ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:
• ದೇವರ ಮತ್ತು ಆತನ ಉದ್ದೇಶಗಳ ಕುರಿತ ಸತ್ಯ, ಅಂದರೆ “ಶುದ್ಧ ಭಾಷೆಯನ್ನು” ನಾವು ಹೇಗೆ ನಿರರ್ಗಳವಾಗಿ ಮಾತಾಡಬಲ್ಲೆವು? (ಚೆಫ. 3:9)
ಒಂದು ಹೊಸ ಭಾಷೆಯನ್ನು ಕಲಿಯಲು ಮಾಡಬೇಕಾದಂತೆ, “ಶುದ್ಧ ಭಾಷೆಯನ್ನು” ನಿರರ್ಗಳವಾಗಿ ಮಾತಾಡಲು ನಾವು ಜಾಗರೂಕತೆಯಿಂದ ಕಿವಿಗೊಡಬೇಕು, ನಿರರ್ಗಳವಾಗಿ ಮಾತಾಡುವವರ ಅನುಕರಣೆ ಮಾಡಬೇಕು, ಬೈಬಲ್‌ಪುಸ್ತಕಗಳ ಹೆಸರುಗಳನ್ನು ಮತ್ತು ಕೆಲವೊಂದು ಬೈಬಲ್‌ವಚನಗಳನ್ನು ಕಂಠಪಾಠ ಮಾಡಬೇಕು, ಕಲಿತ ವಿಷಯಗಳನ್ನು ಪುನರಾವರ್ತಿಸಬೇಕು, ತಗ್ಗುದನಿಯಲ್ಲಿ ಓದಬೇಕು, ವ್ಯಾಕರಣವನ್ನು ಅಥವಾ ಸ್ವಸ್ಥವಾಕ್ಯಗಳ ಮಾದರಿಯನ್ನು ವಿಶ್ಲೇಷಿಸಬೇಕು, ಪ್ರಗತಿ ಮಾಡುತ್ತಾ ಇರಬೇಕು, ಅಧ್ಯಯನಕ್ಕಾಗಿ ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಬೇಕು, ಶುದ್ಧ ಭಾಷೆಯನ್ನು ಸಾಧ್ಯವಾದಷ್ಟು ‘ಮಾತಾಡಲು’ ಪ್ರಯತ್ನಿಸಬೇಕು.—8/15, ಪುಟ 21-25.
• ವಿವಾಹದ ವಿಷಯದಲ್ಲಿ “ಮೂರು ಹುರಿಯ ಹಗ್ಗ” ಎಂಬ ಅಭಿವ್ಯಕ್ತಿಯ ಅರ್ಥವೇನು?
“ಮೂರು ಹುರಿಯ ಹಗ್ಗ” ಎಂಬುದು ಒಂದು ಸಾಂಕೇತಿಕ ಅಭಿವ್ಯಕ್ತಿ. (ಪ್ರಸಂ. 4:12) ಈ ದೃಷ್ಟಾಂತವನ್ನು ವಿವಾಹಕ್ಕೆ ಅನ್ವಯಿಸುವಾಗ, ಗಂಡಹೆಂಡತಿ ಮೊದಲ ಎರಡು ಎಳೆಗಳಾಗಿದ್ದು, ಅವರು ಮೂರನೇ ಮುಖ್ಯ ಎಳೆಯಾದ ಯೆಹೋವ ದೇವರೊಂದಿಗೆ ಹೆಣೆದುಕೊಂಡಿರಬೇಕು. ದಂಪತಿಯು ದೇವರೊಂದಿಗೆ ಐಕ್ಯವಾಗಿರುವುದರಿಂದ ಸಮಸ್ಯೆಗಳನ್ನು ಎದುರಿಸಲು ಬೇಕಾದ ಆಧ್ಯಾತ್ಮಿಕ ಬಲ ಪಡೆಯುತ್ತಾರೆ. ಇದು ತಾನೇ, ವಿವಾಹಜೀವನದಲ್ಲಿ ಹೆಚ್ಚಿನ ಸಂತೋಷಕ್ಕೆ ಮುಖ್ಯ ಕಾರಣವಾಗಿದೆ.—9/15, ಪುಟ 16.
• ಇಬ್ರಿಯ 6:2ರಲ್ಲಿ ತಿಳಿಸಲಾದ “ಹಸ್ತಾರ್ಪಣ” ಏನನ್ನು ಸೂಚಿಸುತ್ತದೆ?
ಇದು, ಕ್ರೈಸ್ತ ಹಿರಿಯರನ್ನು ನೇಮಿಸುವುದಕ್ಕೆ ಸೂಚಿಸುವುದಿಲ್ಲ. ಬದಲಾಗಿ, ಪವಿತ್ರಾತ್ಮದ ವರಗಳನ್ನು ದಾಟಿಸಲಿಕ್ಕಾಗಿ ಹಸ್ತಾರ್ಪಣ ಇಲ್ಲವೇ ಕೈಗಳನ್ನಿಡುವುದಕ್ಕೆ ಸೂಚಿಸುತ್ತಿರಬಹುದು. (ಅ. ಕೃ. 8:14-17; 19:6)—9/15, ಪುಟ 32.
• ಮುಂದಾಳುತ್ವ ವಹಿಸುವವರು ಇತರರಿಗೆ ಹೇಗೆ ಗೌರವ ತೋರಿಸಬಹುದು?
ಹಿರಿಯನೊಬ್ಬನು ಇದನ್ನು ಮಾಡುವ ಒಂದು ವಿಧ, ಸ್ವತಃ ತಾನು ಯಾವುದನ್ನು ಮಾಡಲು ಸಿದ್ಧನಿಲ್ಲವೋ ಅಂಥ ವಿಷಯಗಳನ್ನು ಮಾಡುವಂತೆ ಇತರರಿಗೆ ಹೇಳದಿರುವುದೇ. ಅಲ್ಲದೇ ಅವನು, ಯಾವುದಕ್ಕಾದರೂ ವಿನಂತಿಸುವಾಗ ಹಾಗೂ ನಿರ್ದೇಶನಗಳನ್ನು ಕೊಡುವಾಗ ಪ್ರತಿಬಾರಿ ಕಾರಣಗಳನ್ನು ಹೇಳುವ ಮೂಲಕವೂ ಇತರರಿಗೆ ಗೌರವ ತೋರಿಸಬಹುದು.—10/15, ಪುಟ 22.
• ಇಸ್ರಾಯೇಲಿನ ಕುರುಬರು ಕೊಕ್ಕೆಕೋಲು ಅಥವಾ ದೊಣ್ಣೆಯನ್ನು ಬಳಸುತ್ತಿದ್ದ ರೀತಿಯಿಂದ ಕ್ರೈಸ್ತ ಹಿರಿಯರು ಏನನ್ನು ಕಲಿಯಬಲ್ಲರು?
ಪುರಾತನ ಇಸ್ರಾಯೇಲಿನ ಕುರುಬರು ಮಂದೆಯನ್ನು ನಡೆಸಲು ಕೊಕ್ಕೆಕೋಲು ಅಥವಾ ದೊಣ್ಣೆಯನ್ನು ಬಳಸುತ್ತಿದ್ದರು. ಕುರಿಗಳು ಕೊಟ್ಟಿಗೆಯನ್ನು ಪ್ರವೇಶಿಸುವಾಗ ಇಲ್ಲವೇ ಅದರಿಂದ ಹೊರಹೋಗುವಾಗ ಆ ಕೋಲಿನ ಅಡಿಯಿಂದ ಹಾದುಹೋಗುತ್ತಿದ್ದವು. ಹೀಗೆ ಕುರುಬರಿಗೆ ಅವುಗಳನ್ನು ಎಣಿಸಲು ಸಾಧ್ಯವಾಗುತ್ತಿತ್ತು. (ಯಾಜ. 27:32) ತದ್ರೀತಿಯಲ್ಲಿ ಒಬ್ಬ ಕ್ರೈಸ್ತ ಕುರುಬನು ತನ್ನ ವಶದಲ್ಲಿಡಲಾಗಿರುವ ದೇವರ ಮಂದೆಯನ್ನು ಚೆನ್ನಾಗಿ ಅರಿತಿರಬೇಕು ಮತ್ತು ಪ್ರತಿಯೊಬ್ಬನ ಸ್ಥಿತಿಗತಿಯನ್ನು ತಿಳಿದಿರಬೇಕು.—11/15, ಪುಟ 9.