ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಅಧ್ಯಯನಕ್ಕಾಗಿ ನೀವು ಸಮಯ ಬದಿಗಿರಿಸಿದ್ದೀರೋ?

ಬೈಬಲ್‌ ಅಧ್ಯಯನಕ್ಕಾಗಿ ನೀವು ಸಮಯ ಬದಿಗಿರಿಸಿದ್ದೀರೋ?

ಬೈಬಲ್‌ ಅಧ್ಯಯನಕ್ಕಾಗಿ ನೀವು ಸಮಯ ಬದಿಗಿರಿಸಿದ್ದೀರೋ?

ಕಳೆದ ವರ್ಷ ಆಡಳಿತ ಮಂಡಲಿಯು ಸಭಾ ಕೂಟಗಳ ಶೆಡ್ಯೂಲ್‌ನಲ್ಲಿ ಬದಲಾವಣೆಯಾಗುವುದೆಂದು ಘೋಷಿಸಿತು. ಈ ಬದಲಾವಣೆಯ ಉದ್ದೇಶ, ಕುಟುಂಬವಾಗಿ ಬೈಬಲ್‌ ಅಧ್ಯಯನ ಹಾಗೂ ಚರ್ಚೆ ಮಾಡಲು ಹೆಚ್ಚು ಸಮಯವನ್ನು ಲಭ್ಯಗೊಳಿಸುವುದೇ ಆಗಿತ್ತು. ನೀವೊಂದು ಕುಟುಂಬದ ಶಿರಸ್ಸಾಗಿರುವಲ್ಲಿ, ಹೆಂಡತಿ ಮಕ್ಕಳೊಂದಿಗೆ ಅರ್ಥಪೂರ್ಣವಾದ, ಕ್ರಮದ ಕುಟುಂಬ ಬೈಬಲ್‌ ಅಧ್ಯಯನ ನಡೆಸುವಂತೆ ನೋಡಿಕೊಳ್ಳಿ. ಮನೆಯಲ್ಲಿ ಮಕ್ಕಳಿಲ್ಲದಿದ್ದರೂ ದಂಪತಿಗಳು ಈ ಸಮಯವನ್ನು ಜೊತೆಗೂಡಿ ಬೈಬಲ್‌ ಅಧ್ಯಯನ ಮಾಡಲು ಬಳಸಬಹುದು. ಕುಟುಂಬ ಜವಾಬ್ದಾರಿಗಳಿಲ್ಲದ ಅವಿವಾಹಿತ ಸಹೋದರ ಸಹೋದರಿಯರು ಈ ಸಮಯವನ್ನು ವೈಯಕ್ತಿಕ ಬೈಬಲ್‌ ಅಧ್ಯಯನಕ್ಕಾಗಿ ಸದುಪಯೋಗಿಸಬಹುದು.

ಕುಟುಂಬ ಆರಾಧನೆಯ ಸಂಜೆ ಎಂಬ ಈ ಏರ್ಪಾಡಿಗಾಗಿ ಅನೇಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಕೆವಿನ್‌ ಎಂಬ ಹೆಸರಿನ ಹಿರಿಯನು ಬರೆದದ್ದು: “ಸಭೆಯಲ್ಲಿರುವ ನಮಗೆ ಹೇಗನಿಸುತ್ತದೆಂಬುದನ್ನು ವ್ಯಕ್ತಪಡಿಸಲು ‘ಧನ್ಯವಾದ’ ಎಂಬ ನಾಲ್ಕು ಅಕ್ಷರಗಳು ಸಾಲವು. ಹಿರಿಯರಾದ ನಾವು ಕೂಟಗಳಿಲ್ಲದ ಈ ಸಂಜೆಯನ್ನು, ಆಡಳಿತ ಮಂಡಲಿ ಹೇಳಿದ್ದನ್ನೇ ಮಾಡಲು ಅಂದರೆ ನಮ್ಮ ಕುಟುಂಬಗಳೊಂದಿಗೆ ಅಧ್ಯಯನ ಮಾಡಲು ಹೇಗೆ ಬಳಸಬಹುದೆಂಬದನ್ನು ಚರ್ಚಿಸಿದ್ದೇವೆ.”

ಹಿರಿಯನೊಬ್ಬನ ಪತ್ನಿಯಾಗಿರುವ ಜೆನ್ನಿ ಬರೆದದ್ದು: “ನಮಗೆ 15, 11 ಮತ್ತು 2 ವರ್ಷ ಪ್ರಾಯದ ಮೂರು ಮಂದಿ ಹೆಣ್ಮಕ್ಕಳಿದ್ದಾರೆ. ನಾವು ಇತ್ತೀಚೆಗೆ ಸನ್ನೆಭಾಷೆಯ ಸಭೆಗೆ ಹೋಗಲಾರಂಭಿಸಿದೆವು. ಹೀಗಿರುವುದರಿಂದ ಎಲ್ಲ ಕೂಟಗಳಿಗಾಗಿ ತಯಾರಿ ಮಾಡಲು ಬಹಳಷ್ಟು ಸಮಯ ಹಾಗೂ ಪ್ರಯತ್ನ ಬೇಕಾಗುತ್ತದೆ. ಈಗ ಈ ಬದಲಾವಣೆಯಿಂದಾಗಿ ಸಿಕ್ಕಿರುವ ಹೆಚ್ಚುವರಿ ಸಮಯವು ಕುಟುಂಬ ಆರಾಧನೆಯ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯಮಾಡಿದೆ.”

ಜಾನ್‌ ಮತ್ತು ಜೊಆ್ಯನ್‌ ಎಂಬ ದಂಪತಿ ರೆಗ್ಯುಲರ್‌ ಪಯನೀಯರರು. ಅವರು ಬರೆದದ್ದು: “ನಮ್ಮ ಕುಟುಂಬ ಬೈಬಲ್‌ ಅಧ್ಯಯನವು ಅಷ್ಟೇನೂ ಕ್ರಮವಾಗಿ ನಡೆಯುತ್ತಿರಲಿಲ್ಲ. ವಿಭಿನ್ನ ಸಭಾ ಚಟುವಟಿಕೆಗಳ ಮಧ್ಯದಲ್ಲೆಲ್ಲೊ ಅದನ್ನು ಮಾಡಬೇಕಾಗುತ್ತಿತ್ತು. ಈ ಹೊಸ ಏರ್ಪಾಡು ಯೆಹೋವನು ಕೊಟ್ಟಿರುವ ಉಡುಗೊರೆಯಾಗಿದೆ. ಆದರೆ ಈ ಸಮಯವನ್ನು ನಾವು ಯಾವುದಕ್ಕಾಗಿ ಬಳಸಬೇಕೋ ಅದಕ್ಕಾಗಿ ಬಳಸುವಲ್ಲಿ ಮಾತ್ರ ಅದು ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸುತ್ತದೆ.”

25ರ ಆಸುವಾಸಿನ ವಯಸ್ಸಿನ ಟೋನಿ ಎಂಬ ಅವಿವಾಹಿತ ಸಹೋದರನು ಮಂಗಳವಾರ ಸಂಜೆಯನ್ನು ತನ್ನ ವೈಯಕ್ತಿಕ ಅಧ್ಯಯನದ ಸಮಯವಾಗಿ ಬದಿಗಿರಿಸಿದ್ದಾನೆ. ವಾರದ ಬೇರೆ ಸಮಯವನ್ನು ಅವನು ಸಭಾ ಕೂಟಗಳ ತಯಾರಿಗಾಗಿ ಬಳಸುತ್ತಾನೆ. ಆದರೆ ಟೋನಿ ಹೇಳುವುದು: “ನಾನು ಮಂಗಳವಾರ ಯಾವಾಗ ಬರುತ್ತದೆಂದು ಕಾಯುತ್ತಿರುತ್ತೇನೆ.” ಏಕೆ? “ಆ ಸಾಯಂಕಾಲವು ನಾನು ಯೆಹೋವನೊಂದಿಗೆ ಕಳೆಯುವ ವಿಶೇಷ ಸಮಯವಾಗಿದೆ.” ಹೇಗೆಂದು ಟೋನಿ ವಿವರಿಸುವುದು: “ಸುಮಾರು ಎರಡು ತಾಸುಗಳ ವರೆಗೆ ನಾನು, ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಬಲಗೊಳಿಸುವಂಥ ವಿಷಯಗಳನ್ನು ಅಧ್ಯಯನ ಮಾಡುತ್ತೇನೆ. ಅಧ್ಯಯನಕ್ಕಾಗಿ ಹೆಚ್ಚು ಸಮಯವಿರುವುದರಿಂದ, ನಾನು ಓದಿರುವ ಬೈಬಲ್‌ ವಚನಗಳ ಮೇಲೆ ಧ್ಯಾನಿಸಲು ಸಾಧ್ಯವಾಗುತ್ತದೆ.” ಇದರ ಫಲಿತಾಂಶವೇನು? “ಯೆಹೋವನ ಸಲಹೆಯು ನನ್ನ ಹೃದಯದೊಳಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಆಳಕ್ಕೆ ಇಳಿಯುತ್ತಿದೆ.” ಅವನೊಂದು ಉದಾಹರಣೆ ಕೊಡಬಹುದೊ? “ಒಳನೋಟ (ಇಂಗ್ಲಿಷ್‌) ಪುಸ್ತಕದಲ್ಲಿ ನಾನು ದಾವೀದ ಯೋನಾತಾನರ ಸ್ನೇಹದ ಬಗ್ಗೆ ಓದಿದೆ. ಯೋನಾತಾನನ ನಿಸ್ವಾರ್ಥ ಮನೋವೃತ್ತಿಯಿಂದ ಬಹಳಷ್ಟನ್ನು ಕಲಿತೆ. ಒಬ್ಬ ನಿಜ ಸ್ನೇಹಿತನಾಗಿರುವುದರ ಅರ್ಥವೇನೆಂದು ಹೆಚ್ಚು ಸ್ಪಷ್ಟವಾಗಿ ಗ್ರಹಿಸಲು ಅವನ ಮಾದರಿ ಸಹಾಯ ಮಾಡಿತು. ಮಂಗಳವಾರ ಸಾಯಂಕಾಲಗಳಂದು ಇಂಥ ಇನ್ನಷ್ಟು ರತ್ನಮಣಿಗಳನ್ನು ಕಂಡುಹಿಡಿಯಲು ನಾನು ಎದುರುನೋಡುತ್ತಿದ್ದೇನೆ.”

ಯೆಹೋವನ ಸೇವಕರೆಲ್ಲರೂ, ಅರ್ಥಪೂರ್ಣ ಬೈಬಲ್‌ ಅಧ್ಯಯನ ಹಾಗೂ ಕುಟುಂಬ ಆರಾಧನೆಗಾಗಿ ಲಭ್ಯವಿರುವ ಈ ಹೆಚ್ಚುವರಿ ಸಮಯವನ್ನು ಸದುಪಯೋಗಿಸುವುದರಿಂದ ಬಹಳಷ್ಟು ಲಾಭ ಪಡೆಯುವರೆಂಬುದು ನಿಸ್ಸಂದೇಹ.