ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರದಾನ ಕಾರ್ಯಕ್ರಮ ಯೆರೆಮೀಯನಂತಿರಲು ಮಿಷನೆರಿಗಳನ್ನು ಪ್ರೋತ್ಸಾಹಿಸಲಾಯಿತು

ಪ್ರದಾನ ಕಾರ್ಯಕ್ರಮ ಯೆರೆಮೀಯನಂತಿರಲು ಮಿಷನೆರಿಗಳನ್ನು ಪ್ರೋತ್ಸಾಹಿಸಲಾಯಿತು

125ನೇ ಗಿಲ್ಯಡ್‌ ಪದವಿ

ಪ್ರದಾನ ಕಾರ್ಯಕ್ರಮ ಯೆರೆಮೀಯನಂತಿರಲು ಮಿಷನೆರಿಗಳನ್ನು ಪ್ರೋತ್ಸಾಹಿಸಲಾಯಿತು

“ಗಿಲ್ಯಡ್‌ನ ಈ ತರಗತಿಯು ಐತಿಹಾಸಿಕ ಮೈಲಿಗಲ್ಲಾಗಿದೆ” ಎಂದು ಆಡಳಿತ ಮಂಡಲಿಯ ಸದಸ್ಯರಾದ ಜೆಫ್ರಿ ಜ್ಯಾಕ್ಸನ್‌ ಘೋಷಿಸಿದರು. ಈ ಮಾತುಗಳನ್ನು ಅವರು 2008ರ ಸೆಪ್ಟೆಂಬರ್‌ 13ರಂದು, ‘ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌’ನ 125ನೇ ತರಗತಿಯ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾದ 6,156 ಮಂದಿಯನ್ನು ಉದ್ದೇಶಿಸಿ ಹೇಳಿದರು. ಈ ತರಗತಿಯ 56 ಮಂದಿ ಪದವೀಧರರ ಸಮೇತ ಗಿಲ್ಯಡ್‌ ಶಾಲೆಯು ಒಟ್ಟು 8,000ಕ್ಕೂ ಹೆಚ್ಚು ಮಿಷನೆರಿಗಳನ್ನು “ಭೂಲೋಕದ ಕಟ್ಟಕಡೆಯವರೆಗೂ” ಕಳುಹಿಸಿಕೊಟ್ಟಿದೆ.​—⁠ಅ. ಕೃ. 1:⁠8.

ಪದವಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷರಾದ ಸಹೋದರ ಜ್ಯಾಕ್ಸನ್‌, “ನೀವು ವಿಶ್ವಾಸಪಾತ್ರರಾಗುವಲ್ಲಿ ನಿಮ್ಮ ಶುಶ್ರೂಷೆ ಉತ್ತಮಗೊಳ್ಳುವುದೋ?” ಎಂದು ಕೇಳಿದರು. ಅನಂತರ ಅವರು, ಇತರರ ವಿಶ್ವಾಸ ಗಳಿಸಲು ಸಹಾಯ ಮಾಡುವ ಈ ನಾಲ್ಕು ವಿಷಯಗಳನ್ನು ಪಟ್ಟಿಮಾಡಿದರು: ಸರಿಯಾದ ಮನೋಭಾವ, ಉತ್ತಮ ಮಾದರಿ, ಬೋಧಿಸುವಾಗ ದೇವರ ವಾಕ್ಯದ ಸತತ ಬಳಕೆ ಮತ್ತು ಯೆಹೋವನ ಹೆಸರನ್ನು ಪ್ರಸಿದ್ಧಪಡಿಸುವದರ ಮೇಲೆ ಪೂರ್ಣ ಗಮನ.

‘ಟೀಚಿಂಗ್‌ ಕಮಿಟಿ’ಯಲ್ಲಿ ಸೇವೆ ಸಲ್ಲಿಸುತ್ತಿರುವ ಡೇವಿಡ್‌ ಶೇಫರ್‌ ಎಂಬವರು, “ನಿಮಗೆ ಎಲ್ಲವೂ ಅರ್ಥವಾಗುವುದೋ?” ಎಂಬ ವಿಷಯ ಚರ್ಚಿಸಿದರು. ಗಿಲ್ಯಡ್‌ ವಿದ್ಯಾರ್ಥಿಗಳು ಯೆಹೋವನನ್ನು ಹುಡುಕುತ್ತಾ ಇರುವಲ್ಲಿ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ದೀನತೆಯಿಂದ ಅಂಗೀಕರಿಸುವಲ್ಲಿ ಮಿಷನೆರಿಗಳಾಗಿ ಸೇವೆ ಸಲ್ಲಿಸಲು ಬೇಕಾದ ‘ಎಲ್ಲವನ್ನು ಗ್ರಹಿಸಲು’ ಅಂದರೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ ಎಂದು ಅವರು ಆಶ್ವಾಸನೆಯನ್ನಿತ್ತರು.​—⁠ಜ್ಞಾನೋ. 28:​5, NIBV; ಮತ್ತಾ. 24:⁠45.

ಅನಂತರ ಆಡಳಿತ ಮಂಡಲಿಯ ಸದಸ್ಯರಾದ ಜಾನ್‌ ಇ. ಬಾರ್‌, “ದೇವರ ಪ್ರೀತಿಯಿಂದ ನಿಮ್ಮನ್ನು ಯಾವುದೂ ಅಗಲಿಸದಿರಲಿ” ಎಂಬ ಮುಖ್ಯವಿಷಯದ ಕುರಿತು ಮಾತಾಡಿದರು. ಸಹೋದರ ಬಾರ್‌ರವರು ಒಬ್ಬ ತಂದೆಯಂತೆ ಸಲಹೆಗಳನ್ನು ಕೊಟ್ಟರು. ಇದು ಪದವೀಧರರಿಗೂ ಅವರ ಹೆತ್ತವರಿಗೂ ಹೊಸ ಮಿಷನೆರಿಗಳ ನೇಮಕ ಹೇಗಿರುವುದೋ ಎಂಬುದರ ಕುರಿತಿದ್ದ ಹೆದರಿಕೆಯನ್ನು ದೂರಮಾಡಿತು. “ದೇವರ ಪ್ರೀತಿಯಲ್ಲಿ ನಾವು ನೆಲೆಗೊಂಡಿರುವಲ್ಲಿ ನಮ್ಮ ಜೀವನದಲ್ಲೇ ಅತ್ಯಂತ ಸುರಕ್ಷಿತ ಮತ್ತು ಹಾಯಾದ ಸ್ಥಳದಲ್ಲಿದ್ದೇವೆ” ಎಂದವರು ವಿವರಿಸಿದರು. ಸ್ವತಃ ಮಿಷನೆರಿಗಳು ದೇವರಿಂದ ಅಗಲದ ಹೊರತು ಬೇರಾವುದೂ ಅವರನ್ನು ದೇವರ ಪ್ರೀತಿಯಿಂದ ಅಗಲಿಸಲಾರದು.​—⁠ರೋಮಾ. 8:​38, 39.

‘ತೀಯೊಕ್ರ್ಯಾಟಿಕ್‌ ಸ್ಕೂಲ್ಸ್‌ ಡಿಪಾರ್ಟ್‌ಮೆಂಟ್‌’ ಸದಸ್ಯರಾದ ಸ್ಯಾಮ್‌ ರಾಬರ್‌ಸನ್‌ “ಅತ್ಯುತ್ಕೃಷ್ಟ ಉಡುಪನ್ನು” ಧರಿಸಿಕೊಳ್ಳುವಂತೆ ಸಭಿಕರನ್ನು ಉತ್ತೇಜಿಸಿದರು. ಪದವೀಧರರು, ಯೇಸು ಏನೇನು ಮಾಡಿದನೋ ಅದನ್ನು ಅಧ್ಯಯನ ಮಾಡುವ ಮತ್ತು ಅನ್ವಯಿಸಿಕೊಳ್ಳುವ ಮೂಲಕ ‘ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಲು’ ಸಾಧ್ಯವಿದೆ. (ರೋಮಾ. 13:14) ‘ತೀಯೊಕ್ರ್ಯಾಟಿಕ್‌ ಸ್ಕೂಲ್ಸ್‌ ಡಿಪಾರ್ಟ್‌ಮೆಂಟ್‌’ ಮೇಲ್ವಿಚಾರಕರಾದ ವಿಲ್ಯಮ್‌ ಸ್ಯಾಮ್ಯುಲ್ಸನ್‌ ಒಬ್ಬ ವ್ಯಕ್ತಿಯನ್ನು ಗೌರವಾರ್ಹನನ್ನಾಗಿಸುವುದು ಯಾವುದು ಎಂಬುದನ್ನು ಒತ್ತಿಹೇಳಿದರು. ಮಾನವ ದೃಷ್ಟಿಕೋನವಲ್ಲ ಬದಲಿಗೆ ದೇವರ ದೃಷ್ಟಿಕೋನವೇ ಒಬ್ಬನನ್ನು ಗೌರವಾರ್ಹನನ್ನಾಗಿಸುತ್ತದೆ ಎಂದು ಅವರು ತಿಳಿಸಿದರು.

ಗಿಲ್ಯಡ್‌ ಶಾಲೆಯ ಶಿಕ್ಷಕರಲ್ಲಿ ಒಬ್ಬರಾದ ಮೈಕಲ್‌ ಬರ್ನೆಟ್‌ ವಿದ್ಯಾರ್ಥಿಗಳನ್ನು ಅವರ ಕ್ಷೇತ್ರ ಸೇವಾ ಅನುಭವಗಳನ್ನು ಕೇಳುತ್ತಾ ಇಂಟರ್‌ವ್ಯೂ ಮಾಡಿದರು. ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿದ್ದ ಗಿಲ್ಯಡ್‌ ಶಾಲೆಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಈಗಾಗಲೇ ಎಷ್ಟೋ ಸಲ ಪೂರ್ಣವಾಗಿ ಆವರಿಸಲಾಗಿದ್ದ ಟೆರಿಟೊರಿಯನ್ನು ನೇಮಿಸಲಾಗಿತ್ತು. ಆದರೂ ಅವರು ಅಲ್ಲಿ ಆಸಕ್ತರನ್ನು ಕಂಡುಕೊಂಡರು. ‘ಕನ್ವೆನ್‌ಷನ್‌ ಆಫೀಸ್‌’ನ ಜೆರಲ್ಡ್‌ ಗ್ರಿಜಲ್‌ ಎಂಬವರು, ಬ್ರಾಂಚ್‌ ಕಮಿಟಿ ಸದಸ್ಯರಿಗಾಗಿರುವ ಶಾಲೆಗೆ ಬಂದಿದ್ದ ಮೂವರು ಸಹೋದರರನ್ನು ಇಂಟರ್‌ವ್ಯೂ ಮಾಡಿದರು. ಅವರ ಹೇಳಿಕೆಗಳು ಗಿಲ್ಯಡ್‌ ಪದವೀಧರರಿಗೆ ವಿದೇಶಿ ನೇಮಕಗಳಲ್ಲಿ ಎದುರಾಗಲಿದ್ದ ಸಂಗತಿಗಳಿಗಾಗಿ ತಯಾರಿಸುವಂತೆ ಸಹಾಯ ಮಾಡಿದವು.

“ಯೆರೆಮೀಯನಂತಿರಿ” ಎಂಬ ಭಾಷಣವನ್ನು ಆಡಳಿತ ಮಂಡಲಿಯ ಸದಸ್ಯರೂ ಗಿಲ್ಯಡ್‌ನ 42ನೇ ತರಗತಿಯ ಪದವೀಧರರೂ ಆದ ಡೇವಿಡ್‌ ಸ್ಪ್ಲೇನ್‌ ಕೊಟ್ಟರು. ಯೆರೆಮೀಯನಿಗೆ ತನ್ನ ನೇಮಕದ ಬಗ್ಗೆ ಮೊದಮೊದಲು ಹೆದರಿಕೆಯಿತ್ತಾದರೂ ಯೆಹೋವನು ಅವನನ್ನು ಬಲಪಡಿಸಿದನು. (ಯೆರೆ. 1:​7, 8) ಹೊಸ ಮಿಷನೆರಿಗಳಿಗೂ ಯೆಹೋವನು ಅದನ್ನೇ ಮಾಡುವನು. ಸಹೋದರ ಸ್ಪ್ಲೇನ್‌ ಹೇಳಿದ್ದು: “ನಿಮಗೆ ಯಾರೊಂದಿಗಾದರೂ ಸಮಸ್ಯೆಯಿರುವಲ್ಲಿ, ಒಂದು ಕಡೆ ಕುಳಿತು ಆ ವ್ಯಕ್ತಿಯಲ್ಲಿ ನೀವು ತುಂಬ ಇಷ್ಟಪಡುವ ಹತ್ತು ಗುಣಗಳನ್ನು ಬರೆಯಿರಿ. ಒಂದು ವೇಳೆ ನಿಮಗೆ ಹತ್ತು ಗುಣಗಳು ಸಿಗದಿರುವಲ್ಲಿ ಅದರರ್ಥ ನೀವು ಆ ವ್ಯಕ್ತಿಯನ್ನು ಸರಿಯಾಗಿ ತಿಳಿದಿಲ್ಲ.”

ಯೆರೆಮೀಯನು ಸ್ವತ್ಯಾಗಿಯಾಗಿದ್ದನು. ತನ್ನ ನೇಮಕವನ್ನು ಬಿಟ್ಟುಬಿಡಬೇಕೆಂದು ಅನಿಸಿದಾಗ ಅವನು ಪ್ರಾರ್ಥಿಸಿದನು ಮತ್ತು ಯೆಹೋವನು ಅವನ ಸಂಗಡ ಇದ್ದನು. (ಯೆರೆ. 20:11) “ನಿಮಗೆ ನಿರುತ್ಸಾಹವಾಗುವಾಗ ಆ ಕುರಿತು ಯೆಹೋವನೊಂದಿಗೆ ಮಾತಾಡಿ. ಆತನು ಸಹಾಯ ಕೊಡುವ ರೀತಿಯನ್ನು ನೋಡಿ ನಿಮಗೇ ಆಶ್ಚರ್ಯವಾಗುವುದು” ಎಂದು ಸಹೋದರ ಸ್ಪ್ಲೇನ್‌ ತಿಳಿಸಿದರು.

ಪದವೀಧರರು ಇತರರ ವಿಶ್ವಾಸ ಗಳಿಸುವ ಹಲವಾರು ಮಾರ್ಗಗಳನ್ನು ಕಲಿತುಕೊಂಡಿದ್ದಾರೆ ಎಂಬದಾಗಿ ಪದವಿ ಪ್ರದಾನ ಕಾರ್ಯಕ್ರಮದ ಸಮಾಪ್ತಿಯಲ್ಲಿ ಅಧ್ಯಕ್ಷರು ಸಭಿಕರಿಗೆ ಮರುಜ್ಞಾಪಿಸಿದರು. ಅವರು ತಮ್ಮ ನೇಮಕವನ್ನು ನಿರ್ವಹಿಸುವಾಗ ಅವರ ವಿಶ್ವಾಸಾರ್ಹತೆಯು ನಿಸ್ಸಂದೇಹವಾಗಿ ಅವರ ಶುಶ್ರೂಷೆಯನ್ನು ಪರಿಣಾಮಕಾರಿಯನ್ನಾಗಿ ಮಾಡುವುದು.​—⁠ಯೆಶಾ. 43:​8-12.

[ಪುಟ 22ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು

ಪ್ರತಿನಿಧಿಸಲಾದ ದೇಶಗಳ ಸಂಖ್ಯೆ: 6

ನೇಮಿಸಲಾದ ದೇಶಗಳ ಸಂಖ್ಯೆ: 21

ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 56

ಸರಾಸರಿ ಪ್ರಾಯ: 32.9

ಸತ್ಯದಲ್ಲಿ ಸರಾಸರಿ ವರ್ಷಗಳು: 17.4

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13

[ಪುಟ 23ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿ ಪಡೆದ 125ನೇ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳನ್ನು ಎಡದಿಂದ ಬಲಕ್ಕೆ ಪಟ್ಟಿಮಾಡಲಾಗಿದೆ.

(1) ಹಜ್ಸನ್‌, ಎ.; ವಾಲ್‌, ಎ.; ಬೀರೆನ್ಸ್‌, ಕೆ.; ಹೋರ್ಟೆಲೆನೋ, ಎಮ್‌.; ನ್ಯೂಮಾನ್‌, ಎಲ್‌.; ಡೆಕಾಸೋ, ಎ. (2) ಜೆನ್‌ಕಿನ್ಸ್‌, ಜೆ.; ಜರ್‌ಜೆಮ್‌ಸ್ಕೀ, ಟಿ.; ಮೆಂಡಿಸ್‌, ಎನ್‌.; ಕೊರೊನಾ, ವಿ.; ಕಾನಾಲೀಟಾ, ಎಲ್‌. (3) ಫ್ರೈಯರ್‌, ಎಚ್‌.; ಸಾವೇಜ್‌, ಎಮ್‌.; ಟಿಡ್ವೆಲ್‌, ಕೆ.; ಎರಿಕ್ಸನ್‌, ಎನ್‌.; ಡಿಕ್‌, ಇ.; ಮೆಕ್ಬೆತ್‌, ಆರ್‌. (4) ಪೆರೆಜ್‌, ಎಲ್‌.; ಪ್ಯೂಸ್‌, ಎಲ್‌.; ಸ್ಕಿಡ್ಮೋರ್‌, ಎ.; ಯಂಗ್‌, ಬಿ.; ಮೆಕ್‌ಬ್ರೈಡ್‌, ಎನ್‌.; ರಾಂಡನ್‌, ಪಿ.; ಗುಡ್‌ಮ್ಯಾನ್‌, ಇ. (5) ಬೀರೆನ್ಸ್‌, ಎಮ್‌.; ಫೆರ್ಗುಸನ್‌, ಜೆ.; ಪಿಯರ್ಸನ್‌, ಎನ್‌.; ಚ್ಯಾಪ್‌ಮ್ಯಾನ್‌, ಎಲ್‌.; ವಾರ್ಡಲ್‌, ಜೆ.; ಕಾನಾಲೀಟಾ, ಎಮ್‌. (6) ಪೆರೆಜ್‌, ಪಿ.; ಡೆಕಾಸೋ, ಡಿ.; ಯಂಗ್‌, ಟಿ.; ರಾಂಡನ್‌, ಡಿ.; ಗುಡ್‌ಮ್ಯಾನ್‌, ಜಿ.; ಜೆನ್‌ಕಿನ್ಸ್‌, ಎಮ್‌.; ಡಿಕ್‌, ಜಿ. (7) ಕೊರೊನಾ, ಎಮ್‌.; ವಾಲ್‌, ಆರ್‌.; ಪ್ಯೂಸ್‌, ಎಸ್‌.; ಮೆಂಡಿಸ್‌, ಎಫ್‌.; ಜರ್‌ಜೆಮ್‌ಸ್ಕೀ, ಎಸ್‌.; ಸಾವೇಜ್‌, ಟಿ. (8) ನ್ಯೂಮಾನ್‌, ಸಿ.; ಫೆರ್ಗುಸನ್‌, ಡಿ.; ಸ್ಕಿಡ್ಮೋರ್‌, ಡಿ.; ಎರಿಕ್ಸನ್‌, ಟಿ.; ಮೆಕ್‌ಬ್ರೈಡ್‌, ಜೆ.; ಪಿಯರ್ಸನ್‌, ಎಮ್‌.; ಚ್ಯಾಪ್‌ಮ್ಯಾನ್‌, ಎಮ್‌. (9) ಹಜ್ಸನ್‌, ಕೆ.; ವಾರ್ಡಲ್‌, ಎ.; ಮೆಕ್ಬೆತ್‌, ಎ.; ಟಿಡ್ವೆಲ್‌, ಟಿ.; ಫ್ರೈಯರ್‌, ಜೆ.; ಹೋರ್ಟೆಲೆನೋ, ಜೆ.