ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತೀರಿತು”

“ತೀರಿತು”

“ತೀರಿತು”

ಯೆಹೋವನ ಸಾಕ್ಷಿಗಳು 2002ರಲ್ಲಿ ಕಾಂಗೊ ಡೆಮಕ್ರ್ಯಾಟಿಕ್‌ ರಿಪಬ್ಲಿಕ್‌ ದೇಶದ ವಾಯವ್ಯ ಭಾಗದ ಅಂಬಾಂಡಾಕಾ ನಗರದಲ್ಲಿ ಒಂದು ಜಿಲ್ಲಾ ಅಧಿವೇಶನವನ್ನು ನಡೆಸಿದರು. ಆ ಅಧಿವೇಶನದಲ್ಲಿ, ಲಿಂಗಾಲ ಭಾಷೆಯಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಗ್ರೀಕ್‌ ಸ್ಕ್ರಿಪ್ಚರ್ಸ್‌ ಬಿಡುಗಡೆಯಾದಾಗ ಸಭಿಕರು ಸಂತೋಷದಿಂದ ನಿಜವಾಗಿಯೂ ಕುಣಿದಾಡಿದರು ಮತ್ತು ಕೆಲವರು ಆನಂದಬಾಷ್ಪವನ್ನೂ ಸುರಿಸಿದರು. ಆ ಬಳಿಕ ಜನರು ಹೊಸ ಬೈಬಲನ್ನು ಹತ್ತಿರದಿಂದ ನೋಡಲಿಕ್ಕಾಗಿ ವೇದಿಕೆಗೆ ಧಾವಿಸಿ, “ಬಾಸೂಕೀ ಬಾಸಾಂಬ್ವೀ” ಅಂದರೆ “ಕದನ ತೀರಿತು! ಅವು ನಾಚಿಕೆಗೀಡಾಗಿವೆ!” ಎಂದು ಕೂಗಾಡಿದರು.

ಆ ಸಭಿಕರು ಅಷ್ಟು ಸಂಭ್ರಮಪಟ್ಟದ್ದೇಕೆ ಮತ್ತು ಅವರ ಆ ಮಾತುಗಳ ಅರ್ಥವೇನಾಗಿತ್ತು? ಅಂಬಾಂಡಾಕಾ ನಗರದ ಕೆಲವು ಭಾಗಗಳಲ್ಲಿ ಯೆಹೋವನ ಸಾಕ್ಷಿಗಳಿಗೆ ಲಿಂಗಾಲ ಬೈಬಲ್‌ಗಳನ್ನು ಪಡೆಯಲಾಗುತ್ತಿರಲಿಲ್ಲ. ಅದೇಕೆ? ಏಕೆಂದರೆ ಚರ್ಚುಗಳು ಅವರಿಗೆ ಬೈಬಲ್‌ಗಳನ್ನು ಮಾರಲು ನಿರಾಕರಿಸುತ್ತಿದ್ದವು. ಸಾಕ್ಷಿಗಳಲ್ಲದವರು ಅವುಗಳನ್ನು ತಮಗಾಗಿ ಕೊಳ್ಳುವಂತೆ ಸಾಕ್ಷಿಗಳು ಕೇಳಿಕೊಳ್ಳಬೇಕಾಗುತ್ತಿತ್ತು. ಸಾಕ್ಷಿಗಳು ಬೈಬಲ್‌ಗಳನ್ನು ಪಡೆದುಕೊಳ್ಳುವುದನ್ನು ಚರ್ಚುಗಳು ಈಗ ತಡೆಯಲು ಸಾಧ್ಯವಿಲ್ಲದ ಕಾರಣ ಸಾಕ್ಷಿಗಳು ಅತ್ಯಂತ ಸಂತೋಷಪಟ್ಟರು.

ಈ ಹೊಸ ಭಾಷಾಂತರವು ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಸಹಾಯಮಾಡುವುದು. ಸಮ್ಮೇಳನ ನಿವೇಶನದ ಧ್ವನಿವರ್ಧಕಗಳ ಮೂಲಕ ಕಾರ್ಯಕ್ರಮವನ್ನು ತನ್ನ ಮನೆಯಲ್ಲೇ ಕೇಳಿಸಿಕೊಳ್ಳುತ್ತಿದ್ದ ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಹೀಗೆ ಬರೆದನು: “ಈ ಬೈಬಲಿನ ಬಿಡುಗಡೆಯ ಸಂಬಂಧದಲ್ಲಿ ನಾನು ಬಹಳ ಸಂತೋಷಿಸುತ್ತೇನೆ. ಇದು ಅನೇಕ ವಿಷಯಗಳ ಕುರಿತು ನಮಗೆ ಹೆಚ್ಚಿನ ಜ್ಞಾನವನ್ನು ಕೊಡುವುದು. ನಾನು ಯೆಹೋವನ ಸಾಕ್ಷಿಯಲ್ಲವಾದರೂ ನೀವು ಈಗ ತಾನೇ ಪ್ರಕಟಿಸಿರುವ ಈ ಬೈಬಲಿಗಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ.”

ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ಈಗ ಸಂಪೂರ್ಣ ಬೈಬಲ್‌ ಆಗಿ 33 ಭಾಷೆಗಳಲ್ಲಿ ಮತ್ತು ಕ್ರಿಶ್ಚನ್‌ ಗ್ರೀಕ್‌ ಸ್ಕ್ರಿಪ್ಚರ್ಸ್‌ ಲಿಂಗಾಲ ಸೇರಿಸಿ ಒಟ್ಟು 19 ಭಾಷೆಗಳಲ್ಲಿ ಲಭ್ಯವಿದೆ. ಈ ಉತ್ಕೃಷ್ಟ ಭಾಷಾಂತರದ ಪ್ರತಿಯನ್ನು ನೀವು ಹೇಗೆ ಪಡೆಯಬಲ್ಲಿರಿ ಎಂಬುದರ ಕುರಿತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ದಯವಿಟ್ಟು ಕೇಳಿರಿ.