ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಬ್ಬದ ಕಾಲ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದೊ?

ಹಬ್ಬದ ಕಾಲ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದೊ?

ಹಬ್ಬದ ಕಾಲ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದೊ?

“ಜನವರಿ 1ರಂದು ಎಲ್ಲ ಚರ್ಚುಗಳಲ್ಲಿ ಹೊಸ ವರ್ಷದ ಆರಾಧನಾ ಕೂಟವನ್ನು ನಡೆಸಬೇಕೆಂದು ಪೀಟರ್‌ [ದ ಗ್ರೇಟ್‌] ಆಜ್ಞೆಯನ್ನು ಹೊರಡಿಸಿದನು. ಅಷ್ಟುಮಾತ್ರವಲ್ಲ, ಮನೆಗಳ ಒಳಗಿನ ಬಾಗಿಲ ನಿಲುಪಟ್ಟಿಗಳನ್ನು ವಿಶೇಷವಾದ ನಿತ್ಯಹಸುರು ಮರದ ಎಲೆಗಳಿಂದ ಅಲಂಕರಿಸುವಂತೆ ಅವನು ಸೂಚನೆಯನ್ನು ಕೊಟ್ಟನು, ಮತ್ತು ಮಾಸ್ಕೋದ ಎಲ್ಲ ಪ್ರಜೆಗಳು ಹೊಸ ವರ್ಷದ ದಿನ ಒಬ್ಬರಿಗೊಬ್ಬರು ‘ಜೋರಾಗಿ ಶುಭಾಶಯವನ್ನು ಕೋರುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸ’ಬೇಕು ಎಂದು ಅಪ್ಪಣೆಯಿತ್ತನು.” ​—⁠ಪೀಟರ್‌ ದ ಗ್ರೇಟ್‌​—⁠ಹಿಸ್‌ ಲೈಫ್‌ ಆ್ಯಂಡ್‌ ವರ್ಲ್ಡ್‌.

ಹಬ್ಬದ ಕಾಲವೆಂದು ಯಾವುದನ್ನು ಅನೇಕರು ಕರೆಯುತ್ತಾರೋ ಆ ಸಮಯದಲ್ಲಿ ನೀವು ಯಾವುದಕ್ಕಾಗಿ ಮುನ್ನೋಡುತ್ತೀರಿ? ಈ ಹಬ್ಬದ ಕಾಲವು ಕ್ರಿಸ್ತನ ಜನನದ ಸಾಂಪ್ರದಾಯಿಕ ದಿನವಾಗಿರುವ ಕ್ರಿಸ್ಮಸ್‌ನ ಮೇಲೆ ಕೇಂದ್ರೀಕೃತವಾಗಿದೆ, ಆದರೆ ಇದರಲ್ಲಿ ಹೊಸ ವರ್ಷದ ಆಚರಣೆಯೂ ಒಳಗೂಡಿದೆ ಎಂದು ಭೂಮಿಯಾದ್ಯಂತ ಇರುವ ಜನರು ಹೇಳುತ್ತಾರೆ. ಆದುದರಿಂದ ಈ ಹಬ್ಬದ ಕಾಲಾವಧಿಯು ಸ್ವಲ್ಪ ದೀರ್ಘವಾದದ್ದಾಗಿದೆ. ಈ ಸಮಯದಲ್ಲಿ ಹೆತ್ತವರು ಮತ್ತು ಮಕ್ಕಳು ಸಹ ರಜೆಯಲ್ಲಿರಬಹುದು, ಈ ಕಾರಣದಿಂದ ಕುಟುಂಬಗಳು ಜೊತೆಗೂಡಿ ಸಮಯವನ್ನು ಕಳೆಯಲು ಇದು ಅನುಕೂಲಕರ ಸಂದರ್ಭವಾಗಿ ಕಂಡುಬರಬಹುದು. ಇತರರಾದರೋ ಈ ಕಾಲವನ್ನು “ಕ್ರಿಸ್ಮಸ್‌ ಕಾಲ” ಎಂದು ಕರೆಯುತ್ತಾರೆ, ಏಕೆಂದರೆ ವರ್ಷದ ಈ ಸಮಯದಲ್ಲಿ ಅವರು ಕ್ರಿಸ್ತನನ್ನು ಗೌರವಿಸಲು ಬಯಸುತ್ತಾರೆ. ಇದು ಈ ಕಾಲದ ಅತಿ ಪ್ರಾಮುಖ್ಯ ಅಂಶವಾಗಿದೆ ಎಂದು ನಿಮಗೂ ಅನಿಸಬಹುದು.

ಕ್ರಿಸ್ತನನ್ನು ಗೌರವಿಸುವ ಕಾರಣದಿಂದಾಗಲಿ ಅಥವಾ ಒಬ್ಬನು ತನ್ನ ಕುಟುಂಬದೊಂದಿಗೆ ಸಂತೋಷದಿಂದ ಕಾಲಕಳೆಯುವ ಕಾರಣದಿಂದಾಗಲಿ, ಇಲ್ಲವೆ ಎರಡೂ ಕಾರಣಗಳಿಂದಾಗಿರಲಿ, ಲೋಕವ್ಯಾಪಕವಾಗಿ ಕೋಟಿಗಟ್ಟಲೆ ಗಂಡಂದಿರು, ಹೆಂಡತಿಯರು ಮತ್ತು ಮಕ್ಕಳು ಈ ಕಾಲವನ್ನು ತುಂಬ ಕಾತರದಿಂದ ಎದುರುನೋಡುತ್ತಾರೆ. ಈ ವರ್ಷದ ಕುರಿತಾಗಿ ಏನು? ಇದು ಕುಟುಂಬಕ್ಕೆ ಆ ರೀತಿಯ ವಿಶೇಷ ಸಮಯವಾಗಿ ಪರಿಣಮಿಸುವುದೊ, ಮತ್ತು ಇದು ದೇವರಿಗೆ ವಿಶೇಷವಾದದ್ದಾಗಿದೆಯೊ? ಒಂದು ಕೌಟುಂಬಿಕ ಸಮಾರಂಭವು ಏರ್ಪಡಿಸಲ್ಪಟ್ಟಿರುವಲ್ಲಿ, ಇದು ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದೊ ಅಥವಾ ನೀವು ಆಶಾಭಂಗಗೊಳ್ಳುವಿರೊ?

ಧಾರ್ಮಿಕ ಅಂಶಕ್ಕಾಗಿ ಎದುರುನೋಡುವಂಥ ಅನೇಕರು, ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಹಬ್ಬವು ಅನೇಕವೇಳೆ ಕ್ರಿಸ್ತನ ಮನೋಧರ್ಮವೇ ಇಲ್ಲದೆ ಆಚರಿಸಲ್ಪಡುತ್ತಿದೆ ಎಂಬುದನ್ನು ಗಮನಿಸಿದ್ದಾರೆ. ಇದಕ್ಕೆ ಬದಲಾಗಿ, ಈ ಹಬ್ಬದ ಕಾಲವು ಕೇವಲ ಉಡುಗೊರೆಗಳನ್ನು ಪಡೆದುಕೊಳ್ಳುವ ಒಂದು ಸಮಯವಾಗಿ ಪರಿಣಮಿಸುತ್ತದೆ. ಅಥವಾ ಇದು, ಕ್ರಿಸ್ತನಿಗೆ ಅಗೌರವ ತರುವಂಥ ನಡತೆಯನ್ನು ಒಳಗೂಡಿರುವ ಒಂದು ಪಾರ್ಟಿಯನ್ನು ನಡೆಸಲು ಒಂದು ನೆಪವಾಗುತ್ತದೆ ಇಲ್ಲವೆ ಇಡೀ ಕುಟುಂಬವು ಒಟ್ಟುಗೂಡಲು ಇದು ಪ್ರಮುಖ ಕಾರಣವಾಗುತ್ತದೆ. ಅನೇಕವೇಳೆ ಕುಟುಂಬದ ಒಬ್ಬರು ಅಥವಾ ಇಬ್ಬರು ಸದಸ್ಯರು ಅತಿಯಾದ ಆಹಾರ ಸೇವನೆ ಅಥವಾ ಮದ್ಯಪಾನ ಮಾಡಿ, ಗೃಹ ಹಿಂಸಾಚಾರವನ್ನು ಕೆರಳಿಸುವಂಥ ವಾಗ್ವಾದಗಳ ಕಿಡಿಯನ್ನು ಹೊತ್ತಿಸಿ ಇಂಥ ಒಂದು ಸಮಾರಂಭದ ವಾತಾವರಣವನ್ನೇ ಹಾಳುಮಾಡುತ್ತಾರೆ. ನೀವು ಹೀಗೆ ಸಂಭವಿಸಿರುವುದನ್ನು ಗಮನಿಸಿರಬಹುದು ಅಥವಾ ನಿಮಗೂ ಇದರ ಅನುಭವವಾಗಿರಬಹುದು.

ಹಾಗಿರುವಲ್ಲಿ, ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ರಷ್ಯನ್‌ ಚಕ್ರವರ್ತಿಯಾಗಿದ್ದ ಪೀಟರ್‌ ದ ಗ್ರೇಟ್‌ನ ಕಾಲದಿಂದ ವಿಷಯಗಳು ಸ್ವಲ್ಪವೂ ಬದಲಾಗಿಲ್ಲ ಎಂದು ನಿಮಗನಿಸಬಹುದು. ಇಂದು ಅಸ್ತಿತ್ವದಲ್ಲಿರುವ ಪ್ರವೃತ್ತಿಯಿಂದ ಕ್ಷೋಭೆಗೊಂಡಿರುವ ಅನೇಕರು, ಹಬ್ಬದ ಕಾಲವು ಗಂಭೀರವಾದ ರೀತಿಯಲ್ಲಿ ಧಾರ್ಮಿಕ ವಿಷಯಗಳ ಕುರಿತು ಧ್ಯಾನಿಸುವ ಮತ್ತು ಹಿತಕರವಾದ ಕೌಟುಂಬಿಕ ಸಹವಾಸದ ಸಮಯವಾಗಿರುತ್ತಿದ್ದರೆ ಒಳ್ಳೇದಿತ್ತೆಂದು ಹಾರೈಸುತ್ತಾರೆ. ಹಬ್ಬದ ಸಮಯದಲ್ಲಿ ಯೇಸುವನ್ನು ಮನಸ್ಸಿನಲ್ಲಿಡುವಂತೆ ಉತ್ತೇಜಿಸುವ ಧ್ಯೇಯಮಂತ್ರಗಳನ್ನು ಬಳಸುವ ಮೂಲಕ ಕೆಲವರು ಒಂದು ಬದಲಾವಣೆಗಾಗಿ ಕ್ರಿಯಾಶೀಲ ರೀತಿಯಲ್ಲಿ ಕಾರ್ಯನಡಿಸುತ್ತಾರೆ ಕೂಡ. ಆದರೆ ಒಂದು ಬದಲಾವಣೆಯನ್ನು ತರಲು ಸಾಧ್ಯವಿದೆಯೊ? ಮತ್ತು ಇದು ನಿಜವಾಗಿಯೂ ಕ್ರಿಸ್ತನಿಗೆ ಗೌರವವನ್ನು ತರಸಾಧ್ಯವಿದೆಯೊ? ಹಬ್ಬದ ಕಾಲದ ಬಗ್ಗೆ ಭಿನ್ನವಾದ ನೋಟವನ್ನು ಪಡೆಯಲು ಕಾರಣಗಳಿವೆಯೊ?

ತೃಪ್ತಿಕರವಾದ ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ, ವರ್ಷದ ಈ ಸಮಯವನ್ನು ಗಣ್ಯಮಾಡಲು ವಿಶೇಷ ಕಾರಣವನ್ನು ಹೊಂದಿರುವಂಥ ಒಂದು ರಾಷ್ಟ್ರದ ಜನರ ದೃಷ್ಟಿಕೋನದಿಂದ ನಾವೀಗ ಸನ್ನಿವೇಶವನ್ನು ಪರಿಗಣಿಸೋಣ.