ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯದ ಬೀಜಗಳು ಅತಿದೂರದ ಪ್ರದೇಶಗಳನ್ನು ತಲಪುತ್ತವೆ

ಸತ್ಯದ ಬೀಜಗಳು ಅತಿದೂರದ ಪ್ರದೇಶಗಳನ್ನು ತಲಪುತ್ತವೆ

ಸತ್ಯದ ಬೀಜಗಳು ಅತಿದೂರದ ಪ್ರದೇಶಗಳನ್ನು ತಲಪುತ್ತವೆ

ರಷ್ಯಾದ, ಸೈಬೀರಿಯ ಪ್ರಾಂತದ ದಕ್ಷಿಣ ತುದಿಯಲ್ಲಿ ಟುವಾ ಗಣರಾಜ್ಯ ನೆಲೆಸಿದೆ. ಅದರ ದಕ್ಷಿಣಕ್ಕೂ ಪೂರ್ವಕ್ಕೂ ಮಂಗೋಲಿಯ ದೇಶವಿದೆ. ಟುವಾದಲ್ಲಿ ಹೆಚ್ಚಿನಾಂಶ ಜನರು ಅತಿದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ರಾಜ್ಯ ಸಂದೇಶವನ್ನು ತಲಪಿಸುವುದು ಕಷ್ಟಕರ. ಆದರೆ ಸ್ವಲ್ಪ ಸಮಯದ ಹಿಂದೆ, ಟುವಾದ ಹೊರವಲಯದಲ್ಲಿ ನೆಲೆಸಿರುವ ಜನರ ಒಂದು ತಂಡವು, ಒಂದು ವಿಚಾರಗೋಷ್ಠಿಗಾಗಿ ರಾಜಧಾನಿಯಾದ ಕೈಜಿಲ್‌ಗೆ ಪ್ರಯಾಣಬೆಳೆಸಿತು. ಕೈಜಿಲ್‌ನಲ್ಲಿರುವ ಮರೀಯ ಎಂಬ ಪಯನೀಯರಳಿಗೆ ಇವರು ಬಂದ ಸುದ್ದಿ ಸಿಕ್ಕಿತು. ಅವರಿಗೆ ಸುವಾರ್ತೆ ತಿಳಿಸಲು ಮತ್ತೆಮತ್ತೆ ಅವಕಾಶ ಸಿಗದು ಎಂಬುದನ್ನು ಅರಿತ ಆಕೆ ಈ ಅವಕಾಶವನ್ನು ಸದುಪಯೋಗಿಸಿಕೊಂಡಳು.

ನಡೆದಂಥ ಸಂಗತಿಯನ್ನು ಮರೀಯ ಹೀಗೆ ವಿವರಿಸುತ್ತಾಳೆ: “ನಾನು ಶಿಕ್ಷಕಿಯಾಗಿರುವ ಶಾಲೆಯಲ್ಲಿ, ಮಾದಕದ್ರವ್ಯ ದುರುಪಯೋಗದ ಸಮಸ್ಯೆಯನ್ನು ನಿಭಾಯಿಸುವುದರ ಕುರಿತ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ, ಟುವಾದ ಅತಿದೂರದ ಪ್ರದೇಶಗಳಿಂದ ಸುಮಾರು 50 ಮಂದಿ ಹಾಜರಾಗಲಿದ್ದರು. ಈ ಗುಂಪಿನಲ್ಲಿ ಶಿಕ್ಷಕರು, ಮನಶ್ಶಾಸ್ತ್ರಜ್ಞರು, ಮಕ್ಕಳ ಕ್ಷೇಮಾಭಿವೃದ್ಧಿಯ ಅಧಿಕಾರಿಗಳು ಮತ್ತು ಇತರರಿದ್ದರು.” ಮರೀಯಳಿಗಾದರೋ ಈ ಸಮಾವೇಶವು ಒಂದು ಸದವಕಾಶವೂ ಸವಾಲೂ ಆಗಿತ್ತು. ಏಕೆಂದು ವಿವರಿಸುತ್ತಾ ಅವಳಂದದ್ದು: “ನಾನು ಚಿಕ್ಕಂದಿನಿಂದಲೂ ನಾಚಿಕೆಸ್ವಭಾವದವಳು. ಆದುದರಿಂದ ಅನೌಪಚಾರಿಕವಾಗಿ ಸಾಕ್ಷಿಕೊಡಲು ನನಗೆ ಕಷ್ಟವಾಗುತ್ತದೆ. ಆದರೆ ನನ್ನ ಭಯವನ್ನು ಜಯಿಸಿ, ಸಾಕ್ಷಿಕೊಡಲಿಕ್ಕಾಗಿ ಈ ಅವಕಾಶವನ್ನು ಬಳಸುವಂತೆ ಧೈರ್ಯಕೊಡು ಎಂದು ಯೆಹೋವನಿಗೆ ಪ್ರಾರ್ಥಿಸಿದೆ.” ಅವಳು ಯಶಸ್ವಿಯಾದಳೋ?

ಮರೀಯ ಮುಂದುವರಿಸಿ ಹೇಳಿದ್ದು: “ವಿಭಿನ್ನ ರೀತಿಯ ಫೋಬಿಯ (ಅತಿಭಯ) ಬಗ್ಗೆ ಚರ್ಚಿಸಿದ ಎಚ್ಚರ! ಪತ್ರಿಕೆಯೊಂದು ನನ್ನ ಬಳಿ ಇತ್ತು. ‘ಇದು ಮನಶ್ಶಾಸ್ತ್ರಜ್ಞರಿಗೆ ಹಿಡಿಸಬಹುದು’ ಎಂದೆಣಿಸಿ, ಅದನ್ನು ಶಾಲೆಗೆ ಹೋಗುವಾಗ ತೆಗೆದುಕೊಂಡು ಹೋದೆ. ಆ ದಿನ, ವಿಚಾರಗೋಷ್ಠಿಗೆ ಹಾಜರಾದವರಲ್ಲಿ ಒಬ್ಬ ಶಿಕ್ಷಕಿ ನನ್ನ ಕಛೇರಿಗೆ ಬಂದಾಗ, ಆ ಪತ್ರಿಕೆಯನ್ನು ಅವರಿಗೆ ತೋರಿಸಿದೆ. ಅವರದನ್ನು ಸಂತೋಷದಿಂದ ಸ್ವೀಕರಿಸಿದರು. ಅವರು ತಮಗೂ ಫೋಬಿಯದ ಸಮಸ್ಯೆಯಿದೆಯೆಂದು ಹೇಳಿದರು. ಮರುದಿನ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಸಂಪುಟ Iನ್ನು ಅವರಿಗೆ ಕೊಟ್ಟೆ. ಅದನ್ನೂ ಸಂತೋಷದಿಂದ ಸ್ವೀಕರಿಸಿದರು. ಅವರು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿದ್ದರಿಂದಾಗಿ, ಆ ಪ್ರಕಾಶನವು ಇತರ ಶಿಕ್ಷಕರಿಗೂ ಹಿಡಿಸಬಹುದೆಂದು ನಾನು ನೆನಸಿದೆ. ಆದುದರಿಂದ ನಾನು ಯುವ ಜನರ ಪ್ರಶ್ನೆಗಳು ಪುಸ್ತಕಗಳನ್ನು ಹಾಗೂ ಇತರ ಪ್ರಕಾಶನಗಳನ್ನು ಒಂದು ದೊಡ್ಡ ಬಾಕ್ಸ್‌ನಲ್ಲಿ ತುಂಬಿಸಿ ಶಾಲೆಗೆ ತೆಗೆದುಕೊಂಡು ಹೋದೆ.” ನೋಡುನೋಡುತ್ತಿದ್ದಂತೆ ಆ ಬಾಕ್ಸ್‌ ಖಾಲಿಯಾಯಿತು! ನಡೆದಂಥ ಸಂಗತಿಯನ್ನು ನೆನಪಿಸಿಕೊಳ್ಳುತ್ತಾ ಮರೀಯ ಹೇಳುವುದು: “ನಾನು ಯುವ ಜನರ ಪ್ರಶ್ನೆಗಳು ಪುಸ್ತಕವನ್ನು ಯಾರಿಗೆ ಕೊಟ್ಟಿದ್ದೆನೋ ಆ ಶಿಕ್ಷಕಿಯ ಸಹೋದ್ಯೋಗಿಗಳಲ್ಲಿ ಹಲವರು ನನ್ನ ಆಫೀಸಿಗೇ ಬಂದು, ‘ಆ ಪುಸ್ತಕಗಳನ್ನು ಎಲ್ಲಿ ಕೊಡುತ್ತಿದ್ದಾರೆ?’ ಎಂದು ಕೇಳಿದರು.” ಅವರು ಸರಿಯಾದ ಜಾಗಕ್ಕೇ ಬಂದಿದ್ದರು!

ಶನಿವಾರ ವಿಚಾರಗೋಷ್ಠಿಯ ಕೊನೆಯ ದಿನವಾಗಿತ್ತು. ಆ ದಿನ ಮರೀಯಳಿಗೆ ರಜಾದಿನವಾಗಿತ್ತು. ಆದುದರಿಂದ ತನ್ನ ಕಛೇರಿಯಲ್ಲಿ ಮೇಜುಗಳ ಮೇಲೆಲ್ಲಾ ಸಾಹಿತ್ಯಗಳನ್ನು ಹರಡಿಸಿಟ್ಟಿದ್ದಳು. ಬೋರ್ಡ್‌ ಮೇಲೆ ಹೀಗೆ ಬರೆದಳು: “ಪ್ರಿಯ ಶಿಕ್ಷಕರೇ, ಈ ಸಾಹಿತ್ಯಗಳನ್ನು ನಿಮಗೋಸ್ಕರ ಮತ್ತು ನಿಮ್ಮ ಪರಿಚಯಸ್ಥರಿಗೋಸ್ಕರ ತೆಗೆದುಕೊಂಡು ಹೋಗಬಹುದು. ನೀವು ಕೆಲಸದಲ್ಲಿ ಯಶಸ್ಸು ಗಳಿಸುವಂತೆ ಮತ್ತು ನಿಮ್ಮ ಕುಟುಂಬಗಳನ್ನು ಬಲಪಡಿಸುವಂತೆ ಈ ಉತ್ತಮ ಪ್ರಕಾಶನಗಳು ಸಹಾಯಮಾಡುವವು.” ಪ್ರತಿಕ್ರಿಯೆ ಏನಾಗಿತ್ತು? “ಆ ದಿನ ನನ್ನ ಕಛೇರಿಗೆ ಹೋದಾಗ, ಹೆಚ್ಚಿನ ಸಾಹಿತ್ಯಗಳು ಮುಗಿದುಹೋಗಿದ್ದವು. ಕೂಡಲೇ ಇನ್ನಷ್ಟು ಪುಸ್ತಕಗಳನ್ನೂ ಪತ್ರಿಕೆಗಳನ್ನೂ ತಂದಿಟ್ಟೆ.” ಆ ವಿಚಾರಗೋಷ್ಠಿ ಕೊನೆಗೊಳ್ಳುವಷ್ಟರಲ್ಲಿ, ಮರೀಯ 380 ಪತ್ರಿಕೆಗಳು, 173 ಪುಸ್ತಕಗಳು ಮತ್ತು 34 ಬ್ರೋಷರುಗಳನ್ನು ನೀಡಿದ್ದಳು. ಆ ವಿಚಾರಗೋಷ್ಠಿಗೆ ಹಾಜರಾದವರು, ಅತಿದೂರದ ಪ್ರದೇಶಗಳಲ್ಲಿದ್ದ ತಮ್ಮ ಮನೆಗಳಿಗೂ ಕೆಲಸದ ಸ್ಥಳಗಳಿಗೂ ಹಿಂದಿರುಗಿದಾಗ ಆ ಸಾಹಿತ್ಯಗಳನ್ನು ಸಹ ತಮ್ಮೊಂದಿಗೆ ಕೊಂಡೊಯ್ದರು. ಮರೀಯ ಹೇಳುವುದು: “ಸತ್ಯದ ಬೀಜಗಳು ಟುವಾದ ಅತಿದೂರದ ಪ್ರದೇಶಗಳನ್ನೂ ತಲಪಿರುವುದರಿಂದ ನನಗೆ ತುಂಬ ಸಂತೋಷವಾಗುತ್ತಿದೆ.”—ಪ್ರಸಂ. 11:6.

[ಪುಟ 32ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರಷ್ಯಾ

ಟುವಾ ಗಣರಾಜ್ಯ