ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸೈತಾನನನ್ನು ಸ್ವರ್ಗದಿಂದ ಹೊರದೊಬ್ಬಿದ್ದು ಯಾವಾಗ?—ಪ್ರಕ. 12:1-9.

ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಸೈತಾನನನ್ನು ಸ್ವರ್ಗದಿಂದ ಹೊರದೊಬ್ಬಿದ ಸಮಯವನ್ನು ನಿಖರವಾಗಿ ತಿಳಿಸಲಾಗಿಲ್ಲ. ಆದರೂ ಆ ಸಮಯವನ್ನು ಅಂದಾಜುಮಾಡಲು ಸಹಾಯವಾಗುವಂಥ ಘಟನಾವಳಿಗಳು ಆ ಪುಸ್ತಕದಲ್ಲಿವೆ. ಆ ಘಟನಾವಳಿಯಲ್ಲಿ ಮೊದಲನೆಯದು ಮೆಸ್ಸೀಯ ರಾಜ್ಯದ ಉಗಮವಾಗಿದೆ. ಮೆಸ್ಸೀಯ ರಾಜ್ಯ ಉಗಮವಾದ ನಂತರ “ಸ್ವರ್ಗದಲ್ಲಿ ಯುದ್ಧವು ಆರಂಭವಾಯಿತು.” ಆ ಯುದ್ಧದಲ್ಲಿ ಸೈತಾನನು ಅಪಜಯ ಹೊಂದಿ ಕೊನೆಗೆ ಸ್ವರ್ಗದಿಂದ ಹೊರದೊಬ್ಬಲ್ಪಟ್ಟನು.

“ಅನ್ಯಜನಾಂಗಗಳ ನೇಮಿತ ಕಾಲಗಳು” ಕೊನೆಗೊಂಡು ಸ್ವರ್ಗೀಯ ರಾಜ್ಯವು ಸ್ಥಾಪನೆಯಾದದ್ದು ಇಸವಿ 1914ರಲ್ಲಿ ಎಂದು ಬೈಬಲ್‌ ಸ್ಪಷ್ಟವಾಗಿ ಸೂಚಿಸುತ್ತದೆ. * (ಲೂಕ 21:24) ಇದಾಗಿ ಎಷ್ಟು ಬೇಗನೆ ಸೈತಾನನನ್ನು ಹೊರದೊಬ್ಬಲಾದ ಯುದ್ಧವು ಸ್ವರ್ಗದಲ್ಲಿ ಆರಂಭಗೊಂಡಿತು?

“ಇನ್ನೇನು ಹೆರಲಿದ್ದ ಆ ಸ್ತ್ರೀಯು ಹೆತ್ತಾಗ ಅವಳ ಮಗುವನ್ನು ನುಂಗಲಿಕ್ಕಾಗಿ ಆ ಘಟಸರ್ಪವು [ಸೈತಾನನು] ಅವಳ ಮುಂದೆ ನಿಂತುಕೊಂಡಿತ್ತು” ಎಂದು ಪ್ರಕಟನೆ 12:4 ಹೇಳುತ್ತದೆ. ಹೊಸ ರಾಜ್ಯ ಹುಟ್ಟಿದಾಕ್ಷಣವೇ ಹೇಗಾದರೂ ಅದನ್ನು ನಾಶಪಡಿಸಬೇಕೆಂಬುದು ಸೈತಾನನ ಬಯಕೆಯಾಗಿತ್ತೆಂದು ಇದು ತೋರಿಸುತ್ತದೆ. ಈ ದುಷ್ಟ ಯೋಜನೆಯನ್ನು ಯೆಹೋವನು ಭಂಗಗೊಳಿಸಿದರೂ, ಸ್ಥಾಪಿತ ಹೊಸ ರಾಜ್ಯವನ್ನು ನಾಶಗೊಳಿಸಲು ಸೈತಾನನು ಪಣತೊಟ್ಟಿದ್ದನು. ಆದುದರಿಂದ ಸ್ವರ್ಗೀಯ ರಾಜ್ಯಕ್ಕೆ ಯಾವುದೇ ಹಾನಿ ಉಂಟಾಗದಂತೆ ‘ಘಟಸರ್ಪವನ್ನೂ ಅದರ ದೂತರನ್ನೂ’ ಸ್ವರ್ಗದಿಂದ ತೆಗೆದುಹಾಕಲು “ಮೀಕಾಯೇಲನೂ ಅವನ ದೂತರೂ” ಕ್ಷಣ ಮಾತ್ರವೂ ತಡಮಾಡಲಾರರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಹಾಗಾದರೆ, ರಾಜ್ಯವನ್ನು 1914ರಲ್ಲಿ ಸ್ಥಾಪಿಸಿದ ಸ್ವಲ್ಪ ಸಮಯದಲ್ಲೇ ಸೈತಾನನನ್ನು ಸೋಲಿಸಲಾಯಿತು ಮತ್ತು ಸ್ವರ್ಗದಿಂದ ಹೊರದೊಬ್ಬಲಾಯಿತು ಎಂಬುದನ್ನು ಇದು ತೋರಿಸಿಕೊಡುತ್ತದೆ.

ಗಮನಿಸಬೇಕಾದ ಇನ್ನೊಂದು ಅಂಶ ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವಾಗಿದೆ. ಈ ಪುನರುತ್ಥಾನವು ಸ್ವರ್ಗೀಯ ರಾಜ್ಯ ಸ್ಥಾಪನೆಯಾದ ಕೂಡಲೇ ಪ್ರಾರಂಭವಾಯಿತು ಎಂಬುದಕ್ಕೆ ಬೈಬಲಿನಲ್ಲಿ ರುಜುವಾತಿದೆ. * (ಪ್ರಕ. 20:6) ಘಟಸರ್ಪ ಮತ್ತು ಅದರ ದೂತರೊಂದಿಗಿನ ಯುದ್ಧದಲ್ಲಿ ಯೇಸುವಿನೊಂದಿಗೆ ಅವನ ಯಾವುದೇ ಅಭಿಷಿಕ್ತ ಸಹೋದರರು ಇದ್ದರೆಂಬುದಕ್ಕೆ ಸೂಚನೆಯಿಲ್ಲ. ಆದ್ದರಿಂದ ಕ್ರಿಸ್ತನ ಸಹೋದರರ ಪುನರುತ್ಥಾನವು ಪ್ರಾರಂಭವಾಗುವ ಮೊದಲೇ ಈ ಯುದ್ಧ ನಡೆದು ಸೈತಾನನೂ ಅವನ ದೆವ್ವಗಳೂ ಹೊರದೊಬ್ಬಲ್ಪಟ್ಟಿರಬೇಕು.

ಹಾಗಾದರೆ, ಸೈತಾನನು ಮತ್ತವನ ದೆವ್ವಗಳು ಸ್ವರ್ಗದಿಂದ ಹೊರದೊಬ್ಬಲ್ಪಟ್ಟ ನಿಖರವಾದ ಸಮಯವನ್ನು ಬೈಬಲ್‌ ತಿಳಿಸುವುದಿಲ್ಲ. ಆದರೆ ಈ ಘಟನೆಯು 1914ರಲ್ಲಿ ಯೇಸು ಕ್ರಿಸ್ತನು ಸ್ವರ್ಗದಲ್ಲಿ ರಾಜನಾದ ಕೂಡಲೇ ನಡೆಯಿತು ಎಂಬುದು ಸ್ಪಷ್ಟ.

[ಪಾದಟಿಪ್ಪಣಿಗಳು]

^ ಪ್ಯಾರ. 4 ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 215-218 ಪುಟಗಳನ್ನು ನೋಡಿರಿ.

^ ಪ್ಯಾರ. 6 ಜನವರಿ 1, 2007ರ ಕಾವಲಿನಬುರುಜು, ಪುಟ. 29-30, ಪ್ಯಾರ. 9-13 ನೋಡಿರಿ.