ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅವರು ಕೂಡಲೆ ಬಿಡುಗಡೆ ಹೊಂದಸಾಧ್ಯವಿತ್ತು”

“ಅವರು ಕೂಡಲೆ ಬಿಡುಗಡೆ ಹೊಂದಸಾಧ್ಯವಿತ್ತು”

“ಅವರು ಕೂಡಲೆ ಬಿಡುಗಡೆ ಹೊಂದಸಾಧ್ಯವಿತ್ತು”

ಮಾಜಿ ಫ್ರೆಂಚ್‌ ರಾಷ್ಟ್ರಾಧ್ಯಕ್ಷರಾಗಿದ್ದ ಚಾರ್ಲ್ಸ್‌ ಡಿ ಗಾಲ್‌ನ ಸೋದರ ಮಗಳಾದ ಸನ್‌ವ್ಯವ್‌ ಡಿ ಗಾಲ್‌, ಉತ್ತರ ಜರ್ಮನಿಯ ರಾವೆನ್ಸ್‌ಬ್ರೂಕ್‌ ನಾಸಿ ಕೂಟಶಿಬಿರದಲ್ಲಿ ಯೆಹೋವನ ಸಾಕ್ಷಿಗಳನ್ನು ವೈಯಕ್ತಿಕವಾಗಿ ತಿಳಿದುಕೊಂಡಳು. 1945ರ ಆಗಸ್ಟ್‌ ತಿಂಗಳಿನ ತನ್ನ ಪತ್ರದಲ್ಲಿ ಅವಳು ಈ ಮೇಲಿನ ಮಾತುಗಳನ್ನು ಬರೆದಳು.

ಪೋಲೆಂಡ್‌ನ ಔಷ್‌ವಿಟ್ಸ್‌ನಲ್ಲಿನ ಕೂಟಶಿಬಿರದಲ್ಲಿದ್ದವರು 1945ರ ಜನವರಿ 27ರಂದು ಬಿಡುಗಡೆಮಾಡಲ್ಪಟ್ಟರು. 1996ರಿಂದ ಜರ್ಮನಿಯಲ್ಲಿ ಈ ತಾರೀಖನ್ನು, ಹಿಟ್ಲರನ ಮೂರನೆಯ ಸಾಮ್ರಾಜ್ಯದಲ್ಲಿ ಬಲಿಯಾದವರ ಒಂದು ಜ್ಞಾಪಕಾರ್ಥ ದಿನವಾಗಿ ಆಚರಿಸಲಾಗುತ್ತಿದೆ.

ಇಸವಿ 2003ರ ಜನವರಿ 27ರಂದು ನಡೆದ ಅಧಿಕೃತ ಭಾಷಣದಲ್ಲಿ ಬ್ಯಾಡನ್‌ ವರ್ಟೆಂಬರ್ಗ್‌ನ ಸ್ಟೇಟ್‌ ಪಾರ್ಲಿಮೆಂಟಿನ ಅಧ್ಯಕ್ಷರಾದ ಪೀಟರ್‌ ಶ್ಟ್ರವ್‌ಬ್‌ ತಿಳಿಸಿದ್ದು: “ತಮ್ಮ ಧಾರ್ಮಿಕ ಇಲ್ಲವೆ ರಾಜಕೀಯ ನಂಬಿಕೆಗಳಿಗಾಗಿ ಹಿಂಸೆಯನ್ನು ಅನುಭವಿಸಿದ ಮತ್ತು ಹಿಟ್ಲರನ ಆಳ್ವಿಕೆಗೆ ತಲೆಬಾಗುವ ಬದಲು ಸಾಯಲು ಸಹ ಸಿದ್ಧರಿದ್ದ ಪ್ರತಿಯೊಬ್ಬರಿಗೆ ನಾವು ಆಳವಾದ ಗೌರವವನ್ನು ಸಲ್ಲಿಸುತ್ತೇವೆ. ಆ ಗೌರವವನ್ನು ಪದಗಳಿಂದ ವ್ಯಕ್ತಪಡಿಸುವುದು ಕಷ್ಟಕರ. ಹಿಟ್ಲರನ ಆಳ್ವಿಕೆಯ ಬೇಡಿಕೆಗೆ ತಲೆಬಾಗಲು ಸಂಪೂರ್ಣವಾಗಿ ನಿರಾಕರಿಸಿದ ಏಕಮಾತ್ರ ಧರ್ಮವು ಯೆಹೋವನ ಸಾಕ್ಷಿಗಳದ್ದಾಗಿದೆ. ಹಿಟ್ಲರನನ್ನು ವಂದಿಸಲಿಕ್ಕಾಗಿ ತಮ್ಮ ಕೈಗಳನ್ನೆತ್ತಲು ಸಹ ಅವರು ನಿರಾಕರಿಸಿದರು. ಮಿಲಿಟರಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕ ಸೇವೆಯನ್ನು ನಿರಾಕರಿಸಿದಂತೆಯೇ ‘ನಾಯಕನಿಗೆ ಮತ್ತು ರಾಷ್ಟ್ರಕ್ಕೆ’ ಜಯಘೋಷವೆತ್ತಲೂ ಅವರು ನಿರಾಕರಿಸಿದರು. ಅವರ ಮಕ್ಕಳು ಸಹ ಹಿಟ್ಲರನ ಯುವ ಪಡೆಯಲ್ಲಿ ಸೇರಲು ನಿರಾಕರಿಸಿದರು.”

ತನ್ನ ಹಿಂಬಾಲಕರ ಕುರಿತು ಯೇಸು ಕ್ರಿಸ್ತನು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ಆದುದರಿಂದ, ಯೆಹೋವನ ಸಾಕ್ಷಿಗಳ ನಿಲುವು ಸಂಪೂರ್ಣವಾಗಿ ಧಾರ್ಮಿಕ ನಂಬಿಕೆಯ ಮೇಲಾಧಾರಿತವಾಗಿದೆ. ಶ್ಟ್ರವ್‌ಬ್‌ ಮುಂದುವರಿಸಿದ್ದು: “ಯೆಹೋವನ ಸಾಕ್ಷಿಗಳು ತಾವು ಕೂಟಶಿಬಿರದಲ್ಲಿ ಬಂಧಿತರು ಎಂಬುದಕ್ಕಾಗಿನ ಗುರುತು ಚಿಹ್ನೆಯಾಗಿ ಕೆನ್ನೀಲಿ ಬಣ್ಣದ ತ್ರಿಕೋನವನ್ನು ಧರಿಸಬೇಕಿತ್ತು ಮತ್ತು ಅವರು ಮಾತ್ರ ತಮ್ಮ ಸೆರೆವಾಸವನ್ನು ಹಾಗೂ ತಮಗೆ ಮುಂದಕ್ಕೆ ಸಂಭವಿಸಬಹುದಿದ್ದ ಮರಣದಂಡನೆಯನ್ನು ತಡೆಯಶಕ್ತರಾಗಿದ್ದರು. ನಮ್ಮ ನಂಬಿಕೆಯನ್ನು ನಾವು ತ್ಯಜಿಸಿದ್ದೇವೆ ಎಂಬ ಒಂದು ಹೇಳಿಕೆಗೆ ಕೇವಲ ಸಹಿಹಾಕುವ ಮೂಲಕ ಅವರಿದನ್ನು ಮಾಡಸಾಧ್ಯವಿತ್ತು.”

ಹೆಚ್ಚಿನ ಸಾಕ್ಷಿಗಳಿಗೆ ತಮ್ಮ ನಂಬಿಕೆಯನ್ನು ತ್ಯಜಿಸುವುದು ಅಸಾಧ್ಯ ಸಂಗತಿಯಾಗಿತ್ತು. ಆದುದರಿಂದ, ಸುಮಾರು 1,200 ಸಾಕ್ಷಿಗಳು ನಾಸಿ ಸಮಯಾವಧಿಯಲ್ಲಿ ಮೃತಪಟ್ಟರು. ಇವರಲ್ಲಿ, ಮನಸ್ಸಾಕ್ಷಿಯ ಕಾರಣ ಸೇನೆಗೆ ಸೇರಲು ಒಪ್ಪದ ಇನ್ನೂರ ಎಪ್ಪತ್ತು ಮಂದಿ ಸೇರಿದ್ದಾರೆ. “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂಬುದನ್ನು ಅವರು ಕೇವಲ ಬಾಯಿಮಾತಿನಿಂದ ಹೇಳದೆ ತಮ್ಮ ಕಾರ್ಯರೂಪದಲ್ಲಿಯೂ ತೋರಿಸಿಕೊಟ್ಟರು.​—⁠ಅ. ಕೃತ್ಯಗಳು 5:29.

ಉತ್ತರ ರೈನ್‌-ವೆಸ್ಟ್‌ಪಾಲಿಯದ ಸ್ಟೇಟ್‌ ಪಾರ್ಲಿಮೆಂಟಿನ ಅಧ್ಯಕ್ಷರಾದ ಉಲ್‌ರಿಕ್‌ ಶ್ಮಿಟ್‌ ತಿಳಿಸಿದಂತೆ ಯೆಹೋವನ ಸಾಕ್ಷಿಗಳು ಅಸಾಮಾನ್ಯ ಜನರಲ್ಲ. ಈ ಅಧ್ಯಕ್ಷರ ಭಾಷಣವನ್ನು ಸೂಚಿಸುತ್ತಾ ಲಾನ್ಟ್‌ಟಾಗ್‌ ಇನ್ಟರ್ನ್‌ ಎಂಬ ಬ್ರೋಷರ್‌ ಯೆಹೋವನ ಸಾಕ್ಷಿಗಳನ್ನು “ತಮ್ಮ ಮನಸ್ಸಾಕ್ಷಿಯನ್ನು ಅನುಕರಿಸುವ, ತಮ್ಮ ಧಾರ್ಮಿಕ ನಂಬಿಕೆಗಳಿಗೆ ಸ್ಥಿರವಾಗಿ ಅಂಟಿಕೊಳ್ಳುವ, ನಾಗರಿಕ ಧೈರ್ಯವನ್ನು ತೋರಿಸುವ ಮತ್ತು ತಮ್ಮ ಕ್ರೈಸ್ತ ನಂಬಿಕೆಯ ಕಾರಣ ನಾಸಿ ತತ್ತ್ವವನ್ನು ಎದುರಿಸುವ ಸಾಮಾನ್ಯ ಜನರು” ಎಂದು ಕರೆಯಿತು. ಯೆಹೋವ ದೇವರು, ಕಷ್ಟಕರ ಸನ್ನಿವೇಶಗಳ ಕೆಳಗೆ ತನಗೆ ನಿಷ್ಠರಾಗಿ ಅಂಟಿಕೊಳ್ಳುವ ಎಲ್ಲರ ಕುರಿತು ಬಹಳ ಸಂತೋಷಪಡುತ್ತಾನೆ. ಜ್ಞಾನೋಕ್ತಿ 27:11ರಲ್ಲಿ ನಾವು ಓದುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”

[ಪುಟ 30ರಲ್ಲಿರುವ ಚಿತ್ರ ಕೃಪೆ]

Courtesy of United States Holocaust Memorial Museum