ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕೆನ್ನೀಲಿ ತ್ರಿಕೋನದ ಅರ್ಥವೇನಾಗಿದೆ?”

“ಕೆನ್ನೀಲಿ ತ್ರಿಕೋನದ ಅರ್ಥವೇನಾಗಿದೆ?”

“ಕೆನ್ನೀಲಿ ತ್ರಿಕೋನದ ಅರ್ಥವೇನಾಗಿದೆ?”

“ಕೆಲವು ದಿನಗಳ ಹಿಂದೆ ನಾನು ಒಬ್ಬ ಯೆಹೋವನ ಸಾಕ್ಷಿಯಿಂದ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ಪಡೆದುಕೊಂಡೆ” ಎಂದು ರಿಪಬ್ಲಿಕ್‌ ಆಫ್‌ ಕೊರಿಯದ ಸೋಲ್‌ನ ನ್ಯಾಯಾಂಗ ಇಲಾಖೆಯಲ್ಲಿ ಕೆಲಸಮಾಡುವ ಒಬ್ಬ ನಾಗರಿಕ ನೌಕರನು ಹೇಳಿದನು. ಅವನು ಮುಂದುವರಿಸಿದ್ದು: “ಅದನ್ನು ಓದುವಾಗ, ಯೆಹೋವನ ಸಾಕ್ಷಿಗಳು ನಾಸಿ ಹಾಗೂ ಕಮ್ಯೂನಿಸ್ಟ್‌ ಆಳ್ವಿಕೆಗಳ ಕೆಳಗೆ ಅನುಭವಿಸಿದ ಹಿಂಸೆಯ ಕುರಿತಾದ ಕೆಲವು ವಾಸ್ತವಾಂಶಗಳನ್ನು ತಿಳಿದುಕೊಂಡೆ. ಆದರೆ ನನಗೆ ಒಂದು ಪ್ರಶ್ನೆಯಿದೆ. ಮುಖಪುಟದಲ್ಲಿರುವ ಚಿತ್ರವು ಯೆಹೋವನ ಸಾಕ್ಷಿಗಳು ತಮ್ಮ ಕೋಟ್‌ನ ಎಡಬದಿಯಲ್ಲಿ ತಲೆಕೆಳಗಾಗಿ ಹೊಲಿಯಲ್ಪಟ್ಟಿರುವ ಒಂದು ಕೆನ್ನೀಲಿ ತ್ರಿಕೋನವನ್ನು ಹೊಂದಿರುವುದನ್ನು ತೋರಿಸುತ್ತದೆ. ಈ ಕೆನ್ನೀಲಿ ತ್ರಿಕೋನದ ಅರ್ಥವೇನಾಗಿದೆ?”

ಜರ್ಮನಿಯಲ್ಲಿ ನಾಸಿ ಆಳ್ವಿಕೆಯ ಕೆಳಗಿದ್ದ ಯೆಹೋವನ ಸಾಕ್ಷಿಗಳು ಹಿಟ್ಲರನಿಗೆ ಜೈಕಾರವನ್ನೆತ್ತಲು ನಿರಾಕರಿಸಿದರು ಮತ್ತು ರಾಜಕೀಯ ಹಾಗೂ ಮಿಲಿಟರಿ ವಿವಾದಗಳಲ್ಲಿ ತಟಸ್ಥರಾಗಿ ಉಳಿದರು. ಈ ಕಾರಣದಿಂದ ನಾಸಿಗಳು ಅವರನ್ನು ಕ್ರೂರವಾಗಿ ಹಿಂಸಿಸುತ್ತಾ ಸುಮಾರು 12,000 ಸಾಕ್ಷಿಗಳನ್ನು ವಿವಿಧ ಕಾಲಾವಧಿಗಳ ಸೆರೆವಾಸ ಮತ್ತು ಸೆರೆಶಿಬಿರವಾಸಕ್ಕೆ ಕಳುಹಿಸಿದರು. ಅವರಲ್ಲಿ ಸುಮಾರು 2,000 ಮಂದಿ ಮರಣವನ್ನಪ್ಪಿದರು; ಈ 2,000 ಮಂದಿಯಲ್ಲಿ ನೂರಾರು ವ್ಯಕ್ತಿಗಳನ್ನು ಕೊಲ್ಲಲಾಗಿತ್ತು.

ಅವರ ಸೆರೆವಸ್ತ್ರದ ಮೇಲಿದ್ದ ಕೆನ್ನೀಲಿ ತ್ರಿಕೋನವು ಏನನ್ನು ಸೂಚಿಸಿತು? “ನಾಸಿ ಶಿಬಿರಗಳಲ್ಲಿದ್ದ ವಿವಿಧ ದರ್ಜೆಯ ಸೆರೆವಾಸಿಗಳು ವಿಶಿಷ್ಟವಾದ ಗುರುತು ಚಿಹ್ನೆಗಳನ್ನು ಹೊಂದಿದ್ದರು” ಎಂದು ಎಸ್‌ಎಸ್‌ ರಾಜ್ಯದ ಅಂಗರಚನೆ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಅದು ಮುಂದುವರಿಸುತ್ತಾ ಹೇಳುವುದು: “ಯುದ್ಧಕ್ಕೆ ಮುಂಚೆ ಪರಿಚಯಿಸಲ್ಪಟ್ಟು ಒಂದು ಪ್ರಮಾಣ ಮಟ್ಟವಾಗಿ ಉಪಯೋಗಿಸಲ್ಪಡುತ್ತಿದ್ದ ಗುರುತು ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸೆರೆವಾಸಿಯ ಸಮವಸ್ತ್ರದ ಮೇಲೆ ಒಂದು ತ್ರಿಕೋನಾಕಾರದ ಬಟ್ಟೆಯನ್ನು ಹೊಲಿಯುವುದು ಒಳಗೂಡಿತ್ತು ಮತ್ತು ಅದರ ಬಣ್ಣವು ಪ್ರತಿಯೊಬ್ಬನ ದರ್ಜೆಗನುಸಾರವಾಗಿ ನೀಡಲ್ಪಡುತ್ತಿತ್ತು: ರಾಜಕೀಯ ಸೆರೆವಾಸಿಗಳಿಗೆ ಕೆಂಪು; ಯೆಹೋವನ ಸಾಕ್ಷಿಗಳಿಗೆ ಕೆನ್ನೀಲಿ; ಸಮಾಜವಿರೋಧಿಗಳಿಗೆ ಕಪ್ಪು; ಅಪರಾಧಿಗಳಿಗೆ ಹಸಿರು; ಸಲಿಂಗಕಾಮಿಗಳಿಗೆ ಎಳೆಗೆಂಪು; ವಲಸಿಗರಿಗೆ ನೀಲಿ. ಯೆಹೂದಿ ಸೆರೆವಾಸಿಗಳಿಗಾಗಿ ಬಣ್ಣಕೊಡಲ್ಪಟ್ಟಿರುವ ಒಂದು ತ್ರಿಕೋನದ ಮೇಲೆ ಹಳದಿ ಬಣ್ಣದ ಮತ್ತೊಂದು ತ್ರಿಕೋನವನ್ನು ಹೊಲಿಯಲಾಗುತ್ತಿತ್ತು. ಹೊಲಿಯಲ್ಪಟ್ಟ ರೀತಿಯಿಂದ ಇದು ಷಡ್ಭುಜೀಯ ಆಕಾರದ ದಾವೀದನ ನಕ್ಷತ್ರದಂತೆ ತೋರುತ್ತಿತ್ತು.”

“ಕೆನ್ನೀಲಿ ತ್ರಿಕೋನದ ನೈತಿಕ ವಿಶೇಷತೆಯನ್ನು ಜ್ಞಾಪಿಸಿಕೊಳ್ಳುವುದಾದರೆ, ಅದು ಮುಂದಕ್ಕೆ ಸಂಭವಿಸಬಹುದಾದ ದುರಂತದ ವಿರುದ್ಧ ಒಂದು ತಡೆಗೋಡೆಯಾಗಿ ನಿಲ್ಲಸಾಧ್ಯವಿದೆ. ಈ ತ್ರಿಕೋನದ ಅಂಶಗಳು ಅತ್ಯಧಿಕ ಮಟ್ಟದಲ್ಲಿ ಮಾನವನು ಗೌರವಿಸಬೇಕಾಗಿರುವ ಸುನಡತೆಯ ಕಡೆಗೆ ನಮ್ಮ ಗಮನ ಹಾಗೂ ಜವಾಬ್ದಾರಿಯನ್ನು ನಿರ್ದೇಶಿಸುತ್ತವೆ” ಎಂದು ಜಾನ್‌ ಕೆ. ರಾತ್‌ ಹತ್ಯಾಕಾಂಡದ ರಾಜಕಾರಣ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಬರೆದರು. ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ * ಎಂಬ ಪಾರಿತೋಷಕ ವಿಜೇತ ಸಾಕ್ಷ್ಯಚಿತ್ರವನ್ನು ಯೆಹೋವನ ಸಾಕ್ಷಿಗಳು ರಚಿಸಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಲು ಸಾಧ್ಯವಾಗುವಂತೆ ನೀವೇಕೆ ಒಬ್ಬ ಯೆಹೋವನ ಸಾಕ್ಷಿಯೊಂದಿಗೆ ಏರ್ಪಾಡು ಮಾಡಬಾರದು?

[ಪಾದಟಿಪ್ಪಣಿ]

^ ಪ್ಯಾರ. 5 ಕನ್ನಡದಲ್ಲಿ ಲಭ್ಯವಿಲ್ಲ.