ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಿಲ್ಯಡ್‌ ಪದವೀಧರರು “ಅಗೆಯಲು ಆರಂಭಿಸು”ವಂತೆ ಪ್ರೇರಿಸಲ್ಪಟ್ಟರು

ಗಿಲ್ಯಡ್‌ ಪದವೀಧರರು “ಅಗೆಯಲು ಆರಂಭಿಸು”ವಂತೆ ಪ್ರೇರಿಸಲ್ಪಟ್ಟರು

123ನೇ ಗಿಲ್ಯಡ್‌ ಪದವಿ

ಗಿಲ್ಯಡ್‌ ಪದವೀಧರರು “ಅಗೆಯಲು ಆರಂಭಿಸು”ವಂತೆ ಪ್ರೇರಿಸಲ್ಪಟ್ಟರು

ಅಂದು 2007, ಸೆಪ್ಟೆಂಬರ್‌ 8ರ ಶನಿವಾರವಾಗಿತ್ತು. ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 123ನೇ ಕ್ಲಾಸ್‌ನ ಪದವಿಪ್ರಧಾನ ಕಾರ್ಯಕಮ್ರಕ್ಕೆ 41 ದೇಶಗಳಿಂದ 6,352 ಮಂದಿ ಕೂಡಿಬಂದಿದ್ದರು. ಬೆಳಗ್ಗೆ 10 ಗಂಟೆಗೆ, ಆಡಳಿತ ಮಂಡಳಿಯ ಸದಸ್ಯರೂ ಆ ಕ್ರಾರ್ಯಕ್ರಮದ ಅಧ್ಯಕ್ಷರೂ ಆದ ಆ್ಯಂಥನೀ ಮಾರಿಸ್‌ರವರು ಸಭಿಕರನ್ನು ಸ್ವಾಗತಿಸಿದರು. ಕೆಲವು ಆರಂಭದ ಹೇಳಿಕೆಗಳನ್ನು ನೀಡಿದ ಬಳಿಕ ಮೊದಲ ಭಾಷಣವನ್ನು ನೀಡಲಿಕ್ಕಾಗಿ ಅಮೆರಿಕದ ಬ್ರಾಂಚ್‌ ಕಮಿಟಿಯ ಸದಸ್ಯರಾದ ಗ್ಯಾರಿ ಬ್ರೋ ಅವರನ್ನು ಪರಿಚಯಿಸಿದರು.

ಸಹೋದರ ಬ್ರೋ ಅವರು, ಯೆಹೋವನ ಚಿತ್ತವನ್ನು ಮಾಡುವವರ ಹೊರತೋರಿಕೆ ಹೇಗೇ ಇರಲಿ ಅವರೆಲ್ಲರೂ ಯೆಹೋವನ ದೃಷ್ಟಿಯಲ್ಲಿ ಸುಂದರವಾಗಿದ್ದಾರೆ ಎಂಬ ಆಶ್ವಾಸನೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು. (ಯೆರೆ. 13:11) ಅಂಥ ಸೌಂದರ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಪದವೀಧರರನ್ನು ಹುರಿದುಂಬಿಸಿದರು. ಅನಂತರ ಆಡಳಿತ ಮಂಡಲಿಯ ಸದಸ್ಯರಾದ ಗೆರಿಟ್‌ ಲಾಶ್‌ರವರು, ಯೆಹೋವನ ಸೇವೆಮಾಡುವಾಗ ಪ್ರತಿಫಲಕ್ಕಾಗಿ ಎದುರುನೋಡುವುದು ತಪ್ಪಲ್ಲವೆಂದು ಒತ್ತಿಹೇಳಿದರು. (ಇಬ್ರಿ. 11:6) ಆದರೆ ನಿಸ್ವಾರ್ಥ ಪ್ರೀತಿಯಿಂದ ಸೇವೆಮಾಡುವುದೇ ನಮ್ಮ ಉದ್ದೇಶವಾಗಿರಬೇಕು.

ತಿಯಾಕ್ರ್ಯಾಟಿಕ್‌ ಸ್ಕೂಲ್ಸ್‌ ಡೀಪಾರ್ಟ್‌ಮೆಂಟ್‌ನ ಮೇಲ್ವಿಚಾರಕರಾದ ವಿಲ್ಯಮ್‌ ಸ್ಯಾಮ್ವೆಲ್‌ಸನ್‌ ಮಾತನಾಡುತ್ತ, ಆಳುತ್ತಿರುವ ಅರಸನ ಕುರಿತು ಪ್ರಕಟಿಸುವ ಗೌರವಪೂರ್ಣ ನೇಮಕಕ್ಕೆ ನಿಷ್ಠಾವಂತರಾಗಿರುವಂತೆ ಹಾಗೂ ತಮ್ಮ ಸದ್ವರ್ತನೆಯ ಮೂಲಕ ಗೌರವವನ್ನು ತೋರಿಸುವಂತೆ ಪದವೀಧರರನ್ನು ಪ್ರಚೋದಿಸಿದರು. * ತಿಯಾಕ್ರ್ಯಾಟಿಕ್‌ ಸ್ಕೂಲ್ಸ್‌ ಡೀಪಾರ್ಟ್‌ಮೆಂಟ್‌ನ ಸಹಾಯಕ ಮೇಲ್ವಿಚಾರಕರಾದ ಸ್ಯಾಮ್‌ ರಾಬರ್‌ಸನ್‌, ಯಾವಾಗಲೂ ಇತರರಲ್ಲಿನ ಸದ್ಗುಣಗಳನ್ನು ಹುಡುಕುವಂತೆ ಪದವೀಧರರನ್ನು ಉತ್ತೇಜಿಸಿದರು. ಆಗ ಮಾತ್ರ ಅವರು ಎಲ್ಲಾ ‘ಸಹೋದರರನ್ನು ಪ್ರೀತಿಸಲು’ ಹೆಚ್ಚು ಸಮರ್ಥರಾಗಿರುವರು.—1 ಪೇತ್ರ 2:17.

ಆ ಸ್ಫೂರ್ತಿದಾಯಕ ಭಾಷಣಗಳ ಅನಂತರ ಗಿಲ್ಯಡ್‌ ಶಿಕ್ಷಕರಾದ ಮಾರ್ಕ್‌ ನೂಮಾರ್‌ ಅನೇಕ ಪದವೀಧರರನ್ನು ಇಂಟರ್‌ವ್ಯೂ ಮಾಡಿದರು. ಆ ಪದವೀಧರರು ಗಿಲ್ಯಡ್‌ ತರಬೇತಿಯ ಸಮಯದಲ್ಲಿ ತಮಗೆ ಕ್ಷೇತ್ರ ಸೇವೆಯಲ್ಲಿ ಸಿಕ್ಕಿದ ಅನುಭವಗಳನ್ನು ತಿಳಿಸಿದರು. ಶುಶ್ರೂಷೆಯಲ್ಲಿ ಅವರಿಗಿದ್ದ ಪ್ರೀತಿ ಮತ್ತು ಪರರಿಗೆ ಸಹಾಯಮಾಡಲು ಅವರಿಗಿದ್ದ ಇಚ್ಛೆಯನ್ನು ಸಭಿಕರು ಸ್ಪಷ್ಟವಾಗಿ ಕಾಣಸಾಧ್ಯವಿತ್ತು. ಬಳಿಕ ಪ್ಯಾಟರ್‌ಸನ್‌ ಬೆತೆಲ್‌ ಆಫೀಸಿನಲ್ಲಿ ಕೆಲಸಮಾಡುವ ಕೆಂಟ್‌ ಫಿಶರ್‌ರವರು, ಮಿಷನೆರಿಗಳನ್ನು ಹೊಂದಿರುವ ಮೂರು ಬೇರೆ ಬೇರೆ ದೇಶಗಳ ಬ್ರಾಂಚ್‌ ಕಮಿಟಿ ಸದಸ್ಯರನ್ನು ಇಂಟರ್‌ವ್ಯೂ ಮಾಡಿದರು. ಈ ಸಹೋದರರ ಹೇಳಿಕೆಗಳು, ಹೊಸ ಮಿಷನೆರಿಗಳನ್ನು ಅವರವರ ನೇಮಕಗಳಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬ ಆಶ್ವಾಸನೆಯನ್ನು ಸಭಿಕರಲ್ಲಿ ಅದರಲ್ಲೂ ಮುಖ್ಯವಾಗಿ ಅವರಲ್ಲಿದ್ದ ಅನೇಕ ಪದವೀಧರರ ಹೆತ್ತವರಲ್ಲಿ ಮೂಡಿಸಿತು. ಅನಂತರ, ಟ್ರಾನ್ಸ್‌ಲೇಷನ್‌ ಸರ್ವಿಸಸ್‌ ಡಿಪಾರ್ಟ್‌ಮೆಂಟ್‌ನಲ್ಲಿರುವ ಈಸಾಕ್‌ ಮರೇ ದೀರ್ಘಕಾಲದ ಕೆಲವು ಮಿಷನೆರಿಗಳನ್ನು ಇಂಟರ್‌ವ್ಯೂ ಮಾಡಿದರು. ಆ ಮಿಷನೆರಿಗಳ ಅನುಭವಗಳು ಪದವೀಧರರಿಗೆ ತಾವು ಮುಂದೆ ಸವಿಯಲಿರುವ ಆನಂದದ ರುಚಿನೋಡಲು ಸಹಾಯಮಾಡಿದವು.

ಕಾರ್ಯಕ್ರಮದ ಮುಖ್ಯ ಭಾಷಣವನ್ನು ಆಡಳಿತ ಮಂಡಳಿಯ ಸದಸ್ಯರಾದ ಜೆಫ್ರಿ ಜ್ಯಾಕ್ಸನ್‌ ನೀಡಿದರು. ಅದರ ಶೀರ್ಷಿಕೆ, “ಎಲ್ಲವನ್ನು ಕೇಳಿದ ಬಳಿಕ ಏನು ಮಾಡುವಿರಿ?” ಎಂದಾಗಿತ್ತು. ದಕ್ಷಿಣ ಪೆಸಿಫಿಕ್‌ನಲ್ಲಿ ಸುಮಾರು 25 ವರ್ಷ ಮಿಷನೆರಿಯಾಗಿ ಸೇವೆಸಲ್ಲಿಸಿದ ಸಹೋದರ ಜ್ಯಾಕ್ಸನ್‌ರವರು ಪರ್ವತ ಪ್ರಸಂಗದ ಸಮಾಪ್ತಿಯ ಭಾಗವನ್ನು ಚರ್ಚಿಸಿದರು. ಆ ಪ್ರಸಂಗದಲ್ಲಿ ಯೇಸು, ಬುದ್ಧಿಯುಳ್ಳ ಒಬ್ಬ ವ್ಯಕ್ತಿ ಮತ್ತು ಬುದ್ಧಿಹೀನನಾದ ಮತ್ತೊಬ್ಬ ವ್ಯಕ್ತಿಯು ಮನೆ ಕಟ್ಟಿದ್ದರ ಕುರಿತು ತಿಳಿಸಿದನು. ಇವರಿಬ್ಬರೂ ಒಂದೇ ಜಾಗದಲ್ಲಿ ಮನೆಯನ್ನು ಕಟ್ಟಿದ್ದಿರಬಹುದೆಂದು ಭಾಷಣಕರ್ತರಾದ ಜ್ಯಾಕ್ಸನ್‌ ಸೂಚಿಸಿದರು. ಬುದ್ಧಿಹೀನನು ಮನೆಯನ್ನು ಉಸುಬಿನ ಮೇಲೆಯೇ ಕಟ್ಟಿದನು, ಆದರೆ ಬುದ್ಧಿಯುಳ್ಳವನು ನೆಲೆವನ್ನು ಬಂಡೆ ಸಿಗುವ ವರೆಗೆ ಆಳವಾಗಿ ಅಗೆದು ಅದರ ಮೇಲೆ ಮನೆ ಕಟ್ಟಿದನು. ಚಂಡಮಾರುತ ಅಪ್ಪಳಿಸಿದಾಗ ಉಸುಬಿನ ಮೇಲೆ ಕಟ್ಟಿದ್ದ ಮನೆ ಧಡಮ್ಮನೆ ಬಿತ್ತು, ಬಂಡೆಯ ಮೇಲೆ ಕಟ್ಟಿದ್ದ ಮನೆಯಾದರೊ ಬೀಳಲೇ ಇಲ್ಲ.—ಮತ್ತಾ. 7:24-27; ಲೂಕ 6:48.

ತನ್ನ ಬೋಧನೆಗಳನ್ನು ಸುಮ್ಮನೆ ಕೇಳಿ ಅಲ್ಲಿಗೆ ಬಿಟ್ಟುಬಿಟ್ಟು ಅನ್ವಯಮಾಡದ ಜನರು ಆ ಬುದ್ಧಿಹೀನ ಮನುಷ್ಯನಂತಿದ್ದಾರೆ, ಆದರೆ ಅವನ್ನು ಕೇಳಿ ಅನ್ವಯಿಸಿಕೊಂಡವರು ಆ ಬುದ್ಧಿಯುಳ್ಳ ಮನುಷ್ಯನಂತಿದ್ದಾರೆ ಎಂದು ಯೇಸು ವಿವರಿಸಿದನು. ಪದವೀಧರರಿಗೆ ಸಹೋದರ ಜ್ಯಾಕ್ಸನ್‌ ಹೇಳಿದ್ದು, “ಬೈಬಲ್‌ ಅಧ್ಯಯನದಿಂದ ಕಲಿತ ವಿಷಯಗಳನ್ನು ನಿಮ್ಮ ಮಿಷನೆರಿ ಕ್ಷೇತ್ರದಲ್ಲಿ ಅನ್ವಯಿಸಿಕೊಳ್ಳುವಾಗ ನೀವೂ ಆ ಬುದ್ಧಿಯುಳ್ಳ ಮನುಷ್ಯನಂತಿರುವಿರಿ.” ಹೀಗೆ, ಮುಕ್ತಾಯದಲ್ಲಿ ಅವರು ಪದವೀಧರರನ್ನು ತಮ್ಮ ಮಿಷನೆರಿ ನೇಮಕಗಳಲ್ಲಿ “ಅಗೆಯಲು ಆರಂಭಿಸು”ವಂತೆ ಪ್ರೇರಿಸಿದರು.

ಕೊನೆಗೆ, ಪದವೀಧರರು ತಮ್ಮ ಪದವಿಪತ್ರಗಳನ್ನು ಮತ್ತು ನೇಮಕಗಳನ್ನು ಪಡಕೊಂಡರು. ಸಮಾಪ್ತಿಯಲ್ಲಿ ಸಹೋದರ ಮಾರಿಸ್‌ ಕೆಲವು ಬುದ್ಧಿವಾದವನ್ನು ನೀಡಿದರು. ಯೇಸುವನ್ನು ಸದಾ ಅನುಸರಿಸುವಂತೆ ಮತ್ತು ಬಲಕ್ಕಾಗಿ ಸರ್ವದಾ ಯೆಹೋವನ ಮೇಲೆ ಆತುಕೊಳ್ಳುವಂತೆ ಅವರು ಪದವೀಧರರನ್ನು ಪ್ರೋತ್ಸಾಹಿಸಿದರು. ಇದರೊಂದಿಗೆ ಪದವಿಪ್ರಧಾನ ಕಾರ್ಯಕ್ರಮವು ಮುಕ್ತಾಯಗೊಂಡಿತು.

[ಪಾದಟಿಪ್ಪಣಿ]

^ ಪ್ಯಾರ. 5 ತಿಯಾಕ್ರ್ಯಾಟಿಕ್‌ ಸ್ಕೂಲ್ಸ್‌ ಡೀಪಾರ್ಟ್‌ಮೆಂಟ್‌, ಟಿಚಿಂಗ್‌ ಕಮಿಟಿಯ ನೇತೃತ್ವದಡಿಯಲ್ಲಿ ಗಿಲ್ಯಡ್‌ ಶಾಲೆ, ಬ್ರಾಂಚ್‌ ಕಮಿಟಿ ಸದಸ್ಯರ ಶಾಲೆ ಮತ್ತು ಸಂಚರಣ ಮೇಲ್ವಿಚಾರಕರ ಶಾಲೆಯ ಮೇಲ್ವಿಚಾರವನ್ನು ನೋಡಿಕೊಳ್ಳುತ್ತದೆ.

[ಪುಟ 31ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು

ಪ್ರತಿನಿಧಿಸಲಾದ ದೇಶಗಳ ಸಂಖ್ಯೆ: 10

ನೇಮಿಸಲಾದ ದೇಶಗಳ ಸಂಖ್ಯೆ: 24

ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 56

ಸರಾಸರಿ ಪ್ರಾಯ: 33.5

ಸತ್ಯದಲ್ಲಿ ಸರಾಸರಿ ವರ್ಷಗಳು: 17.9

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.8

[ಪುಟ 32ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 123ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳನ್ನು ಎಡದಿಂದ ಬಲಕ್ಕೆ ಪಟ್ಟಿಮಾಡಲಾಗಿದೆ.

(1) ಎಸ್ಪಾರ್‌ಸಾ, ಇ.; ಪಪೈಯ, ಎಸ್‌.; ಬೀಲಾಲ್‌, ಎ.; ಸ್ವಾರೇಸ್‌, ಎಮ್‌.; ಎವರ್ಸ್‌, ಇ.; ಡಿಮಿಚೀನೊ, ಕೆ. (2) ರೋಸಾ, ಎಂ.; ಫುಜೀಈ, ಆರ್‌.; ರೇಟೀ, ಒ.; ಲೆವೆಟನ್‌, ಜೆ.; ವಾನ್‌ ಲೀಮ್‌ಪೂಟನ್‌, ಎಂ. (3) ಬಾಸ್‌ಕೈಯೀನೋ, ಎ.; ಬೆಕ್‌, ಕೆ.; ಬೂಡನಾಫ್‌, ಹೆಚ್‌.; ಬ್ರಾಸ್‌, ಸಿ.; ಪೆಲ್‌ಟ್ಸ್‌, ಕೆ.; ಸೀಆವ್‌, ಎ. (4) ಲೆವೆಟನ್‌, ಎಸ್‌.; ಸಾನ್‌ಟೀಕೋ, ಹೆಚ್‌.; ಕಾನ್‌ಟೀ, ಎಸ್‌.; ವಿಲ್ಸನ್‌, ಜೆ.; ರೈಲೆಟ್‌, ಜೆ.; ಪಿಯರ್ಸ್‌, ಎಸ್‌.; ಫುಜೀಈ, ಕೆ. (5) ರೋಸಾ, ಡಿ.; ಬಾಸ್‌ಕೈಯೀನೋ, ಎಂ.; ಆಸ್ಟಿನ್‌, ವಿ.; ರೋಡ್ಯೆಲ್‌, ಪಿ.; ಬೀಲಾಲ್‌, ಪಿ.; ಡಿಮಿಚೀನೊ, ಪಿ. (6) ರೇಟೀ, ಬಿ.; ಚೈಸಿಕ್‌, ಡಿ.; ಕ್ಲಾರ್ಕ್‌, ಸಿ.; ರೈಡೆಲ್‌, ಎ.; ಎಸ್ಪಾರ್‌ಸಾ, ಎಫ್‌.; ಸೀಆವ್‌, ಪಿ.; ವಾನ್‌ ಲೀಮ್‌ಪೂಟನ್‌, ಟಿ. (7) ರೋಡ್ಯೆಲ್‌, ಜೆ; ಎವರ್ಸ್‌, ಜೆ.; ಗ್ರೀನ್‌, ಜೆ.; ಚೈಸಿಕ್‌, ಜೆ.; ಸಾನ್‌ಟೀಕೋ, ಎಂ.; ರೈಲೆಟ್‌, ಎಂ. (8) ಪೆಲ್‌ಟ್ಸ್‌, ಎಲ್‌.; ಆಸ್ಟಿನ್‌, ಡಿ.; ರೈಡೆಲ್‌, ಟಿ.; ಬೆಕ್‌, ಎಂ.; ಪಿಯರ್ಸ್‌, ಡಬ್ಲ್ಯೂ.; ಕಾನ್‌ಟೀ, ಎಸ್‌.; ಗ್ರೀನ್‌, ಎಸ್‌. (9) ಸ್ವಾರೇಸ್‌, ಜೆ.; ಕ್ಲಾರ್ಕ್‌, ಜೆ.; ಪಪೈಯ, ಎಸ್‌; ಬೂಡನಾಫ್‌, ಎಂ.; ವಿಲ್ಸನ್‌, ಆರ್‌.; ಬ್ರಾಸ್‌, ಆರ್‌.