ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದಯವಿಟ್ಟು ಈ ಚಿಕ್ಕ ಉಡುಗೊರೆಯನ್ನು ಸ್ವೀಕರಿಸಿ”

“ದಯವಿಟ್ಟು ಈ ಚಿಕ್ಕ ಉಡುಗೊರೆಯನ್ನು ಸ್ವೀಕರಿಸಿ”

“ದಯವಿಟ್ಟು ಈ ಚಿಕ್ಕ ಉಡುಗೊರೆಯನ್ನು ಸ್ವೀಕರಿಸಿ”

ಹೀಗೆಂದು, ರಷ್ಯಾದಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ಗೆ ಬಂದ ಒಂದು ಪತ್ರದಲ್ಲಿ ಬರೆದಿತ್ತು. ಆ ಪತ್ರದೊಂದಿಗೆ ಉಣ್ಣೆಯ ಕಾಲುಚೀಲಗಳು ತುಂಬಿದ್ದ ಒಂದು ದೊಡ್ಡ ಪೆಟ್ಟಿಗೆ ಸಹ ಇತ್ತು.

ಆ ಉಡುಗೊರೆಯನ್ನು 67 ವರ್ಷದ ಆಲ್ಲ ಎಂಬ ಯೆಹೋವನ ಸಾಕ್ಷಿ ಕಳುಹಿಸಿದ್ದಳು. ಅವಳು ರಷ್ಯಾದ ದೂರ ಪ್ರಾಚ್ಯ ದೇಶದಲ್ಲಿನ ಸಭೆಯೊಂದರಲ್ಲಿ ಸೇವೆಸಲ್ಲಿಸುತ್ತಿದ್ದಾಳೆ. ಆಲ್ಲ ಹತ್ತಕ್ಕಿಂತಲೂ ಹೆಚ್ಚು ವರುಷಗಳಿಂದ ಯೆಹೋವನನ್ನು ಸೇವಿಸುತ್ತಿದ್ದು, ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಿದ್ದಾಳೆ. ಆದರೆ ಒಮ್ಮೆ ಅವಳಿಗೆ ಲಕ್ವ ಹೊಡೆದು ಇದಕ್ಕಿದ್ದ ಹಾಗೆ ಅವಳ ದೇಹದ ಒಂದು ಭಾಗವು ನಿಷ್ಕ್ರಿಯವಾಯಿತು. ಹಾಗಿದ್ದರೂ ಅವಳಲ್ಲಿದ್ದ ಪ್ರೀತಿಯು ಪ್ರಥಮ ಶತಮಾನದ ದೊರ್ಕ ಎಂಬ ಕ್ರೈಸ್ತ ಸ್ತ್ರೀಯಂತೆ ಸತ್ಕಾರ್ಯವನ್ನು ಮಾಡಲು ಪ್ರಚೋದಿಸಿತು. ದೊರ್ಕಳು ಜೊತೆ ವಿಶ್ವಾಸಿಗಳಿಗಾಗಿ ಉಡುಪುಗಳನ್ನು ಮಾಡಿಕೊಡುತ್ತಿದ್ದಳು.—ಅ. ಕೃತ್ಯಗಳು 9:36, 39.

ಆಲ್ಲ ಆ ಪತ್ರದಲ್ಲಿ ಹೀಗೆಂದು ಬರೆದಿದ್ದಳು: “ನನ್ನ ಎರಡು ಕಾಲುಗಳು ನಿತ್ರಾಣಗೊಂಡು ಸ್ವಲ್ಪವೂ ಅಲ್ಲಾಡಿಸಲು ಆಗುವುದಿಲ್ಲ. ಆದರೆ ನನ್ನ ಕೈಗಳೆರಡು ಚೆನ್ನಾಗಿವೆ. ಆದುದರಿಂದ ಪತ್ರಗಳನ್ನು ಬರೆಯುವ ಮೂಲಕ ನಾನು ಸಾಕ್ಷಿ ನೀಡುತ್ತೇನೆ. ಮಾತ್ರವಲ್ಲ, ನನ್ನ ಕೈಗಳು ಚೆನ್ನಾಗಿರುವಾಗಲೇ ಕೆಲವು ಜೊತೆ ಬೆಚ್ಚಗಿನ ಕಾಲುಚೀಲಗಳನ್ನು ಹೆಣೆಯುತ್ತೇನೆಂದು ನೆನಸಿದೆ. ಈ ಕಾಲುಚೀಲಗಳನ್ನು ರಷ್ಯಾದ ದೂರ ಪ್ರಾಚ್ಯ ದೇಶ ಮತ್ತು ಸೈಬೀರಿಯದಂಥ ಶೀತ ಪ್ರದೇಶಗಳಲ್ಲಿ ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಲ್ಲಿ ಪಾಲ್ಗೊಳ್ಳುವ ಸಹೋದರ ಸಹೋದರಿಯರಿಗೆ ಕೊಡಬೇಕೆಂದು ನಾನು ಇಚ್ಛಿಸುತ್ತೇನೆ.”

ಯೇಸು ಕ್ರಿಸ್ತನು ತನ್ನ ನಿಜ ಹಿಂಬಾಲಕರ ಕುರಿತು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಆಲ್ಲ ತೋರಿಸಿದಂಥ ಪ್ರೀತಿಯು ಯೇಸುವಿನ ನಿಜ ಶಿಷ್ಯರ ಹೆಗ್ಗುರುತಾಗಿದೆ. (w07 11/15)