ನೆನಪಿಸಿಕೊಳ್ಳಬೇಕಾದ ಒಂದು ಘಟನೆ! ಸೋಮವಾರ, ಏಪ್ರಿಲ್ 2
ನೆನಪಿಸಿಕೊಳ್ಳಬೇಕಾದ ಒಂದು ಘಟನೆ! ಸೋಮವಾರ, ಏಪ್ರಿಲ್ 2
ಅದು ಸಾ.ಶ. 33ರ ನೈಸಾನ್ ತಿಂಗಳ 14ನೆಯ ದಿನವಾಗಿತ್ತು. ಅಂದು ಯೇಸು, ತನ್ನ ಅಪೊಸ್ತಲರಿಗೆ ದ್ರಾಕ್ಷಾಮದ್ಯ ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ದಾಟಿಸಿ, ಅವರು ಅದನ್ನು ಸೇವಿಸುವಂತೆ ಕೇಳಿಕೊಂಡನು. ಆ ಸಂದರ್ಭದಲ್ಲಿ ಅವನು ಅವರಿಗೆ ಹೀಗೆ ನಿರ್ದೇಶಿಸಿದನು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಲೂಕ 22:19.
ಯೇಸು ಆ ರಾತ್ರಿ ನಿರ್ದೇಶಿಸಿದಂತೆಯೇ, ಯೆಹೋವನ ಸಾಕ್ಷಿಗಳು ಅವನ ಮರಣವನ್ನು ವರ್ಷಕ್ಕೊಮ್ಮೆ ಜ್ಞಾಪಿಸಿಕೊಳ್ಳಲಿಕ್ಕಾಗಿ ಲೋಕದಾದ್ಯಂತ ಒಟ್ಟುಸೇರುತ್ತಾರೆ. ಈ ವರ್ಷ ನೈಸಾನ್ 14ರ ತಾರೀಖು, ಸೋಮವಾರ, ಏಪ್ರಿಲ್ 2 ಸೂರ್ಯಾಸ್ತಮಾನದ ನಂತರ ಆರಂಭಗೊಳ್ಳುತ್ತದೆ. ಆ ದಿನದ ಸಾಯಂಕಾಲದಂದು ಈ ಜ್ಞಾಪಕಾಚರಣೆಗಾಗಿ ನಮ್ಮೊಂದಿಗೆ ಜೊತೆಗೂಡುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ. ಈ ಕೂಟದ ನಿಗದಿತ ಸಮಯ ಮತ್ತು ಸ್ಥಳದ ಬಗ್ಗೆ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳೊಂದಿಗೆ ದಯವಿಟ್ಟು ವಿಚಾರಿಸಿ ತಿಳಿದುಕೊಳ್ಳಿರಿ. (w07 3/1)