ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾಪಿಸಿಕೊಳ್ಳಬೇಕಾದ ಒಂದು ಘಟನೆ

ಜ್ಞಾಪಿಸಿಕೊಳ್ಳಬೇಕಾದ ಒಂದು ಘಟನೆ

ಜ್ಞಾಪಿಸಿಕೊಳ್ಳಬೇಕಾದ ಒಂದು ಘಟನೆ

ಇದು ಯಾವ ಘಟನೆ? ಸುಮಾರು 2,000 ವರುಷಗಳ ಹಿಂದೆ ಮೃತಪಟ್ಟ ಒಬ್ಬ ಮನುಷ್ಯನ ಮರಣವೇ. ಅವನು ಹೇಳಿದ್ದು: “ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; . . . ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ.” (ಯೋಹಾನ 10:​17, 18) ಆ ಮನುಷ್ಯನು ಯೇಸು ಕ್ರಿಸ್ತನೇ ಆಗಿದ್ದಾನೆ.

ಯೇಸು ತನ್ನ ಯಜ್ಞಾರ್ಪಿತ ಮರಣದ ಜ್ಞಾಪಕಾಚರಣೆಯನ್ನು ಮಾಡುವಂತೆ ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು. ಈ ಸಂದರ್ಭವನ್ನು “ಕರ್ತನ ಭೋಜನ” ಅಥವಾ “ಪ್ರಭುವಿನ ರಾತ್ರಿಭೋಜನ” ಎಂದೂ ಕರೆಯಲಾಗುತ್ತದೆ. (1 ಕೊರಿಂಥ 11:​20, ಪರಿಶುದ್ಧ ಬೈಬಲ್‌ *) ತನ್ನ ಮರಣವನ್ನು ಸ್ಮರಿಸುವಂತೆ ಯೇಸು ಸ್ಥಾಪಿಸಿದ ಜ್ಞಾಪಕಾಚರಣೆಯನ್ನು, ಯೆಹೋವನ ಸಾಕ್ಷಿಗಳೂ ಅವರ ಸ್ನೇಹಿತರೂ 2005, ಮಾರ್ಚ್‌ 24ರ ಗುರುವಾರದಂದು ಸೂರ್ಯಾಸ್ತಮಾನದ ಬಳಿಕ ಆಚರಿಸುವರು.

ಈ ಸಂದರ್ಭದಲ್ಲಿ ಉಪಯೋಗಿಸಲ್ಪಡುವ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯದ ಅರ್ಥವನ್ನು ಅದೇ ಸಮಯದಲ್ಲಿ ಕೊಡಲ್ಪಡುವ ಒಂದು ಬೈಬಲ್‌ ಆಧಾರಿತ ಭಾಷಣದಲ್ಲಿ ವಿವರಿಸಲಾಗುವುದು. (ಮತ್ತಾಯ 26:​26-28) ಕ್ರೈಸ್ತರು ಈ ಘಟನೆಯನ್ನು ಎಷ್ಟು ಬಾರಿ ಆಚರಿಸಬೇಕು? ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಯಾರು ಮಾತ್ರ ಪಾಲುತೆಗೆದುಕೊಳ್ಳಬೇಕು? ಯೇಸುವಿನ ಮರಣದಿಂದ ಯಾರು ಪ್ರಯೋಜನಪಡೆಯುತ್ತಾರೆ? ಈ ಮುಂತಾದ ಪ್ರಶ್ನೆಗಳಿಗೆ ಸಹ ಭಾಷಣವು ಉತ್ತರವನ್ನು ನೀಡುವುದು. ಯೇಸುವಿನ ಜೀವನ ಮತ್ತು ಮರಣದ ಉದ್ದೇಶವನ್ನು ಜನರು ಅರ್ಥಮಾಡಿಕೊಳ್ಳುವಂತೆ ಈ ವಿಶೇಷ ಆಚರಣೆಯು ಸಹಾಯಮಾಡುವುದು.

ಯೇಸುವಿನ ಮರಣದ ಜ್ಞಾಪಕಾಚರಣೆಗೆ ನಿಮಗೆ ಹಾರ್ದಿಕ ಸ್ವಾಗತವಿದೆ. ಈ ವಿಶೇಷ ಕೂಟವು ನಡೆಯುವ ನಿಖರವಾದ ಸ್ಥಳ ಮತ್ತು ಸಮಯಕ್ಕಾಗಿ ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ.

[ಪಾದಟಿಪ್ಪಣಿ]

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.