ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅವನ ನಂಬಲಶಕ್ಯವಾದ ಸ್ಥಿರಸಂಕಲ್ಪವನ್ನು ನಾನು ಮೆಚ್ಚಿದೆ”

“ಅವನ ನಂಬಲಶಕ್ಯವಾದ ಸ್ಥಿರಸಂಕಲ್ಪವನ್ನು ನಾನು ಮೆಚ್ಚಿದೆ”

“ಅವನ ನಂಬಲಶಕ್ಯವಾದ ಸ್ಥಿರಸಂಕಲ್ಪವನ್ನು ನಾನು ಮೆಚ್ಚಿದೆ”

ಜರ್ಮನ್‌ ಗ್ರಂಥಕರ್ತ ಹಾಗೂ 1999ರಲ್ಲಿ ಸಾಹಿತ್ಯ ಕ್ಷೇತ್ರದ ನೋಬೆಲ್‌ ಪಾರಿತೋಷಕವನ್ನು ಗೆದ್ದ ಗುಂಟರ್‌ ಗ್ರಾಸ್‌ ಎಂಬವನು ತನ್ನ ಆತ್ಮಕಥೆಯನ್ನು ಇಸವಿ 2006ರಲ್ಲಿ ಪ್ರಕಾಶಿಸಿದನು. ಅದರಲ್ಲಿ ಅವನು, ತನ್ನನ್ನು ಜರ್ಮನ್‌ ಪೌರ ರಕ್ಷಣಾಪಡೆಗೆ ಸೇರಿಸಲಾದ ಸಮಯದ ಕುರಿತು ತಿಳಿಸುತ್ತಾನೆ. ಯಾವನೋ ಒಬ್ಬ ವ್ಯಕ್ತಿಯು ಅವನ ಮೇಲೆ ಎಷ್ಟು ಗಾಢ ಪರಿಣಾಮ ಬೀರಿದ್ದನೆಂದರೆ ಸುಮಾರು 60 ವರ್ಷಕ್ಕಿಂತಲೂ ಹೆಚ್ಚು ಕಾಲ ತನ್ನ ನೆನಪಿನಲ್ಲಿ ಅದು ಅಳಿಯದೆ ಉಳಿದಿದೆ ಎಂದು ಅದೇ ಪುಸ್ತಕದಲ್ಲಿ ಅವನು ತಿಳಿಸುತ್ತಾನೆ. ಒಬ್ಬ ಏಕಾಂಗಿ ವ್ಯಕ್ತಿಯು ನಂಬಿಕೆಗಾಗಿ ಹಿಂಸೆಯ ಕೆಳಗೆ ನಿಶ್ಚಲನಾಗಿ ನಿಂತ ಕುರಿತು ಅವನು ತಿಳಿಸುತ್ತಿದ್ದನು.

ಯುದ್ಧಶಸ್ತ್ರಗಳನ್ನೆತ್ತಲು ನಿರಾಕರಿಸಿದ ಈ ಅಸಾಧಾರಣ ವ್ಯಕ್ತಿಯನ್ನು ಗ್ರಾಸ್‌ ನೆನಪಿಗೆ ತಂದದ್ದು, ದಿನಪತ್ರಿಕೆಯಾದ ಫ್ರಾಂಕ್‌ಫರ್ಟರ್‌ ಆಲ್ಗೆಮೈನ್‌ ಸಿಟನ್‌ ಪ್ರಕಾಶಿಸಿದ್ದ ಒಂದು ಇಂಟರ್‌ವ್ಯೂನಲ್ಲಿ. ಈ ವ್ಯಕ್ತಿಯು “ಆಗಿನ ಜನಪ್ರಿಯ ಸಿದ್ಧಾಂತಗಳಾಗಿದ್ದ ನಾಜೀ, ಕಮ್ಯೂನಿಸ್ಟ್‌ ಅಥವಾ ಸಮಾಜವಾದಿ ಮುಂತಾದ ಯಾವುದೇ ಪಕ್ಷದ ಸದಸ್ಯನಾಗಿರಲಿಲ್ಲ. ಬದಲಿಗೆ ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು” ಎಂದು ಗ್ರಾಸ್‌ ನೆನಪಿಸಿದನು. ಆ ಸಾಕ್ಷಿಯ ಹೆಸರು ಗ್ರಾಸ್‌ ಮರೆತುಬಿಟ್ಟದ್ದರಿಂದ, ‘ನಾವು-ಅದೆಲ್ಲ-ಮಾಡುವುದಿಲ್ಲ’ ಎಂಬ ಅಡ್ಡಹೆಸರನ್ನು ಅವನಿಗೆ ಕೊಟ್ಟಿದ್ದಾನೆ. ಯೆಹೋವನ ಸಾಕ್ಷಿಗಳ ಕುರಿತು ಸಂಶೋಧನೆ ಮಾಡಿದವರು ಆ ವ್ಯಕ್ತಿಯನ್ನು ಯೊವಾಕಿಮ್‌ ಆಲ್ಫಮ್ಯಾನ್‌ ಎಂದು ಗುರುತುಪಡಿಸಿದ್ದಾರೆ. ಅವನಿಗೆ ಪದೇ ಪದೇ ಹೊಡೆದು ಅವಮಾನಿಸಲಾಗಿತ್ತು. ಅನಂತರ ಅವನನ್ನು ಏಕಾಂತ ಸೆರೆವಾಸಕ್ಕೆ ಹಾಕಲಾಯಿತು. ಆದರೆ ಆಲ್ಫಮ್ಯಾನ್‌ ಎಳ್ಳಷ್ಟೂ ಬಗ್ಗದೆ ನಿಶ್ಚಲನಾಗಿ ಆಯುಧಗಳನ್ನೆತ್ತಲು ನಿರಾಕರಿಸಿದನು.

“ಅವನ ನಂಬಲಶಕ್ಯವಾದ ಸ್ಥಿರಸಂಕಲ್ಪವನ್ನು ನಾನು ಮೆಚ್ಚಿದೆ,” ಎನ್ನುತ್ತಾನೆ ಗ್ರಾಸ್‌. “ನಾನು ನನ್ನನ್ನೇ ಕೇಳಿಕೊಂಡೆ: ಇವನು ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಬಲ್ಲನು? ಅವನದನ್ನು ಮಾಡುವುದು ಹೇಗೆ?” ಅವನ ಸಮಗ್ರತೆಯನ್ನು ಮುರಿಯಲು ಮಾಡಲ್ಪಟ್ಟ ಸುದೀರ್ಘ ಪ್ರಯತ್ನಗಳನ್ನೆಲ್ಲ ತಾಳಿಕೊಂಡ ಬಳಿಕ 1944ರ ಫೆಬ್ರವರಿಯಲ್ಲಿ ಆಲ್ಫಮ್ಯಾನ್‌ನನ್ನು ಶ್ಟ್ಯುಟ್‌ಹಾಫ್‌ ಸೆರೆಶಿಬಿರಕ್ಕೆ ಕಳುಹಿಸಲಾಯಿತು. 1945ರ ಏಪ್ರಿಲ್‌ ತಿಂಗಳಲ್ಲಿ ಅವನು ಬಿಡುಗಡೆಹೊಂದಿದನು, ಯುದ್ಧವನ್ನು ಪಾರಾದನು, ಮತ್ತು 1998ರಲ್ಲಿ ತನ್ನ ಮರಣದ ತನಕ ಯೆಹೋವನ ನಿಷ್ಠಾವಂತ ಸಾಕ್ಷಿಯಾಗಿ ಉಳಿದನು.

ಜರ್ಮನಿಯಲ್ಲಿ ಮತ್ತು ನಾಜೀ ಆಳ್ವಿಕೆಯ ದೇಶಗಳಲ್ಲಿ ತಮ್ಮ ನಂಬಿಕೆಯ ಕಾರಣ ಕ್ರೌರ್ಯವನ್ನು ಅನುಭವಿಸಿದ ಸುಮಾರು 13,400 ಮಂದಿ ಸಾಕ್ಷಿಗಳಲ್ಲಿ ಆಲ್ಫಮ್ಯಾನನು ಒಬ್ಬನಾಗಿದ್ದನು. ಸಾಕ್ಷಿಗಳು ರಾಜಕೀಯವಾಗಿ ತಟಸ್ಥರಾಗಿ ನಿಂತದ್ದು ಮತ್ತು ಬೇರೆಯವರ ಮೇಲೆ ಕತ್ತಿಯನ್ನೆತ್ತದೆ ಇದ್ದದ್ದು ಬೈಬಲಿನ ನಿರ್ದೇಶನವನ್ನು ಪಾಲಿಸಲಿಕ್ಕಾಗಿಯೇ. (ಮತ್ತಾಯ 26:52; ಯೋಹಾನ 18:36) ಸುಮಾರು 4,200 ಯೆಹೋವನ ಸಾಕ್ಷಿಗಳು ಸೆರೆಶಿಬಿರಗಳಲ್ಲಿ ಬಂಧಿಗಳಾಗಿದ್ದರು ಮತ್ತು 1,490 ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡರು. ಇಂದು ಕೂಡ ಅವರು ತೆಗೆದುಕೊಳ್ಳುವ ನಿಲುವು, ಯೆಹೋವನ ಸಾಕ್ಷಿಗಳಾಗಿರದಿದ್ದರೂ ಅವರ ನಿಶ್ಚಲತೆಯನ್ನು ಮೆಚ್ಚುವ ಅನೇಕರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. (w07 10/15)

[ಪುಟ 32ರಲ್ಲಿರುವ ಚಿತ್ರ]

ಯೊವಾಕಿಮ್‌ ಆಲ್ಫಮ್ಯಾನ್‌