ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿ ಸಂಘಟಿಸಲಾಗಿರುವುದು ಹೇಗೆ?

ಆಡಳಿತ ಮಂಡಲಿ ಸಂಘಟಿಸಲಾಗಿರುವುದು ಹೇಗೆ?

ಆಡಳಿತ ಮಂಡಲಿ ಸಂಘಟಿಸಲಾಗಿರುವುದು ಹೇಗೆ?

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ದೇವರ ಸಮರ್ಪಿತ ಅಭಿಷಿಕ್ತ ಸೇವಕರಿಂದ ಕೂಡಿದೆ. ಅದರ ಸದಸ್ಯರು ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಪ್ರತಿನಿಧಿಗಳಾಗಿದ್ದಾರೆ. ಲೋಕವ್ಯಾಪಕವಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮತ್ತು ರಾಜ್ಯ ಸಾರುವಿಕೆಯ ಕೆಲಸವನ್ನು ನಿರ್ದೇಶಿಸುವ ಹಾಗೂ ಮುನ್ನಡೆಸುವ ಜವಾಬ್ದಾರಿ ಈ ವರ್ಗಕ್ಕಿದೆ.—ಮತ್ತಾ. 24:14, 45-47.

ಪ್ರತಿ ವಾರ ಸಾಮಾನ್ಯವಾಗಿ ಬುಧವಾರದಂದು ಆಡಳಿತ ಮಂಡಲಿಯ ಕೂಟಗಳಿರುತ್ತವೆ. ಐಕ್ಯರಾಗಿ ಕೆಲಸಮಾಡುವಂತೆ ಇದು ಆ ಸಹೋದರರನ್ನು ಶಕ್ತಗೊಳಿಸುತ್ತದೆ. (ಕೀರ್ತ. 133:1) ಆಡಳಿತ ಮಂಡಲಿಯ ಸದಸ್ಯರು ಬೇರೆಬೇರೆ ಕಮಿಟಿಗಳಲ್ಲೂ ಕೆಲಸಮಾಡುತ್ತಾರೆ. ರಾಜ್ಯಾಭಿರುಚಿಗಳನ್ನು ನೋಡಿಕೊಳ್ಳುವುದರಲ್ಲಿ ಪ್ರತಿಯೊಂದು ಕಮಿಟಿಗೆ ಆಯಾ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿ ಇದೆ. ಅವುಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

◼ ಕೋಆರ್ಡಿನೇಟರ್ಸ್‌ ಕಮಿಟಿ: ಈ ಕಮಿಟಿಯಲ್ಲಿ ಆಡಳಿತ ಮಂಡಲಿಯ ಎಲ್ಲ ಕಮಿಟಿಗಳ ಕೋಆರ್ಡಿನೇಟರ್‌ಗಳು ಮತ್ತು ಒಬ್ಬ ಸೆಕ್ರೆಟರಿ (ಇವನೂ ಆಡಳಿತ ಮಂಡಲಿಯ ಸದಸ್ಯ) ಇರುತ್ತಾರೆ. ಬೇರೆಲ್ಲ ಕಮಿಟಿಗಳು ಸುಗಮವಾಗಿಯೂ ಯಥಾಕ್ರಮದಲ್ಲಿಯೂ ಕಾರ್ಯವೆಸಗುತ್ತಿವೆ ಎಂಬದನ್ನು ಈ ಕಮಿಟಿ ಖಚಿತಪಡಿಸುತ್ತದೆ. ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳನ್ನು ಬಾಧಿಸುವ ತೀವ್ರ ತುರ್ತಿನ ಪರಿಸ್ಥಿತಿಗಳು, ಹಿಂಸೆ, ವಿಪತ್ತುಗಳು ಅಥವಾ ಜರೂರಿಯ ಇನ್ನಾವುದೇ ಸಂಗತಿಗಳನ್ನು ಈ ಕಮಿಟಿ ನಿರ್ವಹಿಸುತ್ತದೆ.

◼ ಪರ್ಸನೆಲ್‌ ಕಮಿಟಿ: ಭೂವ್ಯಾಪಕ ಬೆತೆಲ್‌ ಕುಟುಂಬ ಸದಸ್ಯರ ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಹಿತಕ್ಷೇಮವನ್ನು ನೋಡಿಕೊಳ್ಳುವ ಮತ್ತು ಅವರಿಗೆ ಬೇಕಾದ ಸಹಾಯವನ್ನು ನೀಡುವ ಜವಾಬ್ದಾರಿ ಈ ಕಮಿಟಿಗಿದೆ. ಅಲ್ಲದೆ ಬೆತೆಲ್‌ ಕುಟುಂಬಗಳಿಗೆ ಹೊಸಬರನ್ನು ಆಯ್ಕೆಮಾಡಿ ಆಮಂತ್ರಿಸುವ ಹಾಗೂ ಬೆತೆಲ್‌ ಸೇವೆಯ ಕುರಿತ ಯಾವುದೇ ಪ್ರಶ್ನೆಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಕಮಿಟಿಯದ್ದಾಗಿದೆ.

◼ ಪಬ್ಲಿಷಿಂಗ್‌ ಕಮಿಟಿ: ಈ ಕಮಿಟಿಯು ಲೋಕವ್ಯಾಪಕವಾಗಿ ಬೈಬಲ್‌ ಸಾಹಿತ್ಯಗಳ ಮುದ್ರಣ, ಪ್ರಕಾಶನ ಮತ್ತು ಅವುಗಳ ರವಾನೆಯ ಮೇಲ್ವಿಚಾರಣೆ ನಡೆಸುತ್ತದೆ. ಯೆಹೋವನ ಸಾಕ್ಷಿಗಳು ಉಪಯೋಗಿಸುವಂಥ ಅನೇಕ ಕಾರ್ಪೋರೇಷನ್‌ಗಳ ಸ್ವಾಮ್ಯದಲ್ಲಿರುವ ಮತ್ತು ಅವು ನಿರ್ವಹಿಸುವ ಮುದ್ರಣಾಲಯಗಳನ್ನೂ ಆಸ್ತಿಪಾಸ್ತಿಗಳನ್ನೂ ಈ ಕಮಿಟಿ ನೋಡಿಕೊಳ್ಳುತ್ತದೆ. ಲೋಕವ್ಯಾಪಕ ರಾಜ್ಯ ಕೆಲಸಕ್ಕೆ ನೀಡಲಾಗುವ ಕಾಣಿಕೆಗಳ ಸೂಕ್ತ ಬಳಕೆಯಾಗುವಂತೆ ಈ ಕಮಿಟಿ ನೋಡಿಕೊಳ್ಳುತ್ತದೆ.

◼ ಸರ್ವಿಸ್‌ ಕಮಿಟಿ: ಈ ಕಮಿಟಿಯ ಸದಸ್ಯರು ಸಾರುವ ಕೆಲಸಕ್ಕೆ ಹಾಗೂ ಸಭೆಗಳಿಗೆ, ಪಯನೀಯರರಿಗೆ, ಹಿರಿಯರಿಗೆ ಮತ್ತು ಸಂಚರಣಾ ಮೇಲ್ವಿಚಾರಕರಿಗೆ ಸಂಬಂಧಪಟ್ಟ ವಿಷಯಗಳನ್ನು ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಸೇವೆಯ ತಯಾರಿಯಲ್ಲಿ ಈ ಕಮಿಟಿ ಮೇಲ್ವಿಚಾರಣೆ ನಡೆಸುತ್ತದೆ. ಅಲ್ಲದೆ ಗಿಲ್ಯಡ್‌ ಶಾಲೆಗೆ ಹಾಗೂ ಶುಶ್ರೂಷಾ ತರಬೇತಿ ಶಾಲೆಗೆ ವಿದ್ಯಾರ್ಥಿಗಳನ್ನು ಆಮಂತ್ರಿಸುತ್ತದೆ ಮತ್ತು ಅವರು ಪದವೀಧರರಾದ ಬಳಿಕ ಎಲ್ಲಿಗೆ ಹೋಗಬೇಕೆಂಬ ನೇಮಕಗಳನ್ನು ಕೊಡುತ್ತದೆ.

◼ ಟೀಚಿಂಗ್‌ ಕಮಿಟಿ: ಸಮ್ಮೇಳನ, ಅಧಿವೇಶನ ಹಾಗೂ ಸಭಾ ಕೂಟಗಳಲ್ಲಿ ಪ್ರಸ್ತುತಪಡಿಸಲಾಗುವ ವಿಷಯಗಳ ಮೇಲೆ ಈ ಕಮಿಟಿ ಪಾರುಪತ್ಯ ನಡೆಸುತ್ತದೆ. ಅದು ಬೆತೆಲ್‌ ಸದಸ್ಯರಿಗಾಗಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಅಲ್ಲದೆ ಗಿಲ್ಯಡ್‌ ಹಾಗೂ ಪಯನೀಯರ್‌ ಸೇವಾ ಶಾಲೆಗಳಂಥ ವಿವಿಧ ಬಗೆಯ ಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಆಡಿಯೋ ವಿಡಿಯೋ ಕಾರ್ಯಕ್ರಮಗಳ ತಯಾರಿಕೆಯನ್ನು ನೋಡಿಕೊಳ್ಳುತ್ತದೆ.

◼ ರೈಟಿಂಗ್‌ ಕಮಿಟಿ: ಆಧ್ಯಾತ್ಮಿಕ ಆಹಾರವನ್ನು ಲಿಖಿತ ರೂಪದಲ್ಲಿ ಹಾಕಿ ಜೊತೆ ವಿಶ್ವಾಸಿಗಳಿಗಾಗಿಯೂ ಸಾರ್ವಜನಿಕರಿಗಾಗಿಯೂ ಅದನ್ನು ಪ್ರಕಾಶಿಸಿ ವಿತರಿಸುವ ಜವಾಬ್ದಾರಿ ಈ ಕಮಿಟಿಗಿದೆ. ಅಲ್ಲದೆ, ಇದು ಬೈಬಲ್‌ ಪ್ರಶ್ನೆಗಳನ್ನು ಉತ್ತರಿಸುತ್ತದೆ ಮತ್ತು ಡ್ರಾಮದ ಮೂಲಪ್ರತಿಗಳನ್ನೂ ಭಾಷಣಗಳ ಹೊರಮೇರೆಗಳನ್ನೂ ತಯಾರಿಸುತ್ತದೆ. ಲೋಕವ್ಯಾಪಕವಾಗಿ ನಡೆಯುವ ಭಾಷಾಂತರ ಕೆಲಸವನ್ನೂ ಇದು ನೋಡಿಕೊಳ್ಳುತ್ತದೆ.

ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಅಪೊಸ್ತಲ ಪೌಲನು ಮಾನವ ದೇಹಕ್ಕೆ ಹೋಲಿಸಿದನು. ಎಲ್ಲ ಅಂಗಗಳಿಗಿರುವ ಪ್ರಮುಖ ಸ್ಥಾನಗಳನ್ನೂ ಅವುಗಳಿಗಿರುವ ದೇವದತ್ತ ಕೆಲಸವನ್ನು ಪೂರೈಸಲು ಅವು ಪರಸ್ಪರ ಆತುಕೊಳ್ಳುವ, ಪ್ರೀತಿಸುವ ಮತ್ತು ಸಹಕರಿಸುವ ವಿಷಯಕ್ಕೂ ಅವನು ಒತ್ತು ನೀಡಿದನು. (ರೋಮಾ. 12:4, 5; 1 ಕೊರಿಂ. 12:12-31) ಶಿರಸ್ಸಾಗಿರುವ ಯೇಸು ಕ್ರಿಸ್ತನು ದೇಹದ ಅಂಗಗಳ ಉತ್ತಮ ಸಹಕಾರ, ಅನ್ಯೋನ್ಯತೆ ಮತ್ತು ಆಧ್ಯಾತ್ಮಿಕ ಪುಷ್ಟಿಗಾಗಿ ಬೇಕಾದದ್ದೆಲ್ಲವನ್ನು ಒದಗಿಸುತ್ತಿದ್ದಾನೆ. (ಎಫೆ. 4:15, 16; ಕೊಲೊ. 2:18, 19) ಹೀಗೆ, ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಕೊಡುವ ನಿರ್ದೇಶನಕ್ಕನುಸಾರ ಮುಂದಾಳುತ್ವ ವಹಿಸಲು ಆಡಳಿತ ಮಂಡಲಿ ಸಂಘಟಿಸಲ್ಪಟ್ಟಿದೆ.