ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂಚನೆಗಳ ಅರ್ಥನಿರೂಪಿಸುವುದು ಒಂದು ಗಂಭೀರವಾದ ವಿಷಯ!

ಸೂಚನೆಗಳ ಅರ್ಥನಿರೂಪಿಸುವುದು ಒಂದು ಗಂಭೀರವಾದ ವಿಷಯ!

ಸೂಚನೆಗಳ ಅರ್ಥನಿರೂಪಿಸುವುದು ಒಂದು ಗಂಭೀರವಾದ ವಿಷಯ!

“ಆರಂಭದಲ್ಲಿ, ನಮ್ಮ ಮಗ ಆಂಡ್ರೇಯಾಸ್‌ನಿಗೆ ತಲೆನೋವು ಬಂದಿದೆ ಎಂದು ನಾನು ನೆನಸಿದೆ. ಆದರೆ ಅವನಿಗೆ ಹಸಿವೆಯಾಗುತ್ತಿರಲಿಲ್ಲ ಮತ್ತು ತುಂಬ ಜ್ವರ ಸಹ ಬಂತು. ಅವನಿಗೆ ತಲೆನೋವು ತೀವ್ರವಾದಾಗ ನನಗೆ ಚಿಂತೆ ಜಾಸ್ತಿಯಾಯಿತು. ನನ್ನ ಗಂಡ ಮನೆಗೆ ಹಿಂದಿರುಗಿದಾಗ, ನಾವು ಆಂಡ್ರೇಯಾಸ್‌ನನ್ನು ಡಾಕ್ಟರ್‌ ಬಳಿ ಕರೆದೊಯ್ದೆವು. ಡಾಕ್ಟರ್‌ ರೋಗಲಕ್ಷಣಗಳನ್ನು ಪರಿಶೀಲಿಸಿ ಆಂಡ್ರೇಯಾಸ್‌ನನ್ನು ತಕ್ಷಣವೇ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಕಳುಹಿಸಿದರು. ಅದು ಬರೀ ತಲೆನೋವು ಆಗಿರಲಿಲ್ಲ. ಆಂಡ್ರೇಯಾಸ್‌ನಿಗೆ ಮಿದುಳ್ಪೊರೆಯುರಿತ (ಮೆನಿಂಜೈಟಿಸ್‌) ಇತ್ತು. ಅವನಿಗೆ ಬೇಕಾದ ಚಿಕಿತ್ಸೆಯು ನೀಡಲ್ಪಟ್ಟಿತು ಮತ್ತು ಅವನು ಬೇಗನೆ ಗುಣವಾದನು.”​—⁠ಗರ್‌ಟ್ರೂಟ್‌, ಜರ್ಮನಿಯಲ್ಲಿರುವ ಒಬ್ಬ ತಾಯಿ.

ಅನೇಕ ಹೆತ್ತವರಿಗೆ ಗರ್‌ಟ್ರೂಟ್‌ರವರಿಗೆ ಆದ ಅನುಭವವಾಗಿರಬಹುದು. ತಮ್ಮ ಮಗುವಿಗೆ ಸೌಖ್ಯವಿಲ್ಲದಿರಬಹುದು ಎಂಬುದನ್ನು ಸೂಚಿಸುವ ರೋಗಲಕ್ಷಣಗಳನ್ನು ಅವರು ಗಮನಿಸುತ್ತಾರೆ. ಪ್ರತಿಯೊಂದು ಕಾಯಿಲೆಯು ಗಂಭೀರವಾಗಿರುವುದಿಲ್ಲವಾದರೂ, ಹೆತ್ತವರು ತಮ್ಮ ಮಕ್ಕಳಲ್ಲಿ ತೋರಿಕೊಳ್ಳುವ ರೋಗಲಕ್ಷಣಗಳನ್ನು ಅಲಕ್ಷ್ಯಮಾಡಿದರೆ ಅದರಿಂದ ದುಃಖಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಸೂಚನೆಗಳನ್ನು ಗಮನಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವುದು ಒಂದು ನಿರ್ದಿಷ್ಟ ಸನ್ನಿವೇಶದ ಮೇಲೆ ಮಹತ್ತರ ಪರಿಣಾಮವನ್ನು ಬೀರಬಹುದು. ಇದು ಗಂಭೀರವಾದ ವಿಷಯವಾಗಿದೆ!

ಆರೋಗ್ಯದ ವಿಷಯದಲ್ಲಿ ಮಾತ್ರವಲ್ಲದೆ ಬೇರೆ ವಿಚಾರಗಳಲ್ಲೂ ಈ ಮಾತು ಸತ್ಯವಾಗಿದೆ. ಇದಕ್ಕೊಂದು ಉತ್ತಮ ಉದಾಹರಣೆಯು 2004ರ ಡಿಸೆಂಬರ್‌ ತಿಂಗಳಿನಲ್ಲಿ ಹಿಂದು ಮಹಾಸಾಗರದ ಸುತ್ತಲಿರುವ ಪ್ರದೇಶಗಳನ್ನು ಬಡಿದ ಸುನಾಮಿ ದುರಂತದ್ದಾಗಿದೆ. ಆಸ್ಟ್ರೇಲಿಯ ಮತ್ತು ಹವಾಯೀಯಂಥ ಸ್ಥಳಗಳಲ್ಲಿರುವ ಏಜೆನ್ಸಿಗಳು ಸುಮಾತ್ರ ದ್ವೀಪದ ಉತ್ತರ ಭಾಗದಲ್ಲಾದ ದೊಡ್ಡ ಭೂಕಂಪವನ್ನು ಪತ್ತೆಹಚ್ಚಿದವು ಮತ್ತು ಇದರ ಪರಿಣಾಮವಾಗಿ ಸಂಭವಿಸಬಹುದಾದ ದುರಂತವನ್ನು ಮುನ್ನೋಡಿದವು. ಆದರೆ, ಅಪಾಯದ ಕ್ಷೇತ್ರಗಳಲ್ಲಿದ್ದ ಜನರು ಎಚ್ಚರಿಕೆಯನ್ನು ಪಡೆದುಕೊಳ್ಳುವಂತೆ ಅಥವಾ ಅದಕ್ಕೆ ಪ್ರತಿಕ್ರಿಯಿಸುವಂತೆ ಮಾಡಲು ಯಾವುದೇ ಮಾಧ್ಯಮವು ಇರಲಿಲ್ಲ. ಇದರ ಪರಿಣಾಮವಾಗಿ, 2,20,000ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡರು.

ಹೆಚ್ಚು ಪ್ರಾಮುಖ್ಯವಾಗಿರುವ ಸೂಚನೆಗಳು

ಯೇಸು ಕ್ರಿಸ್ತನು ಈ ಭೂಮಿಯಲ್ಲಿದ್ದಾಗ ತನಗೆ ಕಿವಿಗೊಡುತ್ತಿದ್ದ ಜನರಿಗೆ, ಸೂಚನೆಗಳನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಕ್ರಿಯೆಗೈಯುವುದರ ಅಗತ್ಯವನ್ನು ವಿವರಿಸಿದನು. ಅತಿ ಹೆಚ್ಚು ಪ್ರಾಮುಖ್ಯವಾಗಿರುವ ಒಂದು ವಿಷಯದ ಬಗ್ಗೆ ಅವನು ಮಾತಾಡುತ್ತಿದ್ದನು. ಬೈಬಲು ವರದಿಸುವುದು: “ಫರಿಸಾಯರೂ ಸದ್ದುಕಾಯರೂ ಬಂದು ಆತನನ್ನು ಪರೀಕ್ಷಿಸುವದಕ್ಕಾಗಿ​—⁠ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿ ಕೊಡಬೇಕೆಂದು ಕೇಳಿದರು. ಆತನು ಅವರಿಗೆ​—⁠ಸಂಜೇವೇಳೆಯಲ್ಲಿ ನೀವು​—⁠ಆಕಾಶವು ಕೆಂಪಾಗಿದೆ, ನಿರ್ಮಲದಿನ ಬರುವದು ಅನ್ನುತ್ತೀರಿ; ಬೆಳಿಗ್ಗೆ​—⁠ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಆಕಾಶದ ಸ್ಥಿತಿಯನ್ನು ನೋಡಿ ಇದು ಹೀಗೆ ಅದು ಹಾಗೆ ಅನ್ನುವದಕ್ಕೆ ಬಲ್ಲಿರಿ; ಆದರೆ ಈ ಕಾಲದ ಸೂಚನೆಗಳನ್ನು ತಿಳುಕೊಳ್ಳಲಾರಿರಿ [ಎಂದು ಉತ್ತರಕೊಟ್ಟನು].”​—⁠ಮತ್ತಾಯ 16:1-3.

ಯೇಸು “ಕಾಲದ ಸೂಚನೆಗಳ” ಬಗ್ಗೆ ಮಾತಾಡಿದಾಗ, ತನಗೆ ಕಿವಿಗೊಡುತ್ತಿದ್ದ ಪ್ರಥಮ ಶತಮಾನದ ಯೆಹೂದ್ಯರು ತಾವು ಜೀವಿಸುತ್ತಿದ್ದ ಸಮಯಗಳ ತುರ್ತಿನ ಪರಿಸ್ಥಿತಿಯನ್ನು ತಿಳಿದಿರಬೇಕಿತ್ತು ಎಂದು ಸೂಚಿಸಿದನು. ಯೆಹೂದಿ ವಿಷಯಗಳ ವ್ಯವಸ್ಥೆಯು ಅವರನ್ನೆಲ್ಲ ಬಾಧಿಸಲಿಕ್ಕಿದ್ದ ಒಂದು ಮಹಾ ವಿಪತ್ತನ್ನು ಎದುರಿಸಲಿಕ್ಕಿತ್ತು. ತನ್ನ ಮರಣದ ಕೆಲವು ದಿನಗಳಿಗೆ ಮುಂಚೆ, ಯೇಸು ತನ್ನ ಶಿಷ್ಯರೊಂದಿಗೆ ಮತ್ತೊಂದು ಸೂಚನೆಯ ಕುರಿತು ಮಾತಾಡಿದನು; ಅದು ಅವನ ಪ್ರತ್ಯಕ್ಷತೆಯ ಅಥವಾ ಸಾನ್ನಿಧ್ಯದ ಸೂಚನೆಯಾಗಿತ್ತು. ಆ ಸಂದರ್ಭದಲ್ಲಿ ಅವನು ಹೇಳಿದ ವಿಷಯವು ಇಂದು ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ಅತಿ ಪ್ರಾಮುಖ್ಯವಾಗಿದೆ.