ಬದುಕಿನಲ್ಲಿ ಉದ್ದೇಶವಿರುವ ಒಬ್ಬ ಶತಾಯುಷಿ
ಬದುಕಿನಲ್ಲಿ ಉದ್ದೇಶವಿರುವ ಒಬ್ಬ ಶತಾಯುಷಿ
ಎಲಿನ್ ಎಂಬವರ ಹೆಸರನ್ನು ಇತ್ತೀಚೆಗೆ ಸ್ವೀಡನ್‌ನಲ್ಲಿ ತಯಾರಿಸಲಾದ 105 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 60 ಮಂದಿಯ ಒಂದು ಪಟ್ಟಿಯಲ್ಲಿ ಸೇರಿಸಲಾಯಿತು. ಅವರು 105 ವರ್ಷ ಪ್ರಾಯದವರು. ಅವರು ವೃದ್ಧಾಪ್ಯದ ನಿಮಿತ್ತ ವೃದ್ಧಾಶ್ರಮದಲ್ಲಿ ಇರುವುದಾದರೂ, ಒಳ್ಳೇ ಆರೋಗ್ಯದಿಂದಿರುವ ಕಾರಣ ಯೆಹೋವನ ಸಾಕ್ಷಿಯಾಗಿ ಆತನ ಸೇವೆಯಲ್ಲಿ ಸಕ್ರಿಯವಾಗಿ ಮುಂದುವರಿಯುತ್ತಿದ್ದಾರೆ. ಈ ಜೀವನಕ್ರಮವನ್ನು ಅವರು 60 ವರ್ಷಗಳ ಹಿಂದೆ ಆರಿಸಿಕೊಂಡಿದ್ದರು.
ಇತರರಿಗೆ ಸಾರುವುದರಲ್ಲಿ ಎಲಿನ್ ಅಪೊಸ್ತಲ ಪೌಲನ ಮಾದರಿಯನ್ನು ಅನುಸರಿಸುತ್ತಾರೆ. ಪೌಲನು ಗೃಹಬಂಧನದಲ್ಲಿದ್ದಾಗ ತನ್ನನ್ನು ಸಂದರ್ಶಿಸುತ್ತಿದ್ದ ಎಲ್ಲರಿಗೆ ಸಾರುತ್ತಿದ್ದನು. (ಅ. ಕೃತ್ಯಗಳು 28:16, 30, 31) ತದ್ರೀತಿಯಲ್ಲಿ, ಎಲಿನ್ ತನಗೆ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುತ್ತಾ ಆಶ್ರಮಕ್ಕೆ ಬರುವ ಜನರನ್ನು ಅಂದರೆ ಶುಚಿಮಾಡುವವರು, ದಂತವೈದ್ಯರು, ಡಾಕ್ಟರರು, ಕ್ಷೌರಿಕರು, ನರ್ಸ್‌ಗಳು ಹೀಗೆ ಎಲ್ಲರೊಂದಿಗೆ ಬೈಬಲಿನಲ್ಲಿರುವ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ. ಅಷ್ಟುಮಾತ್ರವಲ್ಲದೆ, ಎಲಿನ್‌ರವರನ್ನು ಭೇಟಿಮಾಡಿಸಲು ಅವರ ಸಭೆಯಲ್ಲಿರುವ ಜೊತೆವಿಶ್ವಾಸಿಗಳು ತಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಆಗಾಗ್ಗೆ ಕರೆದುಕೊಂಡು ಹೋಗುತ್ತಾರೆ. ಈ ಮೂಲಕ ಎಲಿನ್‌ರ ಜ್ಞಾನ ಮತ್ತು ಅನುಭವದಿಂದ ಅವರು ಪ್ರಯೋಜನಪಡೆದುಕೊಳ್ಳುತ್ತಾರೆ.
ಎಲಿನ್‌ರ ಸಭೆಯ ಸದಸ್ಯರು ಆಕೆಗಿರುವ ಹರ್ಷಚಿತ್ತ ವ್ಯಕ್ತಿತ್ವ ಮತ್ತು ಕುತೂಹಲವನ್ನು ಗಣ್ಯಮಾಡುತ್ತಾರೆ. ಒಬ್ಬ ಜೊತೆ ಸಾಕ್ಷಿಯು ಹೇಳುವುದು: “ಆಕೆಯಲ್ಲಿರುವ ವಿಶೇಷತೆ ಏನೆಂದರೆ ಸಭೆಯ ಎಲ್ಲಾ ಚಟುವಟಿಕೆಗಳ ಬಗ್ಗೆ ಆಕೆಗೆ ತಿಳಿದಿರುತ್ತದೆ. ಆಕೆಗೆ ಎಲ್ಲಾ ಮಕ್ಕಳ ಮತ್ತು ಹೊಸದಾಗಿ ಸಭೆಗೆ ಬರುತ್ತಿರುವವರ ಹೆಸರುಗಳು ನೆನಪಿರುತ್ತದೆ.” ಎಲಿನ್‌ರ ಅತಿಥಿಸತ್ಕಾರ, ಹಾಸ್ಯ ಪ್ರಜ್ಞೆ, ಮತ್ತು ಜೀವನದ ಕುರಿತು ಆಕೆಗಿರುವ ಸಕಾರಾತ್ಮಕ ದೃಷ್ಟಿಕೋನ ಸಹ ಎಲ್ಲರಿಗೂ ಚಿರಪರಿಚಿತ.
ತನ್ನ ಸಂತೋಷವನ್ನು ಕಾಪಾಡಿಕೊಳ್ಳಲು ಮತ್ತು ಜೀವನವನ್ನು ಉದ್ದೇಶಪೂರಿತವಾಗಿಟ್ಟುಕೊಳ್ಳಲು ಎಲಿನ್‌ರಿಗೆ ಯಾವುದು ಸಹಾಯಮಾಡುತ್ತದೆ? ಅವರು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಪ್ರತಿನಿತ್ಯವೂ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಿಂದ ಪ್ರತಿದಿನಕ್ಕಾಗಿರುವ ಒಂದು ಬೈಬಲ್ ವಚನವನ್ನು ಓದುತ್ತಾರೆ. ಭೂತಕನ್ನಡಿ ಹಿಡಿದುಕೊಂಡು ಅವರು ದಿನಾಲೂ ಬೈಬಲಿನ ಸ್ವಲ್ಪ ಭಾಗವನ್ನು ಸಹ ಓದುತ್ತಾರೆ. ಯೆಹೋವನ ಸಾಕ್ಷಿಗಳ ಸಾಪ್ತಾಹಿಕ ಕೂಟಗಳಿಗೂ ತಯಾರಿ ಮಾಡುತ್ತಾರೆ ಮತ್ತು ಕೂಟಗಳಿಗೆ ಹಾಜರಾಗಲು ಅಶಕ್ತರಾಗಿರುವುದಾದರೂ, ಆ ಕಾರ್ಯಕ್ರಮಗಳ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳುತ್ತಾರೆ. ಕ್ರಮವಾಗಿ ಬೈಬಲ್ ಮತ್ತು ಬೈಬಲಾಧರಿತ ಪ್ರಕಾಶನಗಳನ್ನು ಓದುವುದು ಮತ್ತು ತಪ್ಪದೇ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ನಾವು ಎಷ್ಟೇ ಪ್ರಾಯದವರಾಗಿದ್ದರೂ ಉದ್ದೇಶ ಮತ್ತು ಸಂತೃಪ್ತಿಯೊಂದಿಗೆ ಜೀವಿಸುವಂತೆ ನಮಗೆ ಸಹಾಯಮಾಡಬಲ್ಲದು.—ಕೀರ್ತನೆ 1:2; ಇಬ್ರಿಯ 10:24, 25. (w07 1/15)