ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಷ್ಟು ಚೆನ್ನಾಗಿ ಸಂವಾದಿಸಬಲ್ಲಿರಿ?

ನೀವು ಎಷ್ಟು ಚೆನ್ನಾಗಿ ಸಂವಾದಿಸಬಲ್ಲಿರಿ?

ನೀವು ಎಷ್ಟು ಚೆನ್ನಾಗಿ ಸಂವಾದಿಸಬಲ್ಲಿರಿ?

“ಅರವತ್ತು ವರ್ಷ ಪ್ರಾಯದವರ ಪ್ರೇಮ ಪತ್ರ.” ಇದು, ಕೆಲವು ವರ್ಷಗಳ ಹಿಂದೆ ಜಪಾನಿನ ಒಂದು ಬ್ಯಾಂಕ್‌ ನಡೆಸಿದ ಬಾಜಿ ಸ್ಪರ್ಧೆಯೊಂದರ ಶೀರ್ಷಿಕೆಯಾಗಿತ್ತು. 50 ಮತ್ತು 60ರ ಪ್ರಾಯದ ಜಪಾನೀಯರಿಗೆ ತಮ್ಮ ಮದುವೆ ಸಂಗಾತಿಯ ಕಡೆಗೆ ತಮಗಿರುವ “ನಿಜವಾದ ಭಾವನೆಗಳನ್ನು” ವ್ಯಕ್ತಪಡಿಸುವಂತೆ ಉತ್ತೇಜಿಸಲಾಯಿತು. ಒಬ್ಬ ಸ್ಪರ್ಧಿಯು ತನ್ನ ಹೆಂಡತಿಗೆ ಬರೆದದ್ದು: “ನಿನಗೆ ಇದು ತಮಾಷೆಯಾಗಿ ತೋರಬಹುದು, ಆದರೆ ನಾನಿದನ್ನು ಹೇಳದಿದ್ದಲ್ಲಿ ವಿಷಾದಿಸುವೆ, ಹಾಗಾಗಿ ಗಟ್ಟಿಯಾಗಿ ಹೇಳಿಬಿಡುತ್ತೇನೆ: ನನ್ನನ್ನು ಮದುವೆಯಾದದ್ದಕ್ಕಾಗಿ ನಿನಗೆ ತುಂಬ ಉಪಕಾರ.”

ಕೆಲವು ಪೌರಸ್ತ್ಯ ದೇಶಗಳ ಸಂಸ್ಕೃತಿಗಳನ್ನು ಒಳಗೂಡಿಸಿ ಇತರ ಅನೇಕ ಸಂಸ್ಕೃತಿಗಳಲ್ಲಿ ಒಬ್ಬನ ಭಾವನೆಗಳನ್ನು ಮನಸ್ಸುಬಿಚ್ಚಿ ವ್ಯಕ್ತಪಡಿಸುವುದನ್ನು ನಿರುತ್ತೇಜಿಸಲಾಗಿದೆ. ಆದರೂ, ಸುಮಾರು 15,000ದಷ್ಟು ಮಂದಿ ಆ ಪ್ರೇಮ ಪತ್ರ ಸ್ಪರ್ಧೆಗೆ ಪ್ರತಿಕ್ರಿಯೆ ತೋರಿಸಿದರು. ಅದೆಷ್ಟು ಜನಪ್ರಿಯವಾಯಿತೆಂದರೆ ಅದನ್ನು ಹಿಂಬಾಲಿಸಿ ಮತ್ತೊಂದು ಸ್ಪರ್ಧೆಯು ನಡೆಸಲ್ಪಟ್ಟಿತು ಮತ್ತು ಆ ಪತ್ರಗಳ ಮೇಲಾಧಾರಿತವಾಗಿ ಅನೇಕ ಪುಸ್ತಕಗಳು ಮುದ್ರಿಸಲ್ಪಟ್ಟವು. ಅಂತರಾಳದಲ್ಲಿ, ತಮ್ಮ ನೆಚ್ಚಿನ ಸಂಗಾತಿಯ ಬಗ್ಗೆ ತಮಗೆ ಹೇಗೆ ಅನಿಸುತ್ತದೆ ಎಂಬುದನ್ನು ವ್ಯಕ್ತಪಡಿಸಲು ಅನೇಕರು ಹಂಬಲಿಸುತ್ತಾರೆಂದು ಇದು ಸೂಚಿಸುತ್ತದೆ. ಆದರೂ ಇತರರು ತಮ್ಮ ಬಾಳ ಸಂಗಾತಿಯ ಕಡೆಗೆ ತಮಗಿರುವ ಭಾವನೆಗಳನ್ನು ವ್ಯಕ್ತಪಡಿಸಲು ನಿರಾಕರಿಸುತ್ತಾರೆ. ಏಕೆ? ಏಕೆಂದರೆ ತಮಗೆ ಹೇಗನಿಸುತ್ತದೆ ಎಂಬುದನ್ನು ಇತರರಿಗೆ ಅಂದರೆ ತಮ್ಮ ಸಂಗಾತಿಗೆ ಹೇಳಿಕೊಳ್ಳಲು ಅವರಿಗೆ ಸ್ವಲ್ಪ ಪ್ರಯತ್ನ ಮತ್ತು ಕೌಶಲ್ಯವು ಅಗತ್ಯವಾಗಿರಬಹುದು.

ಹಲವಾರು ವರ್ಷಗಳಿಂದ ಒಳಗಿಂದೊಳಗೆಯೇ ಜಮಾಯಿಸಿದ ಅಸಮಾಧಾನಗಳ ಕಾರಣದಿಂದಲೇ, ಜಪಾನಿನ ಅನೇಕ ಪ್ರಾಯಸ್ಥ ದಂಪತಿಗಳಲ್ಲಿ ವಿಚ್ಛೇದ ಕ್ರಮಗಳು ಹೆಂಡತಿಯರಿಂದ ಮೊದಲು ತೆಗೆದುಕೊಳ್ಳಲಾಗುತ್ತವೆ ಎಂದು ನಿವೃತ್ತಿಯ ಬಗ್ಗೆ ಒಂದು ಪುಸ್ತಕವನ್ನು ಬರೆದ ಹೀಟೋಶೀ ಕಾಟೋ ಎಂಬವರು ಹೇಳುತ್ತಾರೆ. “ಆದರೆ ಇದು [ವಿಚ್ಛೇದವು], ದಂಪತಿಗಳು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವಾಗ ವಿಷಯಗಳನ್ನು ಮಾತಾಡದೇ ಇರುವುದರ ಫಲಿತಾಂಶವೂ ಆಗಿದೆ” ಎಂದು ಅವರು ಹೇಳುತ್ತಾರೆ.

ಗಂಡನು ಉದ್ಯೋಗದಿಂದ ನಿವೃತ್ತಿಹೊಂದಿದ ಅನಂತರ ಹೆಂಡತಿಯು ವಿಚ್ಛೇದದ ನೋಟಿಸನ್ನು ಅವನ ಕೈಗೆ ಕೊಡುವಾಗ ಅವನಿಗೆ ಆಶ್ಚರ್ಯವಾಗಬಹುದು. ಅನೇಕ ವರ್ಷಗಳವರೆಗೆ ದಂಪತಿಯು ಪರಸ್ಪರರ ಬಗ್ಗೆ ತಮಗೆ ಹೇಗನಿಸುತ್ತದೆ ಎಂಬುದನ್ನು ಚರ್ಚಿಸಿರಲಿಕ್ಕಿಲ್ಲ. ಗಂಡಹೆಂಡತಿಯರಿಬ್ಬರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದರೂ ಸಂಭಾಷಣೆಯನ್ನು ಸಕಾರಾತ್ಮಕ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಅವರು ಅಶಕ್ತರಾಗಿದ್ದಿರಬಹುದು. ನಿಕಟವಾದ ಸಂಬಂಧವನ್ನು ಕಟ್ಟುವ ಬದಲು ಅವರು ಪದೇ ಪದೇ ವಾಗ್ವಾದಗಳಲ್ಲಿ ಸಿಲುಕುತ್ತಿರುವುದನ್ನು ಕಂಡುಕೊಳ್ಳುತ್ತಿದ್ದಿರಬಹುದು.

ಗಂಡಹೆಂಡತಿಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ಬಗೆಹರಿಸಿ ತಮ್ಮ ಭಾವನೆಗಳನ್ನು ಹಿತಕರವಾದ ರೀತಿಯಲ್ಲಿ ಹೇಗೆ ವ್ಯಕ್ತಪಡಿಸಬಲ್ಲರು? ಆಸಕ್ತಿಯ ಸಂಗತಿಯೇನೆಂದರೆ, ಅತಿ ಹೆಚ್ಚು ಪ್ರಾಯೋಗಿಕವಾದ ಸಲಹೆಗಳನ್ನು, ನೀವು ಒಬ್ಬ ವಿವಾಹ ಸಲಹೆಗಾರನ ಇತ್ತೀಚಿನ ಪುಸ್ತಕದಲಲ್ಲ ಬದಲಿಗೆ ಶತಮಾನಗಳಿಂದಲೂ ಅಮೂಲ್ಯವೆಂದೆಣಿಸಲ್ಪಟ್ಟಿರುವ ಒಂದು ಪ್ರಾಚೀನ ಗ್ರಂಥವಾದ ಬೈಬಲಿನಲ್ಲಿ ಕಂಡುಕೊಳ್ಳಬಲ್ಲಿರಿ.