ಹೊಸ ವರ್ಷದ ಮರವು ರಷ್ಯನ್ ಸಂಪ್ರದಾಯದ ಸಂಕೇತವೊ? ಕ್ರೈಸ್ತ ಸಂಪ್ರದಾಯದ ಸಂಕೇತವೊ?
ಹೊಸ ವರ್ಷದ ಮರವು ರಷ್ಯನ್ ಸಂಪ್ರದಾಯದ ಸಂಕೇತವೊ? ಕ್ರೈಸ್ತ ಸಂಪ್ರದಾಯದ ಸಂಕೇತವೊ?
“ಇಸವಿ 1830ಗಳ ಆರಂಭದಲ್ಲಿ ಸಹ, ನಿತ್ಯಹಸುರು ಮರವನ್ನು ‘ಮನಮೋಹಕ ಜರ್ಮನ್ ಕಲ್ಪನೆ’ ಎಂದೇ ಸಂಬೋಧಿಸಲಾಗುತ್ತಿತ್ತು. ಆ ದಶಕದ ಅಂತ್ಯದಲ್ಲಿ ಇದು ಸೆಂಟ್ ಪೀಟರ್ಸ್‌ಬರ್ಗ್‌ನ ಗಣ್ಯ ವ್ಯಕ್ತಿಗಳ ಮನೆಗಳಲ್ಲಿ ‘ಒಂದು ಪದ್ಧತಿಯಾಗಿ ಪರಿಣಮಿಸಿತ್ತು.’ . . . 19ನೆಯ ಶತಮಾನದಲ್ಲಿ ಪಾದ್ರಿಗಳು ಮತ್ತು ಬೇಸಾಯಗಾರರು ಮಾತ್ರ ತಮ್ಮ ಮನೆಗಳಲ್ಲಿ ನಿತ್ಯಹಸುರು ಮರವನ್ನು ಇಡುವ ಪದ್ಧತಿಯನ್ನು ರೂಢಿಸಿಕೊಳ್ಳಲಿಲ್ಲ. . . .
“ಹತ್ತೊಂಬತ್ತನೇ ಶತಮಾನಕ್ಕೆ ಮುಂಚೆ ಈ ಮರವು . . . ವಿಶೇಷವಾಗಿ ಮಾನ್ಯಮಾಡಲ್ಪಡುತ್ತಿರಲಿಲ್ಲ. ರಷ್ಯನ್ ಸಂಪ್ರದಾಯಕ್ಕನುಸಾರ ಇದು ಮರಣದ ಸಂಕೇತವಾಗಿ ಪರಿಗಣಿಸಲ್ಪಟ್ಟಿತ್ತು ಮತ್ತು ‘ಅಧೋಲೋಕಕ್ಕೆ’ ಸಂಬಂಧಿಸಿದ್ದಾಗಿತ್ತು ಎಂಬ ವಾಸ್ತವಾಂಶ, ಹಾಗೂ ಈ ಮರವನ್ನು ಪ್ರವಾಸಿಗೃಹಗಳ ಛಾವಣಿಗಳ ಮೇಲೆ ಇಡುವಂಥ ಸಂಪ್ರದಾಯವು, 19ನೆಯ ಶತಮಾನದ ಮಧ್ಯಭಾಗದಲ್ಲಿ ಉಂಟಾದ ಮನೋಭಾವಗಳಲ್ಲಿನ ಬದಲಾವಣೆಗಳಿಗೆ ಹೊಂದಿಕೆಯಲ್ಲಿರಲಿಲ್ಲ. . . . ಮನೆಗಳನ್ನು ನಿತ್ಯಹಸುರು ಮರದಿಂದ ಅಲಂಕರಿಸುವ ಪದ್ಧತಿಯನ್ನು ರೂಢಿಸಿಕೊಳ್ಳುವ ಕಾರ್ಯಗತಿಯಲ್ಲಿ, ಈ ವಿದೇಶೀ ಸಂಪ್ರದಾಯವು ಪಾಶ್ಚಾತ್ಯ ದೇಶಗಳಲ್ಲಿ ಕ್ರಿಸ್ಮಸ್ ಮರಕ್ಕೆ ಯಾವ ಅರ್ಥವನ್ನು ಕೊಡಲಾಗುತ್ತದೋ ಅದೇ ಅರ್ಥವನ್ನು ಪಡೆಯುತ್ತದೆ ಎಂಬುದು ಪೂರ್ಣ ರೀತಿಯಲ್ಲಿ ಗ್ರಹಿಸಸಾಧ್ಯವಿರುವ ಸಂಗತಿಯಾಗಿದೆ; ಪಾಶ್ಚಾತ್ಯರಲ್ಲಿ ಅದು ಕ್ರಿಸ್ಮಸ್‌ನ ಮುಖ್ಯವಿಷಯದೊಂದಿಗೆ ಸಂಬಂಧಿಸಿದ್ದಾಗಿದೆ. . . .
“ರಷ್ಯದಲ್ಲಿ ಈ ಮರವನ್ನು ಕ್ರೈಸ್ತ ಸಂಕೇತವಾಗಿ ಮಾಡುವ ಕಾರ್ಯಗತಿಯು ತುಂಬ ಸುಲಭವಾದದ್ದೇನಾಗಿರಲಿಲ್ಲ. ಆರ್ತಡಾಕ್ಸ್ ಚರ್ಚಿನಿಂದ ಅದು ವಿರೋಧವನ್ನು ಎದುರಿಸಿತು. ಈ ಹೊಸ ಆಚರಣೆಯಲ್ಲಿ ಪಾದ್ರಿಗಳು ‘ಪೈಶಾಚಿಕ ಕ್ರಿಯೆಯನ್ನು,’ ಒಂದು ವಿಧರ್ಮಿ ಸಂಪ್ರದಾಯವನ್ನು ಕಂಡರು ಮತ್ತು ಇದು ‘ರಕ್ಷಕನ’ ಜನನದೊಂದಿಗೆ ಯಾವ ಸಂಬಂಧವನ್ನೂ ಹೊಂದಿರಲಿಲ್ಲ. ಅಷ್ಟುಮಾತ್ರವಲ್ಲ ಇದು ಪಾಶ್ಚಾತ್ಯರ ಒಂದು ಸಂಪ್ರದಾಯವಾಗಿತ್ತು.”—ಪ್ರೊಫೆಸರ್ ಯೆಲೆನ ವಿ. ಡೂಶೆನ್‌ಕೀನ, ಸೆಂಟ್ ಪೀಟರ್ಸ್‌ಬರ್ಗ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಭಾಷಾಶಾಸ್ತ್ರೀಯ ವಿಜ್ಞಾನಗಳ ಡಾಕ್ಟರ್.
[ಪುಟ 32ರಲ್ಲಿರುವ ಚಿತ್ರ ಕೃಪೆ]
ಛಾಯಾಚಿತ್ರ: Nikolai Rakhmanov