ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯವಿಲ್ಲದ ಒಂದು ಲೋಕಕ್ಕಾಗಿ ಹಾತೊರೆಯುತ್ತೀರೊ?

ಭಯವಿಲ್ಲದ ಒಂದು ಲೋಕಕ್ಕಾಗಿ ಹಾತೊರೆಯುತ್ತೀರೊ?

ಭಯವಿಲ್ಲದ ಒಂದು ಲೋಕಕ್ಕಾಗಿ ಹಾತೊರೆಯುತ್ತೀರೊ?

“ನಾವು ‘ಯಾವುದೇ ಸೂಚನೆಯಿಲ್ಲದೆ ಯಾವುದೇ ಸಮಯದಲ್ಲಿ ಎರಗಬಲ್ಲ, . . . ನಿರ್ದಿಷ್ಟವಾಗಿ ಹೇಳಲಾಗದಂಥ ಅಪಾಯ’ದಿಂದ ಪ್ರೇರಿತವಾಗಿರುವ ‘ನಿರಂತರವೂ ತೀಕ್ಷ್ಣವಾಗಿರುವ ಎಚ್ಚರ ಹಾಗೂ ನಿಸ್ಸಹಾಯಕತೆಯ ಸ್ಥಿತಿಯಲ್ಲಿ’ ಜೀವಿಸುತ್ತಿದ್ದೇವೆ.”

ಈಮಾತುಗಳು ಕಳೆದ ವರ್ಷದ ನ್ಯೂಸ್‌ವೀಕ್‌ ಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದವು. ಅವು ಇಂದಿನ ಗೊಂದಲಮಯ ಲೋಕದಲ್ಲಿ ಜೀವಿಸುತ್ತಿರುವ ಅನೇಕರ ಭಾವನೆಗಳಿಗೆ ಒಂದು ಕನ್ನಡಿ ಹಿಡಿದಂತಿವೆ. ಇಂಥ ಭಾವನೆಗಳು ನಿಕಟ ಭವಿಷ್ಯದಲ್ಲಿ ಹೆಚ್ಚು ತೀವ್ರವಾಗುವವೆಂದು ಯೇಸು ಕ್ರಿಸ್ತನು ಸೂಚಿಸಿದನು. ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವ ಒಂದು ಸಮಯದ ಕುರಿತು ಅವನು ಮುಂತಿಳಿಸಿದನು. ನಾವಾದರೊ ಭಯಭೀತರಾಗುವ ಇಲ್ಲವೆ ನಿಸ್ಸಹಾಯಕರೆಂಬ ಅನಿಸಿಕೆಯುಳ್ಳವರಾಗುವ ಅಗತ್ಯವಿಲ್ಲ, ಯಾಕಂದರೆ ಯೇಸು ಕೂಡಿಸಿ ಹೇಳಿದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”​—⁠ಲೂಕ 21:25-28.

ಆ ಬಿಡುಗಡೆಯ ನಂತರ ಭೂಮಿಯ ಮೇಲೆ ತನ್ನ ಜನರು ಜೀವಿಸುವ ಪರಿಸ್ಥಿತಿಗಳನ್ನು ವರ್ಣಿಸುತ್ತಾ ಯೆಹೋವ ದೇವರು ಘೋಷಿಸಿದ್ದು: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” (ಯೆಶಾಯ 32:18) ತನ್ನ ಪ್ರವಾದಿ ಮೀಕನ ಮೂಲಕ ಯೆಹೋವನು ಹೇಳಿದ್ದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”​—⁠ಮೀಕ 4:⁠4.

ಇಂದಿನ ಜೀವನಕ್ಕೆ ಹೋಲಿಸುವಾಗ ಅದೆಷ್ಟು ಭಿನ್ನವಾಗಿದೆ! ಅಜ್ಞಾತ ಅಪಾಯದ ನೆರಳು ಮಾನವಕುಲದ ಮೇಲಿರದು. ನಿರಂತರವಾದ ಎಚ್ಚರಸ್ಥಿತಿ ಹಾಗೂ ನಿಸ್ಸಹಾಯಕತೆಯ ಬದಲಿಗೆ, ಅಂತ್ಯವಿಲ್ಲದ ಶಾಂತಿ ಮತ್ತು ಸಂತೋಷವು ಇರುವುದು.