ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಗ್ಯುದ್ಧಗಳು ಏಕೆ ವೇದನಾಮಯವಾಗಿವೆ?

ವಾಗ್ಯುದ್ಧಗಳು ಏಕೆ ವೇದನಾಮಯವಾಗಿವೆ?

ವಾಗ್ಯುದ್ಧಗಳು ಏಕೆ ವೇದನಾಮಯವಾಗಿವೆ?

“ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ?” ​—⁠ಯಾಕೋಬ 4:⁠1.

ಈಪ್ರಶ್ನೆಯನ್ನು ಬೈಬಲ್‌ ಬರಹಗಾರನಾದ ಯಾಕೋಬನು, ರಾಜ್ಯಗಳನ್ನು ಗೆಲ್ಲಲಿಕ್ಕಾಗಿ ಯುದ್ಧಗಳಲ್ಲಿ ತೊಡಗಿದ್ದ ರೋಮನ್‌ ಸೈನ್ಯದಳದ ಸೈನಿಕರಿಗೆ ಸೂಚಿಸಿ ಕೇಳಲಿಲ್ಲ; ಇಲ್ಲವೆ ಸಾ.ಶ. ಮೊದಲನೇ ಶತಮಾನದ ಯೆಹೂದಿ ಸಿಕಾರಿಐಗಳ ಅಥವಾ ಘಾತಕರ ಗೆರಿಲ್ಲ ಯುದ್ಧದ ಹೇತುವನ್ನು ತಿಳಿದುಕೊಳ್ಳುವ ಸಲುವಾಗಿಯೂ ಕೇಳಲಿಲ್ಲ. ಬದಲಾಗಿ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಕಾದಾಟಗಳನ್ನು ಸೂಚಿಸಿ ಯಾಕೋಬನು ಕೇಳಿದನು. ಏಕೆ? ಏಕೆಂದರೆ, ವೈಯಕ್ತಿಕ ಕಾದಾಟಗಳು ಯುದ್ಧಗಳಂತೆ ನಾಶಕಾರಕವಾಗಿರುತ್ತವೆ. ಈ ಬೈಬಲ್‌ ವೃತ್ತಾಂತಗಳನ್ನು ಗಮನಿಸಿರಿ.

ಪೂರ್ವಜನಾದ ಯಾಕೋಬನ ಗಂಡುಮಕ್ಕಳು ಅವರ ತಮ್ಮನಾದ ಯೋಸೇಫನನ್ನು ಎಷ್ಟರ ಮಟ್ಟಿಗೆ ಹಗೆಮಾಡಿದರೆಂದರೆ ಅವರು ಅವನನ್ನು ದಾಸತ್ವಕ್ಕೆ ಮಾರಿಯೇ ಬಿಟ್ಟರು. (ಆದಿಕಾಂಡ 37:​4-28) ಅನಂತರ, ಇಸ್ರಾಯೇಲಿನ ರಾಜನಾದ ಸೌಲನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದನು. ಏಕೆ? ದಾವೀದನ ಕಡೆಗೆ ಅವನಿಗಿದ್ದ ಹೊಟ್ಟೆಕಿಚ್ಚಿನ ಕಾರಣದಿಂದಲೇ. (1 ಸಮುವೇಲ 18:7-11; 23:14, 15) ಪ್ರಥಮ ಶತಮಾನದಲ್ಲಿ, ಇಬ್ಬರು ಕ್ರೈಸ್ತ ಸ್ತ್ರೀಯರಾದ ಯುವೊದ್ಯ ಮತ್ತು ಸಂತುಕೆಯು ತಮ್ಮ ವಾಗ್ವಾದಗಳ ಮೂಲಕ ಇಡೀ ಸಭೆಯ ಶಾಂತಿಯನ್ನು ಭಂಗಗೊಳಿಸಿದರು.​—⁠ಫಿಲಿಪ್ಪಿ 4:⁠2.

ಇತ್ತೀಚಿನ ಸಮಯಗಳಲ್ಲಿ, ಗಂಡಸರು ತಮ್ಮ ನಡುವೆ ತಲೆದೊರುವ ಭಿನಾಭಿಪ್ರಾಯಗಳನ್ನು ಇತ್ಯರ್ಥಗೊಳಿಸಲು ಕತ್ತಿಗಳನ್ನು ಅಥವಾ ಪಿಸ್ತೂಲುಗಳನ್ನು ಉಪಯೋಗಿಸುತ್ತಾರೆ. ಅನೇಕವೇಳೆ ಇದರಲ್ಲಿ ಒಬ್ಬನು ಕೊಲ್ಲಲ್ಪಡುತ್ತಾನೆ ಅಥವಾ ಅಂಗವಿಕಲನಾಗಿ ಮಾಡಲ್ಪಡುತ್ತಾನೆ. ಇಂದು, ದ್ವೇಷ ಸಾಧಿಸುವ ಜನರು ಕಟುವಾದ ವೇದನಾಮಯ ಮಾತುಗಳನ್ನು ತಮ್ಮ ಆಯುಧವನ್ನಾಗಿ ಉಪಯೋಗಿಸುತ್ತಾರೆ. ರಕ್ತವು ಸುರಿಸಲ್ಪಡದಿದ್ದರೂ, ವಾಗ್ದಾಳಿಯು ಭಾವನಾತ್ಮಕವಾಗಿ ನೋವನ್ನುಂಟುಮಾಡುತ್ತದೆ ಮತ್ತು ಸತ್ಕೀರ್ತಿಗೆ ಕಳಂಕವನ್ನು ತರುತ್ತದೆ. ಇಂಥ “ಯುದ್ಧ”ದಲ್ಲಿ ಅನೇಕವೇಳೆ ಮುಗ್ಧರು ಕಷ್ಟಾನುಭವಿಸುತ್ತಾರೆ.

ಕೆಲವು ವರುಷಗಳ ಹಿಂದೆ, ಚರ್ಚಿನ ಹಣವನ್ನು ದುರುಪಯೋಗಿಸಿದನೆಂದು ಒಬ್ಬ ಆಂಗ್ಲಿಕನ್‌ ಪಾದ್ರಿಯು ಇನ್ನೊಬ್ಬ ಪಾದ್ರಿಯ ಮೇಲೆ ಆರೋಪಹೊರಿಸಿದಾಗ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಅವರ ಕಾದಾಟವು ಬಯಲಾಗಿ, ಅವರು ಸೇವೆಸಲ್ಲಿಸುತ್ತಿದ್ದ ಸಭೆಯು ಗುಂಪುಗಳಾಗಿ ಛಿದ್ರವಾಯಿತು. ಕೆಲವು ಸದಸ್ಯರು ತಾವು ವಿರೋಧಿಸುತ್ತಿದ್ದ ಪಾದ್ರಿಯು ಚರ್ಚಿನ ಅಧ್ಯಕ್ಷತೆ ವಹಿಸಿರುವ ತನಕ ಚರ್ಚಿಗೆ ಹಾಜರಾಗಲು ನಿರಾಕರಿಸಿದರು. ಚರ್ಚ್‌ ಸದಸ್ಯರ ಮಧ್ಯೆ ವೈರತ್ವವು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಅವರು ಆರಾಧನೆಗಾಗಿ ಚರ್ಚಿನಲ್ಲಿ ಕೂಡಿಬರುವಾಗ ಒಬ್ಬರು ಮತ್ತೊಬ್ಬರ ಮುಖವನ್ನೂ ನೋಡುತ್ತಿರಲಿಲ್ಲ. ಅನಂತರ ಆ ರೀತಿಯಲ್ಲಿ ಆರೋಪಹೊರಿಸಿದ ಪಾದ್ರಿಯ ಮೇಲೆಯೇ ಲೈಂಗಿಕ ದುರ್ನಡತೆಯ ಆಪಾದನೆಯು ಹೊರಿಸಲ್ಪಟ್ಟಾಗ, ಜಗಳವು ಇನ್ನಷ್ಟು ತೀವ್ರಗೊಂಡಿತು.

ಆ ಇಬ್ಬರು ಪಾದ್ರಿಗಳ ಕಾದಾಟವನ್ನು “ಕ್ಯಾನ್ಸರ್‌” ಎಂದೂ “ನಮ್ಮ ಕರ್ತನ ನಾಮವನ್ನು ಅಗೌರವಿಸುವಂಥ ಒಂದು ಕಳಂಕ” ಎಂದೂ ಕ್ಯಾಂಟರ್‌ಬರಿಯ ಆರ್ಚ್‌ಬಿಷಪರು ಕರೆದರು. ಅಷ್ಟುಮಾತ್ರವಲ್ಲದೆ ಆ ಪಾದ್ರಿಗಳು ತಮ್ಮ ಹುದ್ದೆಯನ್ನು ಬಿಟ್ಟುಬಿಡುವಂತೆ ಅವರು ಕೇಳಿಕೊಂಡರು. 1997ರಲ್ಲಿ ಆ ಪಾದ್ರಿಗಳಲ್ಲಿ ಒಬ್ಬನು ನಿವೃತ್ತಿಪಡೆದುಕೊಳ್ಳಲು ಒಪ್ಪಿದನು. ಇನ್ನೊಬ್ಬನು ತನಗೆ ನಿವೃತ್ತಿಹೊಂದುವ ವಯಸ್ಸು ಬರುವ ತನಕ ಕೆಲಸವನ್ನು ಮುಂದುವರಿಸಿದನು. ಅವನು ತನಗೆ ಸಾಧ್ಯವಿರುವ ಕೊನೆಯ ಗಳಿಗೆಯ ವರೆಗೂ ತನ್ನ ಹುದ್ದೆಯಲ್ಲಿ ಉಳಿದನು. 2001ರ ಆಗಸ್ಟ್‌ 7ರಂದು ತನ್ನ 70ನೇ ಜನ್ಮದಿನದಂದು ನಿವೃತ್ತಿಹೊಂದಿದನು. ಅವನು ನಿವೃತ್ತಿಹೊಂದಿದ ದಿನವು “ಸಂತ” ವಿಕ್ಟ್ರೀಸಿಯಸ್‌ ಹಬ್ಬದ ದಿನವಾಗಿತ್ತು ಎಂದು ದ ಚರ್ಚ್‌ ಆಫ್‌ ಇಂಗ್ಲೆಂಡ್‌ ನ್ಯೂಸ್‌ಪೇಪರ್‌ ತಿಳಿಸುತ್ತದೆ. ಈ “ಸಂತ” ವಿಕ್ಟ್ರೀಸಿಯಸ್‌ ಯಾರು? ಇವನು ಸೇನೆಯಲ್ಲಿ ಕಾದಾಡಲು ನಿರಾಕರಿಸಿದ ಕಾರಣ ಹೊಡೆಯಲ್ಪಟ್ಟನೆಂದು ವರದಿಸಲಾಗಿರುವ ನಾಲ್ಕನೇ ಶತಮಾನದ ಒಬ್ಬ ಬಿಷಪ್‌ ಆಗಿದ್ದನು. ಇವರಿಬ್ಬರ ಮನೋಭಾವಗಳಲ್ಲಿದ್ದ ವ್ಯತ್ಯಾಸವನ್ನು ಗಮನಿಸುತ್ತಾ ವಾರ್ತಾಪತ್ರಿಕೆಯು ತಿಳಿಸುವುದು: “ನಿವೃತ್ತಿಹೊಂದಲಿದ್ದ ಈ ಪಾದ್ರಿಯಾದರೋ ತನ್ನ ಚರ್ಚಿನ ಕಾದಾಟವನ್ನು ನಿಲ್ಲಿಸುವ ಯಾವುದೇ ಸೂಚನೆಯನ್ನು ನೀಡಲಿಲ್ಲ.”

ಆ ಪಾದ್ರಿಗಳು ರೋಮಾಪುರ 12:​17, 18ರಲ್ಲಿರುವ, “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂಬ ಸಲಹೆಯನ್ನು ಅನ್ವಯಿಸಿರುತ್ತಿದ್ದಲ್ಲಿ ತಮಗೆ ಮತ್ತು ಇತರರಿಗೆ ಹಾನಿಯನ್ನು ತರುತ್ತಿರಲಿಲ್ಲ.

ನಿಮ್ಮ ಕುರಿತಾಗಿ ಏನು? ಯಾರಾದರೊಬ್ಬರು ನಿಮಗೆ ಕೋಪವನ್ನೆಬ್ಬಿಸುವಾಗ, ಆ ಕೋಪವು ನಿಮ್ಮನ್ನು ಮಾತಿನ ಚಕಮಕಿಗೆ ಇಳಿಯುವಂತೆ ಮಾಡುತ್ತದೋ? ಅಥವಾ ನೀವು ಕಟುವಾದ ಮಾತನ್ನು ತಡೆಗಟ್ಟಿ, ರಾಜಿಮಾಡಿಕೊಳ್ಳಲು ಯಾವಾಗಲೂ ಸಿದ್ಧರಿರುತ್ತೀರೊ? ನೀವು ಯಾರ ಮನಸ್ಸನ್ನಾದರೂ ನೋಯಿಸಿರುವಲ್ಲಿ, ಆ ವ್ಯಕ್ತಿಯೊಂದಿಗೆ ಮಾತಾಡದೆ ಅವರನ್ನು ದೂರವಿಟ್ಟು ಸಮಯದಾಟಿದಂತೆ ಅವರು ಎಲ್ಲವನ್ನೂ ಮರೆತುಬಿಡುವರೆಂದು ಭಾವಿಸುತ್ತೀರೋ? ಅಥವಾ ವಿಳಂಬಿಸದೆ ಕ್ಷಮೆಯಾಚಿಸುತ್ತಿರೋ? ನೀವು ಕ್ಷಮೆಯಾಚಿಸುವವರಾಗಿರಲಿ ಇಲ್ಲವೆ ಕ್ಷಮಿಸುವವರಾಗಿರಲಿ, ರಾಜಿಮಾಡಿಕೊಳ್ಳಲು ಪ್ರಯತ್ನಿಸುವುದು ನಿಮ್ಮ ಒಳಿತಿಗಾಗಿದೆ. ಮುಂದಿನ ಲೇಖನವು ತೋರಿಸುವಂತೆ, ದೀರ್ಘಕಾಲದಿಂದ ಇರುವ ಜಗಳಗಳನ್ನು ಸಹ ಬಗೆಹರಿಸಲು ಬೈಬಲ್‌ ಸಲಹೆಯು ನಮಗೆ ಸಹಾಯಮಾಡಬಲ್ಲದು.