ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಂತರು ಭೂಮಿಗೆ ಬಾಧ್ಯರಾಗುವರು

ಶಾಂತರು ಭೂಮಿಗೆ ಬಾಧ್ಯರಾಗುವರು

ಶಾಂತರು ಭೂಮಿಗೆ ಬಾಧ್ಯರಾಗುವರು

“ಪ್ರಕೃತಿಯು ಮಾರ್ಪಟ್ಟು ಪುನಃಸ್ಥಾಪನೆಗೊಳ್ಳಲಿದೆ ಎಂಬುದು ನನ್ನ ಕಲ್ಪನೆ. . . .  ಇದು ನಾಳೆ ಬೆಳಗ್ಗೆಯೇ ಆಗಲಿಕ್ಕಿಲ್ಲವಾದರೂ ಇಂದಿನಿಂದ ತುಂಬ ದೂರದ ಯುಗವೊಂದರಲ್ಲಿ ಖಂಡಿತವಾಗಿಯೂ ಒಂದು ನೂತನ ಆಕಾಶ ಮತ್ತು ನೂತನ ಭೂಮಂಡಲವಿರುವಾಗ ಆಗುವುದು.”​—⁠ಶಾನ್‌ ಮರೀ ಪೆಲ್ಟ್‌, ಫ್ರೆಂಚ್‌ ಪರಿಸರ ವಿಶೇಷಜ್ಞ.

ಭೂಮಿಯ ಪರಿಸರ ಮತ್ತು ಸಮಾಜದ ಸ್ಥಿತಿಗಳಿಂದ ಕಂಗೆಟ್ಟಿರುವ ಅನೇಕರು ನಮ್ಮ ಗ್ರಹವು ಒಂದು ಪರದೈಸಾಗಿ ಮಾರ್ಪಾಡಾಗುವುದನ್ನು ನೋಡಲು ಇಷ್ಟಪಡುವರು. ಈ ಉತ್ಕಾಂಕ್ಷೆಯು ಕೇವಲ 21ನೇ ಶತಮಾನದ ಒಂದು ಸ್ವಪ್ನವಾಗಿರುವುದಿಲ್ಲ, ಬದಲಾಗಿ ದೀರ್ಘಕಾಲದ ಹಿಂದೆಯೇ ಬೈಬಲ್‌ ಇದನ್ನು ವಾಗ್ದಾನಿಸುತ್ತಾ, ಭೂಮಿ ಮೇಲೆ ಪರದೈಸ್‌ ಪುನಃಸ್ಥಾಪನೆಯಾಗುವುದೆಂದು ಹೇಳಿತ್ತು. “ಶಾಂತರು . . . ಭೂಮಿಗೆ ಬಾಧ್ಯರಾಗುವರು” ಮತ್ತು “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಯೇಸುವಿನ ಮಾತುಗಳು ಬೈಬಲಿನ ವಚನಗಳಲ್ಲಿ ಸುಪ್ರಸಿದ್ಧವಾಗಿವೆ. (ಮತ್ತಾಯ 5:5; 6:10) ಹಾಗಿದ್ದರೂ ಶಾಂತರು ವಾಸಿಸಲಿರುವ ಒಂದು ಪರದೈಸ್‌ ಭೂಮಿಯ ಕುರಿತು ಅನೇಕರಿಗೆ ನಂಬಿಕೆಯಿಲ್ಲ. ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲಿ ಹೆಚ್ಚಿನವರಿಗೆ ಪರದೈಸವು ಕಳೆದುಹೋಗಿರುವಂಥ ಒಂದು ವಿಷಯವಾಗಿದೆ.

ಭೂಮಿಯಲ್ಲಿನ ಅಥವಾ ಸ್ವರ್ಗದಲ್ಲಿನ ಪರದೈಸಿನ ಕುರಿತಾದ ನಂಬಿಕೆಯನ್ನು ಕ್ಯಾಥೊಲಿಕ್‌ ಚರ್ಚು ಏಕೆ ತೊರೆದುಬಿಟ್ಟಿದೆ ಎಂಬುದನ್ನು ಲವೀ ಎಂಬ ಫ್ರೆಂಚ್‌ ಸಾಪ್ತಾಹಿಕ ಪತ್ರಿಕೆಯು ವಿವರಿಸುತ್ತದೆ: “ಪರದೈಸಿನ ಕಲ್ಪನೆಯು 19 ಶತಮಾನಗಳವರೆಗೆ ಕ್ಯಾಥೊಲಿಕ್‌ ಬೋಧನೆಗಳ ಒಂದು ಪ್ರಧಾನ ಭಾಗವಾಗಿದ್ದು, ಈಗ ಅದು ಪ್ರಾರ್ಥನಾ ಶಿಬಿರಗಳಿಂದ, ಭಾನುವಾರದ ಧರ್ಮ ಪ್ರವಚನಗಳಿಂದ, ದೇವತಾಶಾಸ್ತ್ರದ ಕೋರ್ಸುಗಳಿಂದ ಮತ್ತು ಕ್ಯಾಟಿಕಿಸಮ್‌ ತರಗತಿಗಳಿಂದ ಮಾಯವಾಗಿಬಿಟ್ಟಿದೆ.” ಪರದೈಸ್‌ ಎಂಬ ಪದವೇ “ರಹಸ್ಯ ಮತ್ತು ಗಲಿಬಿಲಿ” ಎಂಬ “ಭಾರಿ ಮಸುಕಿನ” ಹಿಂದೆ ಮರೆಯಾಗಿದೆ. ಕೆಲವು ಪ್ರವಚನಕಾರರು ಪರದೈಸಿನ ವಿಷಯವನ್ನು ಬೇಕುಬೇಕೆಂದು ದೂರವಿಡುತ್ತಾರೆ ಏಕೆಂದರೆ ಅದು “ಭೂಮಿಯ ಮೇಲಿನ ಸಂತೋಷದ ಬಗ್ಗೆ ಅತಿಯಾದ ಕಲ್ಪನೆಗಳನ್ನು ಮೂಡಿಸುತ್ತದೆ.”

ಧರ್ಮದ ವಿಷಯದಲ್ಲಿ ಪರಿಣತನಾದ ಫ್ರೇಡೇರೀಕ್‌ ಲನ್‌ವಾರ್‌ ಎಂಬ ಸಮಾಜ ಶಾಸ್ತ್ರಜ್ಞನಿಗೆ ಪರದೈಸಿನ ಕುರಿತಾದ ಕಲ್ಪನೆಯು “ರೂಢಿಯಲ್ಲಿರುವ ಚಿತ್ರಣಗಳನ್ನು” ಮನಸ್ಸಿಗೆ ತರುತ್ತದೆ. ತದ್ರೀತಿಯಲ್ಲಿ ಒಬ್ಬ ಇತಿಹಾಸಗಾರನೂ, ಪರದೈಸಿನ ವಿಚಾರದ ಕುರಿತು ಹಲವಾರು ಪುಸ್ತಕಗಳ ಲೇಖಕನೂ ಆಗಿರುವ ಶಾನ್‌ ಡೆಲೂಮೋ, ಬೈಬಲ್‌ ವಾಗ್ದಾನಗಳು ಪ್ರಧಾನವಾಗಿ ಸಾಂಕೇತಿಕ ರೀತಿಯಲ್ಲಿ ನೆರವೇರಲಿವೆ ಎಂದು ನೆನಸುತ್ತಾನೆ. ಅವನು ಬರೆಯುವುದು: “‘ಪರದೈಸಿನ ಕುರಿತು ಹೇಳಲು ಇನ್ನೇನು ಬಾಕಿಯಿದೆ?’ ಎಂಬ ಪ್ರಶ್ನೆಗೆ ಕ್ರೈಸ್ತ ಮತ ಬೋಧನೆಯು ಈ ಉತ್ತರವನ್ನು ಕೊಡುತ್ತದೆ: ಯೇಸು ಸ್ವಾಮಿಯ ಪುನರುತ್ಥಾನದಿಂದಾಗಿ ಒಂದು ದಿನ ನಾವೆಲ್ಲರು ನಮ್ಮ ಕೈಗಳನ್ನು ಜೋಡಿಸುವೆವು ಮತ್ತು ನಮ್ಮ ಕಣ್ಣುಗಳಲ್ಲಿ ಸಂತೋಷವು ತುಂಬಿರುವುದು.”

ಭೂಪರದೈಸಿನ ಕುರಿತಾದ ಸಂದೇಶವು ಈಗಲೂ ಅನ್ವಯವಾಗುತ್ತದೊ? ಭೂಮಿಗಾಗಿ ಯಾವ ಭವಿಷ್ಯವು ಕಾದಿದೆ? ಭವಿಷ್ಯದ ಕುರಿತಾದ ನೋಟವು ಮೊಬ್ಬಾಗಿದೆಯೋ ಅಥವಾ ಸ್ಪಷ್ಟವಾಗಿದೆಯೊ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಉತ್ತರಿಸುವುದು. (w06 8/15)

[ಪುಟ 2ರಲ್ಲಿರುವ ಚಿತ್ರ ಕೃಪೆ]

COVER: Emma Lee/​Life File/​Getty Images