ಹೆಚ್ಚೆಚ್ಚು ಭೌತಿಕ ವಿಷಯಗಳಿಗಾಗಿ ಬೆನ್ನಟ್ಟುವಿಕೆ
ಹೆಚ್ಚೆಚ್ಚು ಭೌತಿಕ ವಿಷಯಗಳಿಗಾಗಿ ಬೆನ್ನಟ್ಟುವಿಕೆ
“ನಮ್ಮ ಬೇಕುಗಳನ್ನು ತೃಪ್ತಿಪಡಿಸುವುದು ಅಸಾಧ್ಯವಾಗಿರುವಲ್ಲಿ, ಸಾಕು ಎಂಬ ವಿಷಯವೇ ನಮ್ಮ ಜೀವನದಲ್ಲಿ ಇರುವುದಿಲ್ಲ.” —ವಿಶ್ವವೀಕ್ಷಣೆ ಸಂಸ್ಥೆಯ ವರದಿ.
“ನಮಗೇನು ಬೇಕು? ಎಲ್ಲವು ಬೇಕು. ಯಾವಾಗ ಬೇಕು? ಈಗಲೇ ಬೇಕು.” ಇಸವಿ 1960ಗಳಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಈ ಧ್ಯೇಯಮಂತ್ರವು ಜನಪ್ರಿಯವಾಗಿತ್ತು. ಇಂದು, ಇದೇ ಪದಗಳನ್ನು ನಾವು ಕೇಳಲಿಕ್ಕಿಲ್ಲವಾದರೂ ಅದೇ ನೀತಿಬೋಧೆಯು ಇಂದಿಗೂ ಅಸ್ತಿತ್ವದಲ್ಲಿದೆ. ವಾಸ್ತವದಲ್ಲಿ, ಹೆಚ್ಚೆಚ್ಚು ಭೌತಿಕ ವಿಷಯಗಳಿಗಾಗಿನ ಬೆನ್ನಟ್ಟುವಿಕೆಯೇ ನಮ್ಮ ಕಾಲದ ಗುರುತು ಚಿಹ್ನೆಯಾಗಿದೆ.
ಅನೇಕರಿಗೆ, ಐಶ್ವರ್ಯ ಮತ್ತು ಸ್ವತ್ತುಗಳನ್ನು ಒಟ್ಟುಗೂಡಿಸುವುದು ಒಂದು ಪ್ರಾಮುಖ್ಯ ವಿಷಯವಾಗಿದೆ. ಅಮೆರಿಕದ ಮಾಜಿ ಪ್ರಧಾನಿಯಾದ ಜಿಮೀ ಕಾರ್ಟರ್ ಒಮ್ಮೆ ಹೇಳಿದ್ದು: “ಒಬ್ಬ ವ್ಯಕ್ತಿಯು ಏನು ಮಾಡುತ್ತಾನೆ ಎಂಬುದರ ಮೇಲಲ್ಲ, ಬದಲಾಗಿ ಅವನಲ್ಲಿ ಎಷ್ಟು ಸಿರಿಸಂಪತ್ತಿದೆ ಎಂಬುದರ ಮೇಲೆ ಅವನನ್ನು ಗುರಿತಿಸಲಾಗುತ್ತದೆ.” ಸ್ವತ್ತಿಗಿಂತಲೂ ಹೆಚ್ಚು ಪ್ರಾಮುಖ್ಯವಾದ ಮೌಲ್ಯಗಳು ಇವೆಯೋ? ಇರುವುದಾದರೆ, ಅವು ಯಾವುವು, ಮತ್ತು ಅವು ಯಾವ ಪ್ರಯೋಜನಗಳನ್ನು ತರಬಲ್ಲವು?