ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಷ್ಯಾದ ಸಂಗೀತದಲ್ಲಿ ದೇವರ ನಾಮ

ರಷ್ಯಾದ ಸಂಗೀತದಲ್ಲಿ ದೇವರ ನಾಮ

ರಷ್ಯಾದ ಸಂಗೀತದಲ್ಲಿ ದೇವರ ನಾಮ

ರಷ್ಯಾದ ಸುಪ್ರಸಿದ್ಧ ಸಂಗೀತಕಾರ ಮೋಡೆಸ್ಟ್‌ ಮುಸಾರ್ಗ್‌ಸ್ಕೀ ಎಂಬವನು 1877ರಲ್ಲಿ ಒಂದು ಸ್ತುತಿಗಾನವನ್ನು ಪ್ರಕಟಿಸಿದನು. ಇದು ಬೈಬಲ್‌ ದೇಶಗಳಲ್ಲಿ ನಡೆದ ಒಂದು ಕಥೆಯ ಮೇಲೆ ಆಧಾರಿತವಾಗಿತ್ತು. ಅದರ ಕುರಿತು ಗೆಳೆಯನಿಗೆ ಬರೆದ ತನ್ನ ಪತ್ರದಲ್ಲಿ ಅವನಂದದ್ದು: “ಜೀಸಸ್‌ ನಾವಿನಸ್‌ [ಯೆಹೋಶುವ] ಎಂಬ ಬೈಬಲಿನ ದೃಶ್ಯವೊಂದನ್ನು ನಾನು ಬರೆದಿದ್ದೇನೆ. ನಾವಿನಸ್‌ನ ವಿಜೇತ ಸೈನ್ಯವು ಕಾನಾನಿನ ಮೂಲಕ ಹಾದುಹೋದ ಮಾರ್ಗವನ್ನೂ ಸೇರಿಸಿ ಅದು ಪೂರ್ತಿಯಾಗಿ ಬೈಬಲಿಗನುಸಾರವಾಗಿದೆ.” ಮುಸಾರ್ಗ್‌ಸ್ಕೀಯು “ಸನ್ಹೇರೀಬನ ವಿನಾಶ” ಎಂಬ ಕೃತಿ ಹಾಗೂ ತನ್ನ ಇತರ ಕೃತಿಗಳಲ್ಲಿ ಬೈಬಲ್‌ನ ಪ್ರಧಾನ ವಿಷಯಗಳನ್ನೂ ವ್ಯಕ್ತಿಗಳನ್ನೂ ಬಣ್ಣಿಸಿದ್ದಾನೆ.

ಆದರೆ ಗಮನಾರ್ಹ ವಿಷಯವೇನೆಂದರೆ, “ಜೀಸಸ್‌ ನಾವಿನಸ್‌” ಹಾಗೂ 1874ರಲ್ಲಿ ಪ್ರಕಟಿಸಿದ “ಸನ್ಹೇರೀಬನ ವಿನಾಶ” ಕೃತಿಗಳಲ್ಲಿ ಅವನು ರಷ್ಯಾ ಭಾಷೆಯ ದೈವಿಕ ನಾಮದ ಉಚ್ಚಾರಣೆಯನ್ನು ಬಳಸಿ ದೇವರ ಕುರಿತು ಉಲ್ಲೇಖಿಸಿದ್ದಾನೆ. ಆ ಉಚ್ಚಾರಣೆಯು ಬೈಬಲಿನ ಹೀಬ್ರು ಶಾಸ್ತ್ರಗಳಲ್ಲಿ, יהוה (YHWH) ಎಂಬ ನಾಲ್ಕು ವ್ಯಂಜನಗಳಿಂದ ಸೂಚಿಸಲ್ಪಟ್ಟಿದ್ದು, ಸುಮಾರು 7,000 ಬಾರಿ ಕಂಡುಬರುತ್ತದೆ.

ಆದುದರಿಂದ, ಬೈಬಲ್‌ನಲ್ಲಿರುವ ಯೆಹೋವ ಎಂಬ ದೇವರ ಹೆಸರು ರಷ್ಯಾದ ಜನರಿಗೆ 20ನೇ ಶತಮಾನಕ್ಕೆ ಮುಂಚೆಯೇ ತಿಳಿದಿತ್ತೆಂದು ಮುಸಾರ್ಗ್‌ಸ್ಕೀಯ ಕೃತಿಗಳು ತೋರಿಸುತ್ತವೆ. ಅದು ತಕ್ಕದಾಗಿತ್ತು. ಏಕೆಂದರೆ ಯೆಹೋವನು ತಾನೇ ಮೋಶೆಗೆ ಹೇಳಿದ್ದು: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.”—ವಿಮೋಚನಕಾಂಡ 3:15. (w07 9/1)

[ಪುಟ 32ರಲ್ಲಿರುವ ಚಿತ್ರ]

ಮುಸಾರ್ಗ್‌ಸ್ಕೀಯ ಸಂಗೀತದ ಮುದ್ರಿತ ಪ್ರತಿಯನ್ನು ಇಡಲಾಗಿರುವ ಸೆಂಟ್‌ ಪೀಟರ್ಸ್‌ಬರ್ಗ್‌ ಲಲಿತಾಕಲಾಶಾಲೆ, 1913ರಲ್ಲಿ

[ಪುಟ 32ರಲ್ಲಿರುವ ಚಿತ್ರ ಕೃಪೆ]

ಕೃತಿಹಾಳೆ: The Scientific Music Library of the Saint-Petersburg State Conservatory named after N.A. Rimsky-Korsakov; ಬೀದಿ ದೃಶ್ಯ: National Library of Russia, St. Petersburg