ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಕೆಲವು ಕ್ರೈಸ್ತರು ಮದುವೆಯಾದ ಬಳಿಕ ಯಾವ ಗಂಭೀರ ಸಮಸ್ಯೆಯನ್ನು ಎದುರಿಸಿದ್ದಾರೆ ಮತ್ತು ಅವರೇನು ಮಾಡಲು ಶ್ರಮಿಸಬೇಕು?

ತಮಗೂ ತಮ್ಮ ಸಂಗಾತಿಗೂ ಯಾವ ಹೊಂದಾಣಿಕೆಯೇ ಇಲ್ಲವೆಂಬ ಸಂಗತಿ ಕೆಲವು ಕ್ರೈಸ್ತರ ಅರಿವಿಗೆ ಬರಬಹುದು. ಶಾಸ್ತ್ರಾಧಾರವಿಲ್ಲದ ವಿಚ್ಛೇದವು ಸೂಕ್ತ ಪರಿಹಾರವಲ್ಲವೆಂದು ತಿಳಿದಿರುವುದರಿಂದ ಅವರು ತಮ್ಮ ವಿವಾಹವನ್ನು ಕಾಪಾಡಲು ಶ್ರಮಿಸಬೇಕು.—4/15, ಪುಟ 17.

• ನರ್ಸಿಂಗ್‌ ಹೋಮ್‌ನಲ್ಲಿ ವಾಸಿಸುತ್ತಿರುವ ಕ್ರೈಸ್ತರಿಗೆ ಯಾವ ಸಮಸ್ಯೆಗಳು ಎದುರಾಗಬಹುದು?

ಈ ನರ್ಸಿಂಗ್‌ ಹೋಮ್‌ ಯಾವ ಸಭೆಯ ಟೆರಿಟೊರಿಯಲ್ಲಿದೆಯೋ ಆ ಸಭೆಯವರ ಪರಿಚಯ ಅವರಿಗಿರಲಿಕ್ಕಿಲ್ಲ. ನರ್ಸಿಂಗ್‌ ಹೋಮ್‌ನಲ್ಲಿರುವ ಹೆಚ್ಚಿನವರು ವಿಭಿನ್ನ ಧರ್ಮಗಳವರಾಗಿರಬಹುದು ಮತ್ತು ವೃದ್ಧ ಕ್ರೈಸ್ತರನ್ನು ತಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಒಳಗೂಡಿಸಲು ಪ್ರಯತ್ನಿಸಬಹುದು. ಕ್ರೈಸ್ತ ಸಂಬಂಧಿಕರಿಗೆ ಮತ್ತು ಸ್ಥಳಿಕ ಸಭೆಯ ಸದಸ್ಯರಿಗೆ ಈ ಸಮಸ್ಯೆಗಳ ಕುರಿತು ಅರಿವಿರಬೇಕು ಮತ್ತು ಅವರಿಗೆ ತಮ್ಮ ಬೆಂಬಲ ಕೊಟ್ಟು, ಕಾಳಜಿ ತೋರಿಸಬೇಕು.—4/15, ಪುಟ 25-27.

• ಸಮಸ್ಯೆಗಳನ್ನು ಬಗೆಹರಿಸಲು ವಿವಾಹ ಸಂಗಾತಿಗಳಿಗೆ ಸಹಾಯಮಾಡುವ ನಾಲ್ಕು ಹೆಜ್ಜೆಗಳಾವುವು?

ಸಮಸ್ಯೆಗಳ ಕುರಿತು ಚರ್ಚಿಸಲು ಸಮಯ ಬದಿಗಿರಿಸಿ. (ಪ್ರಸಂ. 3:1, 7) ನಿಮ್ಮ ಅಭಿಪ್ರಾಯವನ್ನು ಮುಚ್ಚುಮರೆಯಿಲ್ಲದೆ ಗೌರವಪೂರ್ವಕವಾಗಿ ತಿಳಿಸಿ. (ಎಫೆ. 4:25) ನಿಮ್ಮ ಸಂಗಾತಿಗೆ ಕಿವಿಗೊಟ್ಟು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. (ಮತ್ತಾ. 7:12) ಸಮಸ್ಯೆಯ ಪರಿಹಾರದ ಬಗ್ಗೆ ಒಮ್ಮತಕ್ಕೆ ಬನ್ನಿ ಮತ್ತು ಇಬ್ಬರೂ ಸೇರಿ ಅದನ್ನು ಸಫಲಗೊಳಿಸಲು ಪ್ರಯಾಸಪಡಿ. (ಪ್ರಸಂ. 4:9, 10)— 7/1, ಪುಟ 10-12.

• ಆಡಳಿತ ಮಂಡಲಿಯ ಸದಸ್ಯರು ಯಾವ ಕಮಿಟಿಗಳಲ್ಲಿ ಸೇವೆಸಲ್ಲಿಸುತ್ತಾರೆ?

ಕೋಆರ್ಡಿನೇಟರ್ಸ್‌ ಕಮಿಟಿ; ಪರ್ಸನೆಲ್‌ ಕಮಿಟಿ; ಪಬ್ಲಿಷಿಂಗ್‌ ಕಮಿಟಿ; ಸರ್ವಿಸ್‌ ಕಮಿಟಿ; ಟೀಚಿಂಗ್‌ ಕಮಿಟಿ ಮತ್ತು ರೈಟಿಂಗ್‌ ಕಮಿಟಿ.—5/15, ಪುಟ 29.

• ನೋಹನ ದಿನದ ಜಲಪ್ರಳಯವು ಇಡೀ ಭೂಮಿಯನ್ನು ಆವರಿಸಿತ್ತೆಂದು ನಾವು ಹೇಗೆ ಹೇಳಬಹುದು?

ಜಲಪ್ರಳಯವು ಸಂಭವಿಸಿತ್ತು ಮತ್ತು ಅದು ಇಡೀ ಭೂಮಿಯನ್ನು ಆವರಿಸಿತ್ತೆಂದು ಯೇಸು ನಂಬಿದ್ದನು. ಬೈಬಲ್‌ನಲ್ಲಿರುವ ಎಚ್ಚರಿಕೆಗಳು, ಭೌಗೋಳಿಕ ಜಲಪ್ರಳಯವು ನಡೆದಿತ್ತೆಂಬ ವಾಸ್ತವಿಕತೆಯ ಮೇಲೆ ಆಧರಿತವಾಗಿವೆ.— 7/1, ಪುಟ 24.

ರೋಮಾಪುರ 1:24-32 ರಲ್ಲಿ ವರ್ಣಿಸಲಾದ ನಡತೆ ಯೆಹೂದ್ಯರದ್ದಾಗಿತ್ತೋ ಅನ್ಯಜನರದ್ದಾಗಿತ್ತೋ?

ಈ ವಿವರಣೆಯು ಎರಡೂ ಗುಂಪುಗಳಿಗೆ ಅನ್ವಯಿಸಸಾಧ್ಯವಿದ್ದರೂ ಪೌಲನು ನಿರ್ದಿಷ್ಟವಾಗಿ, ಶತಮಾನಗಳ ವರೆಗೆ ಧರ್ಮಶಾಸ್ತ್ರವನ್ನು ಪಾಲಿಸದಿದ್ದ ಪ್ರಾಚೀನ ಕಾಲದ ಇಸ್ರಾಯೇಲ್ಯರ ಬಗ್ಗೆ ಹೇಳುತ್ತಿದ್ದನು. ಅವರಿಗೆ ದೇವರ ನೀತಿಯ ವಿಧಿಗಳು ತಿಳಿದಿದ್ದವಾದರೂ, ಅವರು ಅವುಗಳಿಗನುಸಾರ ಜೀವಿಸಲಿಲ್ಲ.—6/15, ಪುಟ 29.

• ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಡುವುದು ನಮ್ಮ ಸಂತೋಷವನ್ನು ಹೆಚ್ಚಿಸಬಲ್ಲದೇಕೆ?

ನಾವು ನ್ಯಾಯಸಮ್ಮತವಲ್ಲದ ಗುರಿಗಳನ್ನಿಟ್ಟು ಅವುಗಳನ್ನು ಹೇಗಾದರೂ ಮಾಡಿ ತಲಪಲು ಪ್ರಯತ್ನಿಸುವುದಾದರೆ ಅನಾವಶ್ಯಕ ಚಿಂತೆಗೆ ಗುರಿಯಾಗುತ್ತೇವೆ. ಆದರೆ ಅದೇ ಸಮಯದಲ್ಲಿ, ಇತಿಮಿತಿಗಳನ್ನೇ ನೆಪವಾಗಿಟ್ಟು ನಮ್ಮ ಕುರಿತು ಅತಿಯಾದ ದಯಾಪರ ಮನೋಭಾವ ತಾಳಿ ಕ್ರೈಸ್ತ ಶುಶ್ರೂಷೆಯನ್ನು ಕಡಿಮೆಗೊಳಿಸದಂತೆಯೂ ಎಚ್ಚರವಹಿಸಬೇಕು.—7/15, ಪುಟ 29.

• ಹೆತ್ತವರಿಗೆ ಹದಿವಯಸ್ಕರೊಂದಿಗೆ ಸಂವಾದಮಾಡಲು ಯಾವುದು ಅಡ್ಡಿಯಾಗಬಹುದು?

ಹದಿವಯಸ್ಕರ ನಾಚಿಕೆಸ್ವಭಾವ, ಸ್ವಾತಂತ್ರ್ಯದ ಹಂಬಲ, ತಮ್ಮಷ್ಟಕ್ಕಿರುವ ಬಯಕೆ ಅಡ್ಡಿತಡೆಗಳಾಗಿರಬಹುದು. ದಿನನಿತ್ಯದ ಸಾಮಾನ್ಯ ಸನ್ನಿವೇಶಗಳಲ್ಲಿ ಹೆತ್ತವರು ಅವರೊಂದಿಗೆ ಮಾತಾಡಿ, ಅವರ ಮಾತುಗಳ ಇಂಗಿತವನ್ನು ತಿಳಿದುಕೊಳ್ಳಲು ಪ್ರಯತ್ನಿಸಬಲ್ಲರು.—10/1, ಪುಟ 10-11.