ಪದವಿಪ್ರದಾನ ದಿನ —ಒಂದು ಆಹ್ಲಾದಕರವಾದ ದಿನ
ಪದವಿಪ್ರದಾನ ದಿನ —ಒಂದು ಆಹ್ಲಾದಕರವಾದ ದಿನ
“ಆಹ್ಲಾದಕರವಾದ ದಿನವಿದು. ಪ್ರಕಾಶಮಾನವಾದ ಸೂರ್ಯ. ನೀಲಾಕಾಶ. ಹಸುರು ಹುಲ್ಲು. ಹಾಡುತ್ತಿರುವ ಹಕ್ಕಿಗಳು. ಇದು ಸೊಗಸಾದ ದಿನದ ಹಿನ್ನೆಲೆಯಾಗಿದೆ, ಮತ್ತು ನಮಗೆ ಯಾವ ರೀತಿಯಲ್ಲೂ ಆಶಾಭಂಗವಾಗದು. ಯೆಹೋವನು ಆಶಾಭಂಗಪಡಿಸುವ ದೇವರಲ್ಲ. ಆತನು ಆಶೀರ್ವಾದಗಳ ದೇವರಾಗಿದ್ದಾನೆ.”
ಈ ಹೇಳಿಕೆಗಳಿಂದ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಸಹೋದರ ಸ್ಯಾಮ್ಯುವೆಲ್ ಹರ್ಡ್‌ರವರು ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ 117ನೆಯ ಪದವಿಪ್ರದಾನ ಕಾರ್ಯಕ್ರಮವನ್ನು ಆರಂಭಿಸಿದರು. ಆ ದಿನವು 2004ರ ಸೆಪ್ಟೆಂಬರ್ 11 ಆಗಿತ್ತು. ಈ ಉತ್ತಮ ಕಾರ್ಯಕ್ರಮದಲ್ಲಿ ಆತ್ಮೋನ್ನತಿಗೊಳಿಸುವ ಬೈಬಲಾಧಾರಿತ ಸಲಹೆಗಳು, ಸ್ಥಳಿಕ ಅನುಭವಗಳು ಹಾಗೂ ಅನುಭವಸ್ಥ ಮಿಷನೆರಿಗಳಿಂದ ಕೊಡಲ್ಪಟ್ಟ ಅನುಭವಗಳು ಒಳಗೂಡಿದ್ದವು. ಹೌದು, ನ್ಯೂ ಯಾರ್ಕಿನ ಪ್ಯಾಟರ್ಸನ್‌ನಲ್ಲಿರುವ ವಾಚ್‌ಟವರ್ ಶೈಕ್ಷಣಿಕ ಕೇಂದ್ರದಲ್ಲಿ ಮತ್ತು ಬ್ರೂಕ್ಲಿನ್ ಹಾಗೂ ವಾಲ್‌ಕಿಲ್ ಸಂಕೀರ್ಣಗಳಲ್ಲಿ ಕೂಡಿಬಂದಿದ್ದ—ಆಡಿಯೊ ಮತ್ತು ವಿಡಿಯೋಗಳಿಂದ ಸಂಪರ್ಕಿತರಾಗಿದ್ದ—6,974 ಮಂದಿಗೆ ಇದೊಂದು ಆಹ್ಲಾದಕರವಾದ ದಿನವಾಗಿತ್ತು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳು
ಯುನೈಟೆಡ್ ಸ್ಟೇಟ್ಸ್‌ನ ಬ್ರಾಂಚ್ ಕಮಿಟಿಯ ಒಬ್ಬ ಸದಸ್ಯರಾದ ಜಾನ್ ಕೀಕಾಟ್ ಅವರು, “ಒಬ್ಬ ಮಿಷನೆರಿಯಾಗಿ ಆನಂದವನ್ನು ಕಾಪಾಡಿಕೊಳ್ಳಿರಿ” ಎಂಬ ವಿಷಯದ ಮೇಲೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಈ ಪದವಿಪ್ರದಾನ ಕಾರ್ಯಕ್ರಮದಲ್ಲಿ ವ್ಯಕ್ತವಾದಂತೆ, ಗಿಲ್ಯಡ್ ವಿದ್ಯಾರ್ಥಿಗಳು ತಮ್ಮ ಆನಂದಕ್ಕೆ ಸುಪ್ರಸಿದ್ಧರು ಎಂದು ಅವರು ತಿಳಿಯಪಡಿಸಿದರು. ಈ ಶಾಲಾವಧಿಯಲ್ಲಿ ದೊರೆತ ಶಾಸ್ತ್ರಾಧಾರಿತ ಉಪದೇಶವು ವಿದ್ಯಾರ್ಥಿಗಳಿಗೆ ಆನಂದವನ್ನು ತಂದಿರುವುದರಿಂದ ಅವರೀಗ ತದ್ರೀತಿಯ ಆನಂದವನ್ನು ಇತರರು ಅನುಭವಿಸುವಂತೆ ಸಹಾಯಮಾಡುವ ಸ್ಥಾನದಲ್ಲಿದ್ದಾರೆ. ಹೇಗೆ? ಮಿಷನೆರಿಗಳಾಗಿ ತಮ್ಮ ಶುಶ್ರೂಷೆಯಲ್ಲಿ ತಮ್ಮನ್ನು ವಿನಿಯೋಗಿಸಿಕೊಳ್ಳುವ ಮೂಲಕವೇ. ಯೇಸು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” (ಅ. ಕೃತ್ಯಗಳು 20:35) ಇತರರಿಗೆ ಸತ್ಯವನ್ನು ಲಭ್ಯಗೊಳಿಸುವುದರಲ್ಲಿ ಉದಾರಿಯಾಗಿರುವ “ಸಂತೋಷಭರಿತ ದೇವರಾದ” ಯೆಹೋವನನ್ನು ಈ ಹೊಸ ಮಿಷನೆರಿಗಳು ಅನುಕರಿಸುವಾಗ, ಅವರು ತಮ್ಮ ಸ್ವಂತ ಆನಂದವನ್ನು ಕಾಪಾಡಿಕೊಳ್ಳಲು ಶಕ್ತರಾಗಿರುವರು.—1 ತಿಮೊಥೆಯ 1:11, NW.
ಕಾರ್ಯಕ್ರಮದ ಮುಂದಿನ ಭಾಗವನ್ನು ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಡೇವಿಡ್ ಸ್ಪ್ಲೇನ್ ನಿರ್ವಹಿಸಿದರು. ಅವರ ಭಾಷಣದ ಮುಖ್ಯ ವಿಷಯ “ನೀವು ಹೇಗೆ ಹೊಂದಿಕೊಳ್ಳಲಿರುವಿರಿ?” ಎಂಬುದಾಗಿತ್ತು. ಐಕ್ಯಭಾವದಿಂದ ಇರುವುದು ಎಷ್ಟೋ ಒಳ್ಳೇದಾಗಿದೆ ಮತ್ತು ರಮ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲವಾದರೂ, ಇದು ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಿ’ ಪರಿಣಮಿಸುವುದನ್ನು ಅಗತ್ಯಪಡಿಸಬಹುದು. (1 ಕೊರಿಂಥ 9:22; ಕೀರ್ತನೆ 133:1) ಪದವಿಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಮಿಷನೆರಿ ಕೆಲಸದಲ್ಲಿ ಇತರ ಅನೇಕರೊಂದಿಗೆ, ಅಂದರೆ ಟೆರಿಟೊರಿಯಲ್ಲಿರುವ ಜನರೊಂದಿಗೆ, ಜೊತೆ ಮಿಷನೆರಿಗಳೊಂದಿಗೆ, ಅವರ ಹೊಸ ಸಭೆಯಲ್ಲಿರುವ ಸಹೋದರ ಸಹೋದರಿಯರೊಂದಿಗೆ ಮತ್ತು ಸಾರುವ ಹಾಗೂ ಬೋಧಿಸುವ ಕೆಲಸವನ್ನು ಮಾರ್ಗದರ್ಶಿಸುತ್ತಿರುವ ಬ್ರಾಂಚ್ ಆಫಿಸ್‌ನಲ್ಲಿರುವವರೊಂದಿಗೆ ಪರಸ್ಪರ ವ್ಯವಹರಿಸಬೇಕಾಗಿರುತ್ತದೆ ಎಂದು ಸಹೋದರ ಸ್ಪ್ಲೇನ್ ತಿಳಿಸಿದರು. ವ್ಯಕ್ತಿಗಳ ನಡುವಣ ಸಂಬಂಧಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಆಹ್ಲಾದಕರವಾಗಿ ಮಾಡಲಿಕ್ಕಾಗಿರುವ ಕೆಲವು ಪ್ರಾಯೋಗಿಕ ಸಲಹೆಗಳನ್ನು ಅವರು ಒದಗಿಸಿದರು. ಆ ಸಲಹೆಗಳಲ್ಲಿ, ಸ್ಥಳಿಕ ಭಾಷೆಯನ್ನು ಕಲಿಯುವುದು, ಸ್ಥಳಿಕ ಪದ್ಧತಿಗಳ ವಿಷಯದಲ್ಲಿ ಸೂಕ್ಷ್ಮ ಪರಿಜ್ಞಾನವುಳ್ಳವರಾಗಿರುವುದು, ಜೊತೆ ಮಿಷನೆರಿಗಳ ಏಕಾಂತತೆಗೆ ಭಂಗವನ್ನು ಉಂಟುಮಾಡದಿರುವುದು ಮತ್ತು ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರುವುದು ಸೇರಿತ್ತು.—ಇಬ್ರಿಯ 13:17.
ಯೋಹಾನ 7:24) ನಾವೆಲ್ಲರೂ ಅಪರಿಪೂರ್ಣ ಮಾನವರಾಗಿರುವುದರಿಂದ ‘ದೇವರ ಯೋಚನೆಗಳಿಗೆ’ ಬದಲಾಗಿ ‘ಮನುಷ್ಯರ ಯೋಚನೆಗಳ’ ಕುರಿತು ಆಲೋಚಿಸುವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು. (ಮತ್ತಾಯ 16:22, 23) ಆಧ್ಯಾತ್ಮಿಕ ವ್ಯಕ್ತಿಗಳು ಸಹ ತಮ್ಮ ಯೋಚನೆಯನ್ನು ಆಗಿಂದಾಗ್ಗೆ ಸರಿಪಡಿಸಿಕೊಳ್ಳುತ್ತಾ ಇರಬೇಕು. ಸಮುದ್ರದಲ್ಲಿರುವ ಒಂದು ಹಡಗಿನಂತೆ, ಈಗ ಮಾಡುವ ಹೊಂದಾಣಿಕೆಗಳು ಗುರಿಯನ್ನು ತಲಪುವಂತೆ ಮಾಡಬಲ್ಲವು ಇಲ್ಲವೆ ಆಧ್ಯಾತ್ಮಿಕ ಹಡಗೊಡೆತವನ್ನು ಅನುಭವಿಸುವಂತೆ ಮಾಡಬಲ್ಲವು. ಬೈಬಲನ್ನು ಅದರ ಪೂರ್ವಾಪರ ವಿಷಯಗಳೊಂದಿಗೆ ಸತತವಾಗಿ ಅಧ್ಯಯನಮಾಡುವುದು, ‘ದೇವರ ಯೋಚನೆಗಳ’ ಕುರಿತು ಆಲೋಚಿಸುವಂತೆ ನಮಗೆ ಸಹಾಯಮಾಡುವುದು.
ಅನಂತರ, ಗಿಲ್ಯಡ್ ಶಿಕ್ಷಕರಾದ ಲಾರೆನ್ಸ್ ಬೋವನ್ ಅವರು “ದೇವರ ಯೋಚನೆಗಳು ಮತ್ತು ಮನುಷ್ಯರ ಯೋಚನೆಗಳು ಒಂದೇ ಆಗಿವೆಯೋ?” ಎಂದು ಪ್ರಶ್ನಿಸಿದರು. ‘ಕಣ್ಣಿಗೆ ತೋರಿದ ಸಂಗತಿಯ ಮೇರೆಗೆ ತೀರ್ಪುಮಾಡಿದವರು’ ಯೇಸುವನ್ನು ಮೆಸ್ಸೀಯನಾಗಿ ಸ್ವೀಕರಿಸಲಿಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಜ್ಞಾಪಕಹುಟ್ಟಿಸಿದರು. (ಗಿಲ್ಯಡ್ ಶಾಲೆಯ ಇನ್ನೊಬ್ಬ ಶಿಕ್ಷಕರಾಗಿರುವ ವಾಲೆಸ್ ಲಿವರೆನ್ಸ್‌ರವರು ಕಾರ್ಯಕ್ರಮದ ಈ ಭಾಗವನ್ನು ಕೊನೆಗೊಳಿಸಿದರು. ಯೆಶಾಯ 55:1ರ ಮೇಲಾಧಾರಿತವಾದ ಅವರ ಮುಖ್ಯ ವಿಷಯವು “ನೀವು ಏನನ್ನು ಕೊಂಡುಕೊಳ್ಳುವಿರಿ?” ಎಂಬುದಾಗಿತ್ತು. ನಮ್ಮ ದಿನಕ್ಕಾಗಿರುವ ದೇವರ ಪ್ರವಾದನಾ ಸಂದೇಶದಿಂದ ಬರುವ ಚೈತನ್ಯ, ಸಂತೋಷ ಹಾಗೂ ಪುಷ್ಟಿಯನ್ನು ‘ಕೊಂಡುಕೊಳ್ಳು’ವಂತೆ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಯೆಶಾಯನ ಪ್ರವಾದನೆಯು ದೇವರ ಈ ವಾಕ್ಯವನ್ನು ನೀರು, ದ್ರಾಕ್ಷಾರಸ ಮತ್ತು ಹಾಲಿಗೆ ಹೋಲಿಸಿತು. ಹೇಗೆ ಅದನ್ನು “ಹಣಕೊಡದೆ ಕ್ರಯವಿಲ್ಲದೆ ತೆಗೆದು”ಕೊಳ್ಳಸಾಧ್ಯವಿದೆ? ಬೈಬಲ್ ಪ್ರವಾದನೆಗೆ ಗಮನಕೊಡುವ ಮತ್ತು ಅಶಾಸ್ತ್ರೀಯವಾದ ಯೋಚನೆಗಳು ಹಾಗೂ ಮಾರ್ಗಗಳಿಗೆ ಬದಲಾಗಿ ದೇವರ ಯೋಚನೆಗಳು ಮತ್ತು ಮಾರ್ಗಗಳನ್ನು ಅಂಗೀಕರಿಸುವ ಮೂಲಕವೇ ಎಂದು ಸಹೋದರ ಲಿವರೆನ್ಸ್ ವಿವರಿಸಿದರು. (ಯೆಶಾಯ 55:2, 3, 6, 7) ಹೀಗೆ ಮಾಡುವ ಮೂಲಕ ಹೊಸ ಮಿಷನೆರಿಗಳು ತಮ್ಮ ವಿದೇಶೀ ನೇಮಕಗಳಲ್ಲಿ ತಮ್ಮನ್ನು ಪೋಷಿಸಿಕೊಳ್ಳಸಾಧ್ಯವಿದೆ. ಸಂತೋಷವು ಪ್ರಾಪಂಚಿಕ ಸುಖಭೋಗಗಳನ್ನು ಬೆನ್ನಟ್ಟುವುದರ ಮೇಲೆ ಹೊಂದಿಕೊಂಡಿದೆ ಎಂದು ಅಪರಿಪೂರ್ಣ ಮನುಷ್ಯನು ಅನೇಕವೇಳೆ ನೆನಸುತ್ತಾನೆ. “ಇದನ್ನು ನಂಬಬೇಡಿರಿ” ಎಂದು ಭಾಷಣಕಾರರು ಉತ್ತೇಜಿಸಿದರು. “ಆ ವಿಚಾರವನ್ನು ನಂಬದಿರಿ. ದೇವರ ಪ್ರವಾದನಾ ವಾಕ್ಯದ ಅರ್ಥಭರಿತ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿರಿಸುವುದನ್ನು ಖಚಿತಪಡಿಸಿಕೊಳ್ಳಿರಿ. ಇದು ನಿಮಗೆ ಚೈತನ್ಯವನ್ನು ಉಂಟುಮಾಡಬಲ್ಲದು, ನಿಮ್ಮನ್ನು ಬಲಪಡಿಸಬಲ್ಲದು ಮತ್ತು ನಿಮ್ಮ ಮಿಷನೆರಿ ನೇಮಕದಲ್ಲಿ ಆನಂದವನ್ನು ತರಬಲ್ಲದು.”
ಆನಂದಕರವಾದ ವಿದ್ಯಾರ್ಥಿ ಅನುಭವಗಳು ಮತ್ತು ಇಂಟರ್‌ವ್ಯೂಗಳು
ವಿದ್ಯಾರ್ಥಿಗಳು ಸಾರುವ ಚಟುವಟಿಕೆಯಲ್ಲಿ ಕ್ರಮವಾಗಿ ಪಾಲ್ಗೊಂಡರು. ಗಿಲ್ಯಡ್‌ನ ಇನ್ನೊಬ್ಬ ಶಿಕ್ಷಕರಾಗಿರುವ ಮಾರ್ಕ್ ನ್ಯೂಮರ್‌ರ ನಿರ್ದೇಶನದ ಕೆಳಗೆ, ಕ್ಲಾಸಿನ ಅನೇಕರು ‘ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವರಲ್ಲ’ ಎಂಬ ಮುಖ್ಯ ವಿಷಯವನ್ನು ಎತ್ತಿತೋರಿಸುವಂಥ ಅನುಭವಗಳನ್ನು ಪುನರಭಿನಯಿಸಿದರು. (ರೋಮಾಪುರ 1:15) ಈ ಅನುಭವಸ್ಥ ಶುಶ್ರೂಷಕರು ಮನೆಯಿಂದ ಮನೆಗೆ, ಬೀದಿಯಲ್ಲಿ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಸುವಾರ್ತೆಯನ್ನು ಹೇಗೆ ಸಾರಿದರು ಎಂಬುದನ್ನು ಕೇಳಿ ಸಭಿಕರು ಬಹಳವಾಗಿ ಆನಂದಿಸಿದರು. ಬೇರೆ ಭಾಷೆಗಳನ್ನು ಅರಿತಿದ್ದ ವಿದ್ಯಾರ್ಥಿಗಳು, ತಮ್ಮ ಸಭಾ ಟೆರಿಟೊರಿಯಲ್ಲಿ ಆ ಭಾಷೆಗಳನ್ನು ಮಾತಾಡುವ ಜನರಿಗೆ ಸಾಕ್ಷಿನೀಡಲು ಮುನ್ನೆಜ್ಜೆಯನ್ನು ತೆಗೆದುಕೊಂಡರು. ಇನ್ನಿತರರು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಬೈಬಲಾಧಾರಿತ ಪ್ರಕಾಶನಗಳನ್ನು ಸದುಪಯೋಗಿಸಿದರು; ಪುನರ್ಭೇಟಿಗಳಲ್ಲಿ ಹಾಗೂ ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಅವುಗಳನ್ನು ಉಪಯೋಗಿಸಿದರು. ಸುವಾರ್ತೆಯನ್ನು ಸಾರಲು ಅವರು ‘ನಾಚಿಕೊಳ್ಳಲಿಲ್ಲ.’
ಸರ್ವಿಸ್ ಡಿಪಾರ್ಟ್‌ಮೆಂಟ್‌ಗೆ ನೇಮಿಸಲ್ಪಟ್ಟಿರುವ ಸಹೋದರ ವಿಲ್ಯಮ್ ನಾನ್‌ಕೀಸ್ ಅವರು, ಬುರ್ಕಿನ ಫಾಸೊ, ರಷ್ಯ ಮತ್ತು ಲ್ಯಾಟ್ವಿಯಗಳಿಂದ ಬಂದಿದ್ದ ಅನುಭವಸ್ಥ ಮಿಷನೆರಿಗಳೊಂದಿಗೆ ಇಂಟರ್‌ವ್ಯೂಗಳನ್ನು ನಡೆಸಿದರು. “ಯೆಹೋವನು ಪ್ರೀತಿಯಿಂದ ನಂಬಿಗಸ್ತರಿಗೆ ಪ್ರತಿಫಲವನ್ನು ನೀಡುತ್ತಾನೆ” ಎಂಬ ಮುಖ್ಯ ವಿಷಯದ ಮೇಲೆ ಕೇಂದ್ರೀಕೃತವಾದ ಪ್ರಾಯೋಗಿಕ ಸಲಹೆಯನ್ನು ಅವರು ಹಂಚಿಕೊಂಡರು. ಇಂಟರ್‌ವ್ಯೂ ನಡೆಸಲ್ಪಟ್ಟ ಸಹೋದರರಲ್ಲಿ ಒಬ್ಬರು, ಗಿದ್ಯೋನನ 300 ಮಂದಿ ಸೈನಿಕರನ್ನು ನೆನಪಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಆ ಸೈನಿಕರಲ್ಲಿ ಪ್ರತಿಯೊಬ್ಬರಿಗೂ ಒಂದು ನೇಮಕವು ಕೊಡಲ್ಪಟ್ಟಿದ್ದು, ಅದು ಗಿದ್ಯೋನನ ಕಾರ್ಯಾಚರಣೆಯಲ್ಲಿ ಯಶಸ್ವಿಯನ್ನು ತರಲು ಸಹಾಯಕರವಾಗಿತ್ತು. (ನ್ಯಾಯಸ್ಥಾಪಕರು 7:19-21) ತದ್ರೀತಿಯಲ್ಲಿ, ತಮ್ಮ ನೇಮಕಗಳಲ್ಲಿ ಉಳಿಯುವ ಮಿಷನೆರಿಗಳಿಗೆ ಅದರ ಪ್ರತಿಫಲವು ದೊರಕುತ್ತದೆ.
ತದನಂತರ, ಪ್ಯಾಟರ್ಸನ್‌ನಲ್ಲಿ ಶಿಕ್ಷಕರಾಗಿರುವ ಸ್ಯಾಮುವೆಲ್ ರಾಬರ್‌ಸನ್‌ರಿಂದ ನಡೆಸಲ್ಪಟ್ಟ ಇಂಟರ್‌ವ್ಯೂಗಳಲ್ಲಿ ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಿ’ ಎಂಬ ಮುಖ್ಯ ವಿಷಯವು ಎತ್ತಿತೋರಿಸಲ್ಪಟ್ಟಿತು. ಅವರು ಸೆನಿಗಲ್, ಗ್ವಾಮ್, ಲೈಬಿರೀಯ ಮತ್ತು ಮಡಗಾಸ್ಕರ್‌ನಿಂದ ಬಂದ ನಾಲ್ಕು ಬ್ರಾಂಚ್ ಕಮಿಟಿ ಸದಸ್ಯರನ್ನು ಇಂಟರ್‌ವ್ಯೂ ಮಾಡಿದರು. ಈ ದೇಶಗಳಲ್ಲಿ ಒಟ್ಟು 170 ಮಂದಿ ಮಿಷನೆರಿಗಳು ಸೇವೆಮಾಡುತ್ತಿದ್ದಾರೆ. ಪದವಿಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು, ಹೊಸ ಮಿಷನೆರಿಗಳು ತಮ್ಮ ನೇಮಕಗಳಿಗೆ ಹೊಂದಿಕೊಳ್ಳಲು ಬ್ರಾಂಚ್ ಕಮಿಟಿಗಳು ಹೇಗೆ ಸಹಾಯಮಾಡುತ್ತವೆ ಎಂಬುದನ್ನು ಹೇಳಿಕೆಗಳಿಂದ ತಿಳಿದುಕೊಂಡರು. ಇದು ಅನೇಕವೇಳೆ ಪಾಶ್ಚಾತ್ಯ ಮಟ್ಟಗಳಿಗೆ ಅಸಾಮಾನ್ಯವಾಗಿ ಕಂಡುಬರಬಹುದಾದ ಪದ್ಧತಿಗಳ ಕುರಿತು ಕಲಿಯುವುದನ್ನು ಅರ್ಥೈಸುತ್ತದೆ. ಉದಾಹರಣೆಗೆ, ಕೆಲವು ದೇಶಗಳಲ್ಲಿ ಒಟ್ಟಿಗೆ ನಡೆಯುವಾಗ ಪುರುಷರು—ಕ್ರೈಸ್ತ ಸಭೆಯಲ್ಲಿರುವವರು ಸಹ—ಸ್ನೇಹಿತರಂತೆ ಪರಸ್ಪರ ಕೈಗಳನ್ನು ಹಿಡಿದುಕೊಳ್ಳುವುದು ಸರ್ವಸಾಮಾನ್ಯ ನೋಟವಾಗಿದೆ. ಗ್ವಾಮ್ ಬ್ರಾಂಚ್‌ನ ಕೆಳಗಿರುವ ಕೆಲವು ಸ್ಥಳಗಳಲ್ಲಿ, ಅಸಾಮಾನ್ಯವಾದ ಆಹಾರಪದಾರ್ಥಗಳು ಬಡಿಸಲ್ಪಡುತ್ತವೆ. ಇತರರು ಇದಕ್ಕೆ ಹೊಂದಿಕೊಂಡಿದ್ದಾರೆ, ಮತ್ತು ಹೊಸ ಮಿಷನೆರಿಗಳು ಸಹ ಹೊಂದಿಕೊಳ್ಳಸಾಧ್ಯವಿದೆ.
ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಗೈ ಪಿಯರ್ಸ್ ಅವರು “‘ನಮ್ಮ ಕರ್ತನ ರಾಜ್ಯಕ್ಕೆ’ ನಿಷ್ಠರಾಗಿ ಉಳಿಯಿರಿ” ಎಂಬ ವಿಷಯದ ಕುರಿತು ಮಾತಾಡಿದರು. ಅವರು ಸಭಿಕರಿಗೆ ಹೀಗೆ ನೆನಪುಹುಟ್ಟಿಸಿದರು: “ಯೆಹೋವನು ಒಂದು ಉದ್ದೇಶದಿಂದಲೇ ಸೃಷ್ಟಿಕಾರ್ಯವನ್ನು ಮಾಡಿದನು. ತನ್ನ ಸೃಷ್ಟಿಯ ವಿಷಯದಲ್ಲಿ ಆತನಿಗೆ ಒಂದು ಉದ್ದೇಶವಿತ್ತು. ಈ ಭೂಗೋಳಕ್ಕಾಗಿರುವ ಆತನ ಉದ್ದೇಶವು ಬದಲಾಗಿಲ್ಲ. ಅದು ಎಲ್ಲ ಅಡ್ಡಿತಡೆಗಳನ್ನು ದಾಟಿ ತನ್ನ ಪೂರ್ಣತೆಯ ಕಡೆಗೆ ಮುನ್ನುಗ್ಗುತ್ತಿದೆ. ಅದನ್ನು ಯಾರೂ ಬದಲಾಯಿಸಲಾರರು.” (ಆದಿಕಾಂಡ 1:28) ಪ್ರಥಮ ಮಾನವನಾದ ಆದಾಮನ ಪಾಪದಿಂದಾಗಿ ತಲೆದೋರಿರುವ ಕಷ್ಟತೊಂದರೆಗಳ ನಡುವೆಯೂ ದೇವರ ಪರಮಾಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗುವಂತೆ ಸಹೋದರ ಪಿಯರ್ಸ್ ಎಲ್ಲರನ್ನೂ ಪ್ರೋತ್ಸಾಹಿಸಿದರು. “ನಾವು ನ್ಯಾಯತೀರ್ಪಿನ ಗಳಿಗೆಯಲ್ಲಿ ಜೀವಿಸುತ್ತಿದ್ದೇವೆ. ಪ್ರಾಮಾಣಿಕ ಹೃದಯದ ಜನರು ಸತ್ಯವನ್ನು ತಿಳಿದುಕೊಳ್ಳುವಂತೆ ಸಹಾಯಮಾಡಲು ನಮಗೆ ಉಳಿದಿರುವ ಸಮಯ ತೀರ ಕೊಂಚವೇ. ರಾಜ್ಯ ಸುವಾರ್ತೆಯೊಂದಿಗೆ ಜನರನ್ನು ತಲಪಲಿಕ್ಕಾಗಿ ಸಮಯವನ್ನು ಸರಿಯಾಗಿ ವಿನಿಯೋಗಿಸಿರಿ” ಎಂದು ಸಹೋದರ ಪಿಯರ್ಸ್ ಉತ್ತೇಜಿಸಿದರು. ದೇವರ ರಾಜ್ಯವನ್ನು ನಿಷ್ಠೆಯಿಂದ ಬೆಂಬಲಿಸುತ್ತಿರುವವರಿಗೆ ಆತನು ತಮ್ಮನ್ನು ಬೆಂಬಲಿಸುವನೆಂಬ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿದೆ.—ಕೀರ್ತನೆ 18:25.
ಮುಕ್ತಾಯ ಭಾಗದಲ್ಲಿ, ಸಭಾಧ್ಯಕ್ಷರು ಲೋಕವ್ಯಾಪಕವಾಗಿರುವ ಬ್ರಾಂಚ್‌ಗಳಿಂದ ಬಂದಿದ್ದ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಓದಿದರು. ತದನಂತರ ಅವರು ಪದವೀಧರ ವಿದ್ಯಾರ್ಥಿಗಳಿಗೆ ಡಿಪ್ಲೊಮಾಗಳನ್ನು ನೀಡಿದರು. ವಿದ್ಯಾರ್ಥಿಗಳಲ್ಲಿ ಒಬ್ಬನು, ಪಡೆದುಕೊಂಡ ತರಬೇತಿಯ ವಿಷಯದಲ್ಲಿ ಹಾರ್ದಿಕ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಕ್ಲಾಸಿನ ಪರವಾಗಿ ಕೊಡಲ್ಪಟ್ಟ ಒಂದು ಪತ್ರವನ್ನು ಓದಿದನು. ಅತ್ಯಂತ ರಮಣೀಯ ದಿನಕ್ಕೆ ಇದು ಸೂಕ್ತವಾದ ಮುಕ್ತಾಯವಾಗಿದ್ದು, ಹಾಜರಿದ್ದವರೆಲ್ಲರು ಬಹಳ ದೀರ್ಘ ಕಾಲದ ವರೆಗೆ ಜ್ಞಾಪಿಸಿಕೊಳ್ಳುವಂಥದ್ದಾಗಿತ್ತು.
[ಪುಟ 23ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 11
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 22
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ಪ್ರಾಯ: 34.8
ಸತ್ಯದಲ್ಲಿ ಸರಾಸರಿ ವರ್ಷಗಳು: 18.3
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.4
[ಪುಟ 24ರಲ್ಲಿರುವ ಚಿತ್ರ]
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 117ನೆಯ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಥಾಮ್ಸನ್, ಈ.; ನಾರ್ವೆಲ್, ಜಿ.; ಪವಲ್, ಟಿ.; ಕೋಸಾ, ಎಮ್.; ಮ್ಯಾಕೆಂಟೈರ್, ಟಿ. (2) ರೈಲೀ, ಏ.; ಕ್ಲೇಟನ್, ಸಿ.; ಆ್ಯಲನ್, ಜೆ.; ಬ್ಲಾಂಕೋ, ಏ.; ಮೂನ್ಯೋಸ್, ಎಲ್.; ರೂಸ್ಟ್ಯಾಡ್, ಎನ್. (3) ಗೆರೆರೋ, ಸೆಡ್.; ಗಾರ್ಸೀಯಾ, ಕೆ.; ಮೆಕರ್ಲೀ, ಡಿ.; ಈಶೀಕಾವಾ, ಟಿ.; ಬ್ಲಾಂಕೋ, ಜಿ. (4) ಮ್ಯಾಕೆಂಟೈರ್, ಎಸ್.; ಕ್ರೂಸ್, ಈ.; ಗೆರೆರೋ, ಜೆ.; ರಿಚೀ, ಓ.; ಆಬೇಯಾನೇತಾ, ಎಲ್.; ಗಾರ್ಸೀಯಾ, ಆರ್. (5) ಪವಲ್, ಜಿ.; ಫಿಸ್ಕಾ, ಎಚ್.; ಮೂನ್ಯೋಸ್, ವಿ.; ಬಾವ್‌ಮಾನ್, ಡಿ.; ಷಾ, ಎಸ್.; ಬ್ರೌನ್, ಕೆ.; ಬ್ರೌನ್, ಎಲ್. (6) ಷಾ, ಸಿ.; ರೈಲೀ, ಏ.; ಪೆಲೋಕ್ವಿನ್, ಸಿ.; ಮೂಂಕ್, ಎನ್.; ಮೆಕರ್ಲೀ, ಡಿ.; ಈಶೀಕಾವಾ, ಕೆ. (7) ಮೂಂಕ್, ಎಮ್.; ಪೆಲೋಕ್ವಿನ್, ಜೆ.; ಕೋಸಾ, ಟಿ.; ಆಬೇಯಾನೇತಾ, ಎಮ್.; ಆ್ಯಲನ್, ಕೆ.; ರಿಚೀ, ಈ.; ನಾರ್ವೆಲ್, ಟಿ. (8) ಕ್ರೂಸ್, ಜೆ.; ಬಾವ್‌ಮಾನ್, ಎಚ್.; ಕ್ಲೇಟನ್, ಸೆಡ್.; ಫಿಸ್ಕಾ, ಈ.; ಥಾಮ್ಸನ್, ಎನ್.; ರೂಸ್ಟ್ಯಾಡ್, ಜೆ.