ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇದರ ಹಿಂದಿರುವ ರಹಸ್ಯವೇನು?”

“ಇದರ ಹಿಂದಿರುವ ರಹಸ್ಯವೇನು?”

“ಇದರ ಹಿಂದಿರುವ ರಹಸ್ಯವೇನು?”

ಈ ಪ್ರಶ್ನೆಯನ್ನು, ಮೂರು ಮಕ್ಕಳ ತಾಯಿಯಾಗಿರುವ ಮ್ಯೂರೀಅಲ್‌ಳಿಗೆ ಫಾಸ್ಟ್‌-ಫುಡ್‌ ಹೋಟೆಲ್‌ನಲ್ಲಿ ವೃದ್ಧ ಅಪರಿಚಿತರೊಬ್ಬರು ಕೇಳಿದಾಗ, ಅವಳಿಗೆ ತುಂಬ ಆಶ್ಚರ್ಯವಾಯಿತು. ಮ್ಯೂರೀಅಲ್‌ ತನ್ನ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಳು, ಮತ್ತು ಕೂಟಕ್ಕೆ ತಡವಾಗಿತ್ತು. ತಮ್ಮ ಕ್ರೈಸ್ತ ಕೂಟಕ್ಕೆ ಹಾಜರಾಗುವ ಮೊದಲು, ಮನೆಗೆ ಹೋಗಿ ಊಟವನ್ನು ಮುಗಿಸಿ ಬರಲು ಅವರಿಗೆ ಸಾಕಷ್ಟು ಸಮಯವಿರಲಿಲ್ಲ. ಆದುದರಿಂದ, ಮಕ್ಕಳಿಗೆ ಏನಾದರೂ ತಿನ್ನಲು ಕೊಡಿಸಲಿಕ್ಕಾಗಿ ಅವಳು ಅವರನ್ನು ಹತ್ತಿರದ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದಳು.

ಅವರು ತಮ್ಮ ಊಟವನ್ನು ಇನ್ನೇನು ಮುಗಿಸಲಿದ್ದಾಗ, ಒಬ್ಬ ವ್ಯಕ್ತಿ ಮ್ಯೂರೀಅಲ್‌ಳ ಬಳಿ ಬಂದು ಹೇಳಿದ್ದು: “ನೀವು ಇಲ್ಲಿಗೆ ಬಂದ ಕ್ಷಣದಿಂದ ನಿಮ್ಮನ್ನು ನಾನು ಗಮನಿಸುತ್ತಾ ಇದ್ದೇನೆ. ಮತ್ತು ನಿಮ್ಮ ಮಕ್ಕಳು ಹಾಗೂ ಸಾಮಾನ್ಯವಾಗಿ ನಾನು ಇಲ್ಲಿ ನೋಡುವ ಇತರ ಮಕ್ಕಳ ನಡುವೆ ಅಜಗಜಾಂತರವಿರುವುದನ್ನು ನಾನು ಗಮನಿಸಿದ್ದೇನೆ. ಇಲ್ಲಿಗೆ ಬರುವ ಮಕ್ಕಳು ಟೇಬಲ್‌ಗಳನ್ನು ಮತ್ತು ಕುರ್ಚಿಗಳನ್ನು ಉಪಯೋಗಿಸುವ ವಿಧವನ್ನು ನೋಡಲಾಗದು. ಅವರ ಕಾಲು ಮೇಜಿನ ಮೇಲಿರುತ್ತದೆ. ಕುರ್ಚಿಗಳು ಆಚೀಚೆ ನೂಕಾಡಲ್ಪಟ್ಟಿರುತ್ತವೆ. ಆದರೆ ನಿಮ್ಮ ಮಕ್ಕಳು ಹಾಗೆ ಗಲಾಟೆ ಮಾಡುತ್ತಿಲ್ಲ ಮತ್ತು ಸಭ್ಯ ರೀತಿಯಲ್ಲಿ ವರ್ತಿಸುವವರಾಗಿದ್ದಾರೆ. ಇದರ ಹಿಂದಿರುವ ರಹಸ್ಯವೇನು?”

ಮ್ಯೂರೀಅಲ್‌ ಉತ್ತರಿಸಿದ್ದು: “ನಾನು ಮತ್ತು ನನ್ನ ಗಂಡ, ಮಕ್ಕಳೊಂದಿಗೆ ಕ್ರಮವಾಗಿ ಬೈಬಲ್‌ ಅಧ್ಯಯನವನ್ನು ಮಾಡುತ್ತೇವೆ, ಮತ್ತು ಏನನ್ನು ಕಲಿಯುತ್ತೇವೋ ಅದನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಯೆಹೋವನ ಸಾಕ್ಷಿಗಳು.” ಆಗ ಆ ವ್ಯಕ್ತಿಯು ಹೇಳಿದ್ದು: “ನಾನು ಯೆಹೂದ್ಯನು ಮತ್ತು ಯೆಹೂದಿ ಹತ್ಯಾಕಾಂಡದಿಂದ ಬದುಕಿ ಉಳಿದವನು. ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳು ಹಿಂಸಿಸಲ್ಪಡುವುದನ್ನು ನೋಡಿದ್ದು ನನಗೆ ಈಗಲೂ ನೆನಪಿದೆ. ಅವರು ಸಹ ಗಮನಾರ್ಹವಾಗಿ ಭಿನ್ನರಾಗಿದ್ದರು. ನಿಮ್ಮ ಮಕ್ಕಳ ನಡತೆಯು ನನ್ನ ಮೇಲೆ ನಿಜವಾಗಿಯೂ ಗಾಢವಾದ ಪ್ರಭಾವವನ್ನು ಬೀರಿದೆ. ನನಗೆ ನಿಮ್ಮ ಧರ್ಮವನ್ನು ನಿಶ್ಚಯವಾಗಿಯೂ ಜಾಗರೂಕತೆಯಿಂದ ಪರೀಕ್ಷಿಸುವ ಮನಸ್ಸಾಗಿದೆ.”

ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಬೈಬಲು ಅತ್ಯುತ್ತಮ ಮಾರ್ಗದರ್ಶಕವಾಗಿದೆ. ಶಾಸ್ತ್ರವಚನಗಳಲ್ಲಿ ಕಂಡುಬರುವ ಮಾರ್ಗದರ್ಶನದಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ತುಂಬ ಆಸಕ್ತರಾಗಿದ್ದಾರೆ. ಈ ಕರೆಗೆ ಓಗೊಡುವಂತೆ ನಾವು ನಿಮ್ಮನ್ನು ಪೂರ್ಣಮನಸ್ಸಿನಿಂದ ಆಮಂತ್ರಿಸುತ್ತೇವೆ.