ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ತೊಂದರೆಗ್ರಸ್ತ ಲೋಕದಲ್ಲೂ ನೀವು ಸುರಕ್ಷಿತರಾಗಿರಬಲ್ಲಿರಿ!

ಈ ತೊಂದರೆಗ್ರಸ್ತ ಲೋಕದಲ್ಲೂ ನೀವು ಸುರಕ್ಷಿತರಾಗಿರಬಲ್ಲಿರಿ!

ಒಂದು ವಿಶೇಷ ಭಾಷಣಕ್ಕೆ ಆಮಂತ್ರಣ

ಈ ತೊಂದರೆಗ್ರಸ್ತ ಲೋಕದಲ್ಲೂ ನೀವು ಸುರಕ್ಷಿತರಾಗಿರಬಲ್ಲಿರಿ!

ಈ ಬೈಬಲಾಧರಿತ ಭಾಷಣವನ್ನು 230ಕ್ಕೂ ಹೆಚ್ಚಿನ ದೇಶಗಳಲ್ಲಿ ಲೋಕವ್ಯಾಪಕವಾಗಿ ನೀಡಲಾಗುವುದು. ಹೆಚ್ಚಿನ ಸ್ಥಳಗಳಲ್ಲಿ ಅದನ್ನು 2007ರ ಏಪ್ರಿಲ್‌ 15, ಭಾನುವಾರದಂದು ಕೊಡಲಾಗುವುದು. ನೀವೇನು ಕಲಿಯುವಿರಿ? ಉದಾಹರಣೆಗೆ, ಈ ಮುಂದಿನ ಪ್ರಶ್ನೆಗಳ ಬಗ್ಗೆ ಯೋಚಿಸಿ:

ಲೋಕವ್ಯಾಪಕವಾಗಿ ಕೋಟ್ಯಾಂತರ ಜನರಲ್ಲಿ ತಾವು ಸುರಕ್ಷಿತರಿಲ್ಲ ಎಂಬ ಭಾವನೆ ಏಕಿದೆ?

ಜನರಲ್ಲಿದ್ದ ಸುರಕ್ಷತೆಯ ಭಾವನೆಯು ನಿರ್ದಿಷ್ಟವಾಗಿ ಯಾವಾಗ ಅಳಿದುಹೋಯಿತು?

ಎಲ್ಲಿ ಮತ್ತು ಹೇಗೆ ನಿಜವಾದ ಸುರಕ್ಷತೆಯನ್ನು ಕಂಡುಕೊಳ್ಳಬಹುದು?

ಈ ಪ್ರಶ್ನೆಗಳಿಗೆ ಉತ್ತರಗಳನ್ನು, ಸಾವಿರಾರು ಸ್ಥಳಗಳಲ್ಲಿ ನೀಡಲ್ಪಡುವ ಈ ಮಹತ್ವಪೂರ್ಣ ಬೈಬಲಾಧರಿತ ಭಾಷಣಕ್ಕೆ ಹಾಜರಿರುವ ಮೂಲಕ ಕಲಿತುಕೊಳ್ಳಿರಿ. ಹೆಚ್ಚಿನ ಸಂದರ್ಭಗಳಲ್ಲಿ, ಈ ಭಾಷಣವನ್ನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನೀಡಲಾಗುವುದು. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಈ ಭಾಷಣದ ಸಮಯ ಮತ್ತು ವಿಳಾಸದ ವಿವರಗಳನ್ನು ನಿಮಗೆ ನೀಡಲು ಸಂತೋಷಿಸುವರು. ಈ ಸಮಯೋಚಿತವಾದ ಮತ್ತು ಉತ್ತೇಜನದಾಯಕವಾದ ಬೈಬಲಾಧರಿತ ಭಾಷಣವನ್ನು ಹಾಜರಾಗಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತೇವೆ. (w07 4/1)