು ವಿನಂತಿಸಬಹುದು.

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ‘ಒಳ್ಳೆಯ ದೇಶವನ್ನು ನೋಡಿ’ ಎಂಬ ಬ್ರೋಷರಿನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

[ಪುಟ 32ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.