ವೃದ್ಧಾಪ್ಯವು “ಸುಂದರ ಕಿರೀಟ”ವಾಗಿ ಪರಿಣಮಿಸುವಾಗ
“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”
ವೃದ್ಧಾಪ್ಯವು “ಸುಂದರ ಕಿರೀಟ”ವಾಗಿ ಪರಿಣಮಿಸುವಾಗ
“ಸಾಧ್ಯವಿರುವುದರಲ್ಲೇ ಅತ್ಯುತ್ತಮ ಜೀವನ” ಎಂದು 101 ವರ್ಷ ಪ್ರಾಯದ ಮ್ಯೂರೀಅಲ್ ಹೇಳಿದರು. “ನಿಜವಾಗಿಯೂ ಒಂದು ಸುಯೋಗ!” ಎಂದು 70 ವರ್ಷದವರಾಗಿರುವ ಥಿಯೋಡೋರಸ್ ಯೆಹೋವನ ಸೇವೆಯ ಕುರಿತಾದ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು. “ನನ್ನ ಜೀವನವನ್ನು ಇದಕ್ಕಿಂತ ಹೆಚ್ಚು ಉತ್ತಮ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಿರಲಿಲ್ಲ” ಎಂದು 73ರ ಪ್ರಾಯದ ಮಾರೀಆ ಹೇಳಿದರು. ಇವರೆಲ್ಲರೂ ಯೆಹೋವ ದೇವರಿಗೆ ಸೇವೆಯನ್ನು ಸಲ್ಲಿಸುವುದರಲ್ಲಿ ತಮ್ಮ ಇಡೀ ಜೀವಮಾನವನ್ನೇ ಕಳೆದಿದ್ದರು.
ಲೋಕವ್ಯಾಪಕವಾಗಿರುವ ಯೆಹೋವನ ಅನೇಕ ಕ್ರಿಯಾಶೀಲ ಆರಾಧಕರಲ್ಲಿ ಇಂಥ ವೃದ್ಧರು ಕೆಲವರಾಗಿದ್ದಾರೆ. ವಯಸ್ಸಾಗುವಿಕೆ, ಆರೋಗ್ಯದ ಚಿಂತೆಗಳು ಮತ್ತು ಇತರ ಪ್ರತಿಕೂಲ ಸನ್ನಿವೇಶಗಳ ಮಧ್ಯೆಯೂ ಅವರು ಪೂರ್ಣ ಮನಸ್ಸಿನಿಂದ ದೇವರ ಸೇವೆಮಾಡುತ್ತಾರೆ. ಕ್ರೈಸ್ತ ಸಭೆಯಲ್ಲಿ ಇಂಥ ನಂಬಿಗಸ್ತ ವೃದ್ಧರು ದೈವಿಕ ಭಕ್ತಿಯ ಗೌರವಾನ್ವಿತ ಮಾದರಿಗಳಾಗಿದ್ದಾರೆ. ವೃದ್ಧರು ತಮ್ಮ ಸನ್ನಿವೇಶಗಳ ಕಾರಣ ಬಹಳಷ್ಟು ಇತಿಮಿತಿಯುಳ್ಳವರಾಗಿದ್ದರೂ, ಯೆಹೋವನು ಅವರ ಸೇವೆಯನ್ನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ. *—2 ಕೊರಿಂಥ 8:12.
ನಂಬಿಗಸ್ತ ವೃದ್ಧರು ಎಂಥ ರೀತಿಯ ಜೀವನ ಮಟ್ಟವನ್ನು ನಿರೀಕ್ಷಿಸಸಾಧ್ಯವಿದೆ ಎಂಬುದರ ಕುರಿತು ಕೀರ್ತನೆ ಪುಸ್ತಕವು ತುಂಬ ಸೂಕ್ತವಾದ ಹೇಳಿಕೆಯನ್ನು ನೀಡುತ್ತದೆ. ಅವರು ಫಲದಾಯಕವಾಗಿಯೇ ಉಳಿಯುವಂಥ ಹಳೆಯ ಹಾಗೂ ವೈಭವಯುತವಾದ ವೃಕ್ಷದಂತಿರಸಾಧ್ಯವಿದೆ. ನಂಬಿಗಸ್ತ ವೃದ್ಧರ ಕುರಿತು ಕೀರ್ತನೆಗಾರನು ಹಾಡಿದ್ದು: “[ಅವರು] ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.”—ಕೀರ್ತನೆ 92:14.
ವೃದ್ಧಾಪ್ಯವು ತಮ್ಮ ಶಕ್ತಿಯನ್ನು ಕುಂದಿಸುವಾಗ ತಾವು ತಾತ್ಸಾರಕ್ಕೊಳಗಾಗುವೆವು ಮತ್ತು ಅಲಕ್ಷಿಸಲ್ಪಡುವೆವು ಎಂದು ಕೆಲವರು ಭಯಪಡಬಹುದು. ದಾವೀದನು ದೇವರ ಬಳಿ ಹೀಗೆ ಬೇಡಿಕೊಂಡನು: “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.” (ಕೀರ್ತನೆ 71:9) ವೃದ್ಧಾಪ್ಯದಲ್ಲಿ ದುರ್ಬಲರಾಗದಂತೆ ಮತ್ತು ಸಮೃದ್ಧಿಯಿಂದಿರುವಂತೆ ಯಾವುದು ಸಹಾಯಮಾಡುತ್ತದೆ? ನೀತಿಯ ದೈವಿಕ ಗುಣವನ್ನು ತೋರಿಸುವುದೇ. “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು” ಎಂದು ಕೀರ್ತನೆಗಾರನು ಹಾಡಿದನು.—ಕೀರ್ತನೆ 92:12.
ತಮ್ಮ ಜೀವನಗಳನ್ನು ದೇವರಿಗೆ ನಂಬಿಗಸ್ತ ಸೇವೆಯಿಂದ ತುಂಬಿಸಿರುವವರು, ತಮ್ಮ ವೃದ್ಧಾಪ್ಯದಲ್ಲಿಯೂ ಒಳ್ಳೇ ಫಲವನ್ನು ಕೊಡುತ್ತಾ ಇರುತ್ತಾರೆ. ಕಾರ್ಯತಃ, ಬಿತ್ತಲ್ಪಡುವ ಬೀಜಗಳು ಮೊಳಕೆಯೊಡೆದು, ದೊಡ್ಡದಾಗಿ ಸಮೃದ್ಧ ಫಲವನ್ನು ಫಲಿಸುವಂತೆಯೇ, ಅವರು ತಮ್ಮ ಸ್ವಂತ ಜೀವನಗಳಲ್ಲಿ ತಮ್ಮ ಒಳಿತಿಗಾಗಿ ಅಥವಾ ಇತರರ ಸಹಾಯಾರ್ಥವಾಗಿ ಮಾಡಿರುವ ಅನೇಕ ವಿಷಯಗಳು ಒಳ್ಳೇ ಫಲಿತಾಂಶಗಳನ್ನು ಉತ್ಪಾದಿಸುತ್ತವೆ. (ಗಲಾತ್ಯ 6:7-10; ಕೊಲೊಸ್ಸೆ 1:10) ಹೌದು, ದೇವರ ಮಾರ್ಗಗಳನ್ನು ಅಲಕ್ಷಿಸುವಂಥ ಸ್ವಾರ್ಥಪರ ಬೆನ್ನಟ್ಟುವಿಕೆಗಳಲ್ಲಿ ತಮ್ಮ ಜೀವಿತವನ್ನು ದುರ್ವಿನಿಯೋಗಿಸಿರುವ ಜನರು ವೃದ್ಧರಾಗುತ್ತಾ ಹೋದಂತೆ, ಅವರ ಬಳಿ ಹೆಚ್ಚು ಪ್ರಯೋಜನದಾಯಕವಾದದ್ದೇನೂ ಇರುವುದಿಲ್ಲ.
ನೀತಿಯನ್ನು ವೃದ್ಧಾಪ್ಯದ ಭೂಷಣವಾಗಿ ಧರಿಸಿಕೊಳ್ಳುವುದು ಸಹ ಬೈಬಲಿನ ಜ್ಞಾನೋಕ್ತಿ ಪುಸ್ತಕದಲ್ಲಿ ಒತ್ತಿಹೇಳಲಾಗಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮ [ನೀತಿ]ಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31) ಹೌದು, ನೀತಿಯು ಆಂತರಿಕ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ದೀರ್ಘ ಜೀವಿತದಾದ್ಯಂತ ನೀತಿಯ ಮಾರ್ಗವನ್ನು ಬೆನ್ನಟ್ಟುವುದು ಗೌರವವನ್ನು ತರುತ್ತದೆ. (ಯಾಜಕಕಾಂಡ 19:32) ನರೆಗೂದಲಿನ ಜೊತೆಗೆ ವಿವೇಕ ಮತ್ತು ಸದ್ಗುಣವಿರುವುದು ಇತರರಿಂದ ಗೌರವವನ್ನು ಸಂಪಾದಿಸಲು ಸಹಾಯಮಾಡುತ್ತದೆ.—ಯೋಬ 12:12.
ಯೆಹೋವನ ಸೇವೆಯಲ್ಲಿ ನಾವು ಕಳೆಯುವ ಯಥಾರ್ಥ ಜೀವನವು ಆತನಿಗೆ ತುಂಬ ಸಂತೋಷದಾಯಕ. ಶಾಸ್ತ್ರವಚನಗಳು ಹೇಳುವುದು: “ನಿಮ್ಮ ಮುಪ್ಪಿನ ತನಕ [ಯೆಹೋವನಾದ] ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.” (ಯೆಶಾಯ 46:4) ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು, ತನ್ನ ನಿಷ್ಠಾವಂತ ಸೇವಕರ ವೃದ್ಧಾಪ್ಯದ ಕಾಲದಲ್ಲಿ ಅವರನ್ನು ಪೋಷಿಸಿ ಬೆಂಬಲಿಸುತ್ತಾನೆ ಎಂದು ತಿಳಿದಿರುವುದು ಎಷ್ಟು ಸಾಂತ್ವನದಾಯಕವಾಗಿದೆ!—ಕೀರ್ತನೆ 48:14.
1 ತಿಮೊಥೆಯ 5:1, 2) ಆದುದರಿಂದಲೇ ನಾವು ಅವರ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಕ್ರೈಸ್ತ ಪ್ರೀತಿಯನ್ನು ತೋರಿಸಲಿಕ್ಕಾಗಿ ಪ್ರಾಯೋಗಿಕ ವಿಧಗಳನ್ನು ಹುಡುಕೋಣ.
ನಂಬಿಗಸ್ತ ಸೇವೆಯಲ್ಲಿ ಕಳೆದಿರುವ ಜೀವಮಾನಕಾಲವು ಯೆಹೋವನ ದೃಷ್ಟಿಯಲ್ಲಿ ಮನೋಹರವಾಗಿರುವುದರಿಂದ ಇದು ಇತರರ ಗೌರವಕ್ಕೂ ಅರ್ಹವಾಗಿದೆಯೋ? ದೇವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಾ ನಾವು ಸಹ ವೃದ್ಧ ಜೊತೆ ವಿಶ್ವಾಸಿಗಳನ್ನು ಅಮೂಲ್ಯವಾಗಿ ಪರಿಗಣಿಸುತ್ತೇವೆ. (ಜೀವನದಲ್ಲಿ ತಡವಾಗಿ ನೀತಿಯ ಮಾರ್ಗವನ್ನು ಹಿಡಿಯುವುದು
“ಧರ್ಮ [ನೀತಿ]ಮಾರ್ಗದಿಂದ ಜೀವಲಾಭ” ಎಂದು ಸೊಲೊಮೋನನು ನಮಗೆ ಆಶ್ವಾಸನೆ ನೀಡುತ್ತಾನೆ. (ಜ್ಞಾನೋಕ್ತಿ 12:28) ವೃದ್ಧಾಪ್ಯವು ಒಬ್ಬರನ್ನು ಜೀವನದಲ್ಲಿ ನೀತಿಯ ಮಾರ್ಗವನ್ನು ಬೆನ್ನಟ್ಟುವುದರಿಂದ ತಡೆಯಲಾರದು. ಉದಾಹರಣೆಗೆ, ಮಾಲ್ಡೋವದಲ್ಲಿ 99 ವರ್ಷ ಪ್ರಾಯದ ವೃದ್ಧರೊಬ್ಬರು ಕಮ್ಯೂನಿಸ್ಟ್ ಆದರ್ಶಗಳನ್ನು ಉತ್ತೇಜಿಸಲಿಕ್ಕಾಗಿ ತಮ್ಮ ಯುವ ಪ್ರಾಯವನ್ನು ಮುಡಿಪಾಗಿಟ್ಟಿದ್ದರು. ವಿ. ಐ. ಲೆನಿನ್‌ನಂಥ ಹೆಸರಾಂತ ಕಮ್ಯೂನಿಸ್ಟ್ ನಾಯಕರೊಂದಿಗೆ ವೈಯಕ್ತಿಕವಾಗಿ ಸಂಭಾಷಣೆಗಳನ್ನು ನಡೆಸಿದ್ದರ ವಿಷಯದಲ್ಲಿ ಅವರಿಗೆ ತುಂಬ ಹೆಮ್ಮೆಯಿತ್ತು. ಆದರೆ, ಕಮ್ಯೂನಿಸ್ಟ್ ಆಳ್ವಿಕೆಯ ಅವನತಿ ಹಾಗೂ ಪತನದ ಬಳಿಕ ಈ ವೃದ್ಧ ವ್ಯಕ್ತಿ ತಮ್ಮ ಜೀವನದಲ್ಲಿ ಉದ್ದೇಶವನ್ನು ಕಳೆದುಕೊಂಡರು ಮತ್ತು ಅವರಿಗೆ ದಿಕ್ಕುತಪ್ಪಿದಂತಾಯಿತು. ಆದರೆ ಮಾನವಕುಲದ ಸಮಸ್ಯೆಗಳಿಗೆ ದೇವರ ರಾಜ್ಯವೇ ಏಕಮಾತ್ರ ನಿಜ ಪರಿಹಾರವಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಅವರಿಗೆ ತೋರಿಸಿದಾಗ, ಅವರು ಬೈಬಲ್ ಸತ್ಯವನ್ನು ಸ್ವೀಕರಿಸಿದರು ಮತ್ತು ಶಾಸ್ತ್ರವಚನಗಳ ಶ್ರದ್ಧಾಭರಿತ ವಿದ್ಯಾರ್ಥಿಯಾದರು. ದುಃಖಕರವಾಗಿ, ಯೆಹೋವನ ಒಬ್ಬ ದೀಕ್ಷಾಸ್ನಾತ ಸೇವಕರಾಗುವ ಮುಂಚೆಯೇ ಅವರು ತೀರಿಕೊಂಡರು.
ಹಂಗೆರಿಯ 81 ವರ್ಷ ಪ್ರಾಯದ ಸ್ತ್ರೀಯೊಬ್ಬರು ಯೆಹೋವನ ನೈತಿಕ ಆವಶ್ಯಕತೆಗಳ ಕುರಿತು ಕಲಿತಾಗ, ಅವರು ಅನೇಕ ವರ್ಷಗಳಿಂದ ಯಾರೊಂದಿಗೆ ಜೀವಿಸುತ್ತಿದ್ದರೋ ಆ ವ್ಯಕ್ತಿಯನ್ನು ವಿವಾಹಮಾಡಿಕೊಳ್ಳುವುದರ ಅಗತ್ಯವನ್ನು ಮನಗಂಡರು. ಈ ಸ್ತ್ರೀ ತಮ್ಮ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು, ತಮ್ಮ ಸಹಭಾಗಿಗೆ ತಮ್ಮ ಬೈಬಲಾಧಾರಿತ ದೃಷ್ಟಿಕೋನವನ್ನು ವಿವರಿಸಿದರು. ಅವರು ವಿವಾಹಕ್ಕೆ ಒಪ್ಪಿಕೊಂಡದ್ದು ಆ ಸ್ತ್ರೀಗೆ ತುಂಬ ಆಶ್ಚರ್ಯ ಮತ್ತು ಸಂತೋಷವನ್ನುಂಟುಮಾಡಿತು. ವಿವಾಹಬಂಧವು ಕಾನೂನುಬದ್ಧಗೊಳಿಸಲ್ಪಟ್ಟ ಬಳಿಕ ಆ ಸ್ತ್ರೀಯು ತ್ವರಿತಗತಿಯಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದರು. ಬೈಬಲ್ ಅಧ್ಯಯನವನ್ನು ಆರಂಭಿಸಿ ಎಂಟು ತಿಂಗಳುಗಳೊಳಗೆ ಅವರು ಅಸ್ನಾತ ಪ್ರಚಾರಕರಾದರು ಮತ್ತು ತದನಂತರ ಸ್ವಲ್ಪದರಲ್ಲೇ ದೀಕ್ಷಾಸ್ನಾನ ಪಡೆದುಕೊಂಡರು. ನೀತಿಯು, ವೃದ್ಧರು ನಿಜವಾದ ಸೌಂದರ್ಯವನ್ನು ತೋರ್ಪಡಿಸುವಂತೆ ಮಾಡಬಲ್ಲದು ಎಂಬುದೆಷ್ಟು ಸತ್ಯ!
ಹೌದು, ವೃದ್ಧರಾಗಿರುವ ನಂಬಿಗಸ್ತ ಕ್ರೈಸ್ತರು, ತಮ್ಮ ಬಗ್ಗೆ ದೇವರಿಗೆ ಆಸಕ್ತಿಯಿದೆಯೆಂಬ ವಿಷಯದಲ್ಲಿ ನಿಶ್ಚಿತರಾಗಿರಸಾಧ್ಯವಿದೆ. ತನಗೆ ನಿಷ್ಠರಾಗಿ ಉಳಿಯುವವರನ್ನು ಯೆಹೋವನು ಎಂದೂ ಕೈಬಿಡುವುದಿಲ್ಲ. ಅದಕ್ಕೆ ಬದಲಾಗಿ, ವೃದ್ಧಾಪ್ಯದಲ್ಲಿಯೂ ಅವರನ್ನು ಮಾರ್ಗದರ್ಶಿಸುವ, ಬೆಂಬಲಿಸುವ ಹಾಗೂ ಪೋಷಿಸುವ ವಾಗ್ದಾನವನ್ನು ಆತನು ಮಾಡುತ್ತಾನೆ. ಮತ್ತು ಅವರು “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂಬ ಕೀರ್ತನೆಗಾರನ ಮಾತುಗಳು ಸತ್ಯವೆಂಬುದನ್ನು ರುಜುಪಡಿಸುತ್ತಾರೆ.—ಕೀರ್ತನೆ 121:2.
[ಪಾದಟಿಪ್ಪಣಿ]
^ ಪ್ಯಾರ. 4 ಯೆಹೋವನ ಸಾಕ್ಷಿಗಳ 2005ರ ಕ್ಯಾಲೆಂಡರ್‌ನ (ಇಂಗ್ಲಿಷ್) ಜನವರಿ/ಫೆಬ್ರವರಿ ತಿಂಗಳುಗಳನ್ನು ನೋಡಿ.
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” —ಜ್ಞಾನೋಕ್ತಿ 16:31
[ಪುಟ 8ರಲ್ಲಿರುವ ಚೌಕ]
ಯೆಹೋವನು ತನ್ನ ವೃದ್ಧ ಸೇವಕರನ್ನು ಪರಾಮರಿಸುತ್ತಾನೆ
“ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” —ಯಾಜಕಕಾಂಡ 19:32.
“ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.”—ಯೆಶಾಯ 46:4.