ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀರ್ಘ ಪ್ರಯಾಣಕ್ಕೆ ಪ್ರತಿಫಲ ಸಿಕ್ಕಿತು

ದೀರ್ಘ ಪ್ರಯಾಣಕ್ಕೆ ಪ್ರತಿಫಲ ಸಿಕ್ಕಿತು

ದೀರ್ಘ ಪ್ರಯಾಣಕ್ಕೆ ಪ್ರತಿಫಲ ಸಿಕ್ಕಿತು

ಡೆಮಾಕ್ರ್ಯಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊದಿಂದ, ಒಡಹುಟ್ಟಿದ ಇಬ್ಬರು ಸಹೋದರಿಯರ ಕುರಿತಾದ ವರದಿಯು ಬಂದಿದೆ. ಅವರು ಲೀಸಲಾದಲ್ಲಿ ನಡೆಯಲಿದ್ದ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಯುದ್ಧಪೀಡಿತ ಕ್ಷೇತ್ರವೊಂದರಲ್ಲಿ ದೀರ್ಘ ಪ್ರಯಾಣವನ್ನು ಮಾಡಲು ನಿರ್ಧರಿಸಿದರು. ಅವರು ಅಧಿವೇಶನದಲ್ಲಿ ಆಧ್ಯಾತ್ಮಿಕ ಉಪದೇಶವನ್ನು ಪಡೆದುಕೊಳ್ಳಲು ಮತ್ತು ಕ್ರೈಸ್ತ ಸಹವಾಸದಲ್ಲಿ ಆನಂದಿಸಲು ನಿರೀಕ್ಷಿಸಿದ್ದು ಮಾತ್ರವಲ್ಲದೆ, ಕಿನ್‌ಶಾಸದಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಿಂದ ಬರುವ ಪ್ರತಿನಿಧಿಗಳನ್ನು ಸಂಧಿಸಲು ಸಹ ಎದುರುನೋಡಿದರು. ಆ ದೇಶದಲ್ಲಿದ್ದ ಆಂತರಿಕ ಯುದ್ಧದ ಕಾರಣದಿಂದಾಗಿ ಅವರಿಗೆ ಅನೇಕ ವರ್ಷಗಳಿಂದ ಬ್ರಾಂಚ್‌ ಆಫೀಸಿನ ಯಾರೊಬ್ಬರನ್ನೂ ನೋಡಲಾಗಿರಲಿಲ್ಲ, ಮತ್ತು ಅವರು ಇದಕ್ಕಾಗಿ ಈ ಸದವಕಾಶವನ್ನು ಸದುಪಯೋಗಿಸಿಕೊಳ್ಳಲು ಬಯಸಿದರು.

ತೋಡುದೋಣಿಯ ಮೂಲಕ ಪ್ರಯಾಣವನ್ನು ಆರಂಭಿಸಿದ ಈ ಇಬ್ಬರು ಸಹೋದರಿಯರು, ತಮ್ಮ ಸ್ವಂತ ಸ್ಥಳವಾದ ಬಾಸೇಕೂಸೂವಿನಿಂದ ಲೀಸಲಾಕ್ಕೆ, ಕಾಡಿನ ಮಾರ್ಗವಾಗಿ ಮತ್ತು ಎರಡು ನದಿಗಳ ಉದ್ದಕ್ಕೂ 300 ಕಿಲೊಮೀಟರುಗಳಷ್ಟು ದೂರದ ಯಾತ್ರೆಯನ್ನು ಕೈಗೊಂಡರು. ಅವರ ಪ್ರಯಾಣಕ್ಕೆ ಮೂರು ವಾರಗಳು ಹಿಡಿದವು. ಅವರಲ್ಲಿ ಒಬ್ಬಳು 3 ವರ್ಷಗಳಿಂದ ಮತ್ತು ಇನ್ನೊಬ್ಬಳು 19 ವರ್ಷಗಳಿಂದ ಪೂರ್ಣ ಸಮಯದ ಶುಶ್ರೂಷೆಯಲ್ಲಿರುವ ಕಾರಣ ಅವರು ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ ಈ ಪ್ರಯಾಣವನ್ನು ಸದುಪಯೋಗಿಸಿದರು. ಅವರು ಮಾರ್ಗದುದ್ದಕ್ಕೂ ಸಾರುವ ಕೆಲಸದಲ್ಲಿ 110 ತಾಸುಗಳನ್ನು ವ್ಯಯಿಸಿದರು ಮತ್ತು 200 ಟ್ರ್ಯಾಕ್ಟ್‌ಗಳನ್ನು ಹಾಗೂ 30 ಪತ್ರಿಕೆಗಳನ್ನು ನೀಡಿದರು.

ಅವರು ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ಆ ಪ್ರಾಂತದಲ್ಲಿ ಸಾಮಾನ್ಯವಾಗಿ ಕಂಡುಬರುವ ನೀರಾನೆಗಳು ಮತ್ತು ಮೊಸಳೆಗಳ ಮಧ್ಯದಿಂದ ಹಾದುಹೋಗಬೇಕಾಗಿತ್ತು. ರಾತ್ರಿ ಸಮಯದಲ್ಲಿ ಅವರು ನದಿಯಲ್ಲಿ ಪ್ರಯಾಣಿಸಲು ಸಾಧ್ಯವಿರಲಿಲ್ಲ​—⁠ಕತ್ತಲೆಯಾದ ಬಳಿಕ ನದಿಯ ಸಂಚಾರವಿರಲಿಲ್ಲ! ಅಷ್ಟುಮಾತ್ರವಲ್ಲ, ಅವರು ಅನೇಕ ಮಿಲಿಟರಿ ಚೆಕ್‌ಪಾಯಿಂಟ್‌ಗಳನ್ನೂ ಹಾದುಹೋದರು.

ಇದು ತುಂಬ ದೀರ್ಘವಾದ ಮತ್ತು ಆಯಾಸಕರವಾದ ಪ್ರಯಾಣವಾಗಿತ್ತಾದರೂ, ಈ ಪ್ರಯತ್ನವನ್ನು ಮಾಡಿದ್ದು ಆ ಸಹೋದರಿಯರಿಗೆ ಸಂತೋಷವನ್ನು ನೀಡಿತ್ತು. ಲೀಸಲಾದಲ್ಲಿ ನಡೆದ ಅಧಿವೇಶನದಲ್ಲಿ ಹಾಜರಿದ್ದುದಕ್ಕಾಗಿ ಅವರಿಬ್ಬರಿಗೂ ತುಂಬ ಗಣ್ಯತೆಯುಂಟಾಗಿತ್ತು ಮತ್ತು ಅವರು ಆನಂದಭರಿತರಾಗಿದ್ದರು. ಅವರ ಹೃದಯಗಳು ಸತ್ಯಕ್ಕಾಗಿರುವ ಹುರುಪಿನಿಂದ ಜ್ವಲಿಸುತ್ತಿದ್ದವು, ಮತ್ತು ಅಲ್ಲಿ ಹಾಜರಿದ್ದ 7,000 ಮಂದಿ ಸಹೋದರ ಸಹೋದರಿಯರ ಸಹವಾಸದಿಂದ ಅವರು ಉತ್ತೇಜನಗೊಂಡಿದ್ದರು. ಅಧಿವೇಶನದ ಬಳಿಕ, ಅವರು ತಮ್ಮ ಸ್ವಸ್ಥಳಕ್ಕೆ ಹಿಂದೆ ಪ್ರಯಾಣಿಸುವಾಗ ಅದೇ ಪಂಥಾಹ್ವಾನಗಳನ್ನು ಎದುರಿಸಿದರು; ಮನೆಗೆ ಹಿಂದಿರುಗಿದಾಗ ಅವರ ಕುಟುಂಬಗಳು ಸುರಕ್ಷಿತವಾಗಿಯೂ ಆರೋಗ್ಯಕರವಾಗಿಯೂ ಇರುವುದನ್ನು ಅವರು ಕಂಡುಕೊಂಡರು.