ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಭದ್ರತೆಯನ್ನು ನಾವು ಎಂದಾದರೂ ಅನುಭವಿಸುವೆವೋ?

ನಿಜ ಭದ್ರತೆಯನ್ನು ನಾವು ಎಂದಾದರೂ ಅನುಭವಿಸುವೆವೋ?

ನಿಜ ಭದ್ರತೆಯನ್ನು ನಾವು ಎಂದಾದರೂ ಅನುಭವಿಸುವೆವೋ?

ಮ್ಮ ಪ್ರೀತಿಯ ಹೆತ್ತವರೊಂದಿಗೆ ಮಕ್ಕಳು ಸಂತೋಷದಿಂದ ಆಟವಾಡುವ ದೃಶ್ಯವನ್ನು ನೋಡಲು ಯಾರು ತಾನೇ ಇಷ್ಟಪಡುವುದಿಲ್ಲ? ತಮ್ಮ ಕುರಿತು ಚಿಂತಿಸುವ ಹೆತ್ತವರಿರುವಾಗ ಮಕ್ಕಳಿಗೆ ಸಂಪೂರ್ಣ ಭದ್ರತೆಯ ಅನಿಸಿಕೆಯಾಗುತ್ತದೆ. ಆದರೂ, ಅನೇಕ ಮಕ್ಕಳಿಗೆ ಅಂಥ ಸಂತೋಷಕರ ಕ್ಷಣಗಳೇ ಲಭಿಸುವುದಿಲ್ಲ. ಅದಕ್ಕೆ ಬದಲಾಗಿ, ಕೆಲವು ಮಕ್ಕಳಿಗೆ ತಾವು ರಾತ್ರಿ ಎಲ್ಲಿ ಮಲಗುವುದು ಎಂಬುದರ ಕುರಿತು ಪ್ರತಿದಿನ ಚಿಂತಿಸಬೇಕಾದ ಪರಿಸ್ಥಿತಿಯಿರುತ್ತದೆ. ಅಂಥ ಮನೆರಹಿತ ಮಕ್ಕಳಿಗೆ ಮತ್ತು ಭದ್ರತೆಯಿಲ್ಲದೆ ಜೀವಿಸುವ ಇತರರಿಗೆ ಯಾವುದೇ ನಿರೀಕ್ಷೆಯಿದೆಯೋ?

ಭವಿಷ್ಯವು ಮಬ್ಬಾಗಿ ಕಾಣುವುದಾದರೂ, ದೇವರ ವಾಕ್ಯವು ನಿರೀಕ್ಷೆಯನ್ನು ಒದಗಿಸುತ್ತದೆ. ಎಲ್ಲರೂ ಸಂಪೂರ್ಣ ಭದ್ರತೆಯಲ್ಲಿ ಜೀವಿಸುವ ಕಾಲವು ಬರಲಿದೆ ಎಂದು ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದಾನೆ. ಅವನು ಬರೆದದ್ದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”​—⁠ಯೆಶಾಯ 65:21, 22.

ಆದರೆ ಈ ನಿರೀಕ್ಷೆಗೆ ಆಧಾರವಿದೆಯೇ? “ನಿರೀಕ್ಷೆ” ಎಂಬ ಪದವು ತಾನೇ ಎಲ್ಲಾ ಸಮಯಗಳಲ್ಲಿ ನಿಶ್ಚಿತತೆಯನ್ನು ಸೂಚಿಸುವುದಿಲ್ಲ ಎಂಬುದು ನಿಜ. ಉದಾಹರಣೆಗೆ, ಬ್ರಸಿಲ್‌ನಲ್ಲಿ ಜನಪ್ರಿಯವಾದ ಒಂದು ಹೇಳಿಕೆ ಈ ರೀತಿಯಲ್ಲಿದೆ: “ಆ ಎಸ್ಪರಾನ್‌ಸಾ ಎ ಆ ಊಲ್ಟಿಮಾ ಕಿ ಮೊರೆ.” ಇದರ ಅಕ್ಷರಾರ್ಥ, “ಕೊನೆಯದಾಗಿ ಸಾಯುವಂಥದ್ದು ನಿರೀಕ್ಷೆ.” ಇದು ಏನನ್ನು ಸೂಚಿಸುತ್ತದೆಂದರೆ, ನಿರೀಕ್ಷೆಗೆ ಯಾವುದೇ ನಿಜವಾದ ಆಧಾರವಿಲ್ಲ ಎಂದು ತೋರುವಾಗಲೂ ಅನೇಕ ಜನರು ನಿರೀಕ್ಷೆಯಿಂದಿರುತ್ತಾರೆ. ಆದರೆ, ಜೀವಂತನಾದ ದೇವರು ನಮಗೆ ನೀಡುವ ನಿರೀಕ್ಷೆಯು ಭಿನ್ನವಾದದ್ದಾಗಿದೆ. ಅಪೊಸ್ತಲ ಪೌಲನು ಬರೆದದ್ದು: “[ದೇವರ] ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲ.” (ರೋಮಾಪುರ 10:11) ಈಗಾಗಲೇ ನೆರವೇರಿರುವ ಬೈಬಲ್‌ ಪ್ರವಾದನೆಗಳು, ಯೆಹೋವ ದೇವರಿಂದ ನುಡಿಯಲ್ಪಟ್ಟ ಇತರ ಎಲ್ಲಾ ವಾಗ್ದಾನಗಳು ಸಹ ಖಂಡಿತವಾಗಿಯೂ ನೆರವೇರುವವು ಎಂಬ ಭರವಸೆಯನ್ನು ನೀಡುತ್ತವೆ. ಇವು ನೇರವೇರುವಾಗ, ಮಕ್ಕಳನ್ನು ಇಂದು ಒತ್ತಾಯಪೂರ್ವಕವಾಗಿ ಬೀದಿಯಲ್ಲಿ ಜೀವಿಸುವಂತೆ ಮಾಡುತ್ತಿರುವ ಸಂಗತಿಗಳು ಗತ ವಿಷಯಗಳಾಗುವವು.

ಬೈಬಲಿನಲ್ಲಿ ಕಂಡುಬರುವ ವ್ಯಾವಹಾರಿಕ ಸಲಹೆಯು ಇಂದು ಸಹ ನಿರೀಕ್ಷಾರಹಿತರು ತಮ್ಮ ಜೀವನವನ್ನು ಉತ್ತಮಗೊಳಿಸಲು ಮತ್ತು ನಿಜ ಭದ್ರತೆಯನ್ನು ಕಂಡುಕೊಳ್ಳಲು ಸಹಾಯಮಾಡಬಲ್ಲದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ.