ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ದೇವರಾಗಿದ್ದನೊ ಅಥವಾ ಮನುಷ್ಯನಾಗಿದ್ದನೊ?

ಒಬ್ಬ ದೇವರಾಗಿದ್ದನೊ ಅಥವಾ ಮನುಷ್ಯನಾಗಿದ್ದನೊ?

ಒಬ್ಬ ದೇವರಾಗಿದ್ದನೊ ಅಥವಾ ಮನುಷ್ಯನಾಗಿದ್ದನೊ?

“ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.” (ಯೋಹಾನ 8:12) ಇವು ಯೇಸು ನುಡಿದ ಮಾತುಗಳಾಗಿವೆ. “ತನ್ನಲ್ಲೇ ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ” ವ್ಯಕ್ತಿ ಎಂಬುದಾಗಿ ಯೇಸುವಿನ ಕುರಿತು ಪ್ರಥಮ ಶತಮಾನದ ಒಬ್ಬ ವಿದ್ಯಾವಂತ ವ್ಯಕ್ತಿಯು ಬರೆದನು. (ಕೊಲೊಸ್ಸೆ 2:⁠2) ಅಷ್ಟುಮಾತ್ರವಲ್ಲದೆ, ಬೈಬಲ್‌ ಹೇಳುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:⁠3) ಹೀಗೆ ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ತೃಪ್ತಿಗೊಳಿಸಲು ಯೇಸುವಿನ ಕುರಿತಾದ ನಿಷ್ಕೃಷ್ಟ ಜ್ಞಾನವು ಅತ್ಯಾವಶ್ಯಕ.

ಲೋಕದ ಸುತ್ತಲಿರುವ ಅನೇಕ ಜನರು ಯೇಸು ಕ್ರಿಸ್ತನ ಕುರಿತು ಕೇಳಿಸಿಕೊಂಡಿದ್ದಾರೆ. ಮಾನವಕುಲದ ಇತಿಹಾಸದಲ್ಲಿ ಅವನು ಬೀರಿದ ಪ್ರಭಾವವು ಸ್ವಲ್ಪವೇನಲ್ಲ. ವಾಸ್ತವದಲ್ಲಿ, ಲೋಕದ ಅನೇಕ ಭಾಗಗಳಲ್ಲಿ ಉಪಯೋಗಿಸಲ್ಪಡುತ್ತಿರುವ ಕ್ಯಾಲೆಂಡರ್‌ ಸಹ ಅವನು ಹುಟ್ಟಿದನೆಂದು ನೆನಸಲಾದ ವರುಷದ ಮೇಲಾಧಾರಿತವಾಗಿದೆ. “ಅನೇಕ ಜನರು ಆ ವರುಷದ ಹಿಂದಿನ ತಾರೀಖನ್ನು ಕ್ರಿ.ಪೂ., ಅಥವಾ ಕ್ರಿಸ್ತ ಪೂರ್ವ ಎಂಬುದಾಗಿ ಸೂಚಿಸುತ್ತಾರೆ ಮತ್ತು ಆ ವರುಷದ ಅನಂತರದ ತಾರೀಖನ್ನು ಕ್ರಿ.ಶ., ಅಥವಾ ಕ್ರಿಸ್ತ ಶಕ (ನಮ್ಮ ಸ್ವಾಮಿಯ ವರ್ಷ) ಎಂಬುದಾಗಿ ಸೂಚಿಸುತ್ತಾರೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ವಿವರಿಸುತ್ತದೆ.

ಹಾಗಿದ್ದರೂ, ಯೇಸು ಯಾರಾಗಿದ್ದನು ಎಂಬ ವಿಷಯದಲ್ಲಿ ವಿಭಿನ್ನವಾದ ವಿಚಾರಗಳಿವೆ. ಕೆಲವರ ದೃಷ್ಟಿಯಲ್ಲಿ, ಅವನು ಇತಿಹಾಸದಲ್ಲಿ ಗಮನಾರ್ಹ ದಾಖಲೆಯನ್ನು ಮಾಡಿದ್ದ ಒಬ್ಬ ಎದ್ದುಕಾಣುವ ವ್ಯಕ್ತಿಯಾಗಿದ್ದನಷ್ಟೆ. ಆದರೆ ಇತರರು ಅವನನ್ನು ಸರ್ವಶಕ್ತ ದೇವರಾಗಿ ಆರಾಧಿಸುತ್ತಾರೆ. ಕೆಲವು ಹಿಂದೂ ಅನುಯಾಯಿಗಳು ಅವನನ್ನು, ಮನುಷ್ಯನಾಗಿ ಅವತಾರ ಹೊಂದಿದ ಭಗವಂತನೆಂದು ಹೇಳಲಾಗುವ ಕೃಷ್ಣನಿಗೆ ಹೋಲಿಸುತ್ತಾರೆ. ಯೇಸು ಒಬ್ಬ ಸಾಮಾನ್ಯ ಮಾನವನಾಗಿದ್ದನೊ ಅಥವಾ ಆರಾಧಿಸತಕ್ಕವನಾಗಿದ್ದನೊ? ಯೇಸು ನಿಜವಾಗಿ ಯಾರಾಗಿದ್ದನು? ಅವನು ಎಲ್ಲಿಂದ ಬಂದನು? ಅವನಿಗೆ ಯಾವ ರೀತಿಯ ವ್ಯಕ್ತಿತ್ವವಿತ್ತು? ಇಂದು ಅವನು ಎಲ್ಲಿದ್ದಾನೆ? ಯೇಸುವಿನ ಕುರಿತು ಬಹಳಷ್ಟನ್ನು ತಿಳಿಸುವ ಪುಸ್ತಕವು ಈ ಎಲ್ಲ ಪ್ರಶ್ನೆಗಳಿಗೆ ಸತ್ಯವಾದ ಉತ್ತರಗಳನ್ನು ಕೊಡುತ್ತದೆ ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ಕಂಡುಕೊಳ್ಳುವೆವು.