ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅವರು ರಾಜಿಮಾಡಿಕೊಳ್ಳಲಿಲ್ಲ”

“ಅವರು ರಾಜಿಮಾಡಿಕೊಳ್ಳಲಿಲ್ಲ”

“ಅವರು ರಾಜಿಮಾಡಿಕೊಳ್ಳಲಿಲ್ಲ”

“ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು” ಎಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 5:11) ಇಂದು ಯೆಹೋವನ ಸಾಕ್ಷಿಗಳು ಸಂತೋಷದಿಂದಿರಲು ಕಾರಣವೇನೆಂದರೆ, ಕ್ರಿಸ್ತನ ಬೋಧನೆ ಹಾಗೂ ಮಾದರಿಗೆ ಹೊಂದಿಕೆಯಲ್ಲಿ ಅವರು ‘ಲೋಕದವರಲ್ಲದೆ’ ಉಳಿಯುತ್ತಾರೆ ಮತ್ತು ರಾಜಕೀಯದ ವಿಷಯದಲ್ಲಿ ಕಟ್ಟುನಿಟ್ಟಾಗಿ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ ಹಾಗೂ ಎಲ್ಲ ಪರಿಸ್ಥಿತಿಗಳ ಕೆಳಗೆ ದೇವರಿಗೆ ಸಮಗ್ರತೆಯನ್ನು ತೋರಿಸುತ್ತಾರೆ.​—⁠ಯೋಹಾನ 17:14; ಮತ್ತಾಯ 4:8-10.

ಎಸ್ಟೋನಿಯದಲ್ಲಿದ್ದವರನ್ನೂ ಸೇರಿಸಿ ಮಾಜಿ ಸೋವಿಯಟ್‌ ಯೂನಿಯನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳು ಕಾಪಾಡಿಕೊಂಡ ಅಚಲ ನಿಲುವಿನ ಕುರಿತು ಲೂತರನ್‌ ದೇವತಾಶಾಸ್ತ್ರಜ್ಞರೂ ಬೈಬಲ್‌ ಭಾಷಾಂತರಕಾರರೂ ಆದ ಟೊಮಾಸ್‌ ಪೌಲ್‌ ಎಂಬವರು ಕಿರಿಕ್‌ ಕೆಸೆಟ್‌ ಕೂಲ (ಹಳ್ಳಿಯ ಮಧ್ಯೆ ಚರ್ಚು) ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: “1951, ಏಪ್ರಿಲ್‌ 1ರ ಮುಂಜಾವದಲ್ಲಿ ಏನು ಸಂಭವಿಸಿತೋ ಅದರ ಕುರಿತು ತೀರ ಕೆಲವರು ಮಾತ್ರ ಕೇಳಿಸಿಕೊಂಡಿದ್ದಾರೆ. ಯೆಹೋವನ ಸಾಕ್ಷಿಗಳನ್ನು ಮತ್ತು ಅವರೊಂದಿಗೆ ಸಹವಾಸಮಾಡುತ್ತಿದ್ದ ವ್ಯಕ್ತಿಗಳನ್ನು ಇಲ್ಲಿಂದ ಹೊರಡಿಸಲು ಒಂದು ಕಾರ್ಯಾಚರಣೆಯು ಯೋಜಿಸಲ್ಪಟ್ಟಿತು​—⁠ಒಟ್ಟು 279 ಮಂದಿಯನ್ನು ಬಂಧಿಸಿ ಸೈಬೀರಿಯಕ್ಕೆ ಗಡೀಪಾರುಮಾಡಲಾಯಿತು . . . ಗಡೀಪಾರುಗೊಳಿಸುವಿಕೆ ಅಥವಾ ಸೆರೆವಾಸದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ತಮ್ಮ ನಂಬಿಕೆಯನ್ನು ತೊರೆಯುತ್ತೇವೆಂದು ತಿಳಿಯಪಡಿಸುವ ಪ್ರಮಾಣಬದ್ಧವಾದ ಒಂದು ಫಾರ್ಮಿಗೆ ಸಹಿಹಾಕುವಂಥ ಅವಕಾಶವು ಅವರಿಗೆ ಕೊಡಲ್ಪಟ್ಟಿತು. . . . ಈ ಮುಂಚೆ ಬಂಧಿಸಲ್ಪಟ್ಟವರೊಂದಿಗೆ ಇನ್ನೂ 353 ಮಂದಿ ಸೆರೆಮನೆಗೆ ಹಾಕಲ್ಪಟ್ಟರು ಮತ್ತು ಅವರಲ್ಲಿ ಕಡಿಮೆಪಕ್ಷ 171 ವ್ಯಕ್ತಿಗಳು ಅವರ ಸಭೆಗಳೊಂದಿಗೆ ಸಹವಾಸ ಮಾಡುತ್ತಿದ್ದವರಾಗಿದ್ದರಷ್ಟೆ. ಅವರು ರಾಜಿಮಾಡಿಕೊಳ್ಳಲಿಲ್ಲ​—⁠ಸೈಬೀರಿಯದಲ್ಲಿ ಸಹ ಹೀಗೆ ಮಾಡಲಿಲ್ಲ. . . . [ಎಸ್ಟೋನಿಯದ ಲೂತರನ್‌] ಚರ್ಚಿನ ಬಹುತೇಕ ಸದಸ್ಯರಿಗೆ ಯೆಹೋವನ ಸಾಕ್ಷಿಗಳಂಥ ನಂಬಿಕೆ ಇರಲಿಲ್ಲ.”

ಲೋಕದಲ್ಲೆಲ್ಲೂ ಇರುವ ಯೆಹೋವನ ಸಾಕ್ಷಿಗಳು, ಹಿಂಸೆಯ ಮಧ್ಯೆಯೂ ದೇವರಿಗೆ ನಂಬಿಗಸ್ತರಾಗಿ ಮತ್ತು ವಿಧೇಯರಾಗಿ ಉಳಿಯಲು ತಮಗೆ ಸಹಾಯಮಾಡುವಂತೆ ಆತನಲ್ಲಿ ಭರವಸೆಯಿಡುತ್ತಾರೆ. ತಮ್ಮ ನಂಬಿಗಸ್ತಿಕೆಗೆ ಬಹಳ ಪ್ರತಿಫಲ ಸಿಕ್ಕುವುದು ಎಂಬುದನ್ನು ತಿಳಿದು ಅವರು ಸಂತೋಷಿಸುತ್ತಾರೆ.​—⁠ಮತ್ತಾಯ 5:⁠12.