ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ನೆಹೆಮೀಯ 8:10 ತಿಳಿಸುವಂತೆ, ‘ಕೊಬ್ಬುಳ್ಳ ಪದಾರ್ಥಗಳನ್ನು ತಿನ್ನಿರಿ’ (NW) ಎಂದು ಯೆಹೂದ್ಯರಿಗೆ ಹೇಳಲಾಗಿತ್ತು. ಆದರೆ ಯಾಜಕಕಾಂಡ 3:17 ತಿಳಿಸುವಂತೆ, ‘ಕೊಬ್ಬನ್ನು ತಿನ್ನಕೂಡದೆಂದು’ ಧರ್ಮಶಾಸ್ತ್ರದಲ್ಲಿ ಆಜ್ಞೆಯಿತ್ತು. ಈ ತದ್ವಿರುದ್ಧ ಹೇಳಿಕೆಗಳನ್ನು ಹೇಗೆ ಹೊಂದಿಸಬಹುದು?

ನೆಹೆಮೀಯ 8:10ರಲ್ಲಿ ‘ಕೊಬ್ಬುಳ್ಳ ಪದಾರ್ಥಗಳು’ ಎಂದೂ, ಯಾಜಕಕಾಂಡ 3:17ರಲ್ಲಿ ‘ಕೊಬ್ಬು’ ಎಂದೂ ಭಾಷಾಂತರಿಸಲಾಗಿರುವ ಪದಗಳು ಮೂಲ ಭಾಷೆಯಲ್ಲಿ ಭಿನ್ನಭಿನ್ನವಾಗಿವೆ. ಯಾಜಕಕಾಂಡ 3:17ರಲ್ಲಿ ‘ಕೊಬ್ಬು’ ಎಂದು ಭಾಷಾಂತರಿಸಲಾಗಿರುವ ಹೀಬ್ರು ಪದವು ಕೆಲೆವ್‌ ಎಂದಾಗಿದೆ. ಈ ಪದವನ್ನು ಪಶು ಇಲ್ಲವೇ ಮಾನವ ಕೊಬ್ಬಿಗೆ ಸೂಚಿಸಲು ಬಳಸಲಾಗುತ್ತದೆ. (ಯಾಜ. 3:3; ನ್ಯಾಯ. 3:22) “ಕೊಬ್ಬೆಲ್ಲವೂ ಯೆಹೋವನದು” ಆಗಿರುವುದರಿಂದ, ಯಜ್ಞಕ್ಕಾಗಿದ್ದ ಪ್ರಾಣಿಗಳ ಕರುಳುಗಳ ಹಾಗೂ ಹುರುಳಿಕಾಯಿಗಳ (ಕಿಡ್ನಿ) ಸುತ್ತಲಿರುವ ಮತ್ತು ಸೊಂಟದಲ್ಲಿರುವ ಕೊಬ್ಬಿನ ಪದರಗಳನ್ನು ಇಸ್ರಾಯೇಲ್ಯರು ತಿನ್ನಬಾರದಿತ್ತೆಂದು 17ನೇ ವಚನದ ಪೂರ್ವಾಪರವು ತೋರಿಸುತ್ತದೆ. (ಯಾಜ. 3:​14-16) ಆದುದರಿಂದ ಯೆಹೋವನಿಗೆ ಅರ್ಪಿಸಬೇಕಾಗಿದ್ದ ಪಶುಗಳ ಕೊಬ್ಬನ್ನು ತಿನ್ನಬಾರದೆಂಬ ನಿಷೇಧವಿತ್ತು.

ಆದರೆ, ನೆಹೆಮೀಯ 8:10ರಲ್ಲಿ ‘ಕೊಬ್ಬಿದ್ದನ್ನು’ ಎಂದು ಭಾಷಾಂತರಿಸಲಾಗಿರುವ ಹೀಬ್ರು ಪದ ಮಾಷ್‌ಮಾನಿಮ್‌ ಎಂದಾಗಿದೆ. ಇದು ಹೀಬ್ರು ಶಾಸ್ತ್ರಗಳಲ್ಲಿ ಕೇವಲ ಈ ವಚನದಲ್ಲಿ ಕಂಡುಬರುತ್ತದೆ. ಈ ಪದ ಷ್ಯಾಮನ್‌ ಎಂಬ ಕ್ರಿಯಾಪದದಿಂದ ಬಂದಿದೆ ಮತ್ತು ಇದರರ್ಥ, “ದಪ್ಪಗಾಗಿರುವುದು, ದಪ್ಪವಾಗುವುದು” ಎಂದಾಗಿದೆ. ಈ ಕ್ರಿಯಾಪದಕ್ಕೆ ಸಂಬಂಧಿಸುವ ಪದಗಳು ಮುಖ್ಯವಾಗಿ ಸಮೃದ್ಧಿ ಮತ್ತು ಕ್ಷೇಮವನ್ನು ಸೂಚಿಸುತ್ತಿರುವಂತೆ ತೋರುತ್ತದೆ. (ಆದಿಕಾಂಡ 45:18; ಅರಣ್ಯಕಾಂಡ 18:12; ಯೆಶಾಯ 25:6 ಹೋಲಿಸಿ.) ಈ ಕ್ರಿಯಾಪದದಿಂದ ಷೆಮೆನ್‌ ಎಂಬ ನಾಮಪದ ಬಂದಿದೆ. ಇದನ್ನು ಹೆಚ್ಚಾಗಿ “ಎಣ್ಣೆ” ಇಲ್ಲವೇ “ಎಣ್ಣೇಮರದ ಕಾಯಿಗಳ” (ಆಲಿವ್‌) ಎಣ್ಣೆ ಎಂದು ಭಾಷಾಂತರಿಸಲಾಗುತ್ತದೆ. (ಧರ್ಮೋ. 8:8; ಯಾಜ. 24:⁠2) ನೆಹೆಮೀಯ 8:10ರಲ್ಲಿ ಬಳಸಲಾಗಿರುವಂತೆ ಮಾಷ್‌ಮಾನಿಮ್‌ ಎಂಬ ಪದವು, ತುಂಬ ಎಣ್ಣೆ ಬಳಸಿ ತಯಾರಿಸಲಾದ ಮತ್ತು ಪ್ರಾಣಿಯ ಕೊಬ್ಬಿನ ಪದರಗಳನ್ನು ತೆಗೆದ ನಂತರ ಬಹುಶಃ ಅಲ್ಪಸ್ವಲ್ಪ ಕೊಬ್ಬು ಅಂಟಿಕೊಂಡಿದ್ದ ಮಾಂಸ ಕೂಡಿರುವ ಆಹಾರಕ್ಕೆ ಸೂಚಿಸುವಂತೆ ತೋರುತ್ತದೆ.

ಇಸ್ರಾಯೇಲ್ಯರು ತಮ್ಮ ಆಹಾರದಲ್ಲಿ ಪಶುಗಳ ಕೊಬ್ಬಿನ ಪದರಗಳನ್ನು ಬಳಸಬಾರದಿತ್ತಾದರೂ, ಪೌಷ್ಠಿಕ ಹಾಗೂ ರುಚಿಕರ ಆಹಾರವನ್ನು ಸೇವಿಸಬಹುದಿತ್ತು. ಕೆಲವೊಂದು ಖಾದ್ಯಗಳು ಉದಾಹರಣೆಗೆ ರೊಟ್ಟಿಗಳನ್ನು ತಯಾರಿಸಲು, ಪಶುಗಳ ಕೊಬ್ಬನ್ನಲ್ಲ ಬದಲಾಗಿ ಸಸ್ಯಜನ್ಯ ಎಣ್ಣೆ, ಹೆಚ್ಚಾಗಿ ಆಲಿವ್‌ ಎಣ್ಣೆಯನ್ನು ಬಳಸಲಾಗುತ್ತಿತ್ತು. (ಯಾಜ. 2:⁠7) ಆದ್ದರಿಂದಲೇ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಎಂಬ ಪ್ರಕಾಶನವು, ನೆಹೆಮೀಯ 8:10ರಲ್ಲಿರುವ ‘ಕೊಬ್ಬುಳ್ಳ ಪದಾರ್ಥಗಳು’ ಎಂಬ ಅಭಿವ್ಯಕ್ತಿ, “ಒಣ ಇಲ್ಲವೇ ಶುಷ್ಕವಾದ ಭಕ್ಷ್ಯಗಳಿಗಲ್ಲ ಬದಲಾಗಿ ಸಸ್ಯಜನ್ಯ ಎಣ್ಣೆಯಿಂದ ಮಾಡಿದ ಸ್ವಾದಿಷ್ಟಕರ, ಭರ್ಜರಿ ಆಹಾರಕ್ಕೆ ಸೂಚಿಸುತ್ತದೆ” ಎಂದು ವಿವರಿಸುತ್ತದೆ.

ಕೊಬ್ಬನ್ನು ತಿನ್ನಬಾರದೆಂಬ ನಿಷೇಧವು ಧರ್ಮಶಾಸ್ತ್ರದಲ್ಲಿತ್ತೆಂದು ಕ್ರೈಸ್ತರು ನೆನಪಿನಲ್ಲಿಡಬೇಕು. ಆದರೆ ಅವರು ಇಂದು ಧರ್ಮಶಾಸ್ತ್ರದ ಕೆಳಗಿಲ್ಲ. ಆದುದರಿಂದ, ಪ್ರಾಣಿ ಯಜ್ಞಗಳಿಗೆ ಸಂಬಂಧಪಟ್ಟ ಅದರ ನಿಯಮಗಳು ಅವರಿಗೆ ಅನ್ವಯವಾಗುವುದಿಲ್ಲ.​—⁠ರೋಮಾ. 3:20; 7:​4, 6; 10:4; ಕೊಲೊ. 2:​16, 17.