ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇಂದಿನಿಂದ ನಾನು ದೇವರಿದ್ದಾನೆ ಎಂದು ನಂಬುತ್ತೇನೆ”

“ಇಂದಿನಿಂದ ನಾನು ದೇವರಿದ್ದಾನೆ ಎಂದು ನಂಬುತ್ತೇನೆ”

“ಇಂದಿನಿಂದ ನಾನು ದೇವರಿದ್ದಾನೆ ಎಂದು ನಂಬುತ್ತೇನೆ”

ಚೆಕ್‌ ರಿಪಬ್ಲಿಕ್‌ನ ಪ್ರಾಗ್‌ ನಗರದಲ್ಲಿ ವಾಸಿಸುತ್ತಿರುವ ಆಲಿಕ್ಸಾಂಡ್ರ ಎಂಬ ಯುಕ್ರೇನ್‌ನ ಮಹಿಳೆಯು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಳು. ಅವಳು ಬಸ್‌ ನಿಲ್ದಾಣಕ್ಕೆ ಬಂದಾಗ ಅಲ್ಲಿ ಒಂದು ಚಿಕ್ಕ ಬ್ಯಾಗ್‌ ಬಿದ್ದಿರುವುದನ್ನು ನೋಡಿದಳು. ಅಲ್ಲಿ ಓಡಾಡುತ್ತಿದ್ದವರು ಅದನ್ನು ಗಮನಿಸದೆ ಅತ್ತಿತ್ತ ಒದ್ದುಕೊಂಡು ಹೋಗುತ್ತಿದ್ದರು. ಅವಳು ಆ ಬ್ಯಾಗನ್ನು ಎತ್ತಿಕೊಂಡು ಅದರೊಳಗಿರುವುದನ್ನು ನೋಡಿದಾಗ ಅವಳಿಗೆ ತನ್ನ ಕಣ್ಣುಗಳನ್ನೇ ನಂಬಲಿಕ್ಕಾಗಲಿಲ್ಲ. ಅದರಲ್ಲಿದದ್ದು 5,000-ಕಾರನಾ (ಸುಮಾರು 7,500ರೂ.ಗಳು) ನೋಟುಗಳ ಒಂದು ಕಂತೆ! ಸುತ್ತಮುತ್ತಲಿದ್ದವರಲ್ಲಿ ಯಾರೂ ಆ ಬ್ಯಾಗ್‌ಗಾಗಿ ಹುಡುಕುತ್ತಿರುವಂತೆ ಕಾಣಲಿಲ್ಲ. ಸ್ವದೇಶವನ್ನು ಬಿಟ್ಟುಬಂದು ಚೆಕ್‌ ರಿಪಬ್ಲಿಕ್‌ನಲ್ಲಿ ವಿದೇಶಿಯಾಗಿ ಜೀವಿಸುತ್ತಿದ್ದ ಆಲಿಕ್ಸಾಂಡ್ರಳಿಗೆ, ಅಲ್ಲಿ ಜೀವನ ನಡಿಸುವುದು ತುಂಬ ಕಷ್ಟವಾಗಿತ್ತು. ಈಗ ಅವಳೇನು ಮಾಡುವಳು?

ಮನೆಗೆ ಹಿಂತೆರಳಿದ ತಕ್ಷಣ ಆಲಿಕ್ಸಾಂಡ್ರ ಅದನ್ನು ತನ್ನ ಮಗಳಾದ ವಿಕ್ಟೋರೀಯಗೆ ತೋರಿಸಿದಳು. ಅವರು ಆ ಬ್ಯಾಗ್‌ ಯಾರದ್ದಾಗಿರಬಹುದೆಂದು ತಿಳಿಯಲು ಹೆಸರು ಮತ್ತು ವಿಳಾಸವನ್ನು ಅದರಲ್ಲಿ ಹುಡುಕಿದರೂ ಏನೂ ಪ್ರಯೋಜನವಾಗಲಿಲ್ಲ. ಆದರೆ ಆ ಬ್ಯಾಗ್‌ನಲ್ಲಿ, ಕೆಲವು ನಂಬರ್‌ಗಳು ಬರೆದಿದ್ದ ಒಂದು ಕಾಗದದ ತುಂಡು ಇತ್ತು. ಅದರ ಒಂದು ಬದಿಯಲ್ಲಿ ಅಕೌಂಟ್‌ ನಂಬರೊಂದಿತ್ತು ಮತ್ತು ಇನ್ನೊಂದು ಬದಿಯಲ್ಲಿ ಇನ್ನೂ ಕೆಲವು ನಂಬರ್‌ಗಳು ಇದ್ದವು. ಮಾತ್ರವಲ್ಲ, ಸ್ಥಳಿಕ ಬ್ಯಾಂಕ್‌ಗೆ ಹೇಗೆ ಹೋಗಬೇಕೆಂಬ ದಾರಿಯನ್ನೂ ಸೂಚಿಸಲಾಗಿತ್ತು ಮತ್ತು ಆ ಹಣದ ಕಂತೆಯ ಮೇಲೆ “330,000 ಕಾರನೀ” (4,50,000ರೂ.ಗಳು) ಎಂದು ಬರೆಯಲಾಗಿತ್ತು. ಆ ಬ್ಯಾಗ್‌ನಲ್ಲಿದ್ದ ಹಣದ ಒಟ್ಟು ಮೊತ್ತ ಅಷ್ಟೇ ಆಗಿತ್ತು!

ಆ ಕಾಗದದಲ್ಲಿ ಒಂದು ಫೋನ್‌ ನಂಬರ್‌ನಂತೆ ಕಂಡದ್ದನ್ನು ಬಳಸಿ ಆಲಿಕ್ಸಾಂಡ್ರ ಬ್ಯಾಂಕ್‌ಗೆ ಫೋನ್‌ ಮಾಡಿದಳಾದರೂ ಏನೂ ಉಪಯೋಗವಾಗಲಿಲ್ಲ. ಆದುದರಿಂದ ಅವಳು ಮತ್ತು ಅವಳ ಮಗಳು ಬ್ಯಾಂಕ್‌ಗೆ ಹೋಗಿ, ನಡೆದ ಸಂಗತಿಯನ್ನು ವಿವರಿಸಿದರು. ಮತ್ತು ಬ್ಯಾಗ್‌ನಲ್ಲಿ ಸಿಕ್ಕಿದ ಅಕೌಂಟ್‌ ನಂಬರ್‌ನ ಬಗ್ಗೆ ವಿಚಾರಿಸಿದರು. ಆದರೆ ಆ ಬ್ಯಾಂಕ್‌ನಲ್ಲಿ ಆ ಅಕೌಂಟ್‌ನ ಬಗ್ಗೆ ಯಾವುದೇ ದಾಖಲೆಯಿರಲಿಲ್ಲ. ಮರುದಿನ ಆಲಿಕ್ಸಾಂಡ್ರ ಆ ಬ್ಯಾಗ್‌ನಲ್ಲಿದ್ದ ಬೇರೊಂದು ನಂಬರನ್ನು ತೋರಿಸಲು ಹೋದಳು. ಆ ಬ್ಯಾಂಕ್‌ನಲ್ಲಿ ಆ ಅಕೌಂಟ್‌ ನಂಬರಿನ ಒಬ್ಬ ಮಹಿಳಾ ಗ್ರಾಹಕಳಿದ್ದಳು. ಆಲಿಕ್ಸಾಂಡ್ರ ಮತ್ತು ವಿಕ್ಟೋರೀಯ ಆ ಸ್ತ್ರೀಯನ್ನು ಫೋನ್‌ ಮೂಲಕ ಸಂಪರ್ಕಿಸಿ ಅವಳು ಕಳೆದುಕೊಂಡಿದ್ದ ಹಣದ ಬಗ್ಗೆ ವಿಚಾರಿಸಿದರು. ಕೊನೆಯಲ್ಲಿ ಅವರೆಲ್ಲರೂ ಭೇಟಿಯಾದಾಗ ಆ ಸ್ತ್ರೀ ಮನಃಪೂರ್ವಕವಾಗಿ ಉಪಕಾರ ಹೇಳಿ, “ಈ ಹಣವನ್ನು ಹಿಂದಿರುಗಿಸಿದ್ದಕ್ಕಾಗಿ ನಾನು ನಿಮಗೆ ಏನು ಕೊಡಲಿ?” ಎಂದು ಕೇಳಿದಳು.

ಅದಕ್ಕೆ ವಿಕ್ಟೋರೀಯ, “ನಮಗೇನೂ ಬೇಡ, ನಮಗೆ ಹಣ ಬೇಕಾಗಿದ್ದಲ್ಲಿ ನಾವು ಈ ಹಣವನ್ನೇ ಇಟ್ಟುಕೊಳ್ಳಬಹುದಿತ್ತು” ಎಂದು ಪ್ರತ್ಯುತ್ತರಿಸಿದಳು. ಮತ್ತು “ನಾವು ನಿಮಗೆ ಈ ಹಣವನ್ನು ಹಿಂದಿರುಗಿಸುತ್ತಿರುವುದಕ್ಕೆ ಕಾರಣವೇನೆಂದರೆ ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ. ನಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ನಮಗೆ ಸೇರಿರದ್ದನ್ನು ನಮ್ಮ ಬಳಿ ಇಟ್ಟುಕೊಳ್ಳುವಂತೆ ಅನುಮತಿಸುವುದಿಲ್ಲ” ಎಂದು ತನಗೆ ತಿಳಿದಿದ್ದ ಅಲ್ಪಸ್ವಲ್ಪ ಚೆಕ್‌ ಭಾಷೆಯಲ್ಲಿ ಅವಳು ವಿವರಿಸಿದಳು. (ಇಬ್ರಿಯ 13:18) ಅದಕ್ಕೆ ಆ ಸ್ತ್ರೀ ಎಷ್ಟು ಸಂತೋಷಿತಳಾದಳೆಂದರೆ ಅವಳು ಹೀಗೆ ಹೇಳಿದಳು: “ಇಂದಿನಿಂದ ನಾನು ದೇವರಿದ್ದಾನೆ ಎಂದು ನಂಬುತ್ತೇನೆ.” (w06 7/15)