ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಿವಾಹಿತರಾಗಿದ್ದರೂ ಯೆಹೋವನ ಸೇವೆಯಲ್ಲಿ ಸಂತೃಪ್ತರು

ಅವಿವಾಹಿತರಾಗಿದ್ದರೂ ಯೆಹೋವನ ಸೇವೆಯಲ್ಲಿ ಸಂತೃಪ್ತರು

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

ಅವಿವಾಹಿತರಾಗಿದ್ದರೂ ಯೆಹೋವನ ಸೇವೆಯಲ್ಲಿ ಸಂತೃಪ್ತರು

“ನಾವು ಅವಿವಾಹಿತರಾಗಿದ್ದರೂ ನಮ್ಮಲ್ಲಿ ಬಹಳಷ್ಟು ಮಂದಿ ಸಂಪೂರ್ಣವಾಗಿ ಸಂತೋಷಿತರಾಗಿದ್ದೇವೆ,” ಎಂಬುದಾಗಿ ಸ್ಪೆಯಿನ್‌ನಲ್ಲಿರುವ ಕ್ರೈಸ್ತ ಸ್ತ್ರೀಯೊಬ್ಬಳು ಹೇಳಿದಳು. ಅವಳ ಸಂತೃಪ್ತಿಗೆ ಯಾವುದು ಕಾರಣವಾಗಿತ್ತು? “ನಮ್ಮ ದೇವರಾದ ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ಶಕ್ತರಾಗುವಂತೆ, ವಿವಾಹಿತ ಜೀವನಕ್ಕೆ ಸಂಬಂಧಿಸಿದ ಅನೇಕ ವ್ಯಾಕುಲತೆಗಳಿಂದ ಸ್ವತಂತ್ರರಾಗಿರುವುದನ್ನು ನಾವು ಆನಂದಿಸುತ್ತೇವೆ.”

ಇಂಥ ಭಾವನೆಗಳು, ಅವಿವಾಹಿತ ಸ್ಥಿತಿಯ ಕುರಿತು ಬೈಬಲ್‌ ಏನು ಹೇಳುತ್ತದೊ ಅದಕ್ಕೆ ಹೊಂದಿಕೆಯಲ್ಲಿವೆ. ವಿವಾಹಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಪೊಸ್ತಲ ಪೌಲನು ಚರ್ಚಿಸಿದಾಗ ಅವನು ಈ ಪ್ರೇರಿತ ಒಳನೋಟವನ್ನು ನೀಡಿದನು: “ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇನಂದರೆ​—⁠ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು.” ಪೌಲನು ಸ್ವತಃ ಅವಿವಾಹಿತನಾಗಿದ್ದನು. ಆದರೆ ಅವಿವಾಹಿತ ಸ್ಥಿತಿಯನ್ನು ಉತ್ತೇಜಿಸಲು ಅವನು ಯಾವ ಕಾರಣವನ್ನು ನೀಡಿದನು? ವಿವಾಹಿತ ವ್ಯಕ್ತಿಗಳು ವಿಭಜಿತರಾಗಿರುತ್ತಾರೆ, ಆದರೆ ಅವಿವಾಹಿತ ಪುರುಷ ಅಥವಾ ಸ್ತ್ರೀಯು “ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸು”ತ್ತಾರೆ ಎಂದು ಅವನು ತಿಳಿಸಿದನು. (1 ಕೊರಿಂಥ 7:​8, 32-34) ಒಬ್ಬ ಅವಿವಾಹಿತ ವ್ಯಕ್ತಿಯನ್ನು ಸಂತೋಷಿತನನ್ನಾಗಿಯೂ ಸಂತೃಪ್ತನನ್ನಾಗಿಯೂ ಮಾಡುವ ಮೂಲಭೂತ ವಿಷಯವು ಯೆಹೋವನ ಸೇವೆಯೇ ಆಗಿದೆ.

ಉನ್ನತವಾದ ಉದ್ದೇಶದೊಂದಿಗೆ ಅವಿವಾಹಿತ ಸ್ಥಿತಿ

ವಿವಾಹಕ್ಕೆ ಮತ್ತು ಕುಟುಂಬವನ್ನು ಬೆಳೆಸುವುದಕ್ಕೆ ಮಹತ್ವವನ್ನು ನೀಡುವ ಸಂಸ್ಕೃತಿಗಳಲ್ಲಿ ಪೌಲನ ಈ ಸಲಹೆಯು ಬಹಳ ಕಸಿವಿಸಿಯನ್ನು ಉಂಟುಮಾಡಬಹುದು. ಹಾಗಿದ್ದರೂ, ಸ್ವತಃ ಅವಿವಾಹಿತನಾಗಿದ್ದ ಆದರೆ ಸಂತೋಷಿತನೂ ಸಂತೃಪ್ತನೂ ಆಗಿದ್ದ ಯೇಸು ಕ್ರಿಸ್ತನೇ ಅವಿವಾಹಿತ ಕ್ರೈಸ್ತರಿಗಾಗಿ ಒಂದು ಮಹತ್ತರವಾದ ಉದ್ದೇಶವನ್ನು ತಿಳಿಸಿದನು. ಅವನು ಹೇಳಿದ್ದು: “ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಅಂಗೀಕರಿಸಬಲ್ಲವನು ಅಂಗೀಕರಿಸಲಿ [“ಅದಕ್ಕೆ ಆಸ್ಪದ ಮಾಡಿಕೊಡಬಲ್ಲವನು ಆಸ್ಪದ ಮಾಡಿಕೊಡಲಿ,” NW].”​—⁠ಮತ್ತಾಯ 19:12.

ಈ ಮಾತುಗಳಿಗೆ ಹೊಂದಿಕೆಯಲ್ಲಿ, ಅವಿವಾಹಿತ ಸ್ಥಿತಿಯು ಯಾವುದೇ ಅಡಚಣೆಯಿಲ್ಲದೆ ದೇವರನ್ನು ಸೇವಿಸಲು ಅವಕಾಶವನ್ನು ಕೊಡುತ್ತದೆ ಎಂಬುದನ್ನು ಹೆಚ್ಚಿನವರು ಕಂಡುಕೊಂಡಿದ್ದಾರೆ. (1 ಕೊರಿಂಥ 7:35) ಸಾವಿರಾರು ಕ್ರೈಸ್ತರು ವಿವಾಹಿತ ಸಂಗಾತಿಯಿಲ್ಲದೆಯೇ ಯೆಹೋವನನ್ನು ಸಂತೋಷದಿಂದ ಆರಾಧಿಸುತ್ತಿದ್ದಾರೆ ಮತ್ತು ಇತರರಿಗೆ ಕ್ರಿಯಾಶೀಲವಾಗಿ ಸಹಾಯಮಾಡುವುದರಲ್ಲಿ ಆನಂದಿಸುತ್ತಾರೆ. *

ಸಂತೋಷ ಎಂಬುವಂಥದ್ದು ವಿವಾಹಿತ ಜನರಿಗೆ ಮಾತ್ರ ಮೀಸಲಾಗಿಟ್ಟಿರುವ ಸಂಗತಿಯಲ್ಲ ಮತ್ತು ಎಲ್ಲ ಅವಿವಾಹಿತ ವ್ಯಕ್ತಿಗಳು ಅಸಂತೋಷಿತರಾಗಿಯೂ ಇಲ್ಲ ಎಂಬುದನ್ನು ಅನೇಕ ಅವಿವಾಹಿತ ಕ್ರೈಸ್ತರು ಗ್ರಹಿಸಿಕೊಂಡಿದ್ದಾರೆ. ಎರಡೂ ಗುಂಪಿನ ಜನರಲ್ಲಿ, ಕೆಲವರು ಕೆಲವೊಂದು ಸಂದರ್ಭಗಳಲ್ಲಿ ಸಂತೋಷವನ್ನು ಮತ್ತು ದುಃಖವನ್ನು ಸಹ ಅನುಭವಿಸುತ್ತಾರೆ. ವಾಸ್ತವದಲ್ಲಿ, ವಿವಾಹವು ತಾನೇ “ಶರೀರಸಂಬಂಧವಾಗಿ ಕಷ್ಟ”ವನ್ನು ತರುತ್ತದೆ ಎಂದು ಬೈಬಲ್‌ ತಿಳಿಸುತ್ತದೆ.​—⁠1 ಕೊರಿಂಥ 7:28.

ಸನ್ನಿವೇಶದ ಕಾರಣ ಅವಿವಾಹಿತರು

ಅನೇಕರು ಅವಿವಾಹಿತರಾಗಿರುವುದು ಆಯ್ಕೆಯಿಂದಾಗಿ ಅಲ್ಲ ಬದಲಾಗಿ ಸನ್ನಿವೇಶಗಳ ಕಾರಣದಿಂದಾಗಿ. ಅವರಿಗೂ ವೈವಾಹಿಕ ಏರ್ಪಾಡಿನಲ್ಲಿ ದೊರಕುವ ಪ್ರೀತಿ, ಸಾಂಗತ್ಯ ಮತ್ತು ವಾತ್ಸಲ್ಯವನ್ನು ಪಡೆದುಕೊಳ್ಳುವ ಇಚ್ಛೆಯಿರಬಹುದು. ಕೆಲವರಿಗೆ ಹಣಕಾಸಿನ ಸಮಸ್ಯೆ ಅಥವಾ ಇತರ ಕಾರಣಗಳು ವಿವಾಹವನ್ನು ಸದ್ಯಕ್ಕೆ ತಳ್ಳಿಹಾಕುವಂತೆ ಮಾಡಬಹುದು. ಕೆಲವು ಕ್ರೈಸ್ತರು, ಅದರಲ್ಲೂ ಹೆಚ್ಚಾಗಿ ನಮ್ಮ ಪ್ರಿಯ ಆಧ್ಯಾತ್ಮಿಕ ಸಹೋದರಿಯರು, “ಕರ್ತನಲ್ಲಿ ಮಾತ್ರ” ವಿವಾಹವಾಗಬೇಕೆಂಬ ಬೈಬಲಿನ ಸಲಹೆಗೆ ವಿಧೇಯತೆಯನ್ನು ತೋರಿಸಲು ದೃಢನಿರ್ಧಾರವನ್ನು ಮಾಡಿರುವ ಕಾರಣ ಅವಿವಾಹಿತರಾಗಿ ಉಳಿದಿದ್ದಾರೆ. (1 ಕೊರಿಂಥ 7:​39, NW) ಅವರು ನಿಷ್ಠೆಯಿಂದ, ಯೆಹೋವನ ಸಮರ್ಪಿತ, ಸ್ನಾತ ಆರಾಧಕರಲ್ಲಿ ಮಾತ್ರ ತಮಗೆ ವಿವಾಹ ಸಂಗಾತಿಯನ್ನು ಹುಡುಕುತ್ತಾರೆ.

ಕೆಲವೊಂದು ಸಂದರ್ಭಗಳಲ್ಲಿ ಇಂಥ ಅವಿವಾಹಿತರಲ್ಲಿ ಕೆಲವರಿಗೆ ಏಕಾಂತದ ಭಾವನೆಯಾಗುತ್ತದೆ. ತನಗೂ ಈ ರೀತಿಯ ಭಾವನೆಗಳಾಗುತ್ತವೆ ಎಂದು ಒಪ್ಪಿಕೊಂಡ ಅನಂತರ ಒಬ್ಬ ಅವಿವಾಹಿತ ಕ್ರೈಸ್ತ ಸಹೋದರಿಯು ಹೇಳುವುದು: “ಅವಿವಾಹಿತ ಕ್ರೈಸ್ತರಾದ ನಮಗೆ ಯೆಹೋವನ ನಿಯಮವು ತಿಳಿದಿದೆ ಮತ್ತು ಯಾವುದೇ ರೀತಿಯಲ್ಲಿ ಯೆಹೋವನನ್ನು ಅಪ್ರಸನ್ನಗೊಳಿಸಲು ನಾವು ಬಯಸುವುದಿಲ್ಲ. ನಮಗೆ ಸಂಗಾತಿಯ ಒಡನಾಟ ಬೇಕಾಗಿರಬಹುದು, ಆದರೆ ಲೋಕದಲ್ಲಿ ಎಷ್ಟೇ ಬಾರಿ ಜನರು ನಮಗೆ ‘ವಿವಾಹ ಜೊತೆಯನ್ನು’ ಏರ್ಪಡಿಸಿದರೂ ನಾವು ನಮ್ಮ ನಿರ್ಧಾರದಲ್ಲಿ ನಿಶ್ಚಲರಾಗಿಯೇ ಸ್ಥಿರರಾಗಿಯೇ ಉಳಿಯುತ್ತೇವೆ. ಅವಿಶ್ವಾಸಿ ಸ್ತ್ರೀಪುರುಷರ ಸಹವಾಸದಲ್ಲಿರಲು ಸಹ ನಾವು ಬಯಸುವುದಿಲ್ಲ.” ಅವರು ಅನುಭವಿಸಬಹುದಾದ ಯಾವುದೇ ಭಾವನಾತ್ಮಕ ಒತ್ತಡದ ಮಧ್ಯದಲ್ಲಿಯೂ ಯೆಹೋವನನ್ನು ಮೆಚ್ಚಿಸುವ ಸಲುವಾಗಿ ಬೈಬಲ್‌ ಸಲಹೆಯನ್ನು ಅನ್ವಯಿಸಿ, ಉನ್ನತ ನೈತಿಕ ಮಟ್ಟಗಳನ್ನು ಕಾಪಾಡಿಕೊಂಡಿರುವುದಕ್ಕಾಗಿ ಅಂಥ ಕ್ರೈಸ್ತರನ್ನು ಶ್ಲಾಘಿಸಬೇಕಾಗಿದೆ.

ಹೇರಳವಾದ ದೈವಿಕ ಸಹಾಯ

ಯೆಹೋವನನ್ನು ಸೇವಿಸದ ಜನರನ್ನು ವಿವಾಹವಾಗದೇ ಇರುವಂಥ ವಿಷಯಗಳಲ್ಲಿ ಯಾರು ಯೆಹೋವನಿಗೆ ನಿಷ್ಠರಾಗಿರುತ್ತಾರೊ ಅಂಥವರಿಗೆ ಆತನೂ ನಿಷ್ಠನಾಗಿರುತ್ತಾನೆ. ವೈಯಕ್ತಿಕ ಅನುಭವದಿಂದಾಗಿ, ರಾಜ ದಾವೀದನು ಹೀಗೆ ಹೇಳಶಕ್ತನಾಗಿದ್ದನು: “ನಿಷ್ಠಾವಂತನೊಂದಿಗೆ ನೀನು [ಯೆಹೋವನು] ನಿಷ್ಠಾವಂತನಾಗಿ ಕ್ರಿಯೆಗೈಯುತ್ತಿ.” (ಕೀರ್ತನೆ 18:​25, NW) ಆತನಿಗೆ ನಂಬಿಗಸ್ತಿಕೆಯಿಂದ ವಿಧೇಯರಾಗುವವರಿಗೆ ದೇವರು ವಾಗ್ದಾನಿಸುವುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:⁠5) ಯೆಹೋವನನ್ನು ಅನುಕರಿಸುತ್ತಾ, ದೇವರ ವಾಕ್ಯಕ್ಕೆ ನಂಬಿಗಸ್ತಿಕೆಯಿಂದ ಅಂಟಿಕೊಳ್ಳುವ ಎಲ್ಲ ವಯಸ್ಸಿನ ಅವಿವಾಹಿತ ಕ್ರೈಸ್ತರಿಗೆ ನಾವು ಧಾರಾಳವಾಗಿ ಶ್ಲಾಘನೆಯನ್ನು ನೀಡಬಲ್ಲೆವು. ಮಾತ್ರವಲ್ಲದೆ, ಅವರು ತಮಗೆದುರಾಗುವ ಪಂಥಾಹ್ವಾನಗಳನ್ನು ನಿಭಾಯಿಸಶಕ್ತರಾಗಲು ಯೆಹೋವನು ಬಲವನ್ನು ನೀಡುವಂತೆ ನಾವು ಪ್ರಾರ್ಥಿಸಬಲ್ಲೆವು.​—⁠ನ್ಯಾಯಸ್ಥಾಪಕರು 11:​30-40.

ಬೈಬಲ್‌ ಶೈಕ್ಷಣಿಕ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದು ತಮ್ಮ ಜೀವನಕ್ಕೆ ಅರ್ಥವನ್ನು ಕೊಡುತ್ತದೆ ಎಂಬುದನ್ನು ಅನೇಕ ಅವಿವಾಹಿತ ಕ್ರೈಸ್ತರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಪಟ್ರೀಶಳ ಕುರಿತು ಪರಿಗಣಿಸಿರಿ. ಅವಳು ತನ್ನ ಮೂವತ್ತರ ಮಧ್ಯ ವಯಸ್ಸಿನಲ್ಲಿರುವ ಅವಿವಾಹಿತಳಾಗಿದ್ದಾಳೆ ಮತ್ತು ಅವಳು ಪಯನೀಯರಳಾಗಿ ಅಥವಾ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಸಲ್ಲಿಸುತ್ತಿದ್ದಾಳೆ. ಅವಳು ಹೇಳುವುದು: “ಅವಿವಾಹಿತ ಸ್ಥಿತಿಯು ಕೆಲವು ಕಷ್ಟಗಳನ್ನು ತರುತ್ತದಾದರೂ, ಅದು ನನಗೆ ರೆಗ್ಯುಲರ್‌ ಪಯನೀಯರಳಾಗುವ ಸಂದರ್ಭವನ್ನು ಒದಗಿಸಿದೆ. ನಾನು ಅವಿವಾಹಿತಳಾಗಿರುವ ಕಾರಣ, ನನ್ನ ಕಾಲತಖ್ತೆಯು ಹೆಚ್ಚು ಹೊಂದಿಸಿಕೊಳ್ಳುವಂಥದ್ದಾಗಿರುತ್ತದೆ ಮತ್ತು ಇದು ಅಧ್ಯಯನಕ್ಕಾಗಿ ನನಗೆ ಹೆಚ್ಚಿನ ಸಮಯವನ್ನು ಅನುಮತಿಸುತ್ತದೆ. ಅಷ್ಟುಮಾತ್ರವಲ್ಲದೆ, ಮುಖ್ಯವಾಗಿ ಕಷ್ಟಕರ ಸಮಯಗಳಲ್ಲಿ ನಾನು ಯೆಹೋವನ ಮೇಲೆ ಇನ್ನೂ ಹೆಚ್ಚು ಅವಲಂಬಿಸಲು ಕಲಿತುಕೊಂಡಿದ್ದೇನೆ.”

ಇಂಥ ಭಾವನೆಗಳು ಬೈಬಲಿನ ಧೈರ್ಯತುಂಬುವ ಈ ವಾಗ್ದಾನದ ಮೇಲೆ ಆಧಾರಿತವಾಗಿವೆ: ‘ನಿನ್ನ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.’ (ಕೀರ್ತನೆ 37:⁠5) ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ಯೆಹೋವನ ಎಲ್ಲ ನಂಬಿಗಸ್ತ ಆರಾಧಕರು, “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂಬ ಪ್ರೇರಿತ ಮಾತುಗಳಿಂದ ಸಾಂತ್ವನ ಮತ್ತು ಬಲವನ್ನು ಪಡೆದುಕೊಳ್ಳಬಲ್ಲರು.​—⁠ಕೀರ್ತನೆ 121:⁠2.

[ಪಾದಟಿಪ್ಪಣಿ]

^ ಪ್ಯಾರ. 7 ಇಸವಿ 2005ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಜುಲೈ/ಆಗಸ್ಟ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.”​1 ಕೊರಿಂಥ 7:32

[ಪುಟ 8ರಲ್ಲಿರುವ ಚೌಕ]

ಅವಿವಾಹಿತ ಸ್ಥಿತಿಯನ್ನು ಪ್ರತಿಫಲದಾಯಕವನ್ನಾಗಿ ಮಾಡುವುದು

ಎಂದಿಗೂ ವಿವಾಹವಾಗದ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.”​—ಯೋಹಾನ 4:⁠34.

ಫಿಲಿಪ್ಪನ ನಾಲ್ಕುಮಂದಿ ಅವಿವಾಹಿತ ಹೆಣ್ಣುಮಕ್ಕಳು ‘ಪ್ರವಾದಿಸುವುದರಲ್ಲಿ’ ತಮ್ಮನ್ನು ಕಾರ್ಯಮಗ್ನರನ್ನಾಗಿ ಇಟ್ಟುಕೊಂಡಿದ್ದರು.​ಅ. ಕೃತ್ಯಗಳು 21:​8, 9.

ರಾಜ್ಯದ ಸಂದೇಶವನ್ನು ಸಾರುವ ಅವಿವಾಹಿತ ಕ್ರೈಸ್ತ ಸಹೋದರಿಯರು, ‘ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ದೊಡ್ಡ ಸ್ತ್ರೀಸಮೂಹದ’ ಭಾಗವಾಗಿದ್ದಾರೆ. ​ಕೀರ್ತನೆ 68:11.