ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಂಬತ್ತು ವರ್ಷದ ಹುಡುಗನ ಕಾರಣದಿಂದಲೇ”

“ಒಂಬತ್ತು ವರ್ಷದ ಹುಡುಗನ ಕಾರಣದಿಂದಲೇ”

“ಒಂಬತ್ತು ವರ್ಷದ ಹುಡುಗನ ಕಾರಣದಿಂದಲೇ”

ದಕ್ಷಿಣ ಪೋಲೆಂಡ್‌ನಲ್ಲಿರುವ ವೈಸ್‌ವಾವಾ ಎಂಬಾಕೆ, ಯೆಹೋವನ ಸಾಕ್ಷಿಗಳು ಅವಳ ಮನೆಯನ್ನು ಭೇಟಿಮಾಡಿದಾಗಲೆಲ್ಲಾ, ಅವರು ಮಾಡುತ್ತಿರುವ ಕೆಲಸಕ್ಕೆ ವಿನಯದಿಂದ ಉಪಕಾರ ಹೇಳುತ್ತಿದ್ದಳಾದರೂ ಅವರು ಹೇಳುವ ವಿಷಯವನ್ನು ಕೇಳಲು ನಿರಾಕರಿಸುತ್ತಿದ್ದಳು. ಒಂದು ದಿನ ಒಂಬತ್ತು ವರ್ಷದ ಸ್ಯಾಮುವೆಲ್‌ ತನ್ನ ತಾಯಿಯೊಂದಿಗೆ ಅವಳ ಮನೆಯನ್ನು ಭೇಟಿಮಾಡಿದನು. ಈ ಬಾರಿ ವೈಸ್‌ವಾವಾ ಸಾಕ್ಷಿಗಳು ತಿಳಿಸುವ ಸಂದೇಶಕ್ಕೆ ಕಿವಿಗೊಡಲು ನಿರ್ಣಯಿಸಿದಳು. ಮಾತ್ರವಲ್ಲ, ಭೂಮಿಯ ಮೇಲೆ ಬರಲಿರುವ ಪರದೈಸಿನ ಕುರಿತು ತಿಳಿಸುವ ಒಂದು ಪತ್ರಿಕೆಯನ್ನು ಸ್ವೀಕರಿಸಿದಳು.

ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಯು ಸಮೀಪಿಸುತ್ತಿದದ್ದರಿಂದ ಸ್ಯಾಮುವೆಲ್‌ ವೈಸ್‌ವಾವಾಳನ್ನು ಈ ವಿಶೇಷ ಸಮಾರಂಭಕ್ಕೆ ಆಮಂತ್ರಿಸಲು ಬಯಸಿದನು. ಅದಕ್ಕಾಗಿ ಅವನು ತನ್ನ ತಾಯಿ ಜೊತೆಯಲ್ಲಿ ಹೋಗಿ ಆಕೆಯನ್ನು ಪುನಃ ಭೇಟಿಮಾಡಿದನು. ಆದರೆ ಈ ಬಾರಿ ಮುದ್ರಿತ ಆಮಂತ್ರಣ ಪತ್ರದೊಂದಿಗೆ! ವೈಸ್‌ವಾವಾ ಈ ಹುಡುಗ ಒಳ್ಳೇ ರೀತಿ ಬಟ್ಟೆ ಧರಿಸಿಕೊಂಡಿರುವುದನ್ನು ಗಮನಿಸಿ, ಸ್ವಲ್ಪ ಸಮಯಾವಕಾಶವನ್ನು ಕೇಳಿ, ಕೂಡಲೇ ಮನೆಯೊಳಗೆ ಹೋಗಿ ಯೋಗ್ಯ ಉಡುಪನ್ನು ತೊಟ್ಟು ಬಾಗಿಲ ಬಳಿ ಬಂದಳು. ನಂತರ ಸ್ಯಾಮುವೆಲ್‌ಗೆ ಕಿವಿಗೊಟ್ಟು ಅವನ ಆಮಂತ್ರಣವನ್ನು ಸ್ವೀಕರಿಸಿದಳು ಮತ್ತು “ನಾನೊಬ್ಬಳೇ ಬರಬೇಕಾ ಅಥವಾ ನನ್ನ ಗಂಡನೊಂದಿಗಾ?” ಎಂದು ಕೇಳಿದಳು. ಬಳಿಕ ಅವಳು, “ನನ್ನ ಗಂಡ ಬರದಿದ್ದರೂ ನಾನು ಬರುತ್ತೇನೆ; ಸ್ಯಾಮುವೆಲ್‌ ನಾನು ನಿನಗೋಸ್ಕರ ಖಂಡಿತ ಬರುತ್ತೇನೆ” ಎಂದು ಹೇಳಿದಳು. ಮತ್ತು ತಾನು ಹೇಳಿದಂತೆಯೇ ಮಾಡಿ ಸ್ಯಾಮುವೆಲ್‌ ಸಂತೋಷಿಸುವಂತೆ ಮಾಡಿದಳು.

ಜ್ಞಾಪಕಾಚರಣೆಯ ಭಾಷಣವು ನೀಡಲ್ಪಡುತ್ತಿದ್ದಾಗ ಸ್ಯಾಮುವೆಲ್‌ ವೈಸ್‌ವಾವಾ ಪಕ್ಕದಲ್ಲಿ ಕೂತುಕೊಂಡು ಚರ್ಚಿಸಲ್ಪಡುತ್ತಿದ್ದ ವಚನಗಳನ್ನು ಬೈಬಲಿನಿಂದ ತೆರೆದು ತೋರಿಸುತ್ತಿದ್ದನು. ಇದು ಅವಳ ಮೇಲೆ ಗಾಢವಾದ ಪ್ರಭಾವ ಬೀರಿತು. ಅವಳು ಜ್ಞಾಪಕಾಚರಣೆಯಲ್ಲಿ ಆನಂದಿಸಿದಳು ಮತ್ತು ಆ ಗಾಢವಾದ ವಿಚಾರಗಳನ್ನು ಅಷ್ಟು ಸರಳ ರೀತಿಯಲ್ಲಿ ವಿವರಿಸಿದ್ದನ್ನು ಗಣ್ಯಮಾಡಿದಳು. ಮಾತ್ರವಲ್ಲ, ತನ್ನನ್ನು ಆದರಣೀಯವಾಗಿ ಬರಮಾಡಿಕೊಂಡದ್ದರಿಂದಲೂ ಸಭೆಯು ತೋರಿಸಿದ ದಯಾಪರತೆಯಿಂದಲೂ ಅವಳು ಪ್ರಚೋದಿತಳಾದಳು. ಅಂದಿನಿಂದ ವೈಸ್‌ವಾವಾ ಆಧ್ಯಾತ್ಮಿಕ ವಿಷಯಗಳಿಗೆ ಅತ್ಯಧಿಕ ಆಸಕ್ತಿಯನ್ನು ತೋರಿಸಿದ್ದಾಳೆ ಹಾಗೂ ಯೆಹೋವನ ಸಾಕ್ಷಿಗಳೊಂದಿಗೆ ಕ್ರಮವಾಗಿ ಸಹವಾಸಿಸಲು ಆರಂಭಿಸಿದ್ದಾಳೆ. ಇತ್ತೀಚಿಗೆ ಅವಳು ಹೀಗೆ ಹೇಳಿದಳು: “ಇದಕ್ಕೆ ಮುಂಚೆ ನೀವು ನನ್ನ ಮನೆಗೆ ಬಂದಾಗ ನಾನು ನಿಮಗೆ ಕಿವಿಗೊಡದದ್ದಕ್ಕಾಗಿ ನನಗೆ ನಾಚಿಕೆಯಾಗುತ್ತದೆ. ಮತ್ತು ನಾನು ನಿಮಗೆ ಕಿವಿಗೊಟ್ಟದ್ದು ಒಂಬತ್ತು ವರ್ಷದ ಹುಡುಗನ ಕಾರಣದಿಂದಲೇ, ಸ್ಯಾಮುವೆಲ್‌ನಿಂದಲೇ ಎಂಬುದನ್ನು ಒಪ್ಪಿಕೊಳ್ಳುತ್ತೇನೆ.”

ಪೋಲೆಂಡ್‌ನಲ್ಲಿ ಸ್ಯಾಮುವೆಲ್‌ನಂತೆ ಅನೇಕ ಎಳೆಯ ಯೆಹೋವನ ಸಾಕ್ಷಿಗಳು ಬಾಯಿಮಾತಿನ ಮೂಲಕ ಮತ್ತು ತಮ್ಮ ಸಭ್ಯ ನಡತೆಯಿಂದ ದೇವರನ್ನು ಸ್ತುತಿಸುತ್ತಾರೆ. ನೀವು ಒಬ್ಬ ಯುವ ವ್ಯಕ್ತಿಯಾಗಿರುವುದಾದರೆ, ಸ್ವಸ್ಥವಾದ ಆಧ್ಯಾತ್ಮಿಕ ಮೌಲ್ಯಗಳನ್ನು ಗಣ್ಯಮಾಡುವಂತೆ ನೀವು ಸಹ ಪ್ರಾಮಾಣಿಕ ಜನರಿಗೆ ಸಹಾಯಮಾಡಬಲ್ಲಿರಿ. (w06 9/1)