ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಮ್ಮ ಧರ್ಮಕ್ಕಾಗಿ ಹಿಂಸಿಸಲ್ಪಟ್ಟರು”

“ತಮ್ಮ ಧರ್ಮಕ್ಕಾಗಿ ಹಿಂಸಿಸಲ್ಪಟ್ಟರು”

“ತಮ್ಮ ಧರ್ಮಕ್ಕಾಗಿ ಹಿಂಸಿಸಲ್ಪಟ್ಟರು”

ಉತ್ತರ ಇಟಲಿಯ ಚೆರ್ನಾಬ್ಯೊ ಪಟ್ಟಣವು, ಮಾನವ ಹಕ್ಕುಗಳ ಉಲ್ಲಂಘನೆಗೆ ಬಲಿಯಾದವರನ್ನು ಸ್ಮರಿಸಲು ಸ್ಥಳಿಕ ಉದ್ಯಾನವನದಲ್ಲಿ ಒಂದು ಸ್ಮಾರಕ ನಿವೇಶನವನ್ನು ಸ್ಥಾಪಿಸಿತು. ಮೃತರ ಸ್ಮಾರಕಾರ್ಥವಾಗಿ ಅನಾವರಣ ಮಾಡಲ್ಪಟ್ಟ ಒಂದು ಫಲಕವು ನಾರ್ಸೀಸೊ ರೀಟ್‌ ಎಂಬವರ ನೆನಪಿಗೆ ಅರ್ಪಿತವಾಗಿತ್ತು. ಜರ್ಮನಿಯಲ್ಲಿ ಇಟ್ಯಾಲಿಯನ್‌ ಹೆತ್ತವರಿಗೆ ಜನಿಸಿದ ನಾರ್ಸೀಸೊ 1930ರ ದಶಕದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು. ಹಿಟ್ಲರನು ಆಳುತ್ತಿದ್ದ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಹಿಟ್ಲರನನ್ನು ಸತ್ಯ ದೇವರಾದ ಯೆಹೋವನಿಗಿಂತ ಮೇಲೆ ಇರಿಸಲು ನಿರಾಕರಿಸಿದ್ದರಿಂದ ಹಿಂಸೆಗೊಳಗಾದರು.

ಕಾವಲಿನಬುರುಜು ಪತ್ರಿಕೆಯ ಪ್ರತಿಗಳನ್ನು ಸೆರೆಶಿಬಿರಗಳೊಳಗೆ ತರುವುದರಲ್ಲಿ ಈ ರೀಟ್‌ ಸೇರಿಕೊಂಡಿದ್ದಾರೆಂದು ಗೆಸ್ಟಾಪೊ ಪೊಲೀಸರು ಕಂಡುಹಿಡಿದಾಗ ರೀಟ್‌ ಚೆರ್ನಾಬ್ಯೊ ಪಟ್ಟಣಕ್ಕೆ ಓಡಿಹೋದರು. ಅಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಇಟ್ಯಾಲ್ಯನ್‌ ಭಾಷೆಗೆ ಭಾಷಾಂತರಿಸಿ ಸಮೀಪದಲ್ಲಿ ವಾಸಿಸುತ್ತಿದ್ದ ವಿಶ್ವಾಸಿಗಳಿಗೆ ಹಂಚುವಂತೆ ಅವರನ್ನು ಕೇಳಿಕೊಳ್ಳಲಾಯಿತು. ಆದರೆ ಅವರ ಚುರುಕಾದ ಚಟುವಟಿಕೆಗಳು ಗುಪ್ತವಾಗಿಯೇ ಉಳಿಯಲಿಲ್ಲ. ಒಬ್ಬ ಗೆಸ್ಟಾಪೊ ಆಫೀಸರನೂ ಅವನ ಪಡೆಯೂ ರೀಟ್‌ ಮನೆಗೆ ನುಗ್ಗಿ ಅವರನ್ನು ದಸ್ತಗಿರಿಮಾಡಿ, “ಪಾತಕದ” ಪುರಾವೆಗಳಾದ ಎರಡು ಬೈಬಲ್‌ಗಳನ್ನು ಮತ್ತು ಕೆಲವು ಪತ್ರಗಳನ್ನು ವಶಪಡಿಸಿಕೊಂಡರು! ರೀಟ್‌ ಅವರನ್ನು ಜರ್ಮನಿಗೆ ಗಡೀಪಾರುಮಾಡಿ, ಡಾಕಾವ್‌ ಸೆರೆಶಿಬಿರದಲ್ಲಿ ಬಂಧಿಸಲಾಯಿತು ಮತ್ತು IIನೆಯ ಲೋಕಯುದ್ಧ ಮುಗಿಯುವುದಕ್ಕೆ ತುಸು ಮೊದಲು ಅವರನ್ನು ವಧಿಸಲಾಯಿತು. “ತಮ್ಮ ಧರ್ಮಕ್ಕಾಗಿ ಹಿಂಸಿಸಲ್ಪಟ್ಟರು” ಎನ್ನುತ್ತದೆ ಆ ಚೆರ್ನಾಬ್ಯೊ ಫಲಕ.

ನಾಸಿ ಹಿಂಸೆಗೆ ಬಲಿಬಿದ್ದ ನಾರ್ಸೀಸೊ ರೀಟ್‌ ಮತ್ತು ಇತರ ನೂರಾರು ಮಂದಿ ಸಾಕ್ಷಿಗಳ ನಂಬಿಕೆಯು, ಇಂದಿನ ಕ್ರೈಸ್ತರು ತಮ್ಮ ಆರಾಧನೆಗೆ ಯೋಗ್ಯನಾಗಿರುವ ವಿಶ್ವದ ಏಕಮಾತ್ರ ಮಹಾನ್‌ ವ್ಯಕ್ತಿಯಾದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ಉತ್ತೇಜಿಸುತ್ತದೆ. (ಪ್ರಕಟನೆ 4:11) “ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು” ಎಂದು ಯೇಸು ಹೇಳಿದನು. ದೇವರು ಅವರ ಕೃತ್ಯಗಳನ್ನು ಸ್ಮರಿಸಿ ಅವರ ಧೀರ ಮಾರ್ಗಕ್ರಮಕ್ಕಾಗಿ ಅವರನ್ನು ಆಶೀರ್ವದಿಸುವನು.​—⁠ಮತ್ತಾಯ 5:10; ಇಬ್ರಿಯ 6:10.