ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಧರ್ಮೋಪದೇಶಕಾಂಡ 14:21 ಹೇಳುವುದು: “ಸತ್ತುಬಿದ್ದದ್ದನ್ನು ನೀವು ತಿನ್ನಕೂಡದು.” ಇದು, “ಆ ಹೆಣದಲ್ಲಿ ಸ್ವಲ್ಪವಾಗಿ ತಿಂದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದ ವರೆಗೂ ಅಶುದ್ಧನಾಗಿರುವನು” ಎಂದು ಯಾಜಕಕಾಂಡ 11:40ರಲ್ಲಿ ಹೇಳಿರುವ ಮಾತುಗಳಿಗೆ ವಿರುದ್ಧವಾಗಿದೆಯೊ?

ಈ ಎರಡು ವಚನಗಳು ಪರಸ್ಪರ ವಿರುದ್ಧವಾಗಿಲ್ಲ. ಮೊದಲನೆಯ ವಚನವು ಸತ್ತಿರುವ ಪ್ರಾಣಿಯನ್ನು, ಪ್ರಾಯಶಃ ಕಾಡುಮೃಗಗಳು ಕೊಂದಿರುವ ಪ್ರಾಣಿಯನ್ನು ತಿನ್ನುವುದಕ್ಕಿರುವ ನಿಷೇಧವನ್ನು ಪುನರಾವರ್ತಿಸಿ ಹೇಳುತ್ತದೆ. (ವಿಮೋಚನಕಾಂಡ 22:31; ಯಾಜಕಕಾಂಡ 22:8) ಆದರೆ ಎರಡನೆಯ ವಚನವು, ಇಸ್ರಾಯೇಲ್ಯನೊಬ್ಬನು ಒಂದುವೇಳೆ ಅಕಸ್ಮಾತ್ತಾಗಿ ಆ ನಿಷೇಧವನ್ನು ಉಲ್ಲಂಘಿಸಿದರೆ ಏನು ಮಾಡಬಹುದಿತ್ತು ಎಂಬುದನ್ನು ವಿವರಿಸುತ್ತದೆ.

ಧರ್ಮಶಾಸ್ತ್ರವು ಒಂದು ಸಂಗತಿಯನ್ನು ನಿಷೇಧಿಸಿದೆ ಎಂಬ ನಿಜತ್ವ, ಆ ನಿಷೇಧವು ಒಂದಲ್ಲ ಒಂದು ಸಮಯದಲ್ಲಿ ನಿರ್ಲಕ್ಷಿಸಲ್ಪಡುವುದಿಲ್ಲ ಎಂಬ ಅರ್ಥವನ್ನು ಕೊಡುವುದಿಲ್ಲ. ದೃಷ್ಟಾಂತಕ್ಕೆ, ಕಳ್ಳತನ, ಕೊಲೆ, ಸುಳ್ಳುಸಾಕ್ಷಿ ಹೇಳುವುದು, ಈ ಮೊದಲಾದ ವಿಷಯಗಳ ವಿರುದ್ಧ ನಿಯಮಗಳಿದ್ದವು. ಅದೇ ಸಮಯದಲ್ಲಿ, ಆ ದೈವದತ್ತ ನಿಯಮಗಳ ಉಲ್ಲಂಘನೆಗೆ ದಂಡನೆಗಳೂ ಇದ್ದವು. ಇಂತಹ ದಂಡನೆಗಳು, ಆ ನಿಯಮಗಳಿಗೆ ನಿಯಂತ್ರಕ ಶಕ್ತಿಯನ್ನು ಕೊಟ್ಟು ಅವೆಷ್ಟು ಗಂಭೀರವಾಗಿವೆ ಎಂಬುದನ್ನು ತೋರಿಸಿದವು.

ಸತ್ತು ಬಿದ್ದಿರುವ ಪ್ರಾಣಿಯ ಮಾಂಸವನ್ನು ತಿನ್ನಬಾರದು ಎಂಬ ಆಜ್ಞೆಯನ್ನು ಮುರಿಯುವ ವ್ಯಕ್ತಿಯು ಯೆಹೋವನ ದೃಷ್ಟಿಯಲ್ಲಿ ಅಶುದ್ಧನಾಗುವುದರಿಂದ, ಶುದ್ಧೀಕರಿಸಲಿಕ್ಕಾಗಿದ್ದ ಸರಿಯಾದ ಕ್ರಮವನ್ನು ಅವನು ಅನುಸರಿಸಬೇಕಾಗಿತ್ತು. ಅವನು ತನ್ನನ್ನು ಶುದ್ಧೀಕರಿಸಿಕೊಳ್ಳದಿದ್ದರೆ “ಪಾಪದ ಫಲವನ್ನು ಅನುಭವಿಸ”ಬೇಕಾಗಿತ್ತು.​—⁠ಯಾಜಕಕಾಂಡ 17:​15, 16.