ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ಕಡೆಗಿರುವ ಆಸಕ್ತಿಯನ್ನು ಗಣ್ಯಮಾಡಲಾಯಿತು

ಬೈಬಲಿನ ಕಡೆಗಿರುವ ಆಸಕ್ತಿಯನ್ನು ಗಣ್ಯಮಾಡಲಾಯಿತು

ಬೈಬಲಿನ ಕಡೆಗಿರುವ ಆಸಕ್ತಿಯನ್ನು ಗಣ್ಯಮಾಡಲಾಯಿತು

ಇಟಲಿಯ ದಕ್ಷಿಣ ಭಾಗದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಮಾರೀಯಾನ್ನಾ 18 ವರುಷದವಳಾಗಿದ್ದಾಳೆ ಮತ್ತು ಹೈಸ್ಕೂಲಿನ ಕೊನೆಯ ವರುಷದಲ್ಲಿ ಕಲಿಯುತ್ತಿದ್ದಾಳೆ. ಇತರ ಕೆಲವು ಯುವ ಸಾಕ್ಷಿಗಳು ಹೋಗುವ ಅದೇ ಶಾಲೆಗೆ ಇವಳೂ ಹೋಗುತ್ತಾಳೆ.

ಮಾರೀಯಾನ್ನಾ ತಿಳಿಸುವುದು: “ಕೆಲವು ವರುಷಗಳಿಂದ ನಮ್ಮಲ್ಲಿ ಕೆಲವರು ಪ್ರತಿದಿನ ಬಿಡುವಿನ ಸಮಯದಲ್ಲಿ, ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಿಂದ ದಿನದ ಬೈಬಲ್‌ ವಚನವನ್ನು ಓದುತ್ತಿದ್ದೆವು. ಇದನ್ನು ನಾವು ಮಾಡಸಾಧ್ಯವಿದ್ದ ಒಂದೇ ಸ್ಥಳ ಅಧ್ಯಾಪಕರ ಕೊಠಡಿಯ ಹತ್ತಿರದಲ್ಲಿದ್ದ ಕಾರಿಡಾರ್‌ ಆಗಿತ್ತು. ಈ ಸ್ಥಳವೂ ಅಷ್ಟೊಂದು ಶಾಂತವಾಗಿರಲಿಲ್ಲ. ಪಕ್ಕದಲ್ಲಿ ದಾಟಿಹೋಗುತ್ತಿದ್ದ ಹೆಚ್ಚಿನ ಅಧ್ಯಾಪಕರು ನಿಂತು ನಾವು ಏನು ಮಾಡುತ್ತಿದ್ದೇವೆ ಎಂದು ವಿಚಾರಿಸಿ ಹೋಗುತ್ತಿದ್ದರು. ಇದು, ಅನೇಕವೇಳೆ ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಅವಕಾಶವನ್ನೂ ನಮಗೆ ಒದಗಿಸಿತು. ಪ್ರತಿದಿನ ಸರಾಸರಿ ಒಬ್ಬ ಅಧ್ಯಾಪಕರಾದರೂ ನಿಂತು ನಮ್ಮೊಂದಿಗೆ ಮಾತಾಡಿ ಮುಂದೆಸಾಗುತ್ತಿದ್ದರು. ಅನೇಕರು, ಬೈಬಲ್‌ ವಚನದ ನಮ್ಮ ಚರ್ಚೆಯನ್ನು ಆಲಿಸಲು ನಮ್ಮೊಂದಿಗೆ ಕುಳಿತುಕೊಳ್ಳುತ್ತಿದ್ದರು. ಸಾಕ್ಷಿಗಳಾದ ನಾವು ಆಧ್ಯಾತ್ಮಿಕ ವಿಷಯಗಳ ಕಡೆಗೆ ತೋರಿಸುವ ಆಸಕ್ತಿಯನ್ನು ಅವರು ಶ್ಲಾಘಿಸಿದರು. ಒಮ್ಮೆ, ನಮ್ಮ ಚರ್ಚೆಯನ್ನು ಅಧ್ಯಾಪಕರ ಕೊಠಡಿಯಲ್ಲಿ ನಡೆಸುವಂತೆ ಸಹಾಯಕ ಮುಖ್ಯೋಪಾಧ್ಯಾಯರು ನಮ್ಮನ್ನು ಆಮಂತ್ರಿಸಿದರು.

“ಪ್ರತಿದಿನ ನಮ್ಮ ಶಾಸ್ತ್ರವಚನದ ಪರಿಗಣನೆಯನ್ನು ನಾವೆಲ್ಲಿ ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿದ ನನ್ನ ಶಿಕ್ಷಕನು, ಹೆಚ್ಚು ಸದ್ದುಗದ್ದಲವಿಲ್ಲದ ಒಂದು ಕ್ಲಾಸ್‌ ರೂಮಿನಲ್ಲಿ ನಾವು ನಮ್ಮ ಚರ್ಚೆಯನ್ನು ನಡೆಸಸಾಧ್ಯವಾಗುವಂತೆ ಮುಖ್ಯೋಪಾಧ್ಯಾಯರಲ್ಲಿ ಅನುಮತಿಯನ್ನು ಕೇಳಿಕೊಂಡನು. ಮುಖ್ಯೋಪಾಧ್ಯಾಯರು ಅನುಮತಿಯನ್ನು ನೀಡಿದರು ಮತ್ತು ನನ್ನ ಶಿಕ್ಷಕನು ನಾವಿಟ್ಟ ಉತ್ತಮ ಉದಾಹರಣೆಗಾಗಿ ನಮ್ಮನ್ನು ಇಡೀ ತರಗತಿಯ ಮುಂದೆ ಶ್ಲಾಘಿಸಿದನು. ಯೆಹೋವನು ನಮಗೆ ನೀಡಿದ ಈ ಮಹಾ ಸುಯೋಗಕ್ಕಾಗಿ ನಾವೆಲ್ಲರು ಆತನಿಗೆ ಆಭಾರಿಗಳಾಗಿದ್ದೇವೆ.”