ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನಾಹುತವು ಸಂಭವಿಸುವಾಗ

ಅನಾಹುತವು ಸಂಭವಿಸುವಾಗ

ಅನಾಹುತವು ಸಂಭವಿಸುವಾಗ

ಓಅನ್‌ ಎಂಬ ಎರಡೂವರೆ ವರ್ಷದ ಒಬ್ಬ ಬಾಲಕನು ತನ್ನ ಮನೆಯ ಸ್ನಾನಗೃಹದಲ್ಲಿ ಆಟವಾಡುತ್ತಾ ಇದ್ದನು. ಔಷಧಿಗಳನ್ನಿಡುವ ಒಂದು ಚಿಕ್ಕ ಕಪಾಟು ಅಲ್ಲಿತ್ತು, ಮತ್ತು ಅಲ್ಲಿಗೆ ಅವನ ಕೈ ಎಟುಕುವುದಿಲ್ಲವೆಂದು ಅವನ ತಂದೆತಾಯಿ ನೆನಸಿದ್ದರು. ಆದರೆ ಹೇಗೋ ಆ ಬಾಲಕನು ಆ ಕಪಾಟಿನ ಬಳಿ ಹತ್ತಿದನು. ಅದರಲ್ಲಿದ್ದ ವಸ್ತುಗಳಲ್ಲಿ ಒಂದು ಸೀಸೆಯು ಅವನ ಗಮನವನ್ನು ಆಕರ್ಷಿಸಿತು. ಅವನದನ್ನು ತೆರೆದು, ಅದರಲ್ಲಿದ್ದ ದ್ರವವನ್ನು ಕುಡಿದುಬಿಟ್ಟನು. ಅನಾಹುತ ಸಂಭವಿಸಿತು.

ಆ ಸೀಸೆಯಲ್ಲಿ ನಾಶಕಾರಿ ಆ್ಯಸಿಡ್‌ ಇತ್ತು ಮತ್ತು ದುಃಖಕರವಾಗಿಯೇ ಪುಟ್ಟ ಓಅನ್‌ ಸಾವನ್ನಪ್ಪಿದನು. ಅವನ ಹೆತ್ತವರು ಅಪಾರ ದುಃಖದಲ್ಲಿ ಮುಳುಗಿದರು. ಆ ಬಾಲಕನ ತಂದೆಯಾದ ಪರ್ಸೀ ತನ್ನ ಚರ್ಚಿನ ಪಾದ್ರಿಯಿಂದ ಸಾಂತ್ವನವನ್ನು ಪಡೆದುಕೊಳ್ಳಲು ಹೋದನು. “ಯಾಕೆ ಹೀಗಾಯಿತು?” ಎಂದು ಅವನು ಪಾದ್ರಿಯನ್ನು ಕೇಳಿದನು. ಅದಕ್ಕೆ ಪಾದ್ರಿಯು ಉತ್ತರಿಸಿದ್ದು: “ಸ್ವರ್ಗದಲ್ಲಿ ದೇವರಿಗೆ ಇನ್ನೊಬ್ಬ ಪುಟ್ಟ ದೇವದೂತನು ಬೇಕಾಗಿದ್ದನು, ಅದಕ್ಕಾಗಿಯೇ.” ಮಗುವನ್ನು ಕಳೆದುಕೊಂಡು ಸಹಿಸಲಸಾಧ್ಯವಾದ ದುಃಖದಿಂದ ಜರ್ಜರಿತನಾಗಿದ್ದ ಈ ತಂದೆಗೆ ಇದು ಘೋರವಾದ ಅನ್ಯಾಯವಾಗಿ ಕಂಡುಬಂತು. ಇಂಥ ಒಂದು ಅನಾಹುತವು ಸಂಭವಿಸಬೇಕು ಎಂಬುದು ನಿಜವಾಗಿಯೂ ದೇವರ ಉದ್ದೇಶವಾಗಿತ್ತೊ? ತುಂಬ ಆಶಾಭಂಗಗೊಂಡ ಪರ್ಸೀ, ತನ್ನ ಚರ್ಚಿನೊಂದಿಗಿನ ಸಹವಾಸವನ್ನು ಕಡಿದುಹಾಕಲು ನಿರ್ಧರಿಸಿದನು.

ಏನು ನಡೆದಿತ್ತೋ ಅದರ ಬಗ್ಗೆ ಆಲೋಚಿಸುತ್ತಿದ್ದ ಪೆರ್ಸೀ, ‘ನನ್ನ ಪುಟ್ಟ ಮಗನು ಇನ್ನೂ ಕಷ್ಟಪಡುತ್ತಿದ್ದಾನೊ? ನಾನು ಪುನಃ ಎಂದಾದರೂ ಅವನನ್ನು ನೋಡುವೆನೊ?’ ಎಂದು ಕೌತುಕಪಟ್ಟನು.

ಸತ್ತಾಗ ಏನು ಸಂಭವಿಸುತ್ತದೆ ಮತ್ತು ಮೃತ ಪ್ರಿಯ ವ್ಯಕ್ತಿಗಳೊಂದಿಗೆ ಮುಂದೆ ಎಂದಾದರೂ ಒಂದುಗೂಡಲು ಸಾಧ್ಯವಿದೆಯೊ ಎಂದು ನೀವು ಸಹ ಕುತೂಹಲಪಟ್ಟಿರಬಹುದು. ದೇವರ ವಾಕ್ಯವಾಗಿರುವ ಬೈಬಲು ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ. ಇಂಥ ಅನಾಹುತಗಳನ್ನು ಅನುಭವಿಸಿರುವವರೆಲ್ಲರಿಗೆ ಬೈಬಲು ಸ್ಪಷ್ಟವಾದ ಹಾಗೂ ಸಾಂತ್ವನದಾಯಕವಾದ ಉತ್ತರಗಳನ್ನು ಒದಗಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ದೇವರು ವಾಗ್ದಾನಿಸಿರುವ ಒಂದು ಮಹಿಮಾಭರಿತ ಪ್ರತೀಕ್ಷೆಯನ್ನು ಅದು ಪ್ರಕಟಪಡಿಸುತ್ತದೆ. ಅದೇ ಪುನರುತ್ಥಾನವಾಗಿದೆ.

ಈ ಅದ್ಭುತಕರ ನಿರೀಕ್ಷೆಯ ಕುರಿತು ಹೆಚ್ಚನ್ನು ತಿಳಿಯಲಿಕ್ಕಾಗಿ ದಯವಿಟ್ಟು ಮುಂದಿನ ಲೇಖನವನ್ನು ಓದಿರಿ.