ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಮೊದಲ ಪಾಪವನ್ನು ಅಂದರೆ ಆದಾಮನ ಅವಿಧೇಯತೆಯನ್ನು ಆನುವಂಶಿಕ ರೋಗಕ್ಕೆ ಏಕೆ ಹೋಲಿಸಸಾಧ್ಯವಿದೆ?

ಇದು ಒಂದು ರೋಗದಂತಿದೆ ಏಕೆಂದರೆ ಆದಾಮನು ಪಾಪವನ್ನು ತನ್ನ ಸಂತತಿಯವರಿಗೆ ದಾಟಿಸಿದನು. ಕೆಲವು ಮಕ್ಕಳು ತಮ್ಮ ಹೆತ್ತವರಿಂದ ಒಂದು ರೋಗವನ್ನು ಆನುವಂಶಿಕವಾಗಿ ಪಡೆಯುವಂತೆಯೇ ನಾವು ಪಾಪದ ನ್ಯೂನತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ.​—⁠8/15, ಪುಟ 5.

ಇಂದು ಅಧಿಕಗೊಂಡಿರುವ ಹಿಂಸಾಚಾರಕ್ಕೆ ಮೂಲಭೂತ ಕಾರಣಗಳು ಯಾವುವು?

ಜನರ ಹೃದಯಗಳಲ್ಲಿ ಹಿಂಸಾತ್ಮಕ ಮನೋಭಾವವನ್ನು ನಾಟಿಸುವ ಮೂಲಕ ಸೈತಾನನು ಅವರನ್ನು ಯೆಹೋವನಿಂದ ವಿಮುಖಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ಅವನಿದನ್ನು ಚಲನಚಿತ್ರಗಳು, ಸಂಗೀತ ಮತ್ತು ಕಂಪ್ಯೂಟರ್‌ ಆಟಗಳನ್ನು ಉಪಯೋಗಿಸುವ ಮೂಲಕ ಮಾಡುತ್ತಾನೆ. ಇಂತಹ ಕಂಪ್ಯೂಟರ್‌ ಆಟಗಳು, ಆಟಗಾರರು ಭೀಕರತೆಗಳನ್ನು ಮತ್ತು ಕಗ್ಗೊಲೆಯನ್ನು ಮಾಡುತ್ತಿದ್ದಾರೋ ಎಂಬಂಥ ಭಾವನೆಯನ್ನು ಹುಟ್ಟಿಸುತ್ತವೆ. ಸಮೂಹ ಮಾಧ್ಯಮದ ಹಿಂಸಾಚಾರವು ಇಂಥ ಅನೇಕ ಹಿಂಸಾತ್ಮಕ ಕೃತ್ಯಗಳಿಗೆ ಇಂಬುಕೊಟ್ಟಿದೆ.​—⁠9/1, ಪುಟ 29.

ಪೊಂತ್ಯ ಪಿಲಾತನು ಯಾರಾಗಿದ್ದನು?

ಅವನು ಕಡಿಮೆ ಶ್ರೀಮಂತ ವರ್ಗದವನಾಗಿದ್ದ ಒಬ್ಬ ರೋಮನ್‌ ವ್ಯಕ್ತಿಯಾಗಿದ್ದು, ಸೈನ್ಯದಲ್ಲಿ ಸೇವೆಸಲ್ಲಿಸುತ್ತಿದ್ದಿರಬಹುದು. ರೋಮನ್‌ ಚಕ್ರವರ್ತಿಯಾದ ತಿಬೇರಿಯನು ಸಾ.ಶ. 26ರಲ್ಲಿ ಪಿಲಾತನನ್ನು ಯೂದಾಯ ಪ್ರಾಂತದ ದೇಶಾಧಿಪತಿಯನ್ನಾಗಿ ಅಥವಾ ರಾಜ್ಯಪಾಲನನ್ನಾಗಿ ನೇಮಿಸಿದನು. ಯೇಸುವಿನ ವಿಚಾರಣೆಯ ಸಮಯದಲ್ಲಿ, ಯೆಹೂದಿ ಮುಖಂಡರಿಂದ ಹೊರಿಸಲ್ಪಟ್ಟ ಆರೋಪಗಳನ್ನು ಪಿಲಾತನು ಕೇಳಿಸಿಕೊಂಡನು. ಜನರ ಗುಂಪನ್ನು ಮೆಚ್ಚಿಸಲಿಕ್ಕಾಗಿ ಅವನು ಯೇಸುವಿನ ವಧೆಗೆ ಸಮ್ಮತಿಯನ್ನು ನೀಡಿದನು.​—⁠9/15, ಪುಟಗಳು 10-12.

ಮತ್ತಾಯ 24:3ರಲ್ಲಿ ತಿಳಿಸಲ್ಪಟ್ಟಿರುವ “ಸೂಚನೆ” ಏನಾಗಿದೆ?

ಈ ಸೂಚನೆಯಲ್ಲಿ ವಿವಿಧ ವೈಶಿಷ್ಟ್ಯಗಳುಂಟು; ಇವೆಲ್ಲವನ್ನೂ ಒಟ್ಟು ಸೇರಿಸುವಾಗ ಒಂದು ಸಂಯೋಜಿತ ಗುರುತು ಚಿಹ್ನೆ ಅಥವಾ ಸಂಕೇತ ಸಿಗುತ್ತದೆ. ಈ ಸೂಚನೆಯಲ್ಲಿ ಯುದ್ಧ, ಬರಗಾಲ, ರೋಗ ಹಾಗೂ ಭೂಕಂಪಗಳು ಸೇರಿವೆ, ಮತ್ತು ಇದು ಯೇಸುವಿನ ಹಿಂಬಾಲಕರು ಅವನ ‘ಪ್ರತ್ಯಕ್ಷತೆ [ಸಾನ್ನಿಧ್ಯ]’ಯನ್ನು ಹಾಗೂ “ಯುಗದ [ವಿಷಯಗಳ ವ್ಯವಸ್ಥೆಯ] ಸಮಾಪ್ತಿ”ಯನ್ನು ಗ್ರಹಿಸಲು ಶಕ್ತರನ್ನಾಗಿ ಮಾಡುತ್ತದೆ.​—⁠10/1, ಪುಟಗಳು 4-5.

ಚದರಿಹೋಗಿದ್ದ ಯೆಹೂದಿ ಸಮುದಾಯಗಳು ಏನಾಗಿದ್ದವು, ಮತ್ತು ಅದರಲ್ಲಿ ಯಾವ ಸ್ಥಳಗಳು ಒಳಗೂಡಿದ್ದವು?

ಚದರಿಹೋಗಿದ್ದ ಯೆಹೂದಿ ಸಮುದಾಯಗಳು ಪ್ಯಾಲಿಸ್ಟೈನ್‌ನ ಹೊರಗೆ ವಾಸಿಸುತ್ತಿದ್ದ ಯೆಹೂದ್ಯರಿಗೆ ಸೂಚಿತವಾಗಿವೆ. ಪ್ರಥಮ ಶತಮಾನದಲ್ಲಿ, ಯೆಹೂದ್ಯರ ಮುಖ್ಯ ಕೇಂದ್ರಗಳು ಸಿರಿಯ, ಏಷ್ಯಾ ಮೈನರ್‌, ಬಾಬೆಲ್‌ ಮತ್ತು ಐಗುಪ್ತದಲ್ಲಿದ್ದವು, ಹಾಗೂ ರೋಮನ್‌ ಸಾಮ್ರಾಜ್ಯದ ಐರೋಪ್ಯ ಭಾಗದಲ್ಲಿ ಚಿಕ್ಕ ಸಮುದಾಯಗಳಿದ್ದವು.​—⁠10/15, ಪುಟ 12.

ಕ್ರೈಸ್ತನೊಬ್ಬನು ಶಸ್ತ್ರಸಜ್ಜಿತನಾಗಿರಬೇಕಾದ ಒಂದು ಉದ್ಯೋಗವನ್ನು ಅಂಗೀಕರಿಸಿದರೆ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಸಾಧ್ಯವಿದೆಯೊ?

ಒಂದು ಬಂದೂಕನ್ನು ಅಥವಾ ಇನ್ನಾವುದೇ ಆಯುಧವನ್ನು ಹಿಡಿಯುವ ಐಹಿಕ ಕೆಲಸದಲ್ಲಿ ಒಳಗೂಡಬೇಕೊ ಇಲ್ಲವೊ ಎಂಬುದು ವೈಯಕ್ತಿಕ ನಿರ್ಣಯವಾಗಿದೆ. ಆದರೆ ಶಸ್ತ್ರಸಜ್ಜಿತನಾಗಿರಬೇಕಾದ ಒಂದು ಉದ್ಯೋಗವು, ಒಬ್ಬನು ಆಯುಧವನ್ನು ಉಪಯೋಗಿಸುವುದಾದರೆ ಅವನ ಮೇಲೆ ರಕ್ತಾಪರಾಧವನ್ನು ತರುವ ಸಾಧ್ಯತೆಯಿದೆ ಮತ್ತು ಆಕ್ರಮಣ ಅಥವಾ ಪ್ರತೀಕಾರದಿಂದಾಗಿ ಗಾಯಗೊಳ್ಳುವ ಇಲ್ಲವೆ ಮರಣಕ್ಕೆ ತುತ್ತಾಗುವ ಅಪಾಯಕ್ಕೂ ಅವನನ್ನು ಗುರಿಪಡಿಸಬಲ್ಲದು. ಇಂಥ ಒಂದು ಆಯುಧವನ್ನು ಹೊರುವ ಒಬ್ಬ ಕ್ರೈಸ್ತನು ಸಭೆಯಲ್ಲಿ ಯಾವುದೇ ವಿಶೇಷ ಸುಯೋಗಗಳಿಗೆ ಅರ್ಹನಾಗುವುದಿಲ್ಲ. (1 ತಿಮೊಥೆಯ 3:​3, 10)​—⁠11/1, ಪುಟ 31.

“ಅರ್ಮಗೆದೋನ್‌” ಎಂಬ ಪದವು “ಮೆಗಿದ್ದೋ ಬೆಟ್ಟ” ಎಂಬ ಅಭಿವ್ಯಕ್ತಿಯಿಂದ ಬಂದದ್ದಾಗಿರುವುದರಿಂದ, ಅರ್ಮಗೆದೋನ್‌ ಯುದ್ಧವು ಮಧ್ಯ ಪೂರ್ವ ದೇಶದಲ್ಲಿನ ಒಂದು ಬೆಟ್ಟದಲ್ಲಿ ನಡೆಯಲಿದೆಯೋ?

ಇಲ್ಲ. ಮೆಗಿದ್ದೋ ಬೆಟ್ಟ ಎಂಬ ಒಂದು ಸ್ಥಳವು ಅಸ್ತಿತ್ವದಲ್ಲಿಲ್ಲ, ಆದರೆ ಇಸ್ರಾಯೇಲ್‌ನಲ್ಲಿ ಬೈಲುಸೀಮೆಗಿಂತ ಸ್ವಲ್ಪ ಎತ್ತರಕ್ಕೆ ಇರುವ ಒಂದು ದಿಬ್ಬವು ಮಾತ್ರ ಇದೆ. ಆ ಕ್ಷೇತ್ರವು ಎಲ್ಲ “ಭೂರಾಜರೂ ಅವರ ಸೈನ್ಯಗಳವರೂ” ಒಟ್ಟುಸೇರಲು ಸಾಧ್ಯವಿರುವಷ್ಟು ವಿಸ್ತಾರವಾಗಿಲ್ಲ. ದೇವರ ಮಹಾ ಯುದ್ಧವು ಭೂವ್ಯಾಪಕವಾಗಿ ನಡೆಸಲ್ಪಡುವುದು ಮತ್ತು ಅದು ಎಲ್ಲ ಯುದ್ಧಗಳನ್ನು ಕೊನೆಗೊಳಿಸುವುದು. (ಪ್ರಕಟನೆ 16:14, 16; 19:19; ಕೀರ್ತನೆ 46:8, 9)​—⁠12/1, ಪುಟಗಳು 4-7.