ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ

ಅವರು ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ

ಅವರು ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ

“ಅವರು ನಿಮ್ಮಲ್ಲಿ ಆಧ್ಯಾತ್ಮಿಕತೆಯನ್ನು ಮೂಡಿಸುತ್ತಾರೆ!” ಸ್ಪೆಯಿನ್‌ನ ಮಾಡ್ರಿಡ್‌ನಲ್ಲಿರುವ ನಾವಾಲ್‌ಕಾರ್ನೇರೊದ ಹಿರಿಯ ನಾಗರಿಕರ ವೃದ್ಧಾಶ್ರಮವೊಂದರ ನಿರ್ದೇಶಕರು, ತಮ್ಮ ವೃದ್ಧಾಶ್ರಮಕ್ಕೆ ಯೆಹೋವನ ಸಾಕ್ಷಿಗಳು ನೀಡುವ ಭೇಟಿಗಳನ್ನು ಇತ್ತೀಚಿಗೆ ಈ ಮಾತುಗಳಿಂದ ವರ್ಣಿಸಿದರು. ಯಾವುದು ಅವರನ್ನು ಹೀಗೆ ಹೇಳುವಂತೆ ಮಾಡಿತು?

ರೋಸಾಸ್‌ ಡೆಲ್‌ ಕಾಮೇನೋ ಕೇಂದ್ರದ ನಿವಾಸಿಗಳಲ್ಲಿ ಅನೇಕರು ಕಿವುಡರಾಗಿದ್ದಾರೆ. ಹಾಗಿದ್ದರೂ, ಸಾಕ್ಷಿಗಳು ಸ್ಪ್ಯಾನಿಷ್‌ ಸನ್ನೆ ಭಾಷೆಯನ್ನು ಕಲಿಯಲು ಪ್ರಯತ್ನಿಸಿರುವುದರಿಂದ, ಅವರು ಈ ನಿವಾಸಿಗಳೊಂದಿಗೆ ಸಂವಾದಿಸಬಲ್ಲರು. ಯಾರಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಲಿಯಲು ವಿಶೇಷ ಸಹಾಯದ ಅಗತ್ಯವಿದೆಯೋ ಅವರಿಗೆ ಅದನ್ನು ಕಲಿಸಲು ತಮ್ಮ ಸಮಯವನ್ನು ಉಚಿತವಾಗಿ ನೀಡುತ್ತಿರುವುದಕ್ಕಾಗಿ ಆ ಕೇಂದ್ರದ ನಿರ್ದೇಶಕರು ಸಾಕ್ಷಿಗಳನ್ನು ಪ್ರಶಂಸಿಸಿದರು. ರಾಜ್ಯದ ಸುವಾರ್ತೆಯ ಬೋಧನೆಯು ಈ ನಿವಾಸಿಗಳ ಮೇಲೆ ಬೀರಿರುವ ಸಕಾರಾತ್ಮಕ ಪರಿಣಾಮವನ್ನು ಅವರು ಗಮನಿಸಿದರು. ಮತ್ತು ಸಾಕ್ಷಿಗಳ ಭೇಟಿಗಳನ್ನು ಅಲ್ಲಿನ ನಿವಾಸಿಗಳು, ವಿಶೇಷವಾಗಿ ಶ್ರವಣ ಹಾಗೂ ದೃಷ್ಟಿಯ ತೊಂದರೆಗಳಿರುವವರು ಸಹ ತುಂಬ ಅಮೂಲ್ಯವಾಗಿ ಪರಿಗಣಿಸುತ್ತಾರೆ.

ಆ ನಿವಾಸಿಗಳಲ್ಲಿ, ಕುರುಡರೂ ಕಿವುಡರೂ ಆಗಿರುವ ಯೂಲೋಹೀಯೋ ಎಂಬವರು ಈಗ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನಮಾಡುತ್ತಿದ್ದಾರೆ. ಒಂದು ದಿನ ಅಧ್ಯಯನವು ನಡೆಯುತ್ತಿದ್ದಾಗ, ಒಬ್ಬ ವೃದ್ಧ ವ್ಯಕ್ತಿಯು ಸಾಕ್ಷಿಯ ಬಳಿಗೆ ಬಂದು ಒಂದು ಕವಿತೆಯನ್ನು ನೀಡಿದನು. ಆ ವೃದ್ಧಾಶ್ರಮದ ನಿವಾಸಿಗಳು ತಮ್ಮ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಈ ಕವಿತೆಯನ್ನು ರಚಿಸಿದ್ದರು. ಅದರ ಶೀರ್ಷಿಕೆ “ಒಬ್ಬ ಸಾಕ್ಷಿಯಾಗಿರುವುದು” ಎಂದಾಗಿತ್ತು. ಭಾಗಶಃ ಅದರಲ್ಲಿ ಹೀಗಿತ್ತು: “ಸಾಕ್ಷಿಗಳು ನಡೆಸುತ್ತಾರೆ ಅರ್ಥವತ್ತಾದ ಶಿಸ್ತುಭರಿತ ಜೀವನ, ಪಡೆದುಕೊಳ್ಳುತ್ತಾರೆ ಅವರು ಯೆಹೋವನಿಂದ ಯುಕ್ತಾಯುಕ್ತ ಪರಿಜ್ಞಾನ, ಯೆಹೋವನಲ್ಲಿನ ಭರವಸೆಯಿಂದ ಭೇಟಿಮಾಡುತ್ತಾರೆ ಅವರು ಮನೆಗಳನ್ನು ಆಗಾಗ.”

ನಿರ್ದಿಷ್ಟವಾಗಿ ಯೆಹೋವನಲ್ಲಿನ ಈ ಭರವಸೆಯು, ಲೋಕದಾದ್ಯಂತ ಇರುವ ಅನೇಕ ಸಾಕ್ಷಿಗಳು ತಮ್ಮ ದೇಶದಲ್ಲಿರುವ ಕಿವುಡರ ಸನ್ನೆ ಭಾಷೆಯನ್ನು ಕಲಿಯುವಂತೆ ಅವರನ್ನು ಪ್ರಚೋದಿಸಿದೆ. ಈ ರೀತಿಯಲ್ಲಿ ಅವರು, ಇಂಥವರೊಂದಿಗೆ ಬೈಬಲಿನಲ್ಲಿ ಕಂಡುಬರುವ ನಿರೀಕ್ಷೆಯ ಉತ್ತೇಜನದಾಯಕ ಸಂದೇಶವನ್ನು ಹಂಚಿಕೊಳ್ಳುತ್ತಾರೆ.