ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯಾಧೀಶರು ಬುದ್ಧಿಮಾತಿಗೆ ಕಿವಿಗೊಡುವರೊ?

ನ್ಯಾಯಾಧೀಶರು ಬುದ್ಧಿಮಾತಿಗೆ ಕಿವಿಗೊಡುವರೊ?

ನ್ಯಾಯಾಧೀಶರು ಬುದ್ಧಿಮಾತಿಗೆ ಕಿವಿಗೊಡುವರೊ?

ಕ್ರೊಏಷಿಯದಲ್ಲಿ ವಾಸಿಸುತ್ತಿರುವ ಲಾದ್ಯಾನ ಎಂಬ ಯೆಹೋವನ ಸಾಕ್ಷಿಯೊಬ್ಬಳು, ಹಣಕಾಸಿಗೆ ಸಂಬಂಧಪಟ್ಟ ವಿಷಯಕ್ಕಾಗಿ ನ್ಯಾಯಾಲಯಕ್ಕೆ ವಿಚಾರಣೆಗಾಗಿ ನಿಶ್ಚಿತ ಸಮಯಕ್ಕೆ ಹಾಜರಿರಬೇಕಿತ್ತು. ಅವಳು ಸರಿಯಾದ ಸಮಯಕ್ಕೆ ಅಲ್ಲಿ ಹಾಜರಿದ್ದಳಾದರೂ, ಆ ಕೇಸಿನಲ್ಲಿ ಒಳಗೂಡಿದ್ದ ಮತ್ತೊಂದು ಪಕ್ಷದವರು ಬರಲು ತಡವಾಯಿತು. ಲಾದ್ಯಾನಳು ಆ ಸಂದರ್ಭದಲ್ಲಿ ಸಾಕ್ಷಿಕೊಡಲು ಬಹಳ ಉತ್ಸುಕಳಾಗಿದ್ದಳು. ಆದುದರಿಂದ, ಎಲ್ಲರೂ ಕಾಯುತ್ತಾ ಇದ್ದ ಆ ಸಂದರ್ಭದಲ್ಲಿ ಅವಳು ನ್ಯಾಯಾಧೀಶರೊಂದಿಗೆ ಮಾತನಾಡಲು ಧೈರ್ಯಮಾಡಿದಳು.

“ಸರ್‌, ಬೇಗನೆ ಈ ಭೂಮಿ ಮೇಲೆ ನ್ಯಾಯಾಧೀಶರಾಗಲಿ ನ್ಯಾಯಾಲಯಗಳಾಗಲಿ ಇಲ್ಲದಿರುವ ಒಂದು ಕಾಲ ಬರಲಿದೆ ಎಂದು ನಿಮಗೆ ಗೊತ್ತೇ?” ಎಂದು ಕೇಳಿದಳು. ಅವಳು, ಇಂದು ನಮಗೆ ತಿಳಿದಿರುವಂಥ ರೀತಿಯ ನ್ಯಾಯಾಧೀಶರ ಕುರಿತು ಮಾತಾಡುತ್ತಿದ್ದಳು ಎಂಬುದು ಖಂಡಿತ.

ಆಶ್ಚರ್ಯಚಕಿತರಾದ ಆ ನ್ಯಾಯಾಧೀಶರು ಅವಳನ್ನು ಎವೆಯಿಕ್ಕದೆ ನೋಡುತ್ತಾ ಇದ್ದರು; ಅವರ ಬಾಯಿಂದ ಮಾತೇ ಹೊರಡಲಿಲ್ಲ. ಅಷ್ಟರಲ್ಲೇ ವಿಚಾರಣೆಯು ಆರಂಭವಾಯಿತು. ಅದು ಮುಗಿದ ಮೇಲೆ ದಾಖಲೆಗಳಿಗೆ ಸಹಿಹಾಕಲು ಲಾದ್ಯಾನ ಎದ್ದು ನಿಂತಾಗ, ನ್ಯಾಯಾಧೀಶರು ಅವಳ ಕಡೆಗೆ ಬಾಗಿ ಪಿಸುಗುಟ್ಟುತ್ತಾ ಕೇಳಿದ್ದು: “ನೀನೀಗ ಹೇಳಿದಂತೆ ಬೇಗನೆ ಭೂಮಿ ಮೇಲೆ ನ್ಯಾಯಾಧೀಶರಾಗಲಿ ನ್ಯಾಯಾಲಯಗಳಾಗಲಿ ಇಲ್ಲದಿರುವ ಒಂದು ಕಾಲ ಬರಲಿರುವುದು ಖಂಡಿತವೊ?”

“ಹೌದು ಸರ್‌, ಖಂಡಿತವಾಗಿ ಹಾಗೆ ಆಗಲಿದೆ!” ಎಂದು ಲಾದ್ಯಾನ ಪ್ರತ್ಯುತ್ತರಿಸಿದಳು.

“ಅದಕ್ಕೆ ನಿನ್ನ ಬಳಿ ಯಾವ ಸಾಕ್ಷ್ಯವಿದೆ?” ಎಂದು ನ್ಯಾಯಾಧೀಶರು ಕೇಳಿದರು.

“ಅದನ್ನು ಬೈಬಲಿನಲ್ಲಿ ಕಂಡುಕೊಳ್ಳಬಹುದು,” ಎಂದು ಲಾದ್ಯಾನ ಉತ್ತರಿಸಿದಳು.

ಆ ಸಾಕ್ಷ್ಯವನ್ನು ತಾನು ಓದಲು ಬಯಸುತ್ತೇನೆಂದು ನ್ಯಾಯಾಧೀಶರು ಹೇಳಿದರು. ಆದರೆ ಅವರ ಬಳಿ ಬೈಬಲ್‌ ಇರಲಿಲ್ಲ. ಆದುದರಿಂದ ಲಾದ್ಯಾನ ಅವರಿಗೊಂದು ಬೈಬಲನ್ನು ಕೊಡುವುದಾಗಿ ಹೇಳಿದಳು. ಅದರಂತೆ, ಸಾಕ್ಷಿಗಳು ಅವರನ್ನು ಭೇಟಿಮಾಡಿ ಬೈಬಲನ್ನು ಕೊಟ್ಟು, ಬೈಬಲ್‌ ಅಧ್ಯಯನ ಮಾಡುವಂತೆ ಉತ್ತೇಜಿಸಿದರು. ಆ ನ್ಯಾಯಾಧೀಶರು ಅದಕ್ಕೆ ಒಪ್ಪಿಕೊಂಡರು ಮತ್ತು ಸ್ವಲ್ಪ ಸಮಯದಲ್ಲೇ ಒಬ್ಬ ಯೆಹೋವನ ಸಾಕ್ಷಿಯಾದರು.

ಪ್ರವಾದನಾತ್ಮಕವಾಗಿ ಕೀರ್ತನೆ 2:10 ತಿಳಿಸುವುದು: “ಅರಸುಗಳಿರಾ, ವಿವೇಕಿಗಳಾಗಿರ್ರಿ; ದೇಶಾಧಿಪತಿಗಳಿರಾ, [“ನ್ಯಾಯಾಧೀಶರುಗಳಿರಾ,” NW] ಬುದ್ಧಿಮಾತುಗಳಿಗೆ ಕಿವಿಗೊಡಿರಿ.” ಅಂಥ ವ್ಯಕ್ತಿಗಳು ದೀನಭಾವದಿಂದ ಯೆಹೋವನ ಮಾರ್ಗದರ್ಶನೆಯನ್ನು ಸ್ವೀಕರಿಸುವುದನ್ನು ನೋಡುವುದು ಎಷ್ಟು ಹೃದಯೋಲ್ಲಾಸಕರ ಸಂಗತಿಯಾಗಿದೆ! (w06 12/01)

[ಪುಟ 32ರಲ್ಲಿರುವ ಚಿತ್ರ]

ನ್ಯಾಯಾಧೀಶರೊಂದಿಗೆ ನಿಂತಿರುವ ಲಾದ್ಯಾನ