ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ನಡತೆಯು ‘ದೇವರ ಉಪದೇಶಕ್ಕೆ ಅಲಂಕಾರವಾಗಿದೆ’

ಒಳ್ಳೇ ನಡತೆಯು ‘ದೇವರ ಉಪದೇಶಕ್ಕೆ ಅಲಂಕಾರವಾಗಿದೆ’

ಒಳ್ಳೇ ನಡತೆಯು ‘ದೇವರ ಉಪದೇಶಕ್ಕೆ ಅಲಂಕಾರವಾಗಿದೆ’

ರಷ್ಯದ ಕ್ರೇಸ್ನಯಾರ್‌ಸ್ಕ್‌ ಪಟ್ಟಣದಲ್ಲಿನ ಚಿಕ್ಕ ಪ್ರಾಯದ ಮಾರೀಯಾ ಎಷ್ಟು ಚೆನ್ನಾಗಿ ಹಾಡುತ್ತಾಳೆಂದರೆ, ಅವಳ ಶಿಕ್ಷಕಿಯು ಅವಳನ್ನು ಶಾಲೆಯ ಗಾಯಕ ತಂಡದಲ್ಲಿ ಸೇರಿಸಿದರು. ತದನಂತರ ಸ್ವಲ್ಪದರಲ್ಲೇ ಮಾರೀಯಾ ತನ್ನ ಶಿಕ್ಷಕಿಯರಲ್ಲಿ ಒಬ್ಬರ ಬಳಿಗೆ ಹೋಗಿ, ತಾನು ಕೆಲವೊಂದು ಹಾಡುಗಳನ್ನು ಹಾಡಲಾಗುವುದಿಲ್ಲ ಎಂದು ವಿವರಿಸಿದಳು. ಕಾರಣವೇನಾಗಿತ್ತು? ಧಾರ್ಮಿಕ ಸೂಚಿತಾರ್ಥವಿರುವ ಹಾಡುಗಳನ್ನು ಹಾಡುವುದು ಅವಳ ಬೈಬಲ್‌-ಶಿಕ್ಷಿತ ನಿಶ್ಚಿತಾಭಿಪ್ರಾಯಗಳೊಂದಿಗೆ ಸಂಘರ್ಷಿಸುತ್ತಿತ್ತು. ‘ಒಂದು ಹಾಡಿನಲ್ಲಿ ದೇವರನ್ನು ಮಹಿಮೆಪಡಿಸುವುದು ಯಾವ ಅರ್ಥದಲ್ಲಿ ತಪ್ಪಾಗಿರಸಾಧ್ಯವಿದೆ?’ ಎಂದು ಶಿಕ್ಷಕಿಯು ಆಶ್ಚರ್ಯಪಟ್ಟಳು.

ಒಬ್ಬ ತ್ರಯೈಕ್ಯ ದೇವರ ಕುರಿತಾದ ಹಾಡನ್ನು ಹಾಡಲು ತಾನೇಕೆ ನಿರಾಕರಿಸುತ್ತೇನೆ ಎಂಬುದನ್ನು ತೋರಿಸಲಿಕ್ಕಾಗಿ ಮಾರೀಯಾ ತನ್ನ ಬೈಬಲನ್ನು ತೆರೆದು, ದೇವರು ಮತ್ತು ಯೇಸು ಕ್ರಿಸ್ತನು ಸೇರಿ ಒಬ್ಬ ದೇವರಲ್ಲ, ಹಾಗೂ ಪವಿತ್ರಾತ್ಮವು ದೇವರ ಕಾರ್ಯಕಾರಿ ಶಕ್ತಿಯಾಗಿದೆ ಎಂಬುದನ್ನು ವಿವರಿಸಿದಳು. (ಮತ್ತಾಯ 26:39; ಯೋಹಾನ 14:28; ಅ. ಕೃತ್ಯಗಳು 4:31) ಮಾರೀಯಾ ಹೀಗೆ ತಿಳಿಸುತ್ತಾಳೆ: “ಇದರಿಂದಾಗಿ ಆ ಶಿಕ್ಷಕಿಯೊಂದಿಗಿನ ನನ್ನ ಸಂಬಂಧವು ಹಾಳಾಗಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಶಾಲೆಯಲ್ಲಿ ತುಂಬ ಒಳ್ಳೇ ಶಿಕ್ಷಕಿಯರಿದ್ದಾರೆ. ನಾವು ಪ್ರಾಮಾಣಿಕರಾಗಿರಬೇಕೆಂದು ಅವರು ಇಷ್ಟಪಡುತ್ತಾರೆ.”

ಶಾಲಾ ವರ್ಷದಾದ್ಯಂತ, ಮಾರೀಯಾಳ ನಿಲುವು ಅವಳು ತನ್ನ ಶಿಕ್ಷಕಿಯರ ಹಾಗೂ ಸಹಪಾಠಿಗಳ ಗೌರವವನ್ನು ಸಂಪಾದಿಸುವಂತೆ ಮಾಡಿತು. ಮಾರೀಯಾ ಹೇಳುವುದು: “ಬೈಬಲ್‌ ತತ್ತ್ವಗಳು ನನ್ನ ಜೀವನದಲ್ಲಿ ನನಗೆ ಸಹಾಯಮಾಡುತ್ತವೆ. ಶಾಲಾ ವರ್ಷದ ಕೊನೆಯಲ್ಲಿ, ಪ್ರಾಮಾಣಿಕತೆ ಹಾಗೂ ಶಿಸ್ತುಪಾಲನೆಗಾಗಿ ನನಗೆ ಪ್ರಶಸ್ತಿಯು ಕೊಡಲ್ಪಟ್ಟಿತು. ಮತ್ತು ತಮ್ಮ ಮಗಳನ್ನು ಒಳ್ಳೇ ರೀತಿಯಲ್ಲಿ ಬೆಳೆಸಿದ್ದಕ್ಕಾಗಿ ನನ್ನ ಹೆತ್ತವರಿಗೆ ಶಾಲೆಯಿಂದ ಥ್ಯಾಂಕ್ಯೂ ಕಾರ್ಡ್‌ ಸಹ ಕೊಡಲ್ಪಟ್ಟಿತು.”

ಇಸವಿ 2001ರ ಆಗಸ್ಟ್‌ 18ರಂದು ಮಾರೀಯಾ ದೀಕ್ಷಾಸ್ನಾನ ಪಡೆದುಕೊಂಡಳು. ಅವಳು ತಿಳಿಸುವುದು: “ಇಂಥ ಮಹಾನ್‌ ದೇವರಾಗಿರುವ ಯೆಹೋವನ ಸೇವೆಯನ್ನು ನಾನು ಮಾಡಸಾಧ್ಯವಾಗಿರುವುದಕ್ಕಾಗಿ ನಾನು ಹರ್ಷಿಸುತ್ತೇನೆ!” ಲೋಕವ್ಯಾಪಕವಾಗಿರುವ ಯೆಹೋವನ ಚಿಕ್ಕ ಪ್ರಾಯದ ಸಾಕ್ಷಿಗಳು ತೀತ 2:10ರಲ್ಲಿರುವ ಮಾತುಗಳಿಗೆ ಅನುಸಾರವಾಗಿ ಜೀವಿಸುತ್ತಾರೆ. ಅಲ್ಲಿ ನಾವು ಹೀಗೆ ಓದುತ್ತೇವೆ: ‘ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರಿ.’

[ಪುಟ 32ರಲ್ಲಿರುವ ಚಿತ್ರ]

ಗಣ್ಯತಾ ಪತ್ರ ಮತ್ತು ಮೆರಿಟ್‌ ಸರ್ಟಿಫಿಕೆಟ್‌

[ಪುಟ 32ರಲ್ಲಿರುವ ಚಿತ್ರ]

ಮಾರೀಯಾಳ ದೀಕ್ಷಾಸ್ನಾನದ ಬಳಿಕ ಅವಳು ಮತ್ತು ಅವಳ ಹೆತ್ತವರು